ಭಾರತದಲ್ಲಿ ಚೀನಾ ಮೂಲದ 3,000 ಎಲೆಕ್ಟ್ರಿಕ್ ಕಾರುಗಳಿಗೆ ಆರ್ಡರ್: ಎಂಜಿಗೆ ಭರ್ಜರಿ ಆಫರ್

ಇಂಟಿಗ್ರೇಟೆಡ್ ಫ್ಲೀಟ್ ಎಲೆಕ್ಟ್ರಿಫಿಕೇಶನ್ ಪ್ಲಾಟ್‌ಫಾರ್ಮ್ ಆಗಿರುವ 'ವರ್ಟೆಲೊ' (ಟ್ಯಾಕ್ಸಿ ಸೇವಾ ಕಂಪನಿ)ಗೆ ಹಂತ ಹಂತವಾಗಿ 3,000 ಎಲೆಕ್ಟ್ರಿಕ್ ಕಾರುಗಳನ್ನು ತಲುಪಿಸುವ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಎಂಜಿ ಮೋಟಾರ್ ಇಂಡಿಯಾ ಹೇಳಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಮೋರಿಸ್ ಗ್ಯಾರೇಜ್ (MG Motor) ಚೀನಾ ಒಡೆತನದ ಬ್ರಿಟಿಷ್ ಕಂಪನಿಯಾಗಿದೆ. ಭಾರತದಲ್ಲಿ ಎಂಜಿ ಆಸ್ಟರ್, ಹೆಕ್ಟಾರ್ ಸೇರಿದಂತೆ ಎರಡು ಎಲೆಕ್ಟ್ರಿಕ್ ಕಾರುಗಳಾದ ಕಾಮೆಟ್ ಇವಿ ಹಾಗೂ ಝಡ್ಎಸ್ ಇವಿಗಳನ್ನು ಮಾರಾಟ ಮಾಡುತ್ತಿದೆ. ತನ್ನ ಕಾರುಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದು, ಇದೀಗ 3,000 ಎಲೆಕ್ಟ್ರಿಕ್ ಕಾರುಗಳ ಆಫರ್ ಬಾಚಿಕೊಂಡಿದೆ. ವರ್ಟೆಲೊ (Vertelo) ದೊಂದಿಗಿನ ಈ ಪಾಲುದಾರಿಕೆಯು ಸವಾರರಿಗೆ ಸುಸ್ಥಿರ ಚಲನಶೀಲತೆ ಪರಿಹಾರಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ದೇಶದಲ್ಲಿ ದೃಢವಾದ EV ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು MG ಮೋಟಾರ್ ಇಂಡಿಯಾ ತಿಳಿಸಿದೆ.

mg-motor-received-order-from-vertelo-for-3000-electric-cars

"MG ಇಂಡಿಯಾ ಮತ್ತು ವರ್ಟೆಲೊ ನಡುವಿನ ಈ ಪಾಲುದಾರಿಕೆಯು ಭಾರತದಲ್ಲಿ ಡಿಕಾರ್ಬೊನೈಸೇಶನ್‌ನೊಂದಿಗೆ ಹಸಿರು ಮತ್ತು ಸುಸ್ಥಿರ ಭವಿಷ್ಯದ ಹಂಚಿಕೆಯ ದೃಷ್ಟಿಯನ್ನು ಪ್ರದರ್ಶಿಸುತ್ತದೆ. ಈ ಸಹಯೋಗವು ಪ್ರಯಾಣಿಕರಿಗೆ ಸುಧಾರಿತ ಇ-ಮೊಬಿಲಿಟಿ ಪರಿಹಾರಗಳನ್ನು ನೀಡಲು ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆಯನ್ನು ಹೆಚ್ಚಿಸಲು ನಮ್ಮ ಪ್ರಯತ್ನಗಳನ್ನು ವರ್ಧಿಸುತ್ತದೆ ಎಂದು ನಂಬುತ್ತೇವೆ'' ಎಂದು ಎಂಜಿ ಮೋಟಾರ್ ಇಂಡಿಯಾ ಮುಖ್ಯ ಬೆಳವಣಿಗೆ ಅಧಿಕಾರಿ ಗೌರವ್ ಗುಪ್ತಾ ಹೇಳಿದ್ದಾರೆ.

