ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

By Nagaraja

ಗ್ರಾಂಡ್ ಐ10 ಎಂಬ ಮಾರುತಿ ಸ್ವಿಫ್ಟ್ ಪ್ರತಿಸ್ಫರ್ಧಿಯನ್ನು ನಿರ್ಮಿಸುವಾಗ ಖಂಡಿತವಾಗಿಯೂ ಹ್ಯುಂಡೈ ಮೋಟಾರು ಇಂಡಿಯಾ ಮನದಲ್ಲಿ ಬೇರೆನೇ ಯೋಚನೆ ಇದ್ದಿರಬಹುದು. ಇಲ್ಲದಿದ್ದಲ್ಲಿ ಇಷ್ಟೊಂದು ಅಚ್ಚುಕಟ್ಟಾಗಿ ನಾಲ್ಕು ಮೀಟರ್ ಪರಿಧಿಯೊಳಗೆ ಸುಂದರವಾದ ಕಾಂಪಾಕ್ಟ್ ಸೆಡಾನ್ ಕಾರನ್ನು ತಯಾರಿಸಲು ಸಾಧ್ಯವಾಗುತ್ತಿರಲಿಲ್ಲವೇನೋ?

ನೀವು ಏಕೆ ಎಕ್ಸ್‌ಸೆಂಟ್ ಖರೀದಿಸಬೇಕು?

ಸಮಕಾಲೀನ ಪರಿಸ್ಥಿತಿಯಲ್ಲಿ ಭಾರತೀಯ ವಾಹನೋದ್ಯಮ ಹಿನ್ನಡೆಯಲ್ಲಿರಬಹುದು. ಆದರೆ ಕಾಂಪಾಕ್ಟ್ ಸೆಡಾನ್ ಕಾರುಗಳ ವಿಚಾರಕ್ಕೆ ಬಂದಾಗ ಚಿತ್ರಣವೇ ಬೇರೆಯಾಗಿದೆ. ಇಲ್ಲಿ ಹೋಂಡಾ ಅಮೇಜ್, ಸ್ವಿಫ್ಟ್ ಡಿಜೈರ್ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಸಂಸ್ಥೆ ಎಂಬ ಪಟ್ಟ ಕಟ್ಟಿಕೊಂಡಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಹೇಗೆ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯ ಹೇಳಿ ನೋಡೋಣ?

ಎಕ್ಸ್‌ಸೆಂಟ್ ಅಗ್ಗದ ದರದಲ್ಲಿ ಬಿಡುಗಡೆ

ಹೌದು, ಇದರ ಫಲ ಸ್ವರೂಪವೇ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು. ಎಲ್ಲ ಅರ್ಥದಲ್ಲೂ ದೇಶದ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಇದನ್ನು ನಿರ್ಮಿಸಲಾಗಿದೆ. ಇಂದಿನ ಈ ವಿಮರ್ಶೆಯಲ್ಲಿ ಎಕ್ಸ್‌ಸೆಂಟ್ ಬಗ್ಗೆ ವಿವರವಾಗಿ ಚರ್ಚಿಸಲಿದ್ದೇವೆ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಆರಂಭದಲ್ಲಿ ತಿಳಿಸಿರುವಂತೆಯೇ ಗ್ರಾಂಡ್ ಐ10 ತಲಹದಿಯಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಎಂಬ ಮನೋಹರವಾದ ಕಾರನ್ನು ನಿರ್ಮಿಸಲಾಗಿದೆ. ಇದು ಕಾಂಪಾಕ್ಟ್ ಸೆಡಾನ್ ಸ್ಪರ್ಧೆಯನ್ನು ಗೆಲ್ಲಲಿದೆಯೇ? ಉತ್ತರಕ್ಕಾಗಿ ಮುಂದಿನ ಒಂದೊಂದೇ ಸ್ಲೈಡರ್ ಕ್ಲಿಕ್ಕಿಸಿರಿ...

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಮೊದಲಿಗೆ ಕಾರಿನ ನಾಮಕರಣ ಬಗ್ಗೆ ಮಾತನಾಡನೋವೇ. ಇತರೆಲ್ಲ ಮಾದರಿಗಳಂತೆ ಇಲ್ಲೂ 'ಎಕ್ಸ್‌ಸೆಂಟ್' ಎಂಬ ಹೆಸರನ್ನಿಡಲು ವಿಶೇಷ ಕಾರಣವೊಂದಿದೆ. ತನ್ನ ಹಳೆಯ ಜನಪ್ರಿಯ ಆಸೆಂಟ್ ಮಾದರಿಯನ್ನು ಈ ಮೂಲಕ ಜೀವಂತವಾಗಿರಿಸಿಕೊಳ್ಳುವುದು ಹ್ಯುಂಡೈ ಗುರಿಯಾಗಿದೆ.

ದರ ಮಾಹಿತಿ

ದರ ಮಾಹಿತಿ

ಅಮೇಜ್ ಹಾಗೂ ಡಿಜೈರ್‌ಗಿಂತಲೂ ಕಡಿಮೆ ಬೆಲೆ ನಿಗದಿಪಡಿಸುವಲ್ಲಿ ಕಂಪನಿ ಯಶಸ್ವಿಯಾಗಿದೆ.

ಹ್ಯುಂಡೈ ಎಕ್ಸ್‌ಸೆಂಟ್ ಪೆಟ್ರೋಲ್: 4.66 ಲಕ್ಷ ರು.

ಹ್ಯುಂಡೈ ಎಕ್ಸ್‌ಸೆಂಟ್ ಡೀಸೆಲ್: 5.56 ಲಕ್ಷ ರು.

ಹೋಂಡಾ ಅಮೇಜ್ ಪೆಟ್ರೋಲ್: 4,99 ಲಕ್ಷ ರು.

ಹೋಂಡಾ ಅಮೇಜ್ ಡೀಸೆಲ್: 5,97 ಲಕ್ಷ ರು.

ಮಾರುತಿ ಸ್ವಿಫ್ಟ್ ಡಿಜೈರ್ ಪೆಟ್ರೋಲ್: 4,85 ಲಕ್ಷ ರು.

ಮಾರುತಿ ಸ್ವಿಫ್ಟ್ ಡಿಜೈರ್ ಡೀಸೆಲ್ : 5,78 ಲಕ್ಷ ರು.

