ಹೊಸ ಸೆಡಾನ್ ಸ್ವಿಫ್ಟ್ ಡಿಜೈರ್: ಎಕ್ಸ್ ಪರ್ಟ್ ರಿವ್ಯೂ ಓದಿರಿ..

ಕೆಲವು ತಿಂಗಳ ಹಿಂದೆ ನೂತನ ಸ್ವಿಫ್ಟ್ ಕಾರು ರಸ್ತೆಗಿಳಿದಿತ್ತು. ಆ ದಿನದಿಂದಲೇ ನೂತನ ಡಿಜೈರ್ ಕುರಿತು ಹೈಪ್ ಸುರುವಾಗಿತ್ತು. ದೇಶದ ಜನರ ಅಚ್ಚುಮೆಚ್ಚಿನ ಬ್ರಾಂಡ್ ಮಾರುತಿ ಸುಜುಕಿ ಕಾರಿನ ಕುರಿತು ಕುತೂಹಲ ಸಹಜ. ಹೀಗಾಗಿ ಈ ನೂತನ ಕಾರಿನ ಕುರಿತು ಹೆಚ್ಚು ಮಾಹಿತಿಯನ್ನು ನಿಮ್ಮ ಮುಂದಿಡುವುದು ನಮಗೂ ಇಷ್ಟದ ಕೆಲಸ.
ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಈಗಲೂ ತನ್ನ ಕಾರ್ಯಕ್ಷಮತೆ, ಸ್ಥಳಾವಕಾಶ ಮತ್ತು ಆರಾಮದಾಯಕತೆ ವಿಷ್ಯಗಳಿಂದ ಹೆಚ್ಚು ಜನರಿಗೆ ಇಷ್ಟವಾಗಿದೆ. ನಮ್ಮ ಡ್ರೈವ್ ಸ್ಪಾರ್ಕ್ ವಾಹನ ವಿಶ್ಲೇಷಕರು ಈಗಾಗಲೇ ನೂತನ ಕಾರಿನ ಕುರಿತು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಅಷ್ಟೇ ಯಾಕೆ ಆ ಕಾರಿನ ಪರಾಮರ್ಶೆಯನ್ನು ಮಾಡಿದ್ದಾರೆ.
ಸ್ಪೋರ್ಟಿ ವಿನ್ಯಾಸದಿಂದಾಗಿ ಈ ಕಾರು ನೋಡಲು ಥೇಟ್ ಹ್ಯಾಚ್ ಬ್ಯಾಕ್ ನಂತೆ ಕಾಣುತ್ತದೆ. ಇಂಧನ ದಕ್ಷತೆಯೂ ಹ್ಯಾಚ್ ಬ್ಯಾಕ್ ಕಾರಿನಂತೆಯೇ ಇದೆ. ಆದರೆ ಅದರ ಸ್ಥಳಾವಕಾಶ ಮತ್ತು ಲಗೇಜ್ ಸ್ಥಳಾವಕಾಶದ ಕಾರಣದಿಂದ ಇದಕ್ಕೆ ಸೆಡಾನ್ ಸ್ಥಾನ ದೊರಕಿದೆ.
ಈಗಾಗಲೇ ವರದಿ ಮಾಡಿದಂತೆ ನೂತನ ಸ್ವಿಫ್ಟ್ ಕಾರು 4 ಸಾವಿರ ಮಿ.ಮೀ. ಉದ್ದವಿರಲಿದೆ. ಹೀಗಾಗಿ ಇದು ಕಾಂಪ್ಯಾಕ್ಟ್. ಇದರಿಂದ ಅಬಕಾರಿ ಸುಂಕವೂ ಕಡಿಮೆಯಾಗಲಿದೆ. ಆದರೆ ಕಾರಿನ ಗಾತ್ರ ಸಣ್ಣದಾಗಿಸುವುದರಿಂದ ಕಾರಿನ ಮೇಲೆ ಯಾವ ಪರಿಣಾಮ ಬೀರುತ್ತದೆ. ಈ ಕಾರಿನ ಮೈಲೇಜ್ ಎಷ್ಟು? ಯಾವ ಎಂಜಿನ್ ಇರಲಿದೆ?
ಮುಂದಿನ ಪುಟದಲ್ಲಿ ನಮ್ಮ ಎಕ್ಸ್ ಪರ್ಟ್ ಏನು ಹೇಳುತ್ತಾರೆ? ಓದಿ ನೋಡಿ


Click it and Unblock the Notifications








