MG Comet: ಅತ್ಯಾಧುನಿಕ ಫೀಚರ್ಸ್, ಕಡಿಮೆ ಬೆಲೆಯ ಪುಟ್ಟ ಎಲೆಕ್ಟ್ರಿಕ್ ಕಾರಿನ ರಿವ್ಯೂ

ಭಾರತದಲ್ಲಿ ಇಂಧನಗಳ ಬೆಲೆ ಹೆಚ್ಚಾಗುತ್ತಿದೆ. ಇಂಧನ ವಾಹನಕ್ಕೆ ಪರಿಹಾರವಾದ ಎಲೆಕ್ಟ್ರಿಕ್ ವಾಹನಗಳಿಗೆ ಭಾರತದಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಗ್ರಾಹಕರು ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಜನಪ್ರಿಯ ಕಾರು ತಯಾರಕರು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲು ಪ್ರಾರಂಭಿಸಿದ್ದಾರೆ.

ಈ ನಡುವೆ. ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ತನ್ನ ಹೊಸ ಎಂಜಿ ಕಾಮೆಟ್ ಎಂಬ ಹೊಸ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ಕಾರಿನ ಹೆಸರು ಇಂಗ್ಲೆಂಡ್-ಆಸ್ಟ್ರೇಲಿಯಾ ಮ್ಯಾಕ್‌ರಾಬರ್ಟ್‌ಸನ್ ಏರ್ ರೇಸ್‌ನಲ್ಲಿ ಭಾಗವಹಿಸಿದ 1934 ರ ಸಾಂಪ್ರದಾಯಿಕ ಬ್ರಿಟಿಷ್ ವಿಮಾನದಿಂದ ಸ್ಫೂರ್ತಿ ಪಡೆದಿದೆ.

MG Comet EV

ಈ ಹೊಸ ಎಂಜಿ ಎಲೆಕ್ಟ್ರಿಕ್ ಕಾರು ಸಿಟಿಗಳಿಗೆ ಹೇಳಿ ಮಾಡಿಸಿದ ಕಾರ್ ಆಗಿದೆ. ಬೆಂಗಳೂರಿನಂತಹ ಟ್ರಾಫಿಕ್ ನಿಂದ ಕೂಡಿರುವ ಸಿಟಿಗಳಿಗೆ ಅತ್ಯುತ್ತಮ ಕಾರ್ ಆಗಿದೆ. ಈ ಹೊಸ ಎಲೆಕ್ಟ್ರಿಕ್ ಕಾರನ್ನು ನಾವು ದೆಹಲಿಯ ರಸ್ತೆಗಳಲ್ಲಿ ಡ್ರೈವ್ ಮಾಡಿದ್ದೇವೆ. ಈ ಹೊಸ ಎಂಜಿ ಎಲೆಕ್ಟ್ರಿಕ್ ಕಾರಿನ ಡ್ರೈವಿಂಗ್ ಅನುಭವ, ಕಾರಿನ ವಿನ್ಯಾಸ, ಫೀಚರ್ಸ್, ತಾಂತ್ರಿಕ ಅಂಶಗಳು ಮತ್ತು ಇತರ ಹೆಚ್ಚಿನ ಮಾಹಿತಿಗಳು ಇಲ್ಲಿದೆ.

ವಿನ್ಯಾಸ: ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಪೂರ್ಣ-ಅಗಲ LED ಲೈಟ್ ಬಾರ್‌ನಂತಹ ಆಸಕ್ತಿದಾಯವಾದ ಬಾಕ್ಸ್ ವಿನ್ಯಾಸ ಭಾಷೆಯನ್ನು ಹೊಂದಿದೆ, ಜೊತೆಗೆ, ಎರಡೂ ವಿಂಗ್ ಮೀರರ್ಸ್ ಕ್ರೋಮ್ ಮತ್ತು ಪಿಯಾನೋ ಬ್ಲ್ಯಾಕ್ ಪಟ್ಟಿ ಇದೆ. ಇನ್ನು ಈ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಚಾರ್ಜರ್ ಅನ್ನು ಲೈಟ್ ಬಾರ್ ಅಡಿಯಲ್ಲಿ ಮುಂಭಾಗದಲ್ಲಿ ಇರಿಸಲಾಗುತ್ತದೆ ಮತ್ತು ಅದರ ಫ್ಲಾಪ್ ಪ್ರಕಾಶಿತ MG ಲೋಗೋವನ್ನು ಹೊಂದಿದೆ.

