ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಲ್ಯಾಂಡ್ ರೋವರ್ ಸಂಸ್ಥೆಯ ಫ್ರೀಲ್ಯಾಂಡರ್2 ಕಾರು ದೇಶದ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಯಲ್ಲಿ ಕೂಡಾ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಆದ್ರೆ ಬಾಕ್ಸಿ ವಿನ್ಯಾಸದ ಕಾರುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯು ಕಡಿಮೆಯಾದ ನಂತರ ಜಾಗ್ವಾರ್ ಲ್ಯಾಂಡ್ ರೋವರ್ ತಮ್ಮ ಫ್ರೀಲ್ಯಾಂಡರ್2 ಕಾರಿನ ಮರಾಟವನ್ನು ಸ್ಥಗಿತಗೊಳಿಸಿ 2015ರಲ್ಲಿ ಹೊಸ ಡಿಸ್ಕವರಿ ಸ್ಪೋರ್ಟ್ ಕಾರನ್ನು ಪರಿಚಯಿಸಿತು.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

2015ರಲ್ಲಿ ಬಿಡಗಡೆಗೊಂಡ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು ಹೊಸ ನೋಟ ಮತ್ತು ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದ್ದು, ಹಲವಾರು ಐಷಾರಾಮಿ ಸೌಲತ್ತುಗಳು ಮತ್ತು ವೈಶಿಷ್ಟ್ಯತೆಗಳನ್ನು ಕೂಡ ಈ ಕಾರಿನಲ್ಲಿ ಒದಗಿಸಲಾಗಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

2017ರಲ್ಲಿ ಲ್ಯಾಂಡ್ ರೋವರ್ ಸಾಂಸ್ಥೆಯು ತಮ್ಮ ಡಿಸ್ಕವರಿ ಸ್ಪೋರ್ಟ್ ಕಾರನ್ನು ಮತ್ತೊಮ್ಮೆ ಮರುವಿನ್ಯಾಸಗೊಳಿಸಿ ಬಿಡುಗಡೆಗೊಳಿಸಲಾಯಿತು. ಈ ಎಸ್‍ಯುವಿ ಕಾರು ಅದೇ ತರಹದ ವಿನ್ಯಾಸ ಹಾಗು ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ. ಅದಾಗ್ಯು ಹೊಸ ಬದಲಾವಣೆ ಎಂದರೇ ಇದರಲ್ಲಿ ಹೊಸ 2.0 ಲೀಟರ್ ಎಂಜಿನಿಯಂ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಲ್ಯಾಂಡ್ ರೋವರ್ ಸಂಸ್ಥೆಯು ತಮ್ಮ ಡಿಸ್ಕವರಿ ಸ್ಪೋರ್ಟ್ ಐಷಾರಾಮಿ ಕಾರಿನ ಟೆಸ್ಟ್ ಡ್ರೈವ್‍ ಮಾಡಲು ನಮಗೆ ಅವಕಾಶವನ್ನು ನೀಡಿದ್ದು, ಸುಮಾರು 2 ವಾರಗಳು ನಮ್ಮೊಂದಿಗಿದ್ದ ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ನೀಡಲಿದ್ದೇವೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ವಿನ್ಯಾಸ ಮತ್ತು ಶೈಲಿ

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಸ್‍ಯುವಿ ಕಾರಿನ ಮುಂಭಾಗದಲ್ಲಿ ಹಿಂದಿನ ತಲೆಮಾರಿನ ವಿನ್ಯಾಸವನ್ನೆ ಪಡೆದುಕೊಂಡಿದ್ದು, ಸ್ವಲ್ಪ ಎವೋಕ್ ಕಾರಿನ ವಿನ್ಯಾಸವನ್ನು ಆಧರಿಸಲಾಗಿದೆ. ಹನಿ ಕಾಂಬ್ ಗ್ರಿಲ್‍ನ ಮೇಲೆ ದೊಡ್ಡದಾಗಿ ಸಂಸ್ಥೆಯ ಬ್ಯಾಡ್ಜಿಂಗ್ ಅನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದ್ದು, ಇದರಲ್ಲಿ ಅಳವಡಿಸಲಾಗಿರುವ ಎಲ್ಇಡಿ ಡಿಆರ್‍ಎಲ್‍‍ಗಳು ನೋಡುಗರನ್ನು ಆಕರ್ಷಿಸುತ್ತದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಕಾರಿನ ವಿನ್ಯಸವನ್ನು ಕಾರಿನ ಹಿಂಭಾಗದಲ್ಲಿಯು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದ್ದು, ವೃತ್ತಾಕಾರದ ಎಲ್ಇಡಿ ಸ್ಮೋಕ್ಡ್ ಟೈಲ್ ಲ್ಯಾಂಪ್ ಅನ್ನು ನೀಡಲಾಗಿದೆ ಮತ್ತು ಡಿಸ್ಕವರಿ ಸ್ಪೋರ್ಟ್ ಎಂಬ ಬ್ಯಾಡ್ಜಿಂಗ್ ಅನ್ನು ರಿಜೆಸ್ಟ್ರೇಷನ್ ಪ್ಲೇಟ್‍ನ ಮೇಲೆ ಸಜ್ಜುಗೊಳಿಸಲಾಗಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಕಾರಿನ ಒಳಭಾಗದ ವಿನ್ಯಾಸ

