ಎಕ್ಸ್‌ಯುವಿ 500: ಅದ್ವಿತೀಯ ಕಾರಿನ ಸೌಂದರ್ಯ ಲಹರಿ

ಎಸ್‌ಯುವಿ ತಜ್ಞ ಮಹೀಂದ್ರ ಫ್ಯಾಕ್ಟರಿಯಿಂದ ಇತ್ತೀಚೆಗೆ ಆಗಮಿಸಿದ ಎಕ್ಸ್‌ಯುವಿ 500 ಯಶಸ್ಸು ಎಲ್ಲರಲ್ಲೂ ಬೆರಗು ಮೂಡಿಸುವಂತದ್ದು. ಈ ಕಾರು ಏಕೆ ಅದ್ವಿತೀಯ, ವಿಶಿಷ್ಟ ಎನ್ನುವ ಕೌತುಕ ಎಲ್ಲರಿಗೂ ಇರಬಹುದು. ಸಾಟಿಯಿಲ್ಲದ ಸೊಬಗಿನ, ಎಣೆಯಿಲ್ಲದ ಬೆರಗಿನ ಮಹೀಂದ್ರ ಎಕ್ಸ್‌ಯುವಿ 500 ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಸೌಂದರ್ಯ ಲಹರಿ ಇಲ್ಲಿದೆ.

ಜಗತ್ತಿನ ಮೂಲೆ ಮೂಲೆಯ ಗ್ರಾಹಕರಿಂದ ಮೆಚ್ಚುಗೆ ಪಡೆದ ಎಕ್ಸ್‌ಯುವಿಯನ್ನು ಚೆನ್ನೈನ ಮಹೀಂದ್ರ ರಿಸರ್ಚ್ ವ್ಯಾಲಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗುಣಮಟ್ಟ, ವಾಹನ ನಿರ್ಮಾಣ ನೀತಿ ನಿಯಮಗಳು, ವಾತಾವರಣಕ್ಕೆ ಹೊರಸೂಸುವ ಇಂಗಾಲದ ಮಾನದಂಡಗಳಿಗೆ ಪೂರಕವಾಗಿ ಈ ಎಸ್‌ಯುವಿಯನ್ನು ಕಂಪನಿಯು ಅಭಿವೃದ್ಧಿಪಡಿಸಿದೆ.

Mahindra XUV500 Review, style, performance, technology, safety

ಚೀತಾ: ಈ ಕಾರಿನ ವಿನ್ಯಾಸ ಚಿರತೆ ಅಥವಾ ಚೀತಾದಂತೆ ಇದೆ. ಬಹುಶಃ ಇದಕ್ಕಿಂತ ಎರಡು ಪಟ್ಟು ದುಬಾರಿಯಿರುವ ಕಾರುಗಳ ಸೌಂದರ್ಯವೂ ಗ್ರಾಹಕರನ್ನು ಇಷ್ಟೊಂದು ಇಂಪ್ರೆಸ್ ಮಾಡುವುದು ಕಷ್ಟ. ಮಹೀಂದ್ರ ಕಂಪನಿಯ ನುರಿತ ಎಂಜಿನಿಯರುಗಳ ಕೌಶಲ್ಯ ಕಾರಿನ ಅಂಗುಲ ಅಂಗುಲದಲ್ಲೂ ಕಂಡುಬರುತ್ತದೆ. ಸೌಂದರ್ಯ, ತಂತ್ರಜ್ಞಾನ, ಸುರಕ್ಷತೆ ಮತ್ತು ಆರಾಮದಾಯಕತೆಯಿಂದಾಗಿ ಮಹೀಂದ್ರ ಎಕ್ಸ್‌ಯುವಿ 500 ಕಾರಿನ ಚಾಲನೆ ಅನನ್ಯ ಅನುಭವ.

