ಬೆಂಝ್ ಟಾಪ್‌ಲೆಸ್ ಚೆಲುವೆಯ ಫುಲ್ ಬಾಡಿ ಸ್ಕ್ಯಾನಿಂಗ್

By Nagaraja

ಹಾಗೊಂದು ದಿನ ಸಾಯನ್ನ ವೇಳೆಯಲ್ಲಿ ಆಕೆಯ ಆಗಮನವಾಗಿತ್ತು. ಸ್ವಲ್ಪ ಹೊತ್ತು ಬೆರೆತುಕೊಂಡಾಗಲೇ ಬಹಳ ಹತ್ತಿರವಾದಳು. ಆಕೆಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ಆ ಚೆಲುವೆ ಬೇರೆ ಯಾರು ಅಲ್ಲ. ಕೋಟಿ ರುಪಾಯಿಗಳಷ್ಟು ಬೆಲೆ ಬಾಳುವ ಅತಿ ಸುಂದರ ಮರ್ಸಿಡಿಸ್ ಬೆಂಝ್ ಇ400 ಕ್ಯಾಬ್ರಿಯೊಲೆಟ್ (Mercedes Benz E400 Cabriolet).

Also read : ಕಾರು ಬೈಕ್ ವಿಮರ್ಶೆ ಪುಟಕ್ಕೆ ಭೇಟಿ ಕೊಡಿರಿ

ನಮ್ಮ ಡ್ರೈವ್ ಸ್ಪಾರ್ಕ್ ತಂಡದ ಪ್ರದಾನ ಸಂಪಾದಕರಾಗಿರುವ ಜೊಬೊ ಕುರುವಿಲ್ಲಾ ಹಮ್ಮಿಕೊಂಡಿರುವ ಸಂಪೂರ್ಣ ಚಾಲನಾ ವಿಮರ್ಶೆ ವರದಿಯನ್ನು ನಾವಿಲ್ಲಿ ಓದುಗರ ಜೊತೆಗೆ ಹಂಚಿಕೊಳ್ಳಲಿದ್ದೇವೆ. ದೇಶದಲ್ಲಿ ಬೆಂಝ್‌ನ ಈ ಹಾಟ್ ಸುಂದರಿಯನ್ನು ವಿಮರ್ಶೆ ಮಾಡಲು ಅವಕಾಶ ದೊರಕಿರುವ ಕೆಲವೇ ಕೆಲವು ವಾಹನ ಮಾಧ್ಯಮಗಳಲ್ಲಿ ನಾವು ಓರ್ವರಾಗಿದ್ದೇವೆ ಎಂದು ಹೆಮ್ಮೆಯಿಂದಲೇ ಹೇಳಲಿಚ್ಛಿಸುತ್ತೇವೆ.

ಮರ್ಸಿಡಿಸ್ ಬೆಂಝ್ ಇ400 ಕ್ಯಾಬ್ರಿಯೊ ಚಾಲನಾ ವಿಮರ್ಶೆ

ಬೆಂಝ್‌ನ ನೂತನ ಇ400 ಕ್ಯಾಬ್ರಿಯೊಲೆಟ್ ಜೊತೆಗೆ ಡೇಟಿಂಗ್ ಮಾಡುವುದರ ಕುರಿತು ಯೋಚಿಸಿದಾಗಲೇ ದೊರಕಿರುವ ಉತ್ತರ ತಮಿಳುನಾಡಿನ ವೆಲ್ಲೂರ್‌ನಿಂದ 31 ಕೀ.ಮೀ. ದೂರದಲ್ಲಿರುವ ಸ್ಥಿತಗೊಂಡಿರುವ ಸುಂದರ ಪ್ರವಾಸಿ ತಾಣ ಗುಡಿಯಾಟ್ಟಂ. ಸ್ವತಂತ್ರ ಭಾರತದ ಮೊತ್ತ ಮೊದಲ ಧ್ವಜವನ್ನು ಇಲ್ಲಿಂದಲೇ ನೇಯ್ಗೆ ಮಾಡಲಾಗಿತ್ತು ಎಂಬುದು ವಿಶೇಷ.