ಏಕ್ಸ್‌ಟೀರಿಯರ್

ಏಕ್ಸ್‌ಟೀರಿಯರ್

ಈ ಮೊದಲೇ ತಿಳಿಸಿರುವಂತೆಯೇ ಕೆಲವೇ ಕೆಲವು ಬದಲಾವಣೆಗಳೊಂದಿಗೆ ಮಾತ್ರ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್‌ನಿಂದ ಎಕ್ಸ್‌ಸೆಂಟ್‌ ಸೆಡಾನ್‌ನತ್ತ ಪರಿವರ್ತಿಸುವಲ್ಲಿ ಕಂಪನಿ ಯಶಸ್ವಿಯಾಗಿದೆ. ಅಂದರೆ ಮುಂಭಾಗದಿಂದ ನೋಡಿದಾಗ ಮೊದಲ ನೋಟದಲ್ಲೇ ಎರಡು ಆವೃತ್ತಿಗಳನ್ನು ಪ್ರತ್ಯೇಕಿಸುವುದು ಸ್ವಲ್ಪ ಕಷ್ಟಕರ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಹಾಗಿದ್ದರೂ ಫ್ರಂಟ್ ಗ್ರಿಲ್ ಕ್ರೋಮ್ ಸ್ಪರ್ಶದಲ್ಲಿ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಹಿಂದುಗಡೆ ಬೂಟ್ ಲಿಡ್ ಸಹ ಇದಕ್ಕೆ ಸಮಾನವಾದ ವಿನ್ಯಾಸ ಪಡೆದುಕೊಂಡಿದೆ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಹೆಡ್‌ಲೈಟ್ ಹಾಗೂ ಫ್ರಂಟ್ ಗ್ರಿಲ್ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆ ಕಂಡುಬಂದಿಲ್ಲ. ಇದರ ಜತೆಗೆ ಹೈಯರ್ ವೆರಿಯಂಟ್‌ಗಳಲ್ಲಿ ಡೇಟೈಮ್ ರನ್ನಿಂಗ್ ಲೈಟ್ಸ್, ಪ್ರೊಜೆಕ್ಟರ್ ಹೆಡ್ ಲೈಟ್ಸ್ ಸೌಲಭ್ಯವಿರಲಿದೆ. ಇದು ಸ್ವಾಗತಾರ್ಹ ಬದಲಾವಣೆಯಾಗಿದೆ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಇದರ ಜತೆಗೆ ಐಚ್ಛಿಕ 15 ಇಂಚಿನ ಡೈಮಾಂಡ್ ಕಟ್ ಅಲಾಯ್ ವೀಲ್ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಪ್ರದಾನ ಮಾಡುತ್ತದೆ. ಇದು ಕಾರಿಗೆ ಹೆಚ್ಚು ಪ್ರೀಮಿಯಂ ಲುಕ್ ಸಹ ನೀಡುತ್ತದೆ ಅಂದರೆ ತಪ್ಪಾಗಲಾರದು.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ನಾಲ್ಕು ಮೀಟರ್ ಪರಿಧಿಯೊಳಗೆ ಎಲ್ಲವೂ ಅಚ್ಚುಕಟ್ಟಾಗಿ ನಿರ್ಮಿಸಬೇಕಾಗಿರುವುದರಿಂದ ಹಿಂದುಗಡೆ ಸಹ ಹೆಚ್ಚಿನ ಗಮನ ವಹಿಸಲಾಗಿದೆ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ನೀವು ಗ್ರಾಂಡ್ ಐ10 ಕಾರಿನ ಮೇಲ್ಛಾವಣಿಯ ಮೇಲೆಯಾಗಿ ಕಪ್ಪು ಪಟ್ಟಿ ಹಾದು ಹೋಗುವುದನ್ನು ಗಮನಿಸಿರಬಹುದು. ಆದರೆ ಎಕ್ಸ್‌ಸೆಂಟ್ ಸೆಡಾನ್ ಕಾರಿನಲ್ಲಿ ಇದರ ಕೊರತೆ ಕಾಡಲಿದೆ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಇತರ ಕಾಂಪಾಕ್ಟ್ ಸೆಡಾನ್‌ಗಳಿಗೆ ಹೋಲಿಸಿದಾಗ ಹಿಂದುಗಡೆಯೂ ಸ್ವಚ್ಛ ಹಾಗೂ ಫಿನಿಶಿಂಗ್ ಟಚ್ ನೀಡುವಲ್ಲಿ ಎಕ್ಸ್‌ಸೆಂಟ್ ಯಶ ಕಂಡಿದೆ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ನೀವಿಲ್ಲಿ ನೋಡುತ್ತಿರುವಂತೆಯೇ ಇದು ಹೊಸ ಲುಕ್‌ನ ಟೈಲ್ ಲೈಟ್ ಪಡೆದುಕೊಂಡಿರುವುದನ್ನು ಗಮನನಿಸಬಹುದು.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಮಗದೊಂದು ಗಮನಾರ್ಹ ಅಂಶವೆಂದರೆ ತನ್ನ ಪ್ರತಿಸ್ಪರ್ಧಿಗಿಂತಲೂ ಹೆಚ್ಚು ಬೂಟ್ ಸ್ಪೇಸ್ ಆಫರ್ ಮಾಡುವಲ್ಲಿ ಎಕ್ಸ್‌ಸೆಂಟ್ ಯಶ ಕಂಡಿದೆ.

• ಎಕ್ಸ್‌ಸೆಂಟ್ 407 ಲೀಟರ್
• ಡಿಜೈರ್ 315 ಲೀಟರ್
• ಅಮೇಜ್ 400 ಲೀಟರ್
• ಇಂಟಿರಿಯರ್

ಇಂಟಿರಿಯರ್

ಇಲ್ಲೂ ಬಹುತೇಕ ಭಾಗಗಳನ್ನು ಗ್ರಾಂಡ್ ಐ10 ಜತೆಗೆ ಎಕ್ಸ್‌ಸೆಂಟ್ ಹಂಚಿಕೊಂಡಿದೆ. ಅಂದರೆ ಗರಿಷ್ಠ ಗುಣಮಟ್ಟತೆಯ ಡ್ಯುಯಲ್ ಟೋನ್ ಬೀಜ್ ಮತ್ತು ಗ್ರೇ ಒಳಮೈಯನ್ನು ಕಾಯ್ದುಕೊಳ್ಳಲಾಗಿದೆ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