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರಿನ ಒಳಭಾಗದಲ್ಲಿ 5 ಮಂದಿ ಮತ್ತು 5+2 ಮಂದಿ ಕೂರಬಹುದಾದ ಸೀಟಿಂಗ್ ವಿನ್ಯಾಸವನ್ನು ಒದಗಿಸಲಾಗಿದೆ. ಮುಂಭಾಗದ ಡ್ಯಾಶ್‍ಬೋರ್ಡ್‍ನಲ್ಲಿ ಮೂಲಭೂತ ಮತ್ತು ಕ್ರಿಯಾತ್ಮಕ ವಿನ್ಯಾಸವನ್ನು ನೀಡಲಾಗಿದೆ. ಕಾರಿನ ಡ್ಯಾಶ್‍ಬೋರ್ಡ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಡ್ರೈವರ್‍‍‍‍ಗೆ ಅನುಕೂಲವಾಗುವಂತೆ ವಿಂಡೋ ಸ್ವಿಚ್‍ಗಳು, ವಿದ್ಯುತ್‍ನಿಂದ ಅಡ್ಜಸ್ಟ್ ಮಾಡಬಹುದಾದ ಬಟನ್‍ಗಳನ್ನು ಸನಿಹದಲ್ಲಿಯೆ ನೀಡಲಾಗಿದ್ದು, ಉತ್ತಮವಾದ ಗುಣಮಟ್ಟದಿಂದ ಇವುಗಳು ಕೂಡಿವೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಪ್ರಯಾಣಿಕರಿಗೆ ಅರಾಮದಾಯಕ ಪ್ರಯಾಣವನ್ನು ನೀಡಲು ಉತ್ತಮ ಗುಣಮಟ್ಟದ ಲೆಧರ್ ಸೀಟ್‍ಗಳನ್ನು ನೀಡಲಾಗಿದೆ. ಅದಾಗ್ಯು ಡ್ರೈವರ್ ಸೀಟ್ ಕೂಡಾ ಕೊಂಚ ಎತ್ತರವಾಗಿದ್ದು, ಅಡ್ಜಸ್ಟ್ ಮಾಡಿಕೊಂಡು ಅರಮಾದಾಯಕವಾಗಿ ಡ್ರೈವಿಂಗ್ ಮಾಡಬಹುದಾಗಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ವೈಷಿಷ್ಟ್ಯತೆಗಳು ಮತ್ತು ಉಪಕರಣಗಳು

