ಲ್ಯಾಂಡ್ ರೋವರ್ ಡಿಫೆಂಡರ್ 110 ಫಸ್ಟ್ ಡ್ರೈವ್ ರಿವ್ಯೂ
ಬ್ರಿಟಿಷ್ ಮೂಲದ ಐಷಾರಾಮಿ ವಾಹನ ತಯಾರಕ ಕಂಪನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ ಕಳೆದ ವರ್ಷ ಭಾರತದಲ್ಲಿ ತನ್ನ ಡಿಫೆಂಡರ್ ಆಫ್ ರೋಡ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ಡಿಫೆಂಡರ್ ಎಸ್‌ಯುವಿಯನ್ನು ಡಿಫೆಂಡರ್ 90 ಹಾಗೂ ಡಿಫೆಂಡರ್ 110 ಎಂಬ ಎರಡು ಮಾದರಿಗಳಲ್ಲಿ ತಲಾ ಐದು ಟ್ರಿಮ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಡಿಫೆಂಡರ್ 90 ಮಾದರಿಯು ಮೂರು ಡೋರುಗಳನ್ನು ಹೊಂದಿದ್ದರೆ, 110 ಐದು ಡೋರುಗಳನ್ನು ಹೊಂದಿದೆ. ನಾವು ಇತ್ತೀಚಿಗೆ ಡಿಫೆಂಡರ್ 110 ಎಸ್ಇ ಮಾದರಿಯನ್ನು ಚಾಲನೆ ಮಾಡಿದೆವು. ಈ ಎಸ್‌ಯುವಿಯನ್ನು ಸಿಟಿಯೊಳಗೆ ಹಾಗೂ ಹೆದ್ದಾರಿಯಲ್ಲಿ ಚಾಲನೆ ಮಾಡಿದೆವು. ಈ ಎಸ್‌ಯುವಿಯ ರೋಡ್ ಟೆಸ್ಟ್ ರಿವ್ಯೂವನ್ನು ಈ ಲೇಖನದಲ್ಲಿ ನೋಡೋಣ.

ಎಕ್ಸ್'ಟಿರಿಯರ್ ಹಾಗೂ ಡಿಸೈನ್
ಮೊದಲ ನೋಟದಲ್ಲಿಯೇ ಡಿಫೆಂಡರ್ 110 ಎಸ್‌ಯುವಿಯು ತನ್ನ ಗಾತ್ರದಿಂದ ಗಮನ ಸೆಳೆಯುತ್ತದೆ. ಈ ಎಸ್‌ಯುವಿಯಲ್ಲಿರುವ ಕಪ್ಪು ಬಣ್ಣದ ಬ್ಯಾಡ್ಜ್‌ಗಳನ್ನು ಹೊಂದಿರುವ ಪ್ಯಾಂಗಿಯಾ ಗ್ರೀನ್ ಬಣ್ಣವು ಆಕರ್ಷಕವಾಗಿ ಕಾಣುತ್ತದೆ.

ಈ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್ ಹೊಂದಿರುವ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಅಳವಡಿಸಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್ ಯುನಿಟ್ ನೀಡಲಾಗುತ್ತದೆ.

ಬಂಪರ್ ಕೆಳಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲ್ಯಾಂಪ್'ಗಳನ್ನು ನೀಡಲಾಗಿದೆ. ಡಿಫೆಂಡರ್ ಎಸ್‌ಯುವಿಯಲ್ಲಿ ದೊಡ್ಡ ಬಂಪರ್ ನೀಡಲಾಗಿದೆ.ಬಾನೆಟ್‌ನಲ್ಲಿರುವ ರೇಖೆಗಳು ಹಾಗೂ ಕ್ರೀಸ್‌ಗಳು ಈ ಎಸ್‌ಯುವಿಗೆ ಹೆಚ್ಚು ಸ್ಟಾನ್ಸ್ ನೀಡುತ್ತವೆ.

