ನಂದಿ ಬೆಟ್ಟ ಏರಿದ ಲಗ್ಷುರಿ ಬೆಂಝ್ ಸಂಪೂರ್ಣ ವಿಮರ್ಶೆ
ನಾವೆಲ್ಲರೂ ಸುಖಕರವಾದ ಹಾಗೂ ಸುರಕ್ಷಿತ ಪಯಣಕ್ಕಾಗಿ ಕಾರನ್ನು ಅವಲಂಬಿಸಿರುತ್ತೇವೆ. ಹಾಗಿರುವಾಗ ಗ್ರಾಹಕರಿಗೆ ಶ್ರೇಷ್ಠ ಡ್ರೈವಿಂಗ್ ಅನುಭವ ನೀಡುವುದು ಪ್ರತಿಯೊಂದು ಕಾರು ಕಂಪನಿಗಳ ಧ್ಯೇಯ ವಾಕ್ಯವಾಗಿರುತ್ತದೆ.
ಇನ್ನು ಐಷಾರಾಮಿ ಕಾರುಗಳ ವಿಷಯಕ್ಕೆ ಬಂದಾಗ ಪ್ರತಿಯೊಬ್ಬ ಗ್ರಾಹಕ ಕೂಡಾ ಹೆಚ್ಚು ವಿಚಾರ ಶೀಲನಾಗಿರುತ್ತಾನೆ. ಸಹಜವಾಗಿಯೇ ಹೆಚ್ಚು ದುಡ್ಡು ಖರ್ಚು ಮಾಡುವುದರಿಂದ ಪ್ರತಿಯೊಂದು ವೈಶಿಷ್ಟ್ಯಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿರುತ್ತಾನೆ.
ಅಂತೆಯೇ ಲಗ್ಷುರಿ ಸೆಗ್ಮೆಂಟ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿರುವ ಮರ್ಸಿಡಿಸ್ ಬೆಂಝ್ ಇ350 ಕೂಪೆ (Mercedes Benz E350 Coupe) ಕೂಡಾ ಪರಿಪೂರ್ಣ ಡ್ರೈವಿಂಗ್ ಅನುಭವ ನೀಡುತ್ತಿದೆ. ಮರ್ಸಿಡಿಸ್‌ನ ಈ 70 ಲಕ್ಷ ರುಪಾಯಿಗಳ ಕಾರಿನಲ್ಲಿ 300 ಕೀ.ಮೀ.ಗಳಷ್ಟು ಸಂಚರಿಸಿರುವ ಡ್ರೈವ್ ಸ್ಪಾರ್ಕ್ ಅನುಭವ ಇನ್ನು ಅದ್ಭುತವಾಗಿತ್ತು.
ಎಲ್ಲ ಹಂತದಲ್ಲಿಯೂ ಬೆಂಝ್ ಇ ಕ್ಲಾಸ್ 350 ಕೂಪೆ ಕಾರು ಶ್ರೀಮಂತಿಕೆಯನ್ನು ಹೊಂದಿದೆ. ಈ ಟು ಡೋರ್ ಕಾರಿನ ಟೆಸ್ಟ್ ಡ್ರೈವ್ ವಿಮರ್ಶೆಯನ್ನು ಕೆಳಗಡೆ ಕೊಡಲಾಗಿದ್ದು, ನಿಮ್ಮನ್ನು ವಿಸ್ಮಯಗೊಳಿಸುವಂತಹ ಫೋಟೋಸ್‌ಗಳನ್ನು ಶೇರ್ ಮಾಡಲಾಗಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಮರ್ಸಿಡಿಸ್ ಬೆಂಝ್ ಇ350 ಕೂಪೆ ಕಾರಿನ 3.5 ಲೀಟರ್ ಎಂಜಿನ್ ಮೊದಲ ನೋಟದಲ್ಲೇ ಆಕರ್ಷಕವಾಗಿದೆ. ಜರ್ಮನಿಯ ಈ ಕಾರು ತಯಾರಕ ಸಂಸ್ಥೆಯ ಇ ಕ್ಲಾಸ್ 350 ಕೂಪೆ ದೆಹಲಿ ಎಕ್ಸ್ ಶೋ ರೂಂ ದರ 68,01,000 ಲಕ್ಷ ರು.ಗಳಾಗಿವೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಸಾಮಾನ್ಯವಾಗಿ ಎಲ್ಲ ಲಗ್ಷುರಿ ಕಾರುಗಳು ನಗರ ಪ್ರದೇಶ ರಸ್ತೆಗಳಲ್ಲಿ ಅದ್ಭುತ ಅನುಭವ ನೀಡುತ್ತದೆ. ಆದರೆ ಮರ್ಸಿಡಿಸ್ ಬೆಂಝ್ ಇ 350 ಕೂಪೆ ಇದರಿಂದ ಹೊರತಾಗಿದೆ ಎಂಬುದನ್ನು ಸಾಬೀತುಪಡಿಸಲು ಹೊರಟಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡದ ಪ್ರಯತ್ನ ಅತೀವ ಯಶಸ್ಸು ಕಂಡಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಯಾಕೆಂದರೆ ಕೇವಲ ನಗರ ಪ್ರದೇಶ ಮಾತ್ರವಲ್ಲದೆ ಬೆಂಗಳೂರು ಸಿಟಿ ಹೊರಗಿರುವ ನಂದಿ ಬೆಟ್ಟದಲ್ಲೂ ಬೆಂಝ್ ಅದ್ಭುತ ಅನುಭವ ನೀಡಿರುವುದು ನಮ್ಮೆಲ್ಲರ ಸಂತಸಕ್ಕೆ ಕಾರಣವಾಗಿದೆ. ನಂದಿ ಬೆಟ್ಟಕ್ಕೆ ಏರುವುದು ಅದರಲ್ಲೂ ದುಬಾರಿ ಬೆಂಝ್‌ನಲ್ಲಿ ಪಯಣಿಸುವುದು ನಿಜಕ್ಕೂ ಸವಾಲಿನಿಂದ ಕೂಡಿದ್ದ ಡ್ರೈವಿಂಗ್ ಆಗಿದ್ದರೂ ಬೆಂಝ್ ಅವೆಲ್ಲವನ್ನು ಮೀರಿ ನಿಂತು ಡ್ರೈವ್ ಸ್ಪಾರ್ಕ್‌ಗೆ ಶ್ರೇಷ್ಠ ಅನುಭವ ಒದಗಿಸುವಲ್ಲಿ ಯಶಸ್ವಿಯಾಗಿತ್ತು.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಇನ್ನು ಬೆಂಝ್ ಇ 350 ಕೂಪೆ ಕಾರಿನ ನಕಾರಾತ್ಮಕ ಅಂಶಗಳ ಬಗ್ಗೆ ಗಮನಿಸುವುದಾದರೆ ಇದರ ಎರಡು ಡೋರ್ ಸಿಸ್ಟಂ ಬಗ್ಗೆ ಭಾರತೀಯ ಗ್ರಾಹಕರು ಅಸಂತೃಪ್ತಿ ಹೊಂದಬಹುದು. ಹಾಗೆಯೇ ಗ್ರೌಂಡ್ ಕ್ಲಿಯರನ್ಸ್ ಕಡಿಮೆಯಾಗಿದ್ದರಿಂದ ಹಂಪ್ ಹಾಗೂ ಕೆಟ್ಟದಾದ ರಸ್ತೆಗಳಲ್ಲಿ ಅತೀವ ಜಾಗರೂಕತೆಯಿಂದ ಡ್ರೈವಿಂಗ್ ಮಾಡಬೇಕಾಗುತ್ತದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಹೆಸರಲ್ಲೇ ಸೂಚಿಸಿರುವಂತೆಯೇ ಬೆಂಝ್ ಇ ಕ್ಲಾಸ್ 350 ಕಾರು, ಕೂಪೆ ವಿನ್ಯಾಸವನ್ನು