ಕಾರು ಖರೀದಿಸಿದ ಬೆಲೆಗೆ ಮೋಸವಿಲ್ಲದ ಹಾಗೆ ಹಲವಾರು ವೈಶಿಷ್ಟತೆಗಳನ್ನು ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರಿನಲ್ಲಿ ನೀವು ಪಡೆಯಬಹುದಾಗಿದೆ. ನಮಗೆ ಸಿಕ್ಕ ಕಾರಿನಲ್ಲಿ 8 ಬಗೆಯಲ್ಲಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟ್, 3 ಮೆಮೊರಿ ಸೀಟ್ ಫಂಕ್ಷನ್‍ಗಳು, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಬಟನ್ಸ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಅಸಿಸ್ಟ್ ಬಟನ್‍ಗಳನ್ನು ಒದಗಿಸಲಾಗಿತ್ತು.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಇದಲ್ಲದೇ ಡಿಸ್ಕವರಿ ಸ್ಪೋರ್ಟ್ ಎಸ್‍ಯುವಿ ಕಾರಿನಲ್ಲಿ ಎರಡು ಯುಎಸ್‍ಬಿ ಚಾರ್ಜಿಂಗ್ ಪೋರ್ಟ್ಸ್, 12 ವೋಲ್ಟ್ಸ್ ಚಾರ್ಜಿಂಗ್ ಪೋರ್ಟ್ಸ್ ಅನ್ನು ನೀಡಲಾಗಿದ್ದು, ಇವೋಕ್ ಕಾರಿನಲ್ಲಿ ನೋಡಬಹುದಾದ 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನು ಕೂಡ ಅಳವಡಿಸಲಾಗಿದ್ದು, ಇದರಲ್ಲಿ ಇನ್‍ಬ್ಯುಲ್ಟ್ ನ್ಯಾವಿಗೇಷನ್ ಸಿಸ್ಟಂ ಅನ್ನು ಕೂಡಾ ಹೊಂದಿಸಲಾಗಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಇದರಲ್ಲಿ ಹಿಂಭಾಗದ ಪ್ರಯಾಣಿಕರಿಗಾಗಿ ಎಂಟರ್ಟೈನ್ಮೆಂಟ್ ಸಿಸ್ಟಂ ಅನ್ನು ಫ್ರಂಟ್ ಸೀಟ್‍ನ ಹೆಡ್‍ರೆಸ್ಟ್ ಹಿಂಭಾಗದಲ್ಲಿ ಒದಗಿಸಲಾಗಿದ್ದು, ದೊಡ್ಡದಾದ ಗ್ಲಾಸ್ ರೂಫ್ ಅನ್ನು ಕೂಡ ನೀಡಲಾಗಿದೆ. ಜೊತೆಗೆ ಟೆರ್ರೈನ್ ಮ್ಯಾನೇಜ್ಮೆಂಟ್ ಸಿಸ್ಟಂ, ಹಿಲ್ ಡೆಸ್ಸೆಂಟ್ ಅಸ್ಸಿಸ್ಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ ಮತ್ತು ರೋಲ್ ಸ್ಟೆಬಿಲಿಟಿ ಕಂಟ್ರೋಲ್ ಆಯ್ಕೆಗಳನ್ನು ನೀಡಲಾಗಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಎಂಜಿನ್ ಸಾಮರ್ಥ್ಯ

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಹೆಚ್ಎಸ್ಇ ಟ್ರಿಮ್ ಕಾರು 2.0 ಲೀಟರ್ 4 ಸಿಲೆಂಡರ್ ಇಂಜೆನಿಯಂ ಡೀಸೆಲ್ ಎಂಜಿನ್ ಸಹಾಯದಿಂದ 148.3ಬಿಹೆಚ್‍ಪಿ ಮತ್ತು 382ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಕಾರನ್ನು ರೈಡ್ ಮಾಡುವಾಗ ಎಂಜಿನ್ ಶಬ್ದವು ಒಳಗಡೆ ಬರುವುದಿಲ್ಲವಾಗಿದ್ದು, ಆಟೋಮ್ಯಾಟಿಕ್ ಮೋಡ್‍ ಮೃದುವಾದ ಗೇರ್‍‍ಶಿಫ್ಟ್ ನಿಂದ ನೆಮ್ಮದಿಯಾದ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಮತ್ತು ಕಡಿಮೆ ಸ್ಪೀಡ್‍ನಲ್ಲಿ ಚಲಿಸುವಾಗ ಸ್ವಲ್ಪ ಜರ್ಕ್ ಕೊಡುತ್ತದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಆದಾಗ್ಯೂ, ನಾವು ಅದನ್ನು ಸ್ಪೋರ್ಟ್ ಮೋಡ್‍ಗೆ ಬದಲಾಯಿಸಿದ ನಂತರ, ಸಣ್ಣದೊಂದು ಥ್ರೊಟಲ್ ಇನ್ಪುಟ್‍‍ಣ ಜೊತೆಗೆ ಸೇರಿ ಕಾರನ್ನು ಗಮನಾರ್ಹವಾಗಿ ಹೆಚ್ಚು ಸ್ಪಂದಿಸಲಾಯಿತು. ಗೇರ್‍‍ಗಳನ್ನು ಬದಲಾಯಿಸುವಾಗ ಪ್ಯಾಡಲ್ ಶಿಫ್ಟ್ ಮಾಡುವ ಕೆಲಸವನ್ನು ಅದ್ಭುತವಾದ ವಿನ್ಯಾಸ ಮಾಡಲಾಗಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಡ್ರೈವಿಂಗ್ ಮತ್ತು ನಿಯಂತ್ರಣ