ಬಾನೆಟ್‌ನ ಮಧ್ಯಭಾಗದಲ್ಲಿ ಕಪ್ಪು ಬಣ್ಣದ ದಪ್ಪವಾಗಿರುವ ಡಿಫೆಂಡರ್ ಬ್ಯಾಡ್ಜ್ ಅಳವಡಿಸಲಾಗಿದೆ. ಈ ಎಸ್‌ಯುವಿಯಲ್ಲಿ 20 ಇಂಚಿನ ಅಲಾಯ್ ವ್ಹೀಲ್ ನೀಡಲಾಗಿದೆ. ಲೋ ಎಂಡ್ ಮಾದರಿಯಲ್ಲಿ 19 ಇಂಚಿನ ವ್ಹೀಲ್'ಗಳನ್ನು ನೀಡಲಾಗುತ್ತದೆ.

ಡಿಫೆಂಡರ್ ಎಸ್‌ಯುವಿಯ ಹೊರಭಾಗದಲ್ಲಿ ಒಟ್ಟು ಆರು ಕ್ಯಾಮೆರಾ ಹಾಗೂ ಸುತ್ತಲೂ ಸೆನ್ಸಾರ್'ಗಳಿವೆ. ಈ ಕ್ಯಾಮರಾ 360 ಡಿಗ್ರಿ ನೋಟವನ್ನು ಹೊಂದಿದ್ದು, ಆಫ್ ರೋಡಿಂಗ್'ನಲ್ಲಿ ನೆರವಿಗೆ ಬರುತ್ತದೆ.

ಐಆರ್‌ವಿಎಂ ಹಿಂದೆ ಇರುವ ಕ್ಯಾಮೆರಾ ಆಕ್ಟಿವ್ ಲೇನ್ ಅಸಿಸ್ಟ್ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಆಗಿ ಕಾರ್ಯನಿರ್ವಹಿಸುತ್ತದೆ. ಮತ್ತೊಂದೆಡೆ, ಐಆರ್‌ವಿಎಂನಲ್ಲಿ ವೀಡಿಯೊ ಪ್ರದರ್ಶಿಸುವ ಶಾರ್ಕ್-ಫಿನ್ ಆಂಟೆನಾದಲ್ಲಿ ಕ್ಯಾಮೆರಾ ಇನೀಡಲಾಗಿದೆ.

ಬೂಟ್‌ನಲ್ಲಿ ಹೆಚ್ಚುವರಿ ಲಗೇಜ್ ಇದ್ದರೆ ಮಿರರ್ ಮೂಲಕ ಹಿಂದೆ ನೋಡಲು ಸಾಧ್ಯವಾಗದಿದ್ದರೆ ಈ ಫೀಚರ್ ನೆರವಿಗೆ ಬರುತ್ತದೆ. ಈ ಎಸ್‌ಯುವಿಯು ಸುಮಾರು 218 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಡಿಫೆಂಡರ್ ಎಸ್‌ಯುವಿಯು ಏರ್ ಸಸ್ಪೆಂಷನ್ ಹೊಂದಿರುವುದರಿಂದ ಆಫ್-ರೋಡ್ ಮೋಡ್‌ನಲ್ಲಿ ಎತ್ತರವನ್ನು 291 ಎಂಎಂಗಳವರೆಗೆ ಹೆಚ್ಚಿಸಬಹುದು. ಈ ಎಸ್‌ಯುವಿಯ ಹಿಂಭಾಗದಲ್ಲಿ ಟೇಲ್‌ಲೈಟ್‌ಗಳಿಗಾಗಿ ಹೊಸ ವಿನ್ಯಾಸವನ್ನು ನೀಡಲಾಗಿದೆ.

ಸ್ಪೇರ್ ವ್ಹೀಲ್ ಅನ್ನು ಬೂಟ್‌ನಲ್ಲಿ ನೀಡಿರುವುದರಿಂದ ಬೂಟ್ ತುಸು ಭಾರವೆನಿಸುತ್ತದೆ. ಬೂಟ್'ಗಳ ಮೇಲೆ ಬ್ಯಾಡ್ಜ್ ಹಾಗೂ ಮಾದರಿಗಳ ಹೆಸರುಗಳನ್ನು ಕಾಣಬಹುದು. ಯಾವುದೇ ಮಾದರಿಗಳಲ್ಲಿ ಕ್ರೋಮ್ ಅಂಶವನ್ನು ನೀಡಲಾಗಿಲ್ಲ.

