ಎಲೆಕ್ಟ್ರಿಕ್‌ ಕಾರು ಖರೀದಿಸಿ ಪರಿಸರ ಪ್ರಜ್ಞೆ ಮೆರೆದ ನಟಿ: ಬೆಲೆಯೂ ಕಮ್ಮಿ, ಪರ್ಫಾಮೆನ್ಸ್‌ ಜಾಸ್ತಿ!

ಎಂಜಿ ಎಂಬ ಕಾರು ನಿರ್ಮಾಣ ಕಂಪನಿ ಭಾರತಕ್ಕೆ ಬಂದು ಕೆಲವೇ ಕೆಲವು ವರ್ಷಗಳಾಗಿದ್ದರೂ, ಭಾರತದಲ್ಲಿ ಇದು ಇಟ್ಟಿರುವ ಹೆಜ್ಜೆ ಗುರುತುಗಳನ್ನು ನೋಡಿದರೆ, ಭಾರತೀಯ ಮಾರುಕಟ್ಟೆಯನ್ನು ಮುಂದೊಂದು ದಿನ ಆಳುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಎಂಜಿ ಕಾಮೆಟ್‌ ಎಂಬ ಕಾರು.

ಎಂಜಿ ಕಾಮೆಟ್‌ ಅನ್ನು ಒಂದು ಬೆಸ್ಟ್‌ ಬಜೆಟ್ ಕಾಂಪಾಕ್ಟ್‌ ಕಾರು ಎಂದರೆ ತಪ್ಪಾಗಲಾರದು. ಇದಕ್ಕೆ ಪ್ರಮುಖ ಕಾರಣ, ಇದರ ಬೆಲೆ ಮತ್ತು ಈ ಕಾರಿನ ಪರ್ಫಾಮೆನ್ಸ್‌ ಎನ್ನಬಹುದು. ಈ ಕಾರನ್ನು ಬಳಸಿಕೊಂಡು ಲಾಂಗ್‌ ಡ್ರೈವ್‌ ಮಾಡಲು ಸಾಧ್ಯವಾಗದೇ ಇದ್ದರೂ, ಸಿಟಿಯಲ್ಲಿ ಮತ್ತು ಟ್ರಾಫಿಕ್‌ನಲ್ಲಿ ದಿನಂಪ್ರತಿ ಕೆಲಸಕ್ಕೆಂದು ಹೋಗುವವರಿಗೆ ಹೇಳಿ ಮಾಡಿಸಿದಂತಿದೆ.

Actress Meenakshi Anoop Brought Brand New MG Comet EV And Shares Pictures

ಇದೀಗ ಈ ಕಾರನ್ನು ಮಲಯಾಳಂ ನಟಿ ಮೀನಾಕ್ಷಿ ಅನೂಪ್‌ ಖರೀದಿ ಮಾಡಿದ್ದು ಈ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಮೀನಾಕ್ಷಿ, ಹಲವಾರು ಮುಖ್ಯ ಭೂಮಿಕೆಯ ಚಿತ್ರದಲ್ಲೂ ನಟಿಸಿದ್ದಾರೆ. ಮಾತ್ರವಲ್ಲದೇ ಹಕವಾರು ರಿಯಾಲಿಟಿ ಶೋಗಳಲ್ಲಿ ಆಂಕರ್ ಆಗಿ ಕಾರ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಎಂಜಿ ಕಾಮೆಟ್ ಇವಿ (MG Comet EV) ಎಕ್ಸಿಕ್ಯೂಟಿವ್, ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎಂಬ ಮೂರು ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಎಕ್ಸಿಕ್ಯೂಟಿವ್ ಹೊರತುಪಡಿಸಿ, ಉಳಿದೆಲ್ಲ ಮಾದರಿಗಳ ಬೆಲೆ ರೂ.10,000 ಅಧಿಕಗೊಂಡಿದೆ ಎಂದು ವರದಿಯಾಗಿದೆ. ಇದರೊಂದಿಗೆ ಈ ಕಾರು, ರೂ.6.99 ಲಕ್ಷದಿಂದ ರೂ. 9.24 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Actress Meenakshi Anoop Brought Brand New MG Comet EV And Shares Pictures

