ಮಹೀಂದ್ರ ಎಕ್ಸ್‌ಯುವಿ 500 ಪ್ರಯಾಣ ಸುರಕ್ಷಿತವೇ?
ಮಹೀಂದ್ರ ಆಂಡ್ ಮಹೀಂದ್ರ ಫ್ಯಾಕ್ಟರಿಯಿಂದ ಹೊರಬಂದ ಎಕ್ಸ್‌ಯುವಿ500 ಕಾರಿನಲ್ಲಿ ಹಲವು ಅಡ್ವಾನ್ಸಡ್ ಸುರಕ್ಷಿತ ಫೀಚರುಗಳಿವೆ. ಇದರಲ್ಲಿ ರೊಲೊವೊರ್ ಮಿಟಿಗೆಷನ್ ಸಿಸ್ಟಮ್ ಇದೆ. ಇದರಿಂದಾಗಿ ಚಾಲನೆ ಮಾಡುವ ಸ್ಥಿತಿಗತಿಗಳನ್ನು, ವಾಹನ ಹಿಂದಕ್ಕೆ ಅಥವಾ ಮುಂದಕ್ಕೆ ಜಾರುವ ಅಪಾಯವನ್ನು ತಿಳಿಯಬಹುದು. ಎಲ್ಲದರೂ ಎಲೆಕ್ಟ್ರಿಕ್ ಸ್ಟೆಬಿಲಿಟಿ ಸಿಸ್ಟಮ್ ಅಗತ್ಯ ಬಿದ್ದರೆ ಬಳಸಬಹುದು. ಅಂದರೆ ಅತಿ ವೇಗದಲ್ಲಿದ್ದರೂ ಕಾರಿನ ನಿಯಂತ್ರಣ ಸಾಧಿಸಲು ಇದು ನೆರವಾಗುತ್ತದೆ.
XUV500 ಕಾರಿನಲ್ಲಿ ಆರು ಏರ್ ಬ್ಯಾಗ್ ಗಳಿವೆ. ಚಾಲಕ ಮತ್ತು ಪ್ರಯಾಣಿಕರ ಏರ್ ಬ್ಯಾಗ್, ಸೈಡ್ ಏರ್ ಬ್ಯಾಗ್ ಗಳು ಅಪಘಾತದಂತಹ ಸಂದರ್ಭದಲ್ಲಿ ಪ್ರಾಣ ರಕ್ಷಿಸಲು ನೆರವಾಗಬಹುದು. ಮಹೀಂದ್ರ ಎಕ್ಸ್‌ಯುವಿ 500 ಬಾಡಿಯಲ್ಲಿ ಸೈಡ್ ಇಂಪ್ಯಾಕ್ಟ್ ಬೀಮ್ಸ್ ಇತ್ಯಾದಿ ಫೀಚರುಗಳೂ ಇವೆ.

ಮಹೀಂದ್ರ ಎಕ್ಸ್ ಯುವಿ 500 ಕಾರಿನ ಚಾಲಕನ ಸೀಟಿನಲ್ಲಿ ಕುಳಿತು ಪಕ್ಕಕ್ಕೆ ದೃಷ್ಟಿ ಹಾಯಿಸಿದರೆ ಹತ್ತು ಹಲವು ಫೀಚರುಗಳು ಗಮನ ಸೆಳೆಯುತ್ತವೆ. ಅದರಲ್ಲಿ ಜಿಪಿಎಸ್ ಸಾಮರ್ಥ್ಯದ ಟಚ್ ಸ್ಕ್ರೀನ್ ಮಾಹಿತಿ ವ್ಯವಸ್ಥೆಯು ಪ್ರಮುಖ. ಆರು ಇಂಚಿನ ಎಲ್ ಸಿಡಿ ಟಚ್ ಸ್ಕ್ರೀನ್ ಇದೆ. ಮುಂದಿನ ತಲೆಮಾರಿನ ಸ್ಪೋರ್ಟ್ಸ್ ಕಾರಿಗೆ ಸೂಕ್ತವಾಗುವಂತೆ ಇದರಲ್ಲಿ ಬ್ಲೂ ಸೆನ್ಸ್ ತಂತ್ರಜ್ಞಾನವಿದೆ. ಒಂದೇ ಟಚ್ ಪಾಯಿಂಟ್ ಮೂಲಕ ಮ್ಯೂಸಿಕ್, ಏಸಿ, ನ್ಯಾವಿಗೇಷನ್ ಇತ್ಯಾದಿ ಫೀಚರುಗಳನ್ನು ಕಂಟ್ರೋಲ್ ಮಾಡಬಹುದಾಗಿದೆ.