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಅದ್ಭುತ ಸವಾರಿ ಮತ್ತು ನಿರ್ವಹಣೆ ಲಕ್ಷಣಗಳನ್ನು ಒದಗಿಸುತ್ತದೆ. ಎಸ್ಯುವಿ ಸಂಸ್ಥೆಯ ಅಮಾನತು ಸೆಟಪ್ ಪ್ರಯಾಣಿಕರಿಗೆ ನೆಟ್ಟ ಸವಾರಿ ನೀಡುತ್ತದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಡಿಸ್ಕವರಿ ಸ್ಪೋರ್ಟ್ ಇನ್ನೂ ಮೂಲೆಗಳನ್ನು ತೆಗೆದುಕೊಂಡು ಸ್ವಲ್ಪ ಪ್ರಮಾಣದ ದೇಹ ರೋಲ್ ಅನ್ನು ಹೊಂದಿರುತ್ತದೆ ಆದರೆ ಚಾಲನೆ ಮಾಡುವಾಗ ಒಟ್ಟಾರೆ ವಿಶ್ವಾಸವನ್ನು ತೆಗೆದುಕೊಳ್ಳುವುದಿಲ್ಲ. ಸ್ಟೀರಿಂಗ್ ಹೆಚ್ಚು ವೇಗದಲ್ಲಿ ಅತೀವವಾಗಿ ತೂಗುತ್ತದೆ ಮತ್ತು ಚಾಲಕನಿಗೆ ಸಾಕಷ್ಟು ಪ್ರತಿಕ್ರಿಯೆ ನೀಡುತ್ತದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಲ್ಯಾಂಡ್ ರೋವರ್ ಬೇರಾವ ಎಸ್‍ಯುವಿ ಕಾರುಗಳು ನೀಡದಂತ ಸಾಕಷ್ಟು ಆಫ್-ರೋಡಿಂಗ್ ಕೌಶಲ್ಯವನ್ನು ಇದು ಪಡೆದುಕೊಂಡಿದೆ. ಟೆರೆನ್ ಮ್ಯಾನೇಜ್ಮೆಂಟ್ ಸಿಸ್ಟಮ್ ನಾಲ್ಕು ವಿಧಾನಗಳನ್ನು ಒದಗಿಸುತ್ತದೆ: ಜನರಲ್ ಡ್ರೈವಿಂಗ್, ಹಿಮ / ಹುಲ್ಲು, ಮಣ್ಣು ಮತ್ತು ರಟ್‍ಗಳು ಮತ್ತು ಮರಳು; ಪ್ರತಿಯೊಬ್ಬರೂ ಕಷ್ಟಕರ ಭೂಪ್ರದೇಶದ ಸ್ಥಿತಿಯಲ್ಲಿ ಡಿಸ್ಕವರಿ ಸ್ಪೋರ್ಟ್ ಕಾರು ಸಹಾಯ ಮಾಡುತ್ತದೆ. ಹೆಚ್ಚಿನ ನೆಲದ ತೆರವು 200 ಎಂಎಂ ಮತ್ತು ದೊಡ್ಡ 19 ಇಂಚಿನ ಚಕ್ರಗಳು ಹೆಚ್ಚುವರಿ ಸಹಾಯವನ್ನು ನೀಡುತ್ತವೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಮೈಲೇಜ್

ಲ್ಯಾಂಡ್ ರೋವರ್ ಡಿಸ್ಕ್ವರಿ ಸ್ಪೋರ್ಟ್ ಒಂದು ಟೂ ಟೊನ್ ಎಸ್‍ಯುವಿ ಕಾರಾದ ಕಾರಣ ಪ್ರತೀ ಲೀಟರ್‍‍ಗೆ 12ಕಿಲೋಮೀಟರ್‍‍ನ ಮೈಲೇಜ್ ಅನ್ನು ಒದಗಿಸುತ್ತದೆ ಮತ್ತು ಈ ಕಾರಿನಲ್ಲಿ 70 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಸಹ ನೀಡಲಾಗಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಸುರಕ್ಷಾ ವೈಶಿಷ್ಟ್ಯತೆಗಳು

