ಇಕೊಸ್ಪೋರ್ಟ್‌ಗೆ ಎಚ್ಚರಿಕೆಯ ಕರೆ ಗಂಟೆ ನೀಡಿದ ವಿಟಾರಾ ಬ್ರಿಝಾ
ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ನೂತನ ಮಾರುತಿ ವಿಟಾರಾ ಬ್ರಿಝಾ ಅತಿ ಹೆಚ್ಚು ನಿರೀಕ್ಷೆಗಳನ್ನುಂಟು ಮಾಡಿದ್ದು, ತನ್ನ ಪ್ರತಿಸ್ಪರ್ಧಿಗಳೆನ್ನಲ್ಲ ಧೂಳೀಪಟ ಮಾಡುವಷ್ಟು ಸಮರ್ಥವೆನಿಸಿದೆ. ಈ ಹಂತದಲ್ಲಿ ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಂಡಿರುವ ಫೋರ್ಡ್ ಇಕೊಸ್ಪೋರ್ಟ್‌ಗೆ ಎಚ್ಚರಿಕೆಯ ಕರೆಗಂಟೆ ಬೀಸಿದೆ.
ಪ್ರಸ್ತುತ ಲೇಖನದಲ್ಲಿ ಈ ಎರಡು ಕಾರುಗಳ ಬೆಲೆ, ವಿನ್ಯಾಸ, ಎಂಜಿನ್ ತಾಂತ್ರಿಕತೆ, ವೈಶಿಷ್ಟ್ಯಗಳ ನಡುವೆ ಹೋಲಿಕೆ ಮಾಡುವ ಪ್ರಯತ್ನ ಮಾಡಲಾಗುವುದು. ಅಂದ ಹಾಗೆ ನಿಮ್ಮ ನೆಚ್ಚಿನ ಕಾರು ಯಾವುದೆಂಬುದನ್ನು ಉಲ್ಲೇಖಿಸಲು ಮರೆಯದಿರಿ.

ಬೆಲೆ ಮಾಹಿತಿ
ಇಕೊಸ್ಪೋರ್ಟ್
ಪೆಟ್ರೋಲ್ ಪ್ರಾರಂಭಿಕ ಬೆಲೆ: 722,500 ರು.
ಡೀಸೆಲ್ ಪ್ರಾರಂಭಿಕ ಬೆಲೆ: 841,100 ರು.
ವಿಟಾರಾ ಬ್ರಿಝಾ
ಆರಂಭಿಕ ಬೆಲೆ: 6.99 ಲಕ್ಷ ರು.

ವಿನ್ಯಾಸ - ವಿಟಾರಾ ಬ್ರಿಝಾ
ಆಧುನಿಕ ಕ್ರೀಡಾ ಬಳಕೆಯ ವಾಹನಕ್ಕೆ ಬೇಕಾದ ಎಲ್ಲ ಅಗತ್ಯ ಅಂಶಗಳನ್ನು ವಿಟಾರಾ ಬ್ರಿಝಾ ಪಡೆದಿದೆ. ಎಂಟ್ರಿ ಲೆವೆಲ್ ಕಾರುಗಳಿಂದ ಕ್ರೀಡಾ ಬಳಕೆಯ ವಾಹನ ವಿಭಾಗಕ್ಕೂ ತನ್ನ ಮಾರಾಟ ಜಾಲವನ್ನು ವಿಸ್ತರಿಸಿರುವ ಮಾರುತಿಗೆ ಗುರಿ ತಲುಪಲು ವಿಟಾರಾ ಬ್ರಿಝಾ ನೆರವಾಗಲಿದೆ ಎಂಬುದಲ್ಲಿ ಸಂದೇಹವೇ ಇಲ್ಲ. ಕಣ್ಣು ಚುಚ್ಚುವಂತಹ ಫ್ರಂಟ್ ಗ್ರಿಲ್ ಹಾಗೂ ಹೆಡ್ ಲೈಟ್ ವಿಟಾರಾಗೆ ಪ್ಲಸ್ ಪಾಯಿಂಟ್ ಆಗಿರುತ್ತದೆ.