ಶಕ್ತಿಶಾಲಿ: 2.2 ಲೀಟರಿನ mHawk140 ಎಂಜಿನ್ 140 ಅಶ್ವಶಕ್ತಿ ಮತ್ತು 330 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. 5ನೇ ತಲೆಮಾರಿನ ಈ ಟರ್ಬೊಚಾರ್ಜ್ಡ್ ಎಂಜಿನ್ ಅತ್ಯುತ್ತಮ ಆಕ್ಸಿಲರೇಷನಿಗೆ ನೆರವಾಗುತ್ತದೆ. ಕೇವಲ 5.4 ಸೆಕೆಂಡಿನಲ್ಲಿ 0-60 ಕಿ.ಮೀ. ವೇಗ ಪಡೆಯಬಹುದಾಗಿದೆ. ಅಚ್ಚರಿಯೆಂಬಂತೆ ಈ ಸ್ಪೋರ್ಟ್ಸ್ ಕಾರು ಪ್ರತಿಲೀಟರಿಗೆ 15.1 ಕಿ.ಮೀ. ಮೈಲೇಜ್ ನೀಡುತ್ತದೆ.

ಏರು ಹಾದಿಯಲ್ಲಿ ಸುರಕ್ಷತೆ: ನೀವು ಯಾವುದಾದರೂ ರಸ್ತೆಯ ಏರು ಹಾದಿಯಲ್ಲಿ ಎಕ್ಸ್ ಯುವಿ ಡ್ರೈವಿಂಗ್ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆದರೆ ಕಾರು ವಾಪಸ್ ಹಿಂದಕ್ಕೆ ಇಳಿಜಾರಿಗೆ ಜಾರುವ ಅಪಾಯವಿರುತ್ತದೆ. ಅದಕ್ಕಾಗಿ ಹಿಲ್ ಡಿಸೆಂಟ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಎಂಬ ಫೀಚರು ಇದರಲ್ಲಿದೆ. ಕಾರು ಏರು ಹಾದಿಯಲ್ಲಿ ಹಿಂದಕ್ಕೆ ಜಾರುವುದನ್ನು ಇದು ತಪ್ಪಿಸುತ್ತದೆ.

ಡಿಎಂಎಫ್: ಡ್ಯೂಯಲ್ ಮಾಸ್ ಫ್ಲೈವೀಲ್ ಎಂಬ ಈ ವಿಶೇಷ ಫೀಚರಿನಿಂದ ಎಂಜಿನ್ ಸದ್ದು ಕಡಿಮೆಯಾಗಿದೆ. ಡಿಎಂಎಫಿನಿಂದಾಗಿ ಆರಾಮವಾಗಿ ಮತ್ತು ಸ್ಮೂತಾಗಿ ಗೇರ್ ಶಿಫ್ಟ್ ಮಾಡುವ ಅನುಭವವಾಗುತ್ತದೆ. ಈ ಕಾರಣಕ್ಕಾಗಿ ಮಹೀಂದ್ರ ಎಕ್ಸ್‌ಯುವಿ 500 ಪವರ್ ಟ್ರೈನ್ ಇಷ್ಟವಾಗುತ್ತದೆ.

ಗೇರ್: ಪೂರ್ಣ ಪ್ರಮಾಣದಲ್ಲಿ ದೇಶಿ ನಿರ್ಮಾಣದ ಪ್ರಪ್ರಥಮ ಆರು ಸ್ಪೀಡಿನ ಗೇರನ್ನು ಮಹೀಂದ್ರ ಎಕ್ಸ್‌ಯುವಿ 500 ಹೊಂದಿದೆ. ಎರಡು ಓವರ್ ಡ್ರೈವ್ ಮಾಡಬಹುದಾದ 6 ಸ್ಪೀಡ್ ಟ್ರಾನ್ಸ್ ಮಿಷನ್ ನಿಂದಾಗಿ ಎಂಜಿನ್ ಟಾರ್ಕ್ ಮತ್ತು ಸ್ಪೀಡ್ ಹೆಚ್ಚಿಸಿಕೊಳ್ಳಬಹುದು. ಇದರಿಂದ ಅತ್ಯುತ್ತಮ ಮೈಲೇಜ್ ಮತ್ತು ಆಕ್ಸಿಲರೇಷನ್ ಕೂಡ ಪಡೆಯಬಹುದಾಗಿದೆ.