ಕ್ರೋಮ್'ನಂತೆ ಕಾಣುವ ಭಾಗವು ವಾಸ್ತವವಾಗಿ ಅಲ್ಯೂಮಿನಿಯಂ ಅಸೆಂಟ್ ಆಗಿದ್ದು, ಆಕರ್ಷಕವಾಗಿ ಕಾಣುತ್ತದೆ.

ಇಂಟಿರಿಯರ್ ಹಾಗೂ ಫೀಚರ್'ಗಳು
ಈ ಎಸ್‌ಯುವಿಯ ಕ್ಯಾಬಿನ್ ವಿಶಾಲವಾಗಿದೆ. ಈ ಎಸ್‌ಯುವಿಯಲ್ಲಿರುವ ದೊಡ್ಡ ಪನೋರಾಮಿಕ್ ಸನ್‌ರೂಫ್ ಹಾಗೂ ಸೈಡ್ ಆಲ್ಪೈನ್ ಲೈಟ್ ವಿಂಡೋಗಳು ಕ್ಯಾಬಿನ್‌ನೊಳಗೆ ಹೆಚ್ಚು ಬೆಳಕನ್ನು ನೀಡುತ್ತವೆ.

ಇದರಿಂದ ಸಫಾರಿ ಸಮಯದಲ್ಲಿ ಹೆಚ್ಚು ನೋಟವನ್ನು ಪಡೆಯಲು ಸಾಧ್ಯವಾಗುತ್ತದೆ. ಡಿಫೆಂಡರ್ ಎಸ್‌ಯುವಿಯೊಂದಿಗೆ ಮೂರು ಇಂಟಿರಿಯರ್ ಬಣ್ಣಗಳನ್ನು ನೀಡಲಾಗುತ್ತದೆ.

ಪ್ಯಾಂಗಿಯಾ ಗ್ರೀನ್ ಬಣ್ಣದಲ್ಲಿ ಕಪ್ಪು ಬಣ್ಣದ ಇಂಟಿರಿಯರ್ ನೀಡಲಾದರೆ, ಮತ್ತೊಂದು ಲೈಟ್ ಕ್ರೀಮ್ ಬಣ್ಣದ ಇಂಟಿರಿಯರ್ ಅನ್ನು ಹೊಂದಿದೆ. ಡಿಫೆಂಡರ್ ಎಸ್‌ಯುವಿಯಲ್ಲಿ ಒಟ್ಟು 14 ಯುಎಸ್‌ಬಿ ಹಾಗೂ ಚಾರ್ಜಿಂಗ್ ಸಾಕೆಟ್‌ಗಳನ್ನು ನೀಡಲಾಗಿದೆ. ಇದರಲ್ಲಿ ಬೂಟ್‌ನಲ್ಲಿರುವ 230 ವೋಲ್ಟ್ ಚಾರ್ಜರ್ ಸಹ ಸೇರಿದೆ.

ಈ ಚಾರ್ಜರ್ ಮೂಲಕ ಲ್ಯಾಪ್‌ಟಾಪ್, ಸ್ಪೀಕರ್ ಸೇರಿದಂತೆ ಹಲವು ಗೃಹೋಪಯೋಗಿ ಉಪಕರಣಗಳನ್ನು ಚಾರ್ಜ್ ಮಾಡಬಹುದು. ಟಾಪ್ ಎಂಡ್ ಮಾದರಿಯು ವೆಂಟಿಲೇಟೆಡ್ ಆಗಿದ್ದು, ಡ್ರೈವರ್ ಹಾಗೂ ಪ್ರಯಾಣಿಕರ ಸೀಟುಗಳಲ್ಲಿ ಮೆಮೊರಿ ಫಂಕ್ಷನ್ ನೀಡಲಾಗಿದೆ.