ಹೊಂದಿದೆ. ಇದರ ಫ್ರಂಟ್ ಗ್ರಿಲ್, ಹೆಡ್ ಲೈಡ್ ಹಾಗೂ ಬಾಡಿ ವಿನ್ಯಾಸ ಪ್ರಮುಖ ಆಕರ್ಷಣೆಯಾಗಿದೆ. ಇತರೆ ಕೂಪೆಗಳಿಗೆ ಹೋಲಿಸಿದರೆ ಸೈಡ್ ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಪ್ರಸ್ತುತ ಕಾರಿನಲ್ಲಿ 3.5 ಲೀಟರ್ ಡೈರೆಕ್ಟ್ ಇಂಜೆಕ್ಷನ್ ವಿ6 ಎಂಜಿನ್ (3.5L Direct Injection V-6 engine) ಆಳವಡಿಸಲಾಗಿದೆ. ಇದು 302 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ನಿಮಗೆ ಆರಾಮದಾಯಕ ಚಾಲನೆ ಖಾತ್ರಿಪಡಿಸಲಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಇನ್ನು ಪಾರ್ಕಿಂಗ್ ಅಥವಾ ಇಕ್ಕಟ್ಟಿನ ಪ್ರಯಾಣದ ಸಂದರ್ಭದಲ್ಲಿ ಇದರ ಸೆನ್ಸಾರ್ ಸೌಲಭ್ಯ ನಿಮ್ಮ ನೆರವಿಗೆ ಬರಲಿದೆ. ಇದು ಹತ್ತಿರದ ಎಲ್ಲ ಸ್ಥಿತಿಗತಿಗಳನ್ನು ಸೆನ್ಸಾರ್ ಮೂಲಕ ಎಚ್ಚರಿಕೆ ರವಾನಿಸಲಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಮರ್ಸಿಡಿಸ್ ಬೆಂಝ್ ಇ ಕ್ಲಾಸ್ 350 ಕೂಪೆ ಕಾರು ಆಟೋಮ್ಯಾಟಿಕ್ ತಂತ್ರಜ್ಞಾನದಿಂದ ಚಲಿಸಲಿದೆ. ಇದರಿಂದ ಚಾಲಕನಿಗೆ ಸುಖಪ್ರದ ಚಾಲನೆಯ ಅನುಭವ ನೀಡಲಿದೆ. ಹಲವು ಬಾರಿ ಚಾಲಕನಿಗೆ ಎಲ್ಲ ಬದಿಗಳತ್ತ ಗಮನ ಕೇಂದ್ರಿಕರಿಸಲು ಸಾಧ್ಯವಾಗುವುದಿಲ್ಲ. ಆದರೆ ಇದರ ಸೆನ್ಸಾರ್ ಎಚ್ಚರಿಕೆಯಿಂದ ಪಯಣಿಸಲು ನೆರವಾಗಲಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ನಂದಿ ಬೆಟ್ಟ ಸೇರಿದಂತೆ ಬೆಂಗಳೂರಿನ ನಗರ ಪ್ರದೇಶದಲ್ಲೂ ಬೆಂಝ್ ಇ ಕ್ಲಾಸ್ ಅನುಭವ ಪಡೆದುಕೊಳ್ಳಲಾಯಿತು. ಹಾಗಾಗಿ ಹಂಪ್ ಅಥವಾ ಹೈ ಬ್ರೇಕರ್ ಬಂದಾಗ ಕಾರನ್ನು ನಿಧಾನವಾಗಿ ಚಲಿಸಬೇಕಾಗುತ್ತದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಚಿತ್ರದಲ್ಲಿ ತೋರಿಸಿರುವಂತೆಯೇ ಈ ಕಂಟ್ರೋಲ್ ಸಿಸ್ಟಂ ಚಾಲಕನ ಡೋರ್‌ನಲ್ಲಿ ಲಗತ್ತಿಸಲಾಗಿದೆ. ಇದರಿಂದ ಎಲ್ಲ ವಿಂಡೋಗಳನ್ನು ಲಾಕ್ ಮಾಡುವುದು ಅಥವಾ ತೆರೆಯುವುದು ಚಾಲಕನ ನಿಯಂತ್ರಣದಲ್ಲಿರುತ್ತದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಇನ್ನು ಇಲ್ಲಿ ತೋರಿಸಿರುವಂತೆಯೇ ಈ ಕಂಟ್ರೋಲ್ ಸಿಸ್ಟಂ ಫ್ರಂಟ್ ಸೀಟ್‌ನಲ್ಲಿ ಆಳವಡಿಸಲಾಗಿದೆ. ಹಾಗೆಯೇ ಇಲ್ಲಿ ಕೊಟ್ಟಿರುವ 1,2,3 ನಂಬರ್ ಬಟನ್ ಒತ್ತಿ ನಿಮ್ಮ ಸಿಟ್ಟಿಂಗ್ ವ್ಯವಸ್ಥೆ ಹೊಂದಿಸಬಹುದಾಗಿದೆ. ಇದಕ್ಕಾಗಿ ನೀವು ಕೂತಲ್ಲಿಂದ ಅಲ್ಲಾಡುವ ಅಗತ್ಯವಿರುವುದಿಲ್ಲ. ಬದಲಾಗಿ ಬಟನ್ ಒತ್ತಿದ್ದಲ್ಲಿ ಆಟೋಮ್ಯಾಟಿಕ್ ಆಗಿ ಹೊಂದಿಕೊಳ್ಳಲಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಪ್ರಸ್ತುತ ಕಾರಿನಲ್ಲಿ ವರ್ಲ್ಡ್ ಕ್ಲಾಸ್ ಸ್ಟೀರಿಯೊ, ಸಿಡಿ, ಎಂಪಿ3, ಯುಎಸ್‌ಬಿ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ನೀಡಲಾಗಿದೆ. ಹಾಗೆಯೇ ಏಕ ಸಮಯಕ್ಕೆ 6 ಸಿಡಿ ಡಿಸ್ಕ್‌ಗಳನ್ನು ಇಸ್ಸರ್ಟ್ ಮಾಡಬಹುದಾಗಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಸ್ಟಿರಿಯೋ ಸಿಸ್ಟಂ ಸ್ವಲ್ಪ ಮೇಲ್ಗಡೆ ಎಲ್‌ಸಿಡಿ ಆಳವಡಿಸಲಾಗಿದೆ. ಇದರ ಮುಖಾಂತರ ಸ್ಟಿರಿಯೋ ಸಿಸ್ಟಂ ಆಪರೇಷನ್ ಸುಲಲಿತವಾಗಿ ಮಾಡಬಹುದಾಗಿದೆ. ಹಾಗಿದ್ದರೂ ಇದರಲ್ಲಿ ವೀಡಿಯೋ ಮೋಡ್ ನೀಡಲಾಗಿಲ್ಲ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಹಾಗೆಯೇ ಈ ಕಾರಿನ ರಿಯರ್ ಸೀಟ್‌ನಲ್ಲಿ ಎರಡು ಕಪ್ ಹೋಲ್ಡರ್ ನೀಡಲಾಗಿದೆ. ಇದು ಪ್ರಯಾಣದ ಸಂದರ್ಭದಲ್ಲಿ ನಿಮ್ಮ ಅಗತ್ಯಕ್ಕನುಸಾರವಾಗಿ ಬಳಸಬಹುದಾಗಿದೆ. ಇಲ್ಲದೆ ಹೋದ್ದಲ್ಲಿ ಇದರ ಕ್ಯಾಪ್ ಮುಚ್ಚಿಕೊಳ್ಳಬಹುದು.