ನೂತನ ಎಂಜಿ ಕಾಮೆಟ್ ಇವಿ ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಅರೋರಾ ಸಿಲ್ವರ್ ಹಾಗೂ ಕ್ಯಾಂಡಿ ವೈಟ್ ಸೇರಿದಂತೆ 2-ಡುಯಲ್ ಟೋನ್, 3-ಮೊನೊಟೋನ್ ಬಣ್ಣದ ಆಯ್ಕೆಯಲ್ಲಿಯೂ ಲಭ್ಯವಿದೆ. ಇದು 2-ಡೋರ್ (ಬಾಗಿಲು) ಆಯ್ಕೆಯನ್ನು ಹೊಂದಿದ್ದು, 4 ಮಂದಿ ಆರಾಮದಾಯವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಪಾರ್ಕಿಂಗ್ ಮಾಡುವುದಕ್ಕೂ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿರುವುದಿಲ್ಲ.

ಈ ಕಾರು 17.3 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 42 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 110 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿರುವ ಕಾಮೆಟ್ ಇವಿ, ಸಂಪೂರ್ಣ ಚಾರ್ಜ್ ನಲ್ಲಿ 230 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ.

ಎಂಜಿ ಕಾಮೆಟ್ ಇವಿ 3.3 ಕೆಡಬ್ಲ್ಯೂ (kW) ಚಾರ್ಜರ್ ಬಳಕೆಯಲ್ಲಿ 0 ಯಿಂದ 100% ಬ್ಯಾಟರಿ ಚಾರ್ಜ್ ಆಗಲು 7 ಗಂಟೆ ತೆಗೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ 7.4 ಕೆಡಬ್ಲ್ಯೂ (kW) ಚಾರ್ಜರ್ ಉಪಯೋಗ ಮಾಡಿದಾಗ 0 ಯಿಂದ 100% ಬ್ಯಾಟರಿ ಚಾರ್ಜ್ ಆಗುವುದಕ್ಕೆ ಕೇವಲ 3.5 ಗಂಟೆ ಸಾಕಾಗುತ್ತದೆ.

ಈ ಎಂಜಿ ಕಾಮೆಟ್ ಇವಿ (MG Comet EV) ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ ಡುಯಲ್ 10.25-ಇಂಚಿನ ಸ್ಕ್ರೀನ್ (ಇನ್ಫೋಟೈನ್‌ಮೆಂಟ್ ಸಿಸ್ಟಮ್‌ & ಇನ್ಸ್ಟ್ರುಮೆಂಟ್ ಕ್ಲಸ್ಟರ್), ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 55ಕ್ಕೂ ಹೆಚ್ಚು ಕನೆಕ್ಟ್ದ್ ಕಾರ್ ಟೆಕ್ ಮತ್ತು ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ತನ್ನದಾಗಿಕೊಂಡಿದೆ.

ನೂತನ ಎಂಜಿ ಕಾಮೆಟ್ ಇವಿ ಪುಟ್ಟ ಕಾರಾಗಿದ್ದರೂ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಡುಯಲ್ ಫ್ರಂಟ್ ಏರ್‌ಬ್ಯಾಗ್‌, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸರ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಡಿಸ್ಕ್ ಬ್ರೇಕ್ಸ್, ಹೋಲ್ಡ್ ಅಸಿಸ್ಟ್‌ ಅನ್ನು ಪಡೆದಿದೆ. ಈ ಕಾರಿಗೆ ಟಾಟಾ ಟಿಯಾಗೊ ಇವಿ (Tata Tiago EV) ಮತ್ತು ಸಿಟ್ರಸ್ ಇಸಿ3 (Citroen eC3) ಮಾದರಿಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, May 17, 2024, 13:59 [IST]
English summary
Actress meenakshi anoop brought brand new mg comet ev and shares pictures
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+