ಸ್ಟೀಯರಿಂಗ್ ವ್ಹೀಲ್ ಎಲೆಕ್ಟ್ರಿಕ್ ಅಡ್ಜಸ್ಟಬಲ್ ಆಗಿದ್ದು, ಆಟೋ ಫೀಚರ್ ಹೊಂದಿದೆ. ಈ ಆಟೋ ಫೀಚರ್ ಸ್ಟೀಯರಿಂಗ್ ವ್ಹೀಲ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಚಾಲಕನ ಸೀಟ್ ಅನ್ನು ಎತ್ತರಕ್ಕೆ ಅನುಗುಣವಾಗಿ ಹೊಂದಿಸಲು ನೆರವಾಗುತ್ತದೆ.

ಈ ಎಸ್‌ಯುವಿಯಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ 10 ಇಂಚಿನ ಇನ್ಫೋಟೇನ್ಮೆಂಟ್ ಸಿಸ್ಟಂ ನೀಡಲಾಗಿದೆ. ಟಚ್ ರೆಸ್ಪಾನ್ಸ್ ಉತ್ತಮವಾಗಿದ್ದು, ಯಾವುದೇ ವಿಳಂಬವಾಗುವುದಿಲ್ಲ.

ಈ ಎಸ್‌ಯುವಿಯಲ್ಲಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಎಸ್‌ಯುವಿಯ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಒದಗಿಸುತ್ತದೆ. ಸ್ಟೀಯರಿಂಗ್ ವ್ಹೀಲ್ ಅನ್ನುಲೆದರ್'ನಿಂದ ವ್ರಾಪ್ ಮಾಡಲಾಗಿದೆ. ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್'ಗಳು ಚಾಲಕನ ಗಮನವನ್ನು ರಸ್ತೆಯ ಮೇಲಿರುವಂತೆ ಮಾಡುತ್ತವೆ.

ಈ ಎಸ್‌ಯುವಿಯಲ್ಲಿ ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 3 ಡಿ ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಂ, ಆ ಸ್ಟ್ರೀಮ್ ಕ್ರಾಸಿಂಗ್‌ಗಳಿಗಾಗಿ ವೇಡ್ ಸೆನ್ಸಿಂಗ್, ಡ್ರೈವರ್ ಕಂಡಿಷನ್ ಮಾನಿಟರಿಂಗ್, ಏರ್‌ಬ್ಯಾಗ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ಗಾತ್ರ
| ಗಾತ್ರ | ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಇ |
| ಉದ್ದ | 5,018 ಎಂಎಂ |
| ಅಗಲ | 2,105 ಎಂಎಂ |
| ಎತ್ತರ | 1,967 ಎಂಎಂ |
| ವ್ಹೀಲ್ ಬೇಸ್ | 3,022ಎಂಎಂ |
| ಬೂಟ್ ಸ್ಪೇಸ್ | 176 - 499ಲೀಟರ್ |
| ಗ್ರೌಂಡ್ ಕ್ಲಿಯರೆನ್ಸ್ | 218 - 291 ಎಂಎಂ |

ಎಂಜಿನ್ ಹಾಗೂ ಹ್ಯಾಂಡ್ಲಿಂಗ್
ನಾವು ಚಾಲನೆ ಮಾಡಿದ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಸುಮಾರು 300 ಬಿಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್'ಗೆ ಎಂಟು ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್'ಗಳಿಗೆ ಪವರ್ ಕಳುಹಿಸುತ್ತದೆ.

ಇನ್ನು 3.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 4000 ಆರ್‌ಪಿಎಂನಲ್ಲಿ 298 ಬಿಹೆಚ್‌ಪಿ ಪವರ್ ಹಾಗೂ 1500 - 2500 ಆರ್‌ಪಿಎಂ ನಡುವೆ 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್'ನೊಂದಿಗೆ ಎಂಟು ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್'ಮಿಷನ್ ಯುನಿಟ್ ಜೋಡಿಸಲಾಗಿದೆ. ಡಿಫೆಂಡರ್ 90 ಎಸ್‌ಯುವಿಯ ಡೀಸೆಲ್ ಆವೃತ್ತಿಯು6.7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇನ್ನು ಡಿಫೆಂಡರ್ 110 ಎಸ್‌ಯುವಿಯ ಡೀಸೆಲ್ ಆವೃತ್ತಿಯು 7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಡೀಸೆಲ್ ಎಂಜಿನ್ ಹೊಂದಿರುವ 90 ಹಾಗೂ 110 ಎರಡೂ ಮಾದರಿಗಳ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 191 ಕಿ.ಮೀಗಳಿಗೆ ಎಲೆಕ್ಟ್ರಾನಿಕ್ ಆಗಿ ಸೀಮಿತಗೊಳಿಸಲಾಗಿದೆ.