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರಿನಲ್ಲಿ ಪ್ರಯಾಣಿರ ಸುರಕ್ಷತೆಗಾಗಿ ಡ್ಯುಯಲ್ ಫ್ರಂತ್ ಏರ್‍‍ಬ್ಯಾಗ್‍ಗಳು, ಸೈಡ್ ಕರ್ಟೈನ್ಸ್ ಆಡಿಬಲ್ ಸೀಟ್‍‍ಬೆಲ್ಟ್ ವಾರ್ನಿಂಗ್, ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಆಟೋ ಲಾಕಿಂಗ್ ಮತ್ತು ಕೊಲಿಷನ್ ಅನ್‍ಲಾಕಿಂಗ್ ಸಿಸ್ಟಂ, ಆಟೋಮ್ಯಾಟಿಕ್ ಹಜಾರ್ಡ್ ಲೈಟ್ಸ್ ಅಂಡರ್ ಬ್ರೇಕಿಂಗ್ ಮತ್ತು 24x7 ರೋಡ್‍‍ಸೈಡ್ ಅಸಿಸ್ಟನ್ಸ್ ಏಂಬ ಹಲವಾರು ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಬೆಲೆ ಮತ್ತು ಬಣ್ಣಗಳು

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು ಪ್ಯುರ್, ಎಸ್ಇ, ಹೆಚ್ಎಸ್ಇ ಮತ್ತು ಲಕ್ಷುರಿ ಹೆಚ್ಎಸ್ಇ ಎಂಬ ನಾಲ್ಕು ವೇರಿಯಂಟ್‍ಗಳಲ್ಲಿ ಖರೀಗೆ ಲಭ್ಯವಿದೆ. ಡಿಸ್ಕವರಿ ಸ್ಪೋರ್ಟ್ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.44.68ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ನಮಗೆ ಟೆಸ್ಟ್ ಡ್ರೈವ್ ಮಾಡಲು ಸಿಕ್ಕ ಹೆಚ್ಎಸ್ ಇ ವೇರಿಯಂತ್ ಕಾರು ರೂ.54.76 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಡಿಸ್ಕವರಿ ಸ್ಪೋರ್ಟ್ ಕಾರು ಫ್ಯುಜಿ ವೈಟ್, ಇಂಡಸ್ ಸಿಲ್ವರ್ ಮತ್ತು ಸ್ಕಾಟಿಯಾ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಆಯ್ಕೆಯಾಗಿ ಬ್ಲಾಕ್ ರೂಫ್ ಅನ್ನು ನೀಡಲಾಗಿತ್ತಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಪ್ರಸ್ತುತ ಮಾರುಕಟ್ಟೆಯಲ್ಲಿ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಸ್‍ಯುವಿ ಕಾರು ಬಿಎಂಡಬ್ಲ್ಯೂ ಎಕ್ಸ್1, ಮರ್ಸಿಡೀಸ್-ಬೆಂಜ್ ಜಿಎಲ್ಎ ಮತ್ತು ಆಡಿ ಕ್ಯೂ3 ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ರಿವ್ಯೂ - ಮತ್ತಷ್ಟು ಐಷಾರಾಮಿ ಸೌಲಭ್ಯ ಹೊತ್ತು ಬಂದಿದೆ ಹೊಸ ಡಿಸ್ಕವರಿ ಸ್ಪೋರ್ಟ್

ಕೊನೆ ಮಾತು

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು ಐಷಾರಾಮಿ ಎಸ್‍ಯುವಿ ಕಾರಾಗಿದ್ದು, ಹೊಸ ಸಾಂಚಾರಕ್ಕಾಗಿ ಬೇಕಾದ ಎಲ್ಲಾ ಸೌಕರ್ಯಗಳು ಈ ಕಾರಿನಲ್ಲಿ ಇದ್ದು, ನೀಡುವ ಬೆಲೆಗೆ ಮೋಸವಿಲ್ಲವೆಂದೆ ಹೇಳಬಹುದು. ಇದರಲ್ಲಿನ ಅಧಿಕ ಸಾಮರ್ಥ್ಯದ ಇಂಜೆನಿಯಂ ಡೀಸೆಲ್ ಎಂಜಿನ್ ಉತ್ತಮ ಡ್ರೈವಿಂಗ್ ಅನುಭವವನ್ನು ನೀಡುತ್ತದೆ.

More from DriveSpark

Article Published On: Saturday, October 20, 2018, 17:37 [IST]
English summary
Land Rover Discovery Sport Review — A Versatile Way Of Discovering New Terrains
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+