ಮರ್ಸಿಡಿಸ್ ಬೆಂಝ್ ಇ400 ಕ್ಯಾಬ್ರಿಯೊ ಚಾಲನಾ ವಿಮರ್ಶೆ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಓಪನ್ ಟಾಪ್ ಅಥವಾ ಟಾಪ್ ಲೆಸ್ ಕಾರುಗಳು ಆಡಂಬರ ಜೀವನ ಶೈಲಿಯ ಸಂಕೇತವಾಗಿದೆ. ನಮ್ಮ ಜೊತೆಗಿದ್ದ ಚೆಲುವೆಯೂ ಕಮ್ಮಿಯೇನಲ್ಲ. ದೆಹಲಿ ಎಕ್ಸ್ ಶೋ ರೂಂ 78.50 ರು.ಗಳಷ್ಟು ಬೆಲೆ ಬಾಳುತ್ತಿದೆ.

ಮರ್ಸಿಡಿಸ್ ಬೆಂಝ್ ಇ400 ಕ್ಯಾಬ್ರಿಯೊ ಚಾಲನಾ ವಿಮರ್ಶೆ

ತನ್ನ ಶೈಲಿ, ನಿರ್ವಹಣೆ ಹಾಗೂ ಸುರಕ್ಷತೆಯ ವಿಚಾರದಲ್ಲಿ ಸದಾ ಹೆಸರು ಮಾಡಿರುವ ಬೆಂಝ್‌ನ ಇ ಕ್ಲಾಸ್ ಓಪನ್ ಟಾಪ್ ಕಾರಿನಲ್ಲೂ ಗರಿಷ್ಠ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್‌ಇಡಿ ಹೆಡ್ ಲ್ಯಾಂಪ್, ಡ್ಯುಯಲ್ ಕ್ರೋಮ್ ಎಕ್ಸಾಸ್ಟ್ ಟಿಪ್ ಗಳು ಬೆಂಝ್ ಸುಂದರಿಗೆ ಮತ್ತಷ್ಟು ಮೆರಗನ್ನು ತುಂಬುತ್ತದೆ.

ಮರ್ಸಿಡಿಸ್ ಬೆಂಝ್ ಇ400 ಕ್ಯಾಬ್ರಿಯೊ ಚಾಲನಾ ವಿಮರ್ಶೆ

ಸಾಮಾನ್ಯವಾಗಿ ಓಪನ್ ಟಾಪ್ ಕಾರಿನಲ್ಲಿ ವೇಗವಾಗಿ ಚಲಿಸುವಾಗ ಮೇಲ್ಛಾವಣಿ ತೆರೆದಾಗ ಗಾಳಿ ನೆರವಾಗಿ ಮುಖಕ್ಕೆ ಬಂದಪ್ಪಳಿಸಬಹುದೆಂಬ ಭಯವಿರಬಹುದು. ಆದರೆ ಇದಕ್ಕಿಲ್ಲಿ ಬೆಂಝ್ ಪರಿಚಯಿಸುತ್ತಿರುವ ನೂತನ ಏರ್ ಕ್ಯಾಪ್ ಡ್ರಾಟ್-ಸ್ಟಾಪ್ (AIRCAP draught-stop system) ವ್ಯವಸ್ಥೆಗೆ ಥಾಂಕ್ಸ್ ಹೇಳಲೇಬೇಕಾಗುತ್ತದೆ. ಕಾರಿನ ಮುಂಭಾಗದಲ್ಲಿ ರೂಫ್ ಟಾಪ್ ಮಾದರಿಯಲ್ಲಿ ಸಣ್ಣದಾದ ಪರದೆ ತೆರೆದುಕೊಳ್ಳಲಿದ್ದು, ಇದು ಮುಂಭಾಗದ ಅಷ್ಟೇ ಅಲ್ಲದೆ ಹಿಂಭಾಗದ ಪ್ರಯಾಣಿಕರಿಗೂ ಗಾಳಿ ನೇರವಾಗಿ ಅಪ್ಪಳಿಸುವುದನ್ನು ತಡೆಯುತ್ತದೆ.