MG Comet EV

ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 12-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ವಾಹನದ ಚಿಕ್ಕ ಚಕ್ರದ ಗಾತ್ರವಾಗಿದೆ. ಇದು ಆಕರ್ಷಕವಾದ ವಿಂಡೋ ವಿನ್ಯಾಸವನ್ನು ಸಹ ಪಡೆಯುತ್ತದೆ, ಹಿಂಭಾಗದ ವಿಂಡೋಗಳನ್ನು ಲಂಬವಾಗಿ ಜೋಡಿಸಲಾಗಿದೆ. ಹಿಂಭಾಗದಲ್ಲಿ, ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ವಿಸ್ತೃತ ಹಾರಿಜಾನ್ ಸಂಪರ್ಕಿಸುವ ಲ್ಯಾಂಪ್ ಗಳನ್ನು ಪಡೆಯುತ್ತದೆ.

ಫೀಚರ್ಸ್: ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಒಳಭಾಗದಲ್ಲಿ, ಎರಡು 10.25-ಇಂಚಿನ ಸ್ಕ್ರೀನ್‌ಗಳಿಂದ ಹೈಲೈಟ್ ಮಾಡಲಾದ ಬಿಳಿ ಮತ್ತು ಬೂದು ಬಣ್ಣದ ಒಳಾಂಗಣವನ್ನು ಹೊಂದಿದೆ.ಇನ್ನು ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ. ಮುಂಭಾಗದ ಪ್ರಯಾಣಿಕರ ಸೀಟ್ ಒನ್-ಟಚ್ ಟಂಬಲ್ ಮತ್ತು ಫೋಲ್ಡ್ ಫೀಚರ್ಸ್ ಅನ್ನು ಹೊಂದಿದೆ.

MG Comet EV

ಇನ್ನು ಈ ಕಾರಿನ ಹಿಂದಿನ ಸೀಟುಗಳು 50:50 ಸ್ಪ್ಲಿಟ್ ಅನ್ನು ಪಡೆಯುತ್ತವೆ. ಕಾಮೆಟ್ ರೋಟರಿ ಡ್ರೈವ್ ಸೆಲೆಕ್ಟರ್ ಅನ್ನು ಸಹ ಹೊಂದಿದೆ. ಇನ್ನು ಈ ಕಾರಿನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮತ್ತು ಮ್ಯಾನುಯಲ್ ಎಸಿ ಕಂಟ್ರೋಲ್ ಹೊಂದಿವೆ. ಇದರೊಂದಿಗೆ ಕೀಲೆಸ್ ಎಂಟ್ರಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಮೂರು ಯುಎಸ್‌ಬಿ ಪೋರ್ಟ್‌ಗಳು ಮತ್ತು 55 ಕ್ಕೂ ಹೆಚ್ಚು ಕನೆಕ್ಟಿವಿಟಿಗಳನ್ನು ಪಡೆಯುತ್ತದೆ.

ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ನಾಲ್ಕು ಸೀಟ್ ಗಳನ್ನು ಹೊಂದಿವೆ ಮತ್ತು ಹಿಂಭಾಗದ ಸೀಟುಗಳ ಪ್ರವೇಶವು ತುಂಬಾ ಸುಲಭವಾಗಿದೆ. ಮುಂಭಾಗದ ಪ್ರಯಾಣಿಕರ ಸೀಟ್ ಗಾಗಿ ಒಂದು-ಟಚ್ ಟಂಬಲ್ ಫಂಕ್ಷನ್ ಅನ್ನು ಹೊಂದಿದೆ. ಹಿಂದಿನ ಸಾಲಿನಲ್ಲಿ ಸ್ಲಿಪ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಎಷ್ಟು ಸುರಕ್ಷಿತವಾಗಿದೆ ಎಂದು ಕೇಳುವರಿಗೆ, ಇದು ಹೆಚ್ಚಿನ ಸಾಮರ್ಥ್ಯದ ಬಾಡಿಯನ್ನು 17 ಹಾಟ್-ಸ್ಟ್ಯಾಂಪ್ಡ್ ಪ್ಯಾನೆಲ್‌ಗಳ ಸಹಾಯದಿಂದ ತಯಾರಿಸಲಾಗುತ್ತದೆ.

MG Comet EV

ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆ ಫೀಚರ್ಸ್ ಗಳಿಗೆ ಹೆಚ್ಚು ಪ್ರಾಮುಖ್ಯಯತೆಯನ್ನು ನೀಡಲಾಗಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ, ABS, EBD, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿವರ್ಸ್ ಕ್ಯಾಮೆರಾ ಮತ್ತು ಸೆನ್ಸರ್‌ಗಳು ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಸೇರಿವೆ.3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ISOFIX ಆಂಕರ್ ಪಾಯಿಂಟ್‌ಗಳು ಮಕ್ಕಳ ಸೀಟ್ ಗಳಿಗೆ ಅದರ ಸುರಕ್ಷತೆಯ ಆರ್ಸೆನಲ್‌ನ ಭಾಗವಾಗಿದೆ.