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಈ ಚಿತ್ರ ಎಸಿ ವೆಂಟ್‌ನದ್ದಾಗಿದೆ. ಪ್ರಮುಖವಾಗಿಯೂ ಸುಖ ಪ್ರಯಾಣಕ್ಕಾಗಿ ಹಿಂದುಗಡೆ ಸೀಟ್‌ನಲ್ಲಿಯೂ ಆಕರ್ಷಕ ಎಸಿ ವೆಂಟ್ ನೀಡಲಾಗಿದೆ. ಇದರಿಂದ ಸಂಪೂರ್ಣ ಕಾರನ್ನು ತಂಪಾಗಿರಿಸಿಕೊಳ್ಳಬಹುದು.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ರಿಯರ್ ಸಿಟ್ಟಿಂಗ್ ವ್ಯವಸ್ಥೆ ಕೂಡಾ ಅದ್ಭುತವಾಗಿದೆ. ಆದರೆ ಹೆಡ್ ರೂಂ ಸ್ವಲ್ಪ ಕಡಿಮೆಯಾಗಿರುವುದು ಹಿನ್ನಡೆಗೆ ಕಾರಣವಾಗಿದೆ. ಈ ಸೀಟ್‌ನಲ್ಲಿ ಕುಳಿತುಕೊಂಡ ಮಾತ್ರಕ್ಕೆ ಯಾವುದೋ ಸೇಫ್ ಜೋನ್‌ಲ್ಲಿರುವಂತೆಯೇ ಭಾಸವಾಗಲಿದೆ. ಹಿಂದುಗಡೆ ಸೀಟ್‌ನಲ್ಲಿ ಇಬ್ಬರಿಗೆ ಕುಳಿತುಕೊಳ್ಳಬಹುದಾಗಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಇನ್ನು ಮರ್ಸಿಡಿಸ್ ಇ ಕ್ಲಾಸ್ 350 ಕೂಪೆ ಕಾರು ಉತ್ತಮ ಲಗ್ಗೇಜ್ ಸ್ಪೇಸ್ ಅಥವಾ ಬೂಟ್ ಸ್ಪೇಸ್ ಕೂಡಾ ಹೊಂದಿದೆ. ಇದರಲ್ಲೂ ನಿಮ್ಮ ಅಗತ್ಯ ವಸ್ತುಗಳನ್ನು ಇಡಬಹುದಾಗಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಎಲ್ಲ ಆಟೋಮ್ಯಾಟಿಕ್ ತಂತ್ರಗಾರಿಕೆ ಆಗಿದ್ದರಿಂದ ಸ್ಟೀರಿಂಗ್‌ನಲ್ಲೇ ಹೆಚ್ಚಿನ ಕಂಟ್ರೋಲ್ ಸಿಸ್ಟಂ ಆಳವಡಿಸಲಾಗಿದೆ. ಕಾರು ಸಂಚರಿಸುತ್ತಿರುವಾಗ ನೀವಿದನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದಾಗಿದೆ. ಆಕರ್ಷಕ ಸ್ಟೀರಿಂಗ್ ಹೊಂದಾಣಿಕೆ ನಿಮ್ಮ ಪಯಣವನ್ನು ಆರಾಮದಾಯಕವಾಗಿಸಲಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಇದು ಈ ಕಾರಿನ ಓಪನ್ ಟಾಪ್ ವ್ಯೂ ಆಕರ್ಷಕವಾಗಿದೆ. ಕಂಪನಿಯು ಈ ಕಾರಿನಲ್ಲಿ ರೂಫ್ ಸ್ಲೈಡರ್ ಆಳವಡಿಸಿದ್ದು, ಇದರ ನೆರವಿನಿಂದ ನೀವು ಬಯಸಿದ್ದಲ್ಲಿ ಎಸಿ ಆಫ್ ಮಾಡಿ ತಾಜಾ ಗಾಳಿ ಸವಿಯಬಹುದಾಗಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಇದರ ಓಪನ್ ಟಾಪ್ ಸ್ಪೋರ್ಟ್ಸ್ ಕಾರಿನ ಅನುಭವ ನೀಡುತ್ತದೆ. ಹಾಗೆಯೇ ಈ ಕಾರಿನಲ್ಲಿ ಸ್ಪೋರ್ಟ್ಸ್, ಪಾರ್ಕಿಂಗ್ ಹಾಗೂ ಡ್ರೈವಿಂಗ್ ಮೋಡ್‌ಗಳು ಹೆಚ್ಚಿನ ಫೀಚರ್ಸ್‌ಗಳನ್ನು ಪ್ರತಿಪಾದಿಸುತ್ತದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಮರ್ಸಿಡಿಸ್ ಬೆಂಝ್‌ನ ಈ ಕಾರಿನಲ್ಲಿ ಶಿಫ್ಟ್ ಪ್ಯಾಡಲ್ ಜತೆ 7 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪ್ರಯೋಗಿಸಿದೆ. ಇದರಿಂದ ಧೀರ್ಘ ಪಯಣದಲ್ಲಿ ಸ್ವಲ್ಪನೂ ದಣಿವು ಅನುಭವವಾಗುವುದಿಲ್ಲ ಎಂಬುದು ಕೂಡಾ ಈ ಕಾರಿನ ವಿಶೇಷತೆಯಾಗಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಇನ್ನು ಕಾರನ್ನು ಎರಡು ವಿಧಾನಗಳಲ್ಲಿ ಸ್ಟಾರ್ಟ್ ಮಾಡಬಹುದಾಗಿದೆ. ಮೊದಲನೆಯದಾಗಿ ಸಾಮಾನ್ಯವಾಗಿ ಎಲ್ಲ ಕಾರುಗಳಲ್ಲಿ ಇರುವಂತೆಯೇ ಕೀಲಿ ಮೂಲಕ ಸ್ಟಾರ್ಟ್ ಮಾಡಬಹುದಾಗಿದೆ. ಮುಂದಿನ ಬಟನ್ ಕ್ಲಿಕ್ಕಿಸಿ ಎರಡನೇ ವಿಧಾನ ನೋಡಿರಿ...

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಕಂಪನಿಯು ಈ ಕಾರಿನಲ್ಲಿ ಸ್ಟಾರ್ಟ್ ಬಟನ್ ಮಾತ್ರ ಆಳವಡಿಸಿಲ್ಲ. ಬದಲಾಗಿ ಫುಶ್ ಬಟನ್ ಮೂಲಕವೂ ಸ್ಟಾರ್ಟ್ ಸಿಸ್ಟಂ ಪ್ರಯೋಗಿಸಬಹುದಾಗಿದೆ.

ಮರ್ಸಿಡಿಸ್ ಬೆಂಝ್ ಇ350 ಕೂಪೆ
ಹಾಗೆಯೇ ಕಂಪನಿಯು ಈ ಕಾರಿನಲ್ಲಿ ವಿಶ್ವದರ್ಜೆಯ ಹರ್ಮಾನ್‌ನ ಅದ್ಭುತ ಸ್ಪೀಕರ್ ಆಳವಡಿಸಿದೆ. ಇದು ನಿಮ್ಮ ಪಯಣವನ್ನು ಇನ್ನಷ್ಟು ಆಕರ್ಷಕವಾಗಿಸಲಿದ್ದು, ಉತ್ತಮ ಮನರಂಜನೆ ನೀಡಲಿದೆ.