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯು ಕಂಪನಿಯ ಇತ್ತೀಚಿನ ಟೆರೈನ್ ರೆಸ್ಪಾನ್ಸ್ 2 ಫೀಚರ್ ಹೊಂದಿದೆ. ಈ ಫೀಚರ್ ಗ್ರಾಹಕರಿಗೆ ಜನರಲ್ ಡ್ರೈವಿಂಗ್, ಗ್ರಾಸ್, ಗ್ರಾವೆಲ್, ಗ್ರಾಸ್, ಸ್ನೋ, ಮಡ್ ಅಂಡ್ ರಟ್ಸ್, ಸ್ಯಾಂಡ್, ರಾಕ್ ಕ್ರಾಲ್ ಹಾಗೂ ವೇಡ್ ಎಂಬ ವಿವಿಧ ಡ್ರೈವಿಂಗ್ ಮೋಡ್'ಗಳನ್ನು ನೀಡುತ್ತದೆ.

ಡಿಫೆಂಡರ್ ಎಸ್‌ಯುವಿಯು 900 ಎಂಎಂವರೆಗಿನ ನೀರಿನಲ್ಲಿ ಸಾಗುತ್ತದೆ. ಆಫ್-ರೋಡ್ ಮೋಡ್‌ನಲ್ಲಿ ಚಾಲನೆ ಮಾಡುವಾಗ ಏರ್ ಸಸ್ಪೆಂಷನ್'ನಿಂದಾಗಿ ಎಸ್‌ಯುವಿ ಎತ್ತರದಲ್ಲಿರುವ ಕಾರಣಕ್ಕೆ ಸ್ವಲ್ಪ ಪ್ರಮಾಣದ ಬಾಡಿ ರೋಲ್ ಇರುತ್ತದೆ.

ಚಾಲನೆ ಮಾಡಲು ಅತ್ಯುತ್ತಮ ಸಸ್ಪೆಂಷನ್ ಮೋಡ್ ಜನರಲ್ ಮೋಡ್ ಆಗಿದೆ. ಈ ಮೋಡ್'ನಲ್ಲಿ ಸಸ್ಪೆಂಷನ್ ಸೆಟ್ಟಿಂಗ್‌ಗಳು ಉತ್ತಮವಾಗಿದ್ದು, ಎಸ್‌ಯುವಿಯು ಪ್ರತಿಯೊಂದು ಹಂಪ್ ಹಾಗೂ ರಸ್ತೆ ಗುಂಡಿಯಲ್ಲಿ ಸರಾಗವಾಗಿ ಚಲಿಸುತ್ತದೆ.

ಡಿಫೆಂಡರ್ ಎಸ್‌ಯುವಿಯಲ್ಲಿರುವ ಎನ್‌ವಿಹೆಚ್ ಲೆವೆಲ್ ಅದ್ಭುತವಾಗಿದ್ದು, ಎಲ್ಲಾ ವಿಂಡೋಗಳನ್ನು ಮುಚ್ಚಿದ ನಂತರ ಹೊರಗಿನ ಶಬ್ದವು ಒಳಕ್ಕೆ ಕೇಳಿಸುವುದಿಲ್ಲ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯು ಅದ್ಭುತವಾಗಿದ್ದು, ಸಮರ್ಥವಾದ ಐಷಾರಾಮಿ ಆಫ್ ರೋಡ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಎಸ್‌ಯುವಿಗಾಗಿ ಹೆಚ್ಚು ಹಣ ಖರ್ಚು ಮಾಡಲು ಸಿದ್ದರಿದ್ದರೆ ಹೊಸ ಡಿಫೆಂಡರ್ ಎಸ್‌ಯುವಿಯನ್ನು ಖರೀದಿಸಬಹುದು.


Click it and Unblock the Notifications