ಆಯಾಮಗಳು: ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಮಾದರಿಯು ಟಾಟಾ ನ್ಯಾನೋಗಿಂತ 125 ಮಿಮೀ ಕಡಿಮೆ ಉದ್ದವನ್ನು ಹೊಂದಿದೆ. ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 2,974mm ಉದ್ದ, 1,505mm ಅಗಲ ಮತ್ತು 1,640mm ಎತ್ತರವನ್ನು ಹೊಂದಿದೆ. ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 2,010mm ಉದ್ದದ ವೀಲ್ ಬೇಸ್ ಅನ್ನು ಹೊಂದಿದೆ. 4.2 ಮೀಟರ್ ಟರ್ನಿಂಗ್ ಸರ್ಕಲ್ ಹೊಂದಿದೆ.

MG Comet EV

ಬ್ಯಾಟರಿ ಪ್ಯಾಕ್‌: ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 17.3kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ, ಇದು ARAI- ಸ್ಟ್ಯಾಂಡರ್ಡ್ ಆಗಿ 230 ಕಿ.ಮೀ ರೇಂಜ್ ಅನ್ನು ನೀಡುತ್ತದೆ, ಕಾಮೆಟ್ ಇವಿ ಕೇವಲ AC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು 3.3kW ಚಾರ್ಜಿಂಗ್ ಕೇಬಲ್‌ನೊಂದಿಗೆ ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ

ಇನ್ನು ಚಾರ್ಜಿಂಗ್ ಕೇಬಲ್‌ನೊಂದಿಗೆ 10-80% ಚಾರ್ಜ್ 5 ಗಂಟೆಗಳನ್ನು ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಬ್ಯಾಟರಿ ಪ್ಯಾಕ್ 41.4bhp ಮತ್ತು 110Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರು ಸಿಂಗಲ್ ಎಲೆಕ್ಟಿಕ್ ಮೋಟರ್‌ಗೆ ಪವರ್ ಕಳುಹಿಸುತ್ತದೆ.

ಡ್ರೈವಿಂಗ್ ಇಂಪ್ರೆಷನ್ಸ್: ಈ ಎಂಜಿ ಎಲೆಕ್ಟ್ರಿಕ್ ಕಾರಿನ ಆರಂಭಿಕ ಕಾರ್ಯವಿಧಾನವು ಚಮತ್ಕಾರಿಯಾಗಿದೆ. ಕಾಮೆಟ್ ಇವಿಯ ಪವರ್‌ಟ್ರೇನ್ ಶಬ್ದ-ಮುಕ್ತವಾಗಿದೆ ಮತ್ತು ನೀವು ಆಕ್ಸಿಲೇಟರ್ ಅನ್ನು ಒತ್ತಿದಾಗ ಮೈಕ್ರೋಕಾರ್ ಶೈಲಿಯಲ್ಲಿ ವೇಗವನ್ನು ಪಡೆಯುತ್ತದೆ. ಹೊಸ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಸುಮಾರು 110 ಕಿ.ಮೀ ವೇಗವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಎಂಜಿ ಎಲೆಕ್ಟ್ರಿಕ್ ಮೈಕ್ರೋಕಾರ್ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದ್ದು, ಇದು ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಆಗಿದೆ, ಸ್ಪೋರ್ಟ್ ಮೋಡ್ ಒಂದು ನಿರ್ದಿಷ್ಟವಾದ ಹೆಚ್ಚುವರಿ ಶಾರ್ಪ್‌ನೆಸ್ ಅನ್ನು ನೀಡುತ್ತದೆ ಆದರೆ ಇಕೋ ಮತ್ತು ನಾರ್ಮಲ್ ಮೊಡ್ ಗಳು ಸಾಮಾನ್ಯವಾಗಿ ಒಂದೇ ರೀತಿಯಾಗಿದೆ. ಈ ಕಾರಿನ ಸ್ಟೀಯರಿಂಗ್ ವ್ಹೀಲ್ ಟಿಲ್ಟ್ ಹೊಂದಾಣಿಕೆಯನ್ನು ಮಾತ್ರ ನೀಡುತ್ತದೆ. ಈ ಕಾಮೆಟ್ ಎಲೆಕ್ಟ್ರಿಕ್ ಕಾರು ಸಿಟಿಗಳಿಗೆ ಪರಿಪೂರ್ಣವಾದ ಕಾರ್ ಆಗಿದೆ,