ವಿನ್ಯಾಸ - ಇಕೊಸ್ಪೋರ್ಟ್
ಅತ್ತ ಜಾಗತಿಕ ಬಿ ಸೆಗ್ಮೆಂಟ್ ಫಿಯೆಸ್ಟಾ ತಳಹದಿಯಲ್ಲಿ ನಿರ್ಮಾಣವಾಗಿರುವ ಫೋರ್ಡ್ ಇಕೊಸ್ಪೋರ್ಟ್, ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಮೈಗೂಡಿಸಿಕೊಂಡು ಬಂದಿದೆ. ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ಕೆಲವು ಸಮಯಗಳ ಹಿಂದೆಯಷ್ಟೇ ಹೊಸ ಇಕೊಸ್ಪೋರ್ಟ್ ಪರಿಯಚಿಸಿತ್ತು. ಈ ಮೂಲಕ ಮಾರುಕಟ್ಟೆಯಲ್ಲಿ ತಾಜಾತನ ಕಾಪಾಡಿಕೊಳ್ಳುವಲ್ಲಿ ಯಶ ಕಂಡಿದೆ.

ಎಂಜಿನ್ ತಾಂತ್ರಿಕತೆ - ವಿಟಾರಾ ಬ್ರಿಝಾ
ನೂತನ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಲಿದೆ. ಇದರ 1.3 ಲೀಟರ್ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ಎಂಜಿನ್ ತಾಂತ್ರಿಕತೆ - ಇಕೊಸ್ಪೋರ್ಟ್
ಇನ್ನೊಂದೆಡೆ ಇಕೊಸ್ಪೋರ್ಟ್ ಎರಡು ಪೆಟ್ರೋಲ್ ಹಾಗೂ ಏಕಮಾತ್ರ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಾಗಲಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ 140ಎನ್ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ಉತ್ಪಾದಿಸಿದರೆ ಪ್ರಶಸ್ತಿ ವಿಜೇತ 1.0 ಲೀಟರ್ ಇಕೊಬೂಸ್ಟ್ ಎಂಜಿನ್ 170 ಎನ್ ಎಂ ತಿರುಗುಬಲದಲ್ಲಿ 124 ಅಶ್ವಶಕ್ತಿಯನ್ನು ನೀಡಲಿದೆ. ಅಂತೆಯೇ 1.5 ಲೀಟರ್ ಡೀಸೆಲ್ ಎಂಜಿನ್ 205 ಎನ್ ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿಯನ್ನು ಕಾಪಾಡಿಕೊಂಡಿದೆ.
ಗೇರ್ ಬಾಕ್ಸ್
5 ಸ್ಪೀಡ್ ಮ್ಯಾನುವಲ್ ಜೊತೆಗೆ 1.5 ಲೀಟರ್ ಟೈಟಾನಿಯಂ ಪೆಟ್ರೋಲ್ ವೆರಿಯಂಟ್ ನಲ್ಲಿ ಐಚ್ಛಇಕ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯವಿರುತ್ತದೆ. ಇಲ್ಲಿ ಪ್ರಮುಖವಾಗಿಯೂ ಎರಡು ಅಂಶಗಳಲ್ಲಿ ವಿಟಾರಾ ಬ್ರಿಝಾವನ್ನು ಇಕೊಸ್ಪೋರ್ಟ್ ಹಿಂದಕ್ಕೆ ತಳ್ಳಿದೆ. ಒಂದನೇಯದಾಗಿ ವಿಶ್ವ ದರ್ಜೆಯ ಇಕೊಬೂಸ್ಟ್ ಪೆಟ್ರೋಲ್ ಎಂಜಿನ್ ಮತ್ತು ಸುಲಭ ಚಾಲನೆ ಬಯಸುವವರಿಗಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯವನ್ನು ಫೋರ್ಡ್ ಒದಗಿಸುತ್ತಿದೆ.
ಮೈಲೇಜ್ (ಪ್ರತಿ ಲೀಟರ್‌ಗೆ ಕೀ.ಮೀ.)
ಇಕೊಸ್ಪೋರ್ಟ್
ಪೆಟ್ರೋಲ್: 18.88
ಡೀಸೆಲ್ 22.27
ವಿಟಾರಾ ಬ್ರಿಝಾ: 24.3 ಕೀ.ಮೀ.

ವೈಶಿಷ್ಟ್ಯಗಳು - ವಿಟಾರಾ ಬ್ರಿಝಾ
ಪ್ರತಿಯೊಂದು ಕಾರಿನಲ್ಲೂ ಆರಾಮ ಹಾಗೂ ಅನುಕೂಲ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಲ್ಲಿ ವಿಟಾರಾ ಬ್ರಿಝಾ ಗಮನಿಸಿದಾಗ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್, ಕೀಲೆಸ್ ಎಂಟ್ರಿ, ಫುಶ್ ಬಟನ್ ಸ್ಟ್ಯಾರ್ಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಆಪಲ್ ಕಾರ್ ಪ್ಲೇ ಜೊತೆ ಇನ್ಪೋಟೈನ್ಮೆಂಟ್ ಸಿಸ್ಟಂ ಸೇವೆಯೂ ಲಭ್ಯವಾಗಲಿದೆ.