ನಿರ್ವಹಣೆ ಹಾಗೂ ಹ್ಯಾಂಡ್ಲಿಂಗ್
3.5 ಲೀಟರ್ ಡೈರೆಕ್ಟ್ ಇಂಜೆಕ್ಷನ್ ವಿ6 ಎಂಜಿನ್
ಶಿಫ್ಟ್ ಪ್ಯಾಡಲ್ ಜತೆ 7 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಎಜಿಲಿಟಿ ಕಂಟ್ರೋಲ್ ಸಸ್ಪೆಷನ್
ಸ್ಪೋರ್ಟ್ಸ್ ಟ್ಯೂನ್ಡ್ ಸಸ್ಪೆಷನ್
ಫ್ರಂಟ್ ಬ್ರೇಕ್ ಡಿಸ್ಕ್ ವಿತ್ ಪೈಂಟಡ್ ಕಾಲಿಪರ್
4 ಮ್ಯಾಟಿಕ್ ಆಲ್ ವೀಲ್ ಡ್ರೈವ್
4 ವೀಲ್ ಎಲೆಕ್ಟ್ರಾನಿಕ್ ಟ್ರಾಕ್ಷನ್ ಸಿಸ್ಟಂ (4 ಇಟಿಎಸ್)
ಪ್ಯಾಡಲ್ ಶಿಫ್ಟರ್ಸ್

ವಿನ್ಯಾಸ
ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್
ಎಲ್‌ಇಡಿ ಟೈಲ್‌ಲ್ಯಾಂಪ್
18 ಇಂಚು 5 ಸ್ಪೋಕ್ ವೀಲ್ಸ್
18 ಇಂಚು ಟ್ವಿನ್ 5 ಸ್ಪೋಕ್ ಎಎಂಜಿ ವೀಲ್ಸ್
3 ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್
ವುಡ್/ಲೆಥರ್ ಸ್ಟೀರಿಂಗ್ ವೀಲ್
ವುಡ್/ಲೆಥರ್ ಶಿಫ್ಟ್ ನಾಬೇಲ್ ರೂಫ್
ಡ್ಯುಯಲ್ ಕ್ರೋಮ್ ಎಕ್ಸ್‌ಹಾಸ್ಟ್ ಟಿಪ್ಸ್
ಬ್ರಶ್ಡ್ ಅಲ್ಯೂಮಿನಿಯಂ ಪೆಡಲ್

ಸುರಕ್ಷತೆ
11 ವೇ ಏರ್ ಬ್ಯಾಗ್ ಪ್ರೊಟೆಕ್ಷನ್
ರಿಯರ್ ಸೈಡ್ ಏರ್ ಬ್ಯಾಗ್
ಅಂಟೆಕ್ಷನ್ ಅಸಿಸ್ಟ್
ಆಕ್ಟಿವ್ ಬ್ಲೈಂಡ್ ಸ್ಪಾಟ್ ಅಸಿಸ್ಟ್
ಆಕ್ಟಿವ್ ಲೇನ್ ಕೀಪಿಂಗ್ ಅಸಿಸ್ಟ್
ಬ್ಲೈಂಡ್ ಸ್ಪಾಟ್ ಅಸಿಸ್ಟ್
ಲೇನ್ ಕೀಪಿಂಗ್ ಅಸಿಸ್ಟ್
ರಿಯರ್ ವ್ಯೂ ಕ್ಯಾಮೆರಾ
ಬ್ರೇಕಿಂಗ್ ತಂತ್ರಜ್ಞಾನ
ಹೈ ಬೀಮ್ ಅಸಿಸ್ಟ್
ಬೈ-ಕ್ಸೆನಾನ್ ಹೆಡ್‌ಲ್ಯಾಂಪ್

ಸುರಕ್ಷತೆ
ಹೆಡ್‌ಲ್ಯಾಂಪ್ ವಾಶಿಂಗ್ ಸಿಸ್ಟಂ
ಎಲ್‌ಇಡಿ ಟೈಲ್ ಲ್ಯಾಂಪ್
ಎಲ್‌ಇಡಿ ಡೆ ಟೈಮ್ ರನ್ನಿಂಗ್ ಲ್ಯಾಂಪ್