ಮರ್ಸಿಡಿಸ್ ಬೆಂಝ್ ಇ400 ಕ್ಯಾಬ್ರಿಯೊ ಚಾಲನಾ ವಿಮರ್ಶೆ

ಕಾರಿನ ಶಬ್ದ ಮಟ್ಟ ಕೂಡಾ ಪರಿಣಾಮಕಾರಿಯೆನಿಸಿಕೊಂಡಿದ್ದು, ಮುಂದುವರಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೆಟ್ಯಾಲಿಕ್ ಟ್ರಿಮ್, ಕೈಯಿಂದಲೇ ಪೊಲಿಶ್ ಮಾಡಿದ ಮರ ಕೆತ್ತನೆ, ಲೆಥರ್ ಹೋದಿಕೆ, ಸೆಂಟ್ರಲ್ ಕನ್ಸೋಲ್, ವಿದ್ಯುನ್ಮಾನವಾಗಿ ನಿಯಂತ್ರಿತ ಫ್ಯಾಬ್ರಿಕ್ ಟಾಪ್ ಎಲವೂ ಬೆಂಝ್ ಇ ಕ್ಲಾಸ್ ಟಾಪ್ ಲೆಸ್ ಕಾರಿಗೆ ನೈಜ ಚಾಲನಾ ಅನುಭವವನ್ನು ನೀಡುತ್ತದೆ.

ಎಂಜಿನ್, ನಿರ್ವಹಣೆ

ಎಂಜಿನ್, ನಿರ್ವಹಣೆ

ಗಾಡಿ ನಿರ್ವಹಣೆ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿದ್ದು, ಇದರಲ್ಲಿರುವ 3.0 ಲೀಟರ್ ಟ್ವಿನ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 480 ಎನ್‌ಎಂ ತಿರುಗುಬಲದಲ್ಲಿ 333 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ವಿ6 ಎಂಜಿನ್ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ (7ಜಿ ಟ್ರಾನಿಕ್ ಪ್ಲಸ್) ಸಹ ಪಡೆದಿರುತ್ತದೆ. ಇದು ಎಕಾನಮಿಕಲ್‌ನಿಂದ ಡೈನಾಮಿಕ್ ವರೆಗೂ ಹಾಗೂ ಡೈರಕ್ಟ್ ಸೆಲೆಕ್ಟ್ (DIRECT SELECT) ಸ್ಟೀರಿಂಗ್ ವೀಲ್ ‌ನಿಂದ ಮ್ಯಾನುವಲ್ ಆಗಿಯೂ ಗೇರ್ ಬದಲಾಯಿಸಲು ಸಹಕಾರಿಯಾಗುತ್ತದೆ.

ಮರ್ಸಿಡಿಸ್ ಬೆಂಝ್ ಇ400 ಕ್ಯಾಬ್ರಿಯೊ ಚಾಲನಾ ವಿಮರ್ಶೆ

ಕಡಿದಾದ ತಿರುವು ಹಾಗೂ ಲಂಬ ರೇಖಾ ರಸ್ತೆ ಪ್ರದೇಶಗಳಲ್ಲಿ ಅತಿ ವೇಗದಲ್ಲಿ ಸಂಚರಿಸುವಾಗಲೂ ಅತ್ಯುತ್ತಮ ಸ್ಥಿರತೆಯನ್ನು ಬೆಂಝ್ ಇ400 ಪ್ರದಾನ ಮಾಡುತ್ತದೆ. ಇನ್ನುಳಿದಂತೆ ನೆಕ್-ಪ್ರೊ ಹಾಗೂ ದೃಢಕಾಯದ ಎ ಪಿಲ್ಲರುಗಳು ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ ಒದಗಿಸುತ್ತದೆ.