ಜಿಪಿಎಸ್ ನ್ಯಾವಿಗೇಷನ್ ಸಿಸ್ಟಮ್: ಮಹೀಂದ್ರ ಎಕ್ಸ್ ಯುವಿ 500 ಕಾರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಲೋಡ್ ಆಗಿರುವ ಜಿಪಿಎಸ್ ನ್ಯಾವಿಗೇಷನ್ ಸಿಸ್ಟಮ್ ಇದೆ. ಇದು ಸುಮಾರು 1,200 ನಗರಗಳಲ್ಲಿ ಸುಮಾರು 15 ದಶಲಕ್ಷ ಕಿ.ಮೀ. ವ್ಯಾಪ್ತಿಯಲ್ಲಿ ಧ್ವನಿ ಆಧರಿತವಾಗಿ ಮಾರ್ಗದರ್ಶನ ನೀಡುತ್ತದೆ. ವಿಶೇಷವೆಂದರೆ ಇದರಲ್ಲಿ 8 ಸ್ಥಳೀಯ ಭಾಷೆಗಳಲ್ಲಿಯೂ ಅಡಕವಾಗಿದೆ. ರೆಸ್ಟೂರೆಂಟ್, ಎಟಿಎಂ, ಪೆಟ್ರೋಲ್ ಬಂಕ್, ಸಿನಿಮಾ ಥಿಯೇಟರ್ ಹೀಗೆ ಎಲ್ಲಾ ಮಾಹಿತಿಗಳನ್ನು ಇದರಲ್ಲಿ ಪಡೆಯಬಹುದಾಗಿದೆ.
ಚಾಲಕನಿಗೆ ಮಾಹಿತಿ ನೀಡುವ ವ್ಯವಸ್ಥೆ: ಕಾರಿನ ಸಂಪೂರ್ಣ ಮಾಹಿತಿಯನ್ನು ಡ್ರೈವರ್ ಇನ್ಫಾರ್ಮೆಷನ್ ಸಿಸ್ಟಮ್ ನೀಡುತ್ತದೆ. ಅಂದರೆ ಎಷ್ಟು ಇಂಧನ ಉಳಿದಿದೆ, ಟೈರಿನಲ್ಲಿ ಗಾಳಿ ಎಷ್ಟಿದೆ, ಕಾರಿನೊಳಗೆ ಏಸಿ ಎಷ್ಟಿದೆ ಸೇರಿದಂತೆ ಹಲವು ಮಾಹಿತಿಗಳನ್ನು ಇದು ಚಾಲಕನಿಗೆ ನೀಡುತ್ತದೆ.
ಕಾರು ರಿವರ್ಸ್ ಮಾಡುವಾಗ ಎಲ್ ಸಿಡಿ ಸ್ಕ್ರೀನಿನಲ್ಲಿ ರಿವರ್ಸ್ ಪಾರ್ಕ್ ಅಸಿಸ್ಟ್ ಸಿಸ್ಟಮ್ ನಿಮಗೆ ಮಾಹಿತಿ ನೀಡುತ್ತದೆ. ಕಾರಿನ ಹಿಂದಿನ ಬಂಪರ್ ಮತ್ತು ವಾಹನಕ್ಕೆ ಹಿಂಭಾಗದಲ್ಲಿರುವ ವಸ್ತುಗಳ ಅಂತರವನ್ನು ಇದರಿಂದ ತಿಳಿದುಕೊಂಡು ಸುರಕ್ಷಿತವಾಗಿ ಕಾರ್ ಪಾರ್ಕ್ ಮಾಡಬಹುದಾಗಿದೆ.
