7-ಸೀಟರ್.. ಭೂಲೋಕದ ಅರಮನೆಯಂತಿರುವ ಎಂಜಿ ಎಂ9 ಪ್ರೆಸಿಡೆನ್ಶಿಯಲ್ ಲಿಮೋಸಿನ್ ಎಂಪಿವಿ ರಿವ್ಯೂ: ಹೇಗಿದೆ ಗೋತ್ತಾ?
ಭಾರತದ ಕಾರು ಮಾರುಕಟ್ಟೆಯಲ್ಲಿ ಈಚೆಗೆ ಎಂಜಿ ಎಂ9 ಪ್ರೆಸಿಡೆನ್ಶಿಯಲ್ ಲಿಮೋಸಿನ್ (MG M9 Presidential Limousine) ಪ್ರೀಮಿಯಂ ಎಲೆಕ್ಟ್ರಿಕ್ ಎಂಪಿವಿಯನ್ನು ಅನಾವರಣಗೊಳಿಸಲಾಗಿದೆ. ಇದು ಬೃಹತ್ ಗಾತ್ರದ ಕಾರಾಗಿದ್ದು, ಐಷಾರಾಮಿ ವೈಶಿಷ್ಟ್ಯಗಳು ಹಾಗೂ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ. ಜೊತೆಗೆ ಅತಿ ಉದ್ದದ ಎಂಪಿವಿ ಎಂಬ ಹಿರಿಮೆಗೂ ಪಾತ್ರವಾಗಿದೆ. ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ಈ ಕಾರಿನ ಟೆಸ್ಟ್ ಡ್ರೈವ್ ನಡೆಸುವ ಅವಕಾಶವು ಸಹ ಲಭ್ಯವಾಗಿತು. ಬನ್ನಿ, ನೂತನ 'ಎಂಜಿ ಎಂ9 ಪ್ರೆಸಿಡೆನ್ಶಿಯಲ್ ಲಿಮೋಸಿನ್' ಕಾರು ಹೇಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ವಿನ್ಯಾಸ & ವೈಶಿಷ್ಟ್ಯಗಳು:
ನೂತನ ಎಂ9 ಪ್ರೆಸಿಡೆನ್ಶಿಯಲ್ ಲಿಮೋಸಿನ್ ಎಂಪಿವಿ ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಅದರಲ್ಲೂ ಮುಂಭಾಗ (ಫ್ರಂಟ್) ಆಕರ್ಷಕವಾದ ಎಲ್ಇಡಿ ಹೆಡ್‌ಲೈಟ್‌ಗಳು, ಎಂಜಿ ಬ್ಯಾಡ್ಜ್, ಪಾರ್ಕಿಂಗ್ ಕ್ಯಾಮೆರಾ ಹಾಗೂ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೂಟ್‌ಗಾಗಿ ರಾಡಾರ್ ಎಕ್ಯುಪ್ಮೆಂಟ್ ಮತ್ತು ದೊಡ್ಡದಾಗಿರುವ ಗ್ರಿಲ್‌ನ್ನು ಒಳಗೊಂಡಿದೆ.