ವೈಶಿಷ್ಟ್ಯಗಳು - ಇಕೊಸ್ಪೋರ್ಟ್
ಫೋರ್ಡ್ ಇಕೊಸ್ಪೋರ್ಟ್ ಕಾರಿನಲ್ಲೂ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಟಿಲ್ಟ್ ಮತ್ತು ಟೆಲಿಸ್ಕಾಪಿಕ್ ಸ್ಟೀರಿಂಗ್, ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಇಂಟೇಗ್ರೇಟಡ್ 2 ಡಿನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆಗೆ ಯುಎಸ್ ಬಿ, ಆಕ್ಸ್ ಮತ್ತು ಬ್ಲೂಟೂತ್ ಸೇವೆಗಳಿರಲಿದೆ.

ಸುರಕ್ಷತೆ - ವಿಟಾರಾ ಬ್ರಿಝಾ
ಆಧುನಿಕ ಕಾರುಗಳಲ್ಲಿ ಭದ್ರತೆ ಸಹ ಪ್ರಮುಖ ಅಂಶವೆನಿಸಿದೆ. ಅಂದ ಹಾಗೆ ನೂತನ ವಿಟಾರಾ ಭ್ರಿಜಾದಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಎಲ್ಲ ವೆರಿಯಂಟ್ ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಇನ್ನು ಟಾಪ್ ಎಂಡ್ ವೆರಿಯಂಟ್ ಏರ್ ಬ್ಯಾಗ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ಪ್ರಯಾಣಿಕ ಬದಿಯ ಏರ್ ಬ್ಯಾಗ್ ಸೌಲಭ್ಯವೂ ಇರುತ್ತದೆ.

ಸುರಕ್ಷತೆ - ಇಕೊಸ್ಪೋರ್ಟ್
ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ಸುರಕ್ಷತೆಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಇಕೊಸ್ಪೋರ್ಟ್ ಟಾಪ್ ಎಂಡ್ ವೆರಿಯಂಟ್ ನಲ್ಲಿ ಆರು ಏರ್ ಬ್ಯಾಗ್ ಗಳ ಜೊತೆ ಎಬಿಎಸ್, ಇಬಿಡಿ, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಎಂಜಿನ್ ಇಂಮೊಬಿಲೈಜರ್ ಮತ್ತು ಜನಪ್ರಿಯ ಎಮರ್ಜನ್ಸಿ ಅಸಿಸ್ಟ್ ಸೇವೆಗಳನ್ನು ಒದಗಿಸುತ್ತಿದೆ.
ಅಂತಿಮ ತೀರ್ಪು
ಅಷ್ಟಕ್ಕೂ ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಾರುತಿ ವಿಟಾರಾ ಬ್ರಿಝಾ ನಡುವೆ ಯಾವುದು ಹೆಚ್ಚು ಖರೀದಿಗೆ ಯೋಗ್ಯ? ಈ ಮೊದಲೇ ತಿಳಿಸಿರುವಂತೆಯೇ ಇಕೊಸ್ಪೋರ್ಟ್ ಗೆ ಹೋಲಿಸಿದಾಗ ಬ್ರಿಝಾದಲ್ಲಿ ಹೆಚ್ಚು ಶಕ್ತಿಶಾಲಿ ಎಂಜಿನ್ ಇರುತ್ತದೆ. ಅಲ್ಲದೆ ಕಳೆದ ಕೆಲವು ವರ್ಷಗಳಿಂದ ಅತ್ಯುತ್ತಮ ಮಾರಾಟವನ್ನು ಕಾಯ್ದುಕೊಂಡಿದೆ. ಹಾಗಿದ್ದರೂ ವಿಸ್ತಾರವಾಗಿ ಹರಡಿರುವ ಮಾರಾಟ ಜಾಲ ಹಾಗೂ ಸರ್ವಿಸ್ ಸೆಂಟರ್ ಗಳು ಮಾರುತಿಗೆ ವರದಾನವಾಗಲಿದೆ. ಇವೆಲ್ಲಕ್ಕೂ ಮಿಗಿಲಾಗಿ ದೇಶದಲ್ಲಿ ಭವ್ಯ ಇತಿಹಾಸವನ್ನು ಹೊಂದಿರುವ ಮಾರುತಿ ಎಲ್ಲರ ನೆಚ್ಚಿನ ಬ್ರಾಂಡ್ ಆಗಿದೆ ಎಂಬುದನ್ನು ಮರೆಯಬಾರುದು.


Click it and Unblock the Notifications





























































