ಇನ್ನು ಲೈಟ್ ಸ್ಟೀರಿಂಗ್ ವೀಲ್ ಜೊತೆಗೆ ಹಿಂಬದಿ-ಚಕ್ರ ಡ್ರೈವ್ ಮತ್ತು ಮ್ಯಾನುಯಲ್ ಹ್ಯಾಂಡ್‌ಬ್ರೇಕ್ ಅನ್ನು ಹೊಂದಿದೆ. ಈ ಪುಟ್ಟ ಎಲೆಕ್ಟ್ರಿಕ್ ಕಾರು ಆಕರ್ಷಕ ವಿನ್ಯಾಸ, ಸಣ್ಣ ವೀಲ್‌ಬೇಸ್, ಸಣ್ಣ ವ್ಹೀಲ್ ಗಳು ಮತ್ತು ಮೃದುವಾದ ಸಸ್ಪೆನ್ಶನ್ ಸೆಟಪ್‌ನ ವಿಶಿಷ್ಟ ಸಂಯೋಜನೆಯ ಕಾರಣದಿಂದಾಗಿರುತ್ತದೆ, ಅಂದರೆ ಬಾಡಿಯ ರೋಲ್ ರೋಲ್ ಹೆಚ್ಚು ಸ್ಪಷ್ಟವಾಗಿದೆ. ಇನ್ನು ಸಸ್ಪೆಕ್ಷನ್ ವಿಷಯದಲ್ಲಿ, ಇದು ಕೆಟ್ಟ ಗುಂಡಿಗಳ ರಸ್ತೆಯಲ್ಲಿ ಸಾಗಬೇಕಾದರೆ ಸ್ವಲ್ಪ ಕಷ್ಟಕರ ವಾಗಿದೆ.

ಈ ಎಲೆಕ್ಟ್ರಿಕ್ ಕಾರು 145/70 R12 ರಬ್ಬರ್‌ನಲ್ಲಿರುವ ಸಣ್ಣ 12-ಇಂಚಿನ ವ್ಹೀಲ್ ಗಳು ಚೂಪಾದ ಉಬ್ಬುಗಳಲ್ಲಿ ಪ್ರಯಾಣವು ಕಠಿಣವಾಗಿದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನ ಮುಂಭಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಹೊಂದಿವೆ. ಅನೇಕ ಹಂತಗಳ ರೆಜೆನ್ ಬ್ರೇಕಿಂಗ್‌ನಿಂದ ಸಹಾಯ ಮಾಡುತ್ತವೆ.

ಕಾಮೆಟ್ ಇವಿಯ ಬಹು ರೀಜೆನ್ ಮೋಡ್‌ಗಳನ್ನು ಸಹ ಹೊಂದಿದೆ, ಅದು ಬ್ರೇಕಿಂಗ್‌ಗೆ ಸಹಾಯ ಮಾಡುತ್ತದೆ ಈ ಎಂಜಿ ಎಲೆಕ್ಟ್ರಿಕ್ ಕಾರಿನಲ್ಲಿ ಸಿಂಗಲ್ ಚಾರ್ಜ್‌ನಲ್ಲಿ 230 ಕಿಮೀ ರೇಂಜ್ ಅನ್ನು ನೀಡುತ್ತದೆ ಎಂದು ಎಂಜಿ ಕಂಪನಿ ಹೇಳಿದೆ, ಇದನ್ನು ಪರೀಕ್ಷಿಸಲು ದೆಹಲಿಯಲ್ಲಿ ನಮಗೆ ಸಾಕಷ್ಟು ಸಮಯ ಸಿಗದಿದ್ದರೂ, 170 ಕಿಲೋಮೀಟರ್‌ಗಳವರೆಗಿನ ರೇಂಜ್ ಅನ್ನು ಪಡೆದುಕೊಂಡಿದ್ದೇವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಈ ಪುಟ್ಟ ಎಂಜಿ ಕಾಮೆಟ್ ಚಮತ್ಕಾರಯಾದ ಎಲೆಕ್ಟ್ರಿಕ್ ಮೈಕ್ರೋಕಾರ್ ಆಗಿದೆ. ಈ ಎಲೆಕ್ಟ್ರಿಕ್ ಕಾರು ಮುದ್ದಾದ ನೋಟ ಮತ್ತು ಆಶ್ಚರ್ಯಕರ ಗಾತ್ರದ ಒಳಾಂಗಣವನ್ನು ಹೊಂದಿದೆ. ಸಿಟಿಗಳಿಗೆ ಇದು ಹೇಳಿ ಮಾಡಿಸಿದ ಎಲೆಕ್ಟ್ರಿಕ್ ಕಾರ್ ಆಗಿದೆ. ಈ ಸಣ್ನ ಎಲೆಕ್ಟ್ರಿಕ್ ಕಾರಿನಲ್ಲಿ ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದೆ, ಈ ಕಾರು ನೋಡುಗರ ಗಮನಸೆಳೆಯುವಂತಹ ವಿನ್ಯಾಸವನ್ನು ಹೊಂದಿದೆ.

More from DriveSpark

Article Published On: Thursday, April 27, 2023, 12:07 [IST]
English summary
Mg comet ev review range specs design features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+