ಧ್ವನಿ ನಿರ್ದೇಶನ, ಕ್ರೂಷ್ ಮತ್ತು ಆಡಿಯೋ ಕಂಟ್ರೋಲ್: ಮಹೀಂದ್ರ ಎಕ್ಸ್‌ಯುವಿ 500 ಕಾರಿನ ಸ್ಟೀಯರಿಂಗ್ ವೀಲಿನಲ್ಲಿ ಧ್ವನಿ ಕಮಾಂಡ್ಸ್, ಕ್ರೂಷ್ ಮತ್ತು ಆಡಿಯೋ ಕಂಟ್ರೋಲ್ ಮಾಡಬಹುದಾಗಿದೆ. ಸ್ಟೀಯರಿಂಗ್ ವೀಲ್ ನಿಂದ ಕೈ ತೆಗೆಯದೆ ಧ್ವನಿಯ ಮೂಲಕ ಇನ್ಫೋಟೈನ್ ಮೆಂಟ್ ಸಿಸ್ಟಮನ್ನು ಕಂಟ್ರೋಲ್ ಮಾಡಬಹುದಾಗಿದೆ.
ಕ್ರೂಷ್ ಕಂಟ್ರೋಲ್ ಮೂಲಕ ಎಕ್ಸ್‌ಯುವಿ ಚಾಲನೆ ಸುಲಭವಾಗಿದೆ. ಮುಖ್ಯವಾಗಿ ಹೆದ್ದಾರಿಗಳಲ್ಲಿ ಒತ್ತಡವಿಲ್ಲದ ಡ್ರೈವಿಂಗ್ ಮಾಡಬಹುದಾಗಿದೆ. ಸ್ಟೀಯರಿಂಗ್ ವೀಲ್ ಕಂಟ್ರೋಲ್ ಮೂಲಕ ಈ ಹಿಂದೆ ಸೆಟ್ ಮಾಡಿದ್ದ ವೇಗದಲ್ಲಿ ಚಾಲನೆ ಮಾಡಲು ಇದು ನೆರವಾಗುತ್ತದೆ. ಆಕ್ಸಿಲರೇಷನ್ ಬಳಸದೇ ವೇಗದಲ್ಲಿ ಕೊಂಚ ಬದಲಾವಣೆ ಮಾಡಲು ಇದು ಸಹಕರಿಸುತ್ತದೆ.
ಸ್ಟೀಯರಿಂಗ್ ವೀಲ್ ನಲ್ಲೇ ಬ್ಲೂಟೂಥ್ ಸಾಮರ್ಥವಿರುವ ಮೊಬೈಲ್ ಬಳಸಬಹುದು. ಬ್ಲೂ ಸೆನ್ಸ್ ತಂತ್ರಜ್ಞಾನ ಬಳಸಿಕೊಂಡು ಮೊಬೈಲ್ ಫೋನ್ ಬುಕ್ ನೋಡಬಹುದು. ಕರೆ ಸ್ವೀಕರಿಸಬಹುದು. ಕರೆ ಮಾಡಬಹುದು. ಅಂದಹಾಗೆ ಡ್ರೈವಿಂಗಿನಲ್ಲಿ ಮೊಬೈಲ್ ಬಳಸುವುದು ಸುರಕ್ಷಿತವಲ್ಲವೆನ್ನುವುದು ನೆನಪಿನಲ್ಲಿರಲಿ.
ದರ ಇನ್ನಿತರ ಮಾಹಿತಿ ಪಡೆಯಲು ಈ ಹಿಂದೆ ಪ್ರಕಟಿಸಿದ ಮಹೀಂದ್ರ ಎಕ್ಸ್‌ಯುವಿ 500 ಸುದ್ದಿಗಳನ್ನು ಓದಿ.


Click it and Unblock the Notifications