ಎಡಬ್ಲ್ಯುಡಿ: ಆಲ್ ವೀಲ್ ಡ್ರೈವ್ ಸಾಮರ್ಥ್ಯದಿಂದಾಗಿ ಜಾರುವ ರಸ್ತೆಗಳಲ್ಲಿ, ಭಾರಿ ಮಳೆಯಲ್ಲಿ, ಹಿಮಪಾತವಾದಲ್ಲಿ, ಮಂಜು ಕವಿದ ವಾತಾವರಣದಲ್ಲಿ ಸುರಕ್ಷಿತವಾಗಿ ಪ್ರಯಾಣಿಸಬಹುದು. ಅತ್ಯುತ್ತಮ ಟಾರ್ಕ್ ಮ್ಯಾನೆಜ್ ಮೆಂಟ್, ಸ್ಟೀಯರಿಂಗ್ ಆಂಗಲ್ ಸೆನ್ಸಾರ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಇತ್ಯಾದಿಗಳು ಎಕ್ಸ್‌ಯುವಿ ಮೌಲ್ಯ ಹೆಚ್ಚಿಸಿವೆ. ಸ್ವಯಂಚಾಲೀತವಾಗಿ ಮುಂದಿನ ಮತ್ತು ಹಿಂದಿನ ಚಕ್ರಗಳಿಗೆ ಟಾರ್ಕ್ ಮರುವಿತರಣೆ ಮಾಡುವ ಫೀಚರೂ ಇದರಲ್ಲಿದೆ.

ಪ್ರೊಜೆಕ್ಟರ್ ಹೆಡ್ ಲ್ಯಾಂಪ್: ಎಲ್ಇಡಿ ಪಾರ್ಕಿಂಗ್ ಲ್ಯಾಂಪ್ ಮತ್ತು ಹೆಚ್ಚು ಪ್ರಖರವಾದ ಪ್ರೊಜೆಕ್ಟರ್ ಬಲ್ಬ್ ಇದರಲ್ಲಿದೆ. ಇದರ ಹೆಡ್ ಲ್ಯಾಂಪ್ ಸ್ಟಾಟಿಕ್ ಬೆಂಡಿಂಗ್ ಎಂಬ ಫೀಚರನ್ನೂ ಹೊಂದಿದೆ. ಕಾರು ಟರ್ನ್ ಆದಾಗ ಸ್ಟಾಟಿಕ್ ಬೆಂಡಿಂಗ್ ಲ್ಯಾಂಪ್ ಹೆಚ್ಚು ಸ್ಥಳಕ್ಕೆ ಬೆಳಕು ಹಾಯಿಸುತ್ತದೆ.

ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ: ಇದು ಪರಿಸರ ರಕ್ಷಣೆಗೆ ಮತ್ತು ಇಂಧನ ಉಳಿತಾಯಕ್ಕೆ ನೆರವಾಗುತ್ತದೆ. ಟ್ರಾಫಿಕ್ ಸಿಗ್ನಲ್ ಅಥವಾ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಾಗ ಗೇರನ್ನು ನ್ಯೂಟ್ರೊಲ್ ಮಾಡಿ 2.5 ಸೆಕೆಂಡ್ ಕಳೆದಾಗ ಮೈಕ್ರೊ ಹೈಬ್ರಿಡ್ ತಂತ್ರಜ್ಞಾನದಿಮದಾಗಿ ಎಂಜಿನ್ ಸ್ಟಾಂಡ್ ಬೈ ಮೂಡಿಗೆ ಬದಲಾಗುತ್ತದೆ. ಮತ್ತೆ ಕ್ಲಚ್ ಅದುಮಿದಾಗ ವಾಹನ ಮತ್ತೆ ಜೀವ ಪಡೆದು ಹೆಚ್ಚು ದಕ್ಷತೆ ನೀಡುತ್ತದೆ. ಇದರಿಂದ ಪರಿಸರಕ್ಕೆ ಹೊರಸೂಸುವ ಇಂಗಾಲವೂ ಕಡಿಮೆಯಾಗುತ್ತದೆ.

ಇಷ್ಟಕ್ಕೂ ಮಹೀಂದ್ರ ಎಕ್ಸ್‌ಯುವಿ 500 ಪ್ರಯಾಣ ಸುರಕ್ಷಿತವೇ? ಮುಂದಿನ ಪುಟ ನೋಡಿ

More from DriveSpark

Article Published On: Tuesday, June 19, 2012, 12:13 [IST]
English summary
Mahindra XUV500 Review. The new Mahindra XUV500 is unmatched in terms of style, performance, technology, safety and comfort, providing customers a truly complete driving experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+