ಈ ಕಾರು ಹಿಂಭಾಗವು ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ತುಂಬಾ ಚೆನ್ನಾಗಿರುವ ಟೈಲ್‌ಗೇಟ್ ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಸ್ಲೈಡಿಂಗ್ ಡೋರ್‌ಗಳು, 19 - ಇಂಚಿರುವ ಡುಯಲ್ ಟೋನ್ ಅಲಾಯ್ ವೀಲ್‌ಗಳು, 235/55 ಆರ್19 ಅಳತೆಯ ಟೈರ್‌ಗಳನ್ನು ಪಡೆದಿದೆ.
ಎಂಜಿ ಎಂ9 ಪ್ರೆಸಿಡೆನ್ಶಿಯಲ್ ಲಿಮೋಸಿನ್ ಎಲೆಕ್ಟ್ರಿಕ್ ಎಂಪಿವಿ, 7 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣ ಮಾಡಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 465 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಈ ಕಾರಿನ ಒಳಭಾಗದ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದ್ದು, ಎಂತಹವರನ್ನು ಬೇಕಾದರೂ ಈ ಕಾರಿನಲ್ಲಿ ಪ್ರಯಾಣಿಸುವಂತೆ ಪ್ರೇರೇಪಿಸುತ್ತದೆ. ಮೊಲದ ಸಾಲಿನಲ್ಲಿರುವ ಡ್ರೈವರ್ & ಫ್ರಂಟ್ ಸೀಟ್ ಪ್ಯಾಸೆಂಜರ್‌ಗಾಗಿ 8-ವೇ ಎಲೆಕ್ಟ್ರಾನಿಕಲಿ ಅಡ್ಜೆಸ್ಟೇಬಲ್ ಸೀಟ್‌ಗಳನ್ನು ಪಡೆದಿದೆ. 12.3-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ.
ಇದರೊಂದಿಗೆ ಹಿಂಭಾಗದ ಎರಡನೇ ಸಾಲಿರುವ 2 ಕ್ಯಾಪ್ಟನ್ ಸೀಟ್‌ಗಳು 16-ವೇ ಎಲೆಕ್ಟ್ರಾನಿಕಲಿ ಅಡ್ಜೆಸ್ಟೇಬಲ್ ಆಗಿವೆ. ಲೆಗ್ ರೆಸ್ಟ್‌ಗಳನ್ನು ಹೊಂದಿವೆ. ಹಾಗೆಯೇ ಪ್ರತಿ ಸೀಟ್ 5.2-ಇಂಚಿರುವ ಟಚ್ ಕಂಟ್ರೋಲ್ ಪ್ಯಾನಲ್, ಕಪ್ ಹೋಲ್ಡರ್‌ಗಳು, ಯುಎಸ್‌ಬಿ ಟೈಪ್-ಎ & ಟೈಪ್-ಸಿ ಚಾರ್ಜಿಂಗ್ ಆಯ್ಕೆಯನ್ನು ಪಡೆದಿದೆ. ಡುಯಲ್ - ಝೋನ್ ಕ್ಲೇಮೇಟ್ ಕಂಟ್ರೋಲ್, ಸನ್‌ರೂಫ್, ಪ್ರೀಮಿಯಂ ಜೆಬಿಎಲ್ ಸೌಂಡ್ ಸಿಸ್ಟಮ್ ಮತ್ತು 64 ಕಲರ್ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮೂರನೇ ಸಾಲಿನಲ್ಲಿರುವ ಸೀಟ್‌ಗಳಲ್ಲಿ ಇಬ್ಬರು ಪ್ಯಾಸೆಂಜರ್‌ಗಳಿಗಾಗಿ ಅಡ್ಜೆಸ್ಟೇಬಲ್ ಹೆಡ್‌ರೆಸ್ಟ್‌ಗಳನ್ನು ನೀಡಲಾಗಿದೆ. ಜೊತೆಗೆ ಸ್ಟೋರೇಜ್ ಹಾಗೂ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒದಗಿಸಲಾಗಿದ್ದು, ಅದರ ಹೊರತಾಗಿ ರೇರ್ ಕ್ವಾರ್ಟರ್ ವಿಂಡೋಗಳಿಗೆ ಸನ್‌ಶೇಡ್‌ಗಳು ಲಭ್ಯವಿಲ್ಲ. ಇದೇ ಮೂರನೇ ಸಾಲಿನ ಸೀಟ್‌ಗಳನ್ನು ಮಡಚಿದರೆ ಬೂಟ್ ಸ್ಪೇಸ್‌ನ್ನು 1,700 ಲೀಟರ್‌ಗೆ ವಿಸ್ತರಿಸಬಹುದು.
ಕಾರ್ಯಕ್ಷಮತೆ:
ಹೊಸ ಎಂಜಿ ಎಂ9 ಪ್ರೆಸಿಡೆನ್ಶಿಯಲ್ ಲಿಮೋಸಿನ್ ಎಂಪಿವಿ ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. 90 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 245 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಉತ್ಪಾದಿಸುತ್ತದೆ. ಆದರೂ ರೇಂಜ್ (ಮೈಲೇಜ್) ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಸಂಪೂರ್ಣ ಚಾರ್ಜ್‌ನಲ್ಲಿ 450 ರಿಂದ 500 ಕಿಲೋಮೀಟರ್ ಕ್ರಮಿಸಬಹುದು ಎಂದು ಅಂದಾಜಿಸಲಾಗಿದೆ.

ಚಾಲನಾ ಅನುಭವ:
ನಮ್ಮ ತಂಡಕ್ಕೆ ಟೆಸ್ಟ್ ಡ್ರೈವ್ ಮಾಡುವಾಗ ಈ ಕಾರು ಅದ್ಭುತವಾದ ಚಾಲನಾ ಅನುಭವವನ್ನು ನೀಡಿತು. ಇದರಲ್ಲಿ ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಿದೆವು. ಇದು ನಾರ್ಮಲ್, ಇಕೋ & ಸ್ಪೋರ್ಟ್ಸ್ ಎಂಬ ಡ್ರೈವಿಂಗ್ ಮೋಡಗಳನ್ನು ಹೊಂದಿದೆ. ಸ್ಟೀರಿಂಗ್ ವೀಲ್ ಕೂಡ ತುಂಬಾ ಉತ್ತಮವಾಗಿದೆ.
ನೂತನ ಎಂ9 ಪ್ರೆಸಿಡೆನ್ಶಿಯಲ್ ಲಿಮೋಸಿನ್ ಎಲೆಕ್ಟ್ರಿಕ್ ಎಂಪಿವಿ ಎಂತಹ ರಸ್ತೆಗಳಿಗೂ ಬೇಕಾದರೂ ಸುಲಭವಾಗಿ ಹೊಂದಿಕೊಳ್ಳುತ್ತದೆ. ಅದರಲ್ಲೂ ಹೆದ್ದಾರಿಗೆ ಹೆಚ್ಚು ಸೂಕ್ತವಾಗಿದೆ. ಇದರ ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್‌ಗಳು ಬಹಳ ಚೆನ್ನಾಗಿ ಕೆಲಸ ಮಾಡಿದವು. ಪ್ರಯಾಣಿಕರ ಸುರಕ್ಷತೆಗೂ ಹೆಚ್ಚು ಒತ್ತು ನೀಡಲಾಗಿದ್ದು, 7 ಏರ್‌ಬ್ಯಾಗ್‌ನ್ನು ಹೊಂದಿದೆ.
ಒಟ್ಟಾರೆ ಅಭಿಪ್ರಾಯ:
ಈ ಕಾರು ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಅತ್ಯಾಧುನಿಕ ವಿನ್ಯಾಸವನ್ನು ಒಳಗೊಂಡಿದ್ದು, ಅತಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ರೂ.75 ಲಕ್ಷದಿಂದ ರೂ.80 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಇದು ಮಾರಾಟಕ್ಕೆ ಬಂದ ಮೇಲೆ ಖರೀದಿದಾರರಿಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ.


Click it and Unblock the Notifications