ಏನಿದು ವರ್ಟೆಲೊ: ವರ್ಟೆಲ್ಲೊ ಒಂದು ಟ್ಯಾಕ್ಸಿ ಸೇವಾ ಕಂಪನಿಯಾಗಿದೆ. ಇದು ತನ್ನ ಟ್ಯಾಕ್ಸಿ ಸೇವೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತದೆ. ಕಂಪನಿಯು ಗ್ರೀನ್ ಕ್ಲೈಮೇಟ್ ಫಂಡ್‌ನಿಂದ ಧನಸಹಾಯ ಪಡೆಯುತ್ತದೆ. ಇದೇ ವರ್ಟೆಲ್ಲೊ ಇತ್ತೀಚೆಗೆ ಟಾಟಾ ಮೋಟಾರ್ಸ್‌ಗೆ ಎಕ್ಸ್ಪ್ರೆಸ್-ಟಿ ಇವಿ ಎಲೆಕ್ಟ್ರಿಕ್ ಕಾರಿಗಾಗಿ ಬೃಹತ್ ಆರ್ಡರ್ ನೀಡಿತ್ತು. ಒಟ್ಟಾರೆ ಈ ಕಂಪನಿ ನಿರ್ವಾಹಕರು ಮತ್ತು ಕಾರ್ಪೊರೇಟ್‌ಗಳಿಗೆ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಸುಮಾರು 3,000 ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು MG ಮೋಟಾರ್ ಇಂಡಿಯಾದೊಂದಿಗಿನ ಈ ಪಾಲುದಾರಿಕೆಯು ಫ್ಲೀಟ್ ವಿದ್ಯುದೀಕರಣವನ್ನು ವೇಗಗೊಳಿಸುವ ಮತ್ತು ಶೂನ್ಯ ಕಾರ್ಬನ್ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯೊಂದಿಗೆ ಎರಡೂ ಸಂಸ್ಥೆಗಳಿಗೆ ಉತ್ತೇಜಕ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. MG ಮೋಟಾರ್ ಮುಂದಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ತರಲು ಯೋಜಿಸಿರುವ ಎಲೆಕ್ಟ್ರಿಕ್ ವಾಹನಗಳ ಶ್ರೇಣಿ ಮತ್ತು ಫ್ಲೀಟ್ ಆಪರೇಟರ್‌ಗಳು ಮತ್ತು ಕಾರ್ಪೊರೇಟ್‌ಗಳಿಗೆ ವರ್ಟೆಲೋದ ಸಮಗ್ರ ವಿದ್ಯುದೀಕರಣ ಪರಿಹಾರಗಳು ಹೆಚ್ಚು ಸಮರ್ಥನೀಯ ಸಾರಿಗೆ ಪರಿಸರ ವ್ಯವಸ್ಥೆಯತ್ತ ಬದಲಾವಣೆಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವರ್ಟೆಲೊ ಸಿಇಒ ಸಂದೀಪ್ ಗಂಭೀರ್ ಹೇಳಿದ್ದಾರೆ.

ಪ್ರಸ್ತುತ ಎಂಜಿ ಕಂಪನಿಯು ಭಾರತದಲ್ಲಿ ಕಾಮೆಟ್ ಇವಿ ಮತ್ತು ಝಡ್ಎಸ್ ಇವಿ ಎಂಬ ಎರಡು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಮಾತ್ರ ನೀಡುತ್ತಿದೆ. ಭಾರತದಲ್ಲಿ ಕಾಮೆಟ್ ಇವಿ ಆರಂಭಿಕ ಬೆಲೆಯು ರೂ.6.98 (ಎಕ್ಸ್‌ ಶೋರೂಂ) ಲಕ್ಷಗಳಾಗಿದೆ. ಇದು 17.3 ಕಿಲೋವ್ಯಾಟ್ ಪ್ರಿಸ್ಮ್ಯಾಟಿಕ್ ಲಿ-ಐಯಾನ್ ಬ್ಯಾಟರಿ ಪ್ಯಾಕ್ ನಿಂದ ನಿಯಂತ್ರಿಸಲ್ಪಡುತ್ತದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 230 ಕಿ.ಮೀ ವರೆಗೆ ಪ್ರಯಾಣಿಸಬಹುದು.

ಅಂತೆಯೇ, ಎಂಜಿಯ ಝಡ್ಎಸ್ ಇವಿ ಕಾರು ಸೂಪರ್ ರೇಂಜ್ ಸಾಮರ್ಥ್ಯವನ್ನು ಹೊಂದಿದ್ದು, ಇದರ ಆರಂಭಿಕ ಬೆಲೆಯು ರೂ.18.98 (ಎಕ್ಸ್‌ ಶೂರೂಂ) ಲಕ್ಷಗಳಾಗಿದೆ. ಈ ಎಲೆಕ್ಟ್ರಿಕ್ ಕಾರು ಮಾದರಿಯು ಪೂರ್ಣ ಚಾರ್ಜ್ ನಲ್ಲಿ 461 ಕಿ.ಮೀ ರೇಂಜ್ ನೀಡುತ್ತದೆ. ಝಡ್ಎಸ್ ಇವಿ 50.3 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ ಲೆವೆಲ್ 2 ADAS ವೈಶಿಷ್ಟ್ಯವನ್ನು ಸಹ ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, May 24, 2024, 14:07 [IST]
English summary
Mg motor received order from vertelo for 3000 electric cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+