ಸೀಟ್ ಬೆಲ್ಟ್ ತಂತ್ರಜ್ಞಾನ
ಟೈರ್ ಪ್ರೆಶರ್ ಮೊನಿಟರಿಂಗ್ ಸಿಸ್ಟಂ
ಆಂಟಿಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್)
ಬ್ರೇಕ್ ಅಸಿಸ್ಟ್
ಎಲೆಕ್ಟ್ರಾನಿಕಲಿ ಸ್ಟೆಬಿಲಿಟಿ ಪ್ರೊಗ್ರಾಂ
ಸ್ಮಾರ್ಟ್ ಕೀ
ಆಂಟಿಥೆಫ್ಟ್ ಅಲಾರ್ಮ್ ಸಿಸ್ಟಂ
ರೈನ್ ಸೆನ್ಸಿಂಗ್ ವಿಂಡ್‌ಶೀಲ್ಡ್ ವೈಪರ್ಸ್

ಆಡಿಯೋ ಹಾಗೂ ಮನರಂಜನೆ
ಡಿವಿಡಿ/ಸಿಡಿ ಪ್ಲೇಯರ್
ನೇವಿಗೇಷನ್
ಹಾರ್ಮಾನ್/ಕಾರ್ಡನ್ ಸೌಂಡ್ ಸಿಸ್ಟಂ
ಎಂಪಿ3
ಎಚ್‌ಡಿ ರೆಡಿಯೋ
10ಜಿಬಿ ಮ್ಯೂಸಿಕ್ ರೆಜಿಸ್ಟರ್
ಹ್ಯಾಂಡ್ ಫ್ರೀ ಬ್ಲೂಟೂತ್
ಬ್ಲೂಟೂತ್ ಆಡಿಯೋ ಸ್ಟೀರಿಂಗ್

ಅಂತಿಮ ತೀರ್ಪು
ಬೆಂಗಳೂರಿನ ಬಿಡುವಿಲ್ಲದ ಟ್ರಾಫಿಕ್‌ನಿಂದ ಹಿಡಿದು ನಗರ ಪ್ರದೇಶದ ಹೊರಗಿರುವ ನಂದಿ ಬೆಟ್ಟದ ತನಕವೂ ನಮ್ಮ ಅನುಭವ ಶ್ರೇಷ್ಠವಾಗಿತ್ತು. ಟರ್ನಿಂಗ್ ರೇಡಿಯಸ್ ಹಾಗೂ ಗ್ರೌಂಡ್ ಕ್ಲಿಯರನ್ಸ್ ಸ್ವಲ್ಪ ನಿರಾಸೆಗೆ ಕಾರಣವಾಗಿದ್ದರೂ ಇದರ ಐಷಾರಾಮಿ ಫೀಚರ್ಸ್ ಎಂತವರನ್ನು ಬೆರಗುಗೊಳಿಸುವಂತಿದೆ. ನಗರ ಪ್ರದೇಶದಲ್ಲಿ 5-6 ಕೀ.ಮೀ. ಮೈಲೇಜ್ ನೀಡುವ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ 350 ಕೂಪೆ ಹೈವೇಗಳಲ್ಲಿ 10ರಿಂದ 12 ತನಕ ಮೈಲೇಜ್ ನೀಡುತ್ತದೆ. ಅಂದರೆ ಐಷಾರಾಮಿ ಕಾರುಗಳಲ್ಲಿ ಇದು ಅದ್ಭುತ ಅನುಭವಕ್ಕೆ ಕಾರಣವಾಗಿದೆ. ಖಂಡಿತವಾಗಿಯೂ ಇ350 ಕೂಪೆ ಮೂಲಕವೂ ಬೆಂಝ್ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದೆ.


Click it and Unblock the Notifications