ಮರ್ಸಿಡಿಸ್ ಬೆಂಝ್ ಇ400 ಕ್ಯಾಬ್ರಿಯೊ ಚಾಲನಾ ವಿಮರ್ಶೆ

ಇಲ್ಲಿಗೆ ಭದ್ರತಾ ವೈಶಿಷ್ಟ್ಯಗಳು ಕೊನೆಗೊಳ್ಳುವುದಿಲ್ಲ. ಎಚ್ಚರಿಕಾ ಸಹಾಯಿ, ಎರಡು ಹಂತಗಳ ಬಿಗಿಗೊಳಿಸುವ ಜೊತೆಗೆ ಸೀಟು ಬೆಲ್ಟ್ ಪ್ರಿ-ಟೆನ್ಷನರ್, ಡ್ಯುಯಲ್ ಏರ್ ಬ್ಯಾಗ್ (ಮುಂಭಾಗ, ಬದಿ, ವಿಂಡೋ, ಮೊಣಕಾಲು), ಕ್ರೂಸ್ ಕಂಟ್ರೋಲ್ ಜೊತೆ ವೇಗ ಮಿತಿ (SPEEDTRONIC), ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಬ್ರೇಕ್ ಅಸಿಸ್ಟ್ (BAS), ಅಡಾಪ್ಟಿವ್ ಬ್ರೇಕ್ ಜೊತೆ ಹೋಲ್ಡ್ ಕ್ರಿಯಾತ್ಮಕತೆ, ಅಡಾಪ್ಟಿವ್ ಬ್ರೇಕ್ ಲೈಟ್ ಫ್ಲ್ಯಾಶಿಂಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಬ್ರೇಕ್ ಪ್ಯಾಡ್ ವಿಯರ್ ಇಂಡಿಕೇಟರ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂಗಳಂತಹ ಉನ್ನತ ಮಟ್ಟದ ಸುರಕ್ಷಾ ವೈಶಿಷ್ಟ್ಯಗಳನ್ನು ಅನುಸರಿಸಲಾಗಿದೆ.

ನಿರ್ವಹಣೆ

ನಿರ್ವಹಣೆ

5.2 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.

ಗರಿಷ್ಠ ವೆಗ: ಗಂಟೆಗೆ 250 ಕೀ.ಮೀ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಭಾರತದಲ್ಲಿ ಬಿಎಂಡಬ್ಲ್ಯು ಝಡ್4 ಪ್ರತಿಸ್ಪರ್ಧಿಯಾಗಲಿದೆ. ಇನ್ನು ಜಾಗತಿಕವಾಗಿ ಆಡಿ ಎಸ್5 ಕ್ಯಾಬ್ರಿಯೊಟ್, ಬಿಎಂಡಬ್ಲ್ಯು 4 ಸಿರೀಸ್ ಕನ್ವರ್ಟಿಬಲ್ ಸಹ ಇದೇ ಸಾಲಿನಲ್ಲಿ ಗುರುತಿಸಿಕೊಳ್ಳುತ್ತದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಒಟ್ಟಾರೆಯಾಗಿ ಒಂದು ಕಾರಿಗೆ ಬೇಕಾದ ಎಲ್ಲ ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಮುಂದೆ ಬಂದಿರುವ ಬೆಂಝ್ ಇ400 ಕ್ಯಾಬ್ರಿಯೊಲೆಟ್, ನಿಮ್ಮ ಕನಸಿನ ನಾಯಕಿ ಆಗಲಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಬೇಡ. ಹಾಗಿದ್ದರೆ ಇನ್ಯಾಕೆ ತಡ ನಿಮ್ಮ ಕನಸಿನ ನಾಯಕಿಯನ್ನು ಈಗಿಂದಲೇ ಹಿಂಬಾಲಿಸಿ. ಜಯ ನಿಮ್ಮದಾಗಲಿ. ಹ್ಯಾಪಿ ಡ್ರೈವಿಂಗ್!

ಮರ್ಸಿಡಿಸ್ ಬೆಂಝ್ ಇ400 ಕ್ಯಾಬ್ರಿಯೊ ಚಾಲನಾ ವಿಮರ್ಶೆ

ಡ್ರೈವ್ ಸ್ಪಾರ್ಕ್ ರೇಟಿಂಗ್

ಇವನ್ನೂ ಓದಿ

ನಿಮ್ಮ ಅಭಿಲಾಷೆಗೆ ತಕ್ಕ ಕಾರು: ಫೋರ್ಡ್ ಫಿಗೊ ಆಸ್ಪೈರ್ ಸಮಗ್ರ ವಿಮರ್ಶೆ


More from DriveSpark

Article Published On: Friday, September 18, 2015, 16:30 [IST]
English summary
First Drive: Mercedes-Benz E400 Cabriolet — A 'Topless' Affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+