1ಜಿಬಿ ಸ್ಟೋರೆಜ್, ಕೂಲ್ಡ್ ಗ್ಲೋವ್ ಬಾಕ್ಸ್, ಸ್ಮಾರ್ಟ್ ಕೀ ಆಂಡ್ ಸ್ಟಾರ್ಟ್/ಸ್ಟಾಪ್ ಬಟನ್‌ಗಳಂತಹ ಇನ್ನಿತರ ಹಲವು ಆಕರ್ಷಕ ಸೌಲಭ್ಯಗಳು ಇದರಲ್ಲಿ ಲಭ್ಯವಿರಲಿದೆ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಇನ್ನು ವೆರಿಯಂಟ್‌ಗೆ ಅನುಗುಣವಾಗಿ ಎಕ್ಸ್‌ಸೆಂಟ್‌ನಲ್ಲಿ ಪ್ರೀಮಿಯಂ ಸೌಲಭ್ಯಗಳು ಲಭ್ಯವಾಗಲಿದೆ. ಇವುಗಳಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, ರಿಯರ್ ಎಸಿ ವೆಂಟ್ಸ್, ಕಪ್ ಹೋಲ್ಡರ್ ಹಾಗೂ ರಿಯರ್ ಸೀಟ್ ಆರ್ಮ್ ರೆಸ್ಟ್ ಪ್ರಮುಖವಾಗಿದೆ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಇನ್ನು ಇಂಟಿರಿಯರ್ ಸ್ಥಳಾವಕಾಶ ಅಮೇಜ್ ಹಾಗೂ ಡಿಜೈರ್‌ಗೆ ಹೋಲಿಸಿದಾಗ ಸ್ವಲ್ಪ ಕಡಿಮೆಯಾಗಿ ಅನಿಸಿದರೂ ದೂರುವಂತಿಲ್ಲ. ಯಾಕೆಂದರೆ ಗ್ರಾಂಡ್ ಐ10ನಲ್ಲಿರುವುದಕ್ಕೆ ಸಮಾನವಾದ ಲೆಗ್ ರೂಂ ಹಾಗೂ ಹೆಡ್ ರೂಂ ಕಾಯ್ದುಕೊಂಡಿದೆ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಹಾಗೆಯೇ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್‌ಗೆ ಹೋಲಿಸಿದಾಗ ಹಿಂದುಗಡೆ ಹೆಚ್ಚು ವಾಲಿದ ಸೀಟು ವಿನ್ಯಾಸ ಪಡೆದುಕೊಂಡಿದ್ದು, ಒರಗಿ ಕುಳಿತುಕೊಳ್ಳಲು ನೆರವಾಗಲಿದೆ.

ಸುರಕ್ಷತೆ

ಸುರಕ್ಷತೆ

ಇನ್ನು ಸುರಕ್ಷತೆ ಬಗ್ಗೆ ಮಾತನಾಡುವುದಾದ್ದಲ್ಲಿ ಹೈಯರ್ ವೆರಿಯಂಟ್‌ಗಳಲ್ಲಿ ಮಾತ್ರ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಲಭ್ಯವಿರಲಿದೆ. ಜತೆಗೆ ಎಬಿಎಸ್ ಐಚ್ಛಿಕವಾಗಿ ಮಾತ್ರ ಲಭಿಸಲಿದೆ.

ನಿರ್ವಹಣೆ

ನಿರ್ವಹಣೆ

ಅಂದ ಹಾಗೆ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಎಸ್‌ಯುವಿ 1.1 ಯು2 ಸಿಆರ್‌ಡಿಐ (U2 CRDi) ಡೀಸೆಲ್ ಮತ್ತು 1.2 ಲೀಟರ್ ಕಪ್ಪ (Kappa) ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಗ್ರಾಂಡ್ ಐ10ನಲ್ಲಿರುವುದಕ್ಕೆ ಸಮಾನವಾಗಿರಲಿದೆ. ಹಾಗಿದ್ದರೂ ಡೀಸೆಲ್ ಯುನಿಟ್‌ನಲ್ಲಿ 22 ಎನ್‌ಎಂ ಟಾರ್ಕ್ ಹಾಗೂ 1 ಅಶ್ವಶಕ್ತಿ ಹೆಚ್ಚು ಉತ್ಪಾದಿಸಲು ಸಾಧ್ಯವಾಗಿದೆ.

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಎಕ್ಸ್‌ಸೆಂಟ್ ಡೀಸೆಲ್ ಎಂಜಿನ್ 71 ಅಶ್ವಶಕ್ತಿ (180 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಅಮೇಜ್ ಹಾಗೂ ಡಿಜೈರ್‌ಗಿಂತ ಕಡಿಮೆಯಾಗಿದೆ.

