ಹೊಸ ಸ್ವಿಫ್ಟ್ ಡಿಜೈರ್: ವಿನ್ಯಾಸ, ಪವರ್ ಮತ್ತು ಮೈಲೇಜ್

Maruti Suzuki Swift DZire
ಹೊಸ ಸ್ವಿಫ್ಟ್ ಕಾರನ್ನು ಹೆಚ್ಚಿನವರು ನೋಡಿರಬಹುದು. ನೂತನ ಸೆಡಾನ್ ಡಿಜೈರ್ ಮುಂಭಾಗದಿಂದ ನೋಡಿದರೆ ಹೊಸ ಸ್ವಿಫ್ಟ್ ಕಾರಿನಂತೆಯೇ ಕಾಣುತ್ತದೆ. ಆದರೆ ಕಾರಿನ ಹಿಂಭಾಗ ಉದ್ದವಾಗಿದ್ದು, ಸೆಡಾನ್ ವಿನ್ಯಾಸದಿಂದ ಇಷ್ಟವಾಗುತ್ತದೆ. ಹೀಗಾಗಿ ಈ ಕಾರಿನ ಮುಂಭಾಗ ಹ್ಯಾಚ್ ಬ್ಯಾಕ್ ಮತ್ತು ಹಿಂಭಾಗ ಸೆಡಾನ್.

ಸದ್ಯ ರಸ್ತೆಯಲ್ಲಿರುವ ಡಿಜೈರಿಗೆ ಹೋಲಿಸಿದರೆ ನೂತನ ಡಿಜೈರ್ ಬೂಟ್ ಸ್ಥಳಾವಕಾಶ ಕಡಿಮೆ. ಹೀಗಾಗಿ ಸುಮಾರು 100 ಮೀಟರ್ ಬೂಟ್ ಸ್ಥಳಾವಕಾಶ ಕಡಿಮೆಯಾಗಿದೆ. ಎಂಟ್ರಿ ಲೆವೆಲ್ ಸೆಡಾನ್ ಡಿಜೈರ್ ಕಾರಿನಲ್ಲಿ ಈ ಸ್ಥಳಾವಕಾಶ ನಷ್ಟವಾಗಿದೆ.

ಆದರೆ ಸ್ಥಳಾವಕಾಶ ಕಡಿಮೆಯಾಗಿರುವುದರಿಂದ ನೂತನ ಡಿಜೈರ್ ಹೆಚ್ಚು ಆಕರ್ಷಕವಾಗಿದೆ ಅನ್ನೋದು ನಿಜ. ಇದರ ಬಾಡಿ ಪ್ಯಾನೆಲ್ ವಿನ್ಯಾಸವೂ ಆಕರ್ಷಕ. ಮಾರುತಿ ನೂತನ ಕಾರಿನ ಇಂಟಿರಿಯರ್ ಗೆ ಸಾಕಷ್ಟು ಹೊಸ ಫೀಚರುಗಳನ್ನು ಹೊಂದಿರುವ ನಿರೀಕ್ಷೆಯಿದೆ.

ಕಾರ್ಯಕ್ಷಮತೆ: ಆಗಸ್ಟ್ 2011ರಲ್ಲಿ ನೂತನ ಸ್ವಿಫ್ಟ್ ರಸ್ತೆಗಿಳಿದಿತ್ತು. ಇದರ ಎಂಜಿನ್ ನಲ್ಲಿ ಮಾಡಿದ ಕೆಲವು ಬದಲಾವಣೆಗಳಿಂದ ಇಂಧನ ದಕ್ಷತೆ ಹೆಚ್ಚಾಗಿತ್ತು. ನೂತನ ಸ್ವಿಫ್ಟ್ ಡಿಜೈರಿನಲ್ಲೂ ಇಂತಹ ಬದಲಾವಣೆಯಾಗುವ ನಿರೀಕ್ಷೆಯಿದೆ.

ಕಂಪನಿಯು ಕಾರಿನ ಗಾತ್ರ ಕಡಿಮೆ ಮಾಡಿಲ್ಲ. ಆದರೆ ಅದರ ತೂಕ ಕಡಿಮೆ ಮಾಡಿದೆ. ಹೀಗಾಗಿ ಕೊಂಚ ಮೈಲೇಜ್ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ನೂತನ ಸ್ವಿಫ್ಟ್ ಡಿಜೈರ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ.

ಇದರಲ್ಲಿ 1.2 ಲೀಟರಿನ ಪೆಟ್ರೋಲ್ ಎಂಜಿನ್ 87 ಹಾರ್ಸ್ ಪವರ್ ಮತ್ತು 114 ಎನ್ ಎಂ ಟಾರ್ಕ್ ಪವರ್ ನೀಡಲಿದೆ. 1.3 ಲೀಟರಿನ ಡೀಸೆಲ್ ಎಂಜಿನ್ ಕಾರ್ಯಕ್ಷಮತೆ ಕೊಂಚ ಕಡಿಮೆಯಿರಲಿದೆ. ಇದು 75 ಹಾರ್ಸ್ ಪವರ್ ಮತ್ತು 190 ಎನ್ಎಂ ಟಾರ್ಕ್ ಪವರ್ ನೀಡಲಿದೆ.

ನೂತನ ಸ್ವಿಫ್ಟ್ ಡಿಜೈರ್ ಕಾರಿನ ಪೆಟ್ರೋಲ್ ಆವೃತ್ತಿಯು ಪ್ರತಿಲೀಟರಿಗೆ 19.6 ಕಿ.ಮೀ. ಮೈಲೇಜ್ ಮತ್ತು ಡೀಸೆಲ್ ಆವೃತ್ತಿಯು 23.4 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಮಾರುತಿ ಸುಜುಕಿ ಹೇಳಿದೆ. ಈ ಕಾರಿನಲ್ಲಿ ಡ್ಯೂಯಲ್ ಟೋನ್ ಡ್ಯಾಷ್, ಅಂತರ್ಗತ ಸ್ಟಿರಿಯೋ ಸಿಸ್ಟಮ್, ಎಸ್ಆರ್ ಎಸ್ ಏರ್ ಬ್ಯಾಗುಗಳು, ಇಎಲ್ಆರ್ ಸೀಟು ಬೆಲ್ಟ್, ಎಬಿಎಸ್, ಬ್ರೇಕ್ ಅಸಿಸ್ಟ್, ಇಬಿಡಿ ಮತ್ತು ಎಂಜಿನ್ ಡ್ರಾಗ್ ಕಂಟ್ರೋಲ್ ಸಿಸ್ಟಮ್ ಇತ್ಯಾದಿ ಹತ್ತು ಹಲವು ಫೀಚರುಗಳಿರಲಿವೆ.

More from DriveSpark

Article Published On: Friday, January 20, 2012, 11:04 [IST]
English summary
Maruti Suzuki Swift DZire Expert Review. The New Swift DZire will be launched in India In February and Drivespark offers you the chance to know more about the upcoming entry level sedan from Maruti Suzuki before it actually hits the streets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+