ಅಮೇಜ್ - 98 ಬಿಎಚ್‌ಪಿ (200 ಎನ್‌ಎಂ ಟಾರ್ಕ್)

ಸ್ವಿಫ್ಟ್ ಡಿಜೈರ್ - 74 ಬಿಎಚ್‌ಪಿ (190 ಎನ್‌ಎಂ ಟಾರ್ಕ್)

ಇನ್ನೊಂದೆಡೆ ಎಕ್ಸ್‌ಸೆಂಟ್ ಪೆಟ್ರೋಲ್ ವೆರಿಯಂಟ್ 81 ಬಿಎಚ್‌ಪಿ (114 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಅಮೇಜ್ - 86 ಬಿಎಚ್‌ಪಿ (109 ಎನ್‌ಎಂ ಟಾರ್ಕ್)

ಸ್ವಿಫ್ಟ್ ಡಿಜೈರ್ - 86 ಬಿಎಚ್‌ಪಿ (1114 ಎನ್‌ಎಂ ಟಾರ್ಕ್)

ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ; ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸ್ಟಾಂಡರ್ಡ್ ಆಗಿ ಲಭ್ಯವಾಗಲಿದೆ. ಇನ್ನುಳಿದಂತೆ ಇತರೆಲ್ಲ ಹ್ಯುಂಡೈ ಆವೃತ್ತಿಗಳಂತೆ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನಲ್ಲಿ 4 ಸ್ಪೀಡ್ ಇರಲಿದೆ.

ಮೈಲೇಜ್

ಮೈಲೇಜ್

ಭಾರತ ವಾಹನ ಅಧ್ಯಯನ ಸಂಸ್ಥೆಯ (ಎಆರ್‌ಎಐ) ಪ್ರಕಾರ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಡೀಸೆಲ್ ಹಾಗೂ ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್‌ಗೆ ಅನುಕ್ರಮವಾಗಿ 24.4 ಹಾಗೂ 19.1 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಿರಲಿದೆ.

ಮೈಲೇಜ್ (ಲೀಟರ್‌ಗೆ)

ಅಮೇಜ್ - 18 ಕೀ.ಮೀ. (ಪೆಟ್ರೋಲ್), 25.8 (ಡೀಸೆಲ್)

ಸ್ವಿಫ್ಟ್ ಡಿಜೈರ್ - 19.1 ಕೀ.ಮೀ. (ಪೆಟ್ರೋಲ್), 23.4 (ಡೀಸೆಲ್)

ಅಂತಿಮ ತೀರ್ಪು

ಅಂತಿಮ ತೀರ್ಪು

ಪ್ಲಸ್ ಪಾಯಿಂಟ್

ಸ್ಮರ್ಧಾತ್ಮಕ ದರ, ಹಲವು ವೆರಿಯಂಟ್‌ಗಳ ಆಯ್ಕೆ, ಗುಣಮಟ್ಟತೆ, ಬೂಟ್ ಸ್ಪೇಸ್, ಲೆಗ್ ರೂಂ (ಹಿಂದಿನ ಪ್ರಯಾಣಿಕರಿಗೂ).

ಹಿನ್ನಡೆ

ಕಡಿಮೆ ಪವರ್‌ಫುಲ್ ಎಂಜಿನ್, ಎಬಿಎಸ್ ಸ್ಟಾಂಡರ್ಡ್ ಆಯ್ಕೆಯಲ್ಲಿ ಲಭ್ಯವಿಲ್ಲ.

ಒಟ್ಟಾರೆಯಾಗಿ ಹಣದ ಮೌಲ್ಯ ಒದಗಿಸುವಲ್ಲಿ ಹ್ಯುಂಡೈ ಯಶಸ್ವಿಯಾಗಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಅತ್ಯುತ್ತಮ ಕಾಂಪಾಕ್ಟ್ ಸೆಡಾನ್ ಕಾರುಗಳಲ್ಲಿ ಗುರುತಿಸಿಕೊಂಡರೆ ಅಚ್ಚರಿಪಡಬೇಕಾಗಿಲ್ಲ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

More from DriveSpark

Article Published On: Monday, April 7, 2014, 5:01 [IST]
English summary
When Hyundai set out to design the Grand i10 it clearly did so with the Xcent in mind. How else would Hyundai have managed to neatly turn the hatchback into a sub-4 meter compact sedan where others have failed.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+