Nissan Magnite EZ-Shift Review: ಗೇಮ್ ಚೇಂಜರ್ ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ವಿಮರ್ಶೆ, ಹೇಗಿದೆ ಗೊತ್ತಾ?
ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಕಾಂಪ್ಯಾಕ್ಟ್ ಎಸ್‌ಯುವಿಯನ್ನು 2020ರ ಅಕ್ಟೋಬರ್ ತಿಂಗಳಲ್ಲಿ ಅನಾವರಣಗೊಳಿಸಿತ್ತು. ಆಗ ಇಡೀ ಜಗತ್ತು ಇನ್ನೂ ಕೊರೋನಾ ಸಾಂಕ್ರಾಮಿಕದ ಕರಿನೆರಳಿನಲ್ಲಿತ್ತು. ಭಾರತಕ್ಕೆ ಮ್ಯಾಗ್ನೈಟ್ ಕಾರಿನ ಆಗಮನವು ಜಪಾನ್ ಕಂಪನಿ ನಿಸ್ಸಾನ್ಗೆ ಉತ್ತಮ ಹೆಸರು ಹಾಗೂ ಕೀರ್ತಿಯನ್ನು ತಂದುಕೊಟ್ಟಿತ್ತು.
ಮ್ಯಾಗ್ನೈಟ್ ಎರಡು ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಯಲ್ಲಿ ದೇಶೀಯ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಹಾಗೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಟರ್ಬೊ ಎಂಜಿನ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ 5 ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

ಮ್ಯಾಗ್ನೈಟ್ ಎಸ್‌ಯುವಿ ಬಿಡುಗಡೆಯಾಗಿ ಮೂರು ವರ್ಷಗಳು ಕಳೆದಿದ್ದು, ನಿಸ್ಸಾನ್ ಈ ಬಾರಿ ವಿಶ್ವಕಪ್ ಪ್ರಾಯೋಜಿಕತ್ವ ವಹಿಸಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ಕಂಪನಿ ಮುಂದಾಗಿದ್ದು, ಮ್ಯಾಗ್ನೈಟ್ ನವೀನ ರೂಪಾಂತರಗಳನ್ನು ಬಿಡುಗಡೆಗೊಳಿಸುತ್ತಿದೆ. ನಿಸ್ಸಾನ್ - ರೆನಾಲ್ಟ್ ಕಂಪನಿಯೊಂದಿಗೆ ಪಾಲುದಾರಿಗೆ ಹೊಂದಿದ್ದು, ರೆನಾಲ್ಟ್ ಇಸಿ-ಆರ್ ಕಾರಿನಿಂದ 5-ಸ್ವೀಡ್ ಆಟೋಮೇಟೆಡ್ ಮ್ಯಾನುವಲ್ (ಎಎಂಟಿ) ಗೇರ್‌ಬಾಕ್ಸ್ ಪಡೆಯಲು ತಿರ್ಮಾನಿಸಿತು.
ಅದರಂತೆ ನಿಸ್ಸಾನ್ ಕಂಪನಿಯು ತನ್ನ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಝಡ್-ಶಿಫ್ಟ್ (EZ-Shift) ರೂಪಾಂತರವನ್ನು ಎಎಂಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಸಿದ್ದಪಡಿಸಿ, ಪರಿಚಯಿಸಿದೆ. ನಮ್ಮ ತಂಡಕ್ಕೆ ಚೆನ್ನೈನಲ್ಲಿ ಈ ಕಾರಿನ ಟೆಸ್ಟ್ ಡ್ರೈವ್ ಮಾಡಲು ಅವಕಾಶ ದೊರೆಯಿತು. ಬನ್ನಿ, ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಕಾರಿನ ಕಾರ್ಯಕ್ಷಮತೆ, ವೈಶಿಷ್ಟ್ಯ ಹಾಗೂ ವಿನ್ಯಾಸ ಹೇಗಿದೆ ಎಂಬುದನ್ನು ತಿಳಿಯೋಣ.

ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಎಂಜಿನ್, ಗೇರ್‌ಬಾಕ್ಸ್: ಎಎಂಟಿ ಗೇರ್‌ಬಾಕ್ಸ್ ಪಡೆದುಕೊಂಡಿರುವುದರಿಂದ ಮ್ಯಾಗ್ನೈಟ್ ಈ ರೂಪಾಂತರಕ್ಕೆ 'ಇಝಡ್-ಶಿಫ್ಟ್' ಎಂಬ ಹೆಸರು ಬಂದಿದೆ. ಹಿಂಭಾಗದಲ್ಲಿ ಇಝಡ್-ಶಿಫ್ಟ್ (EZ-Shift) ಬ್ಯಾಡ್ಜ್ ಹೊಂದಿದೆ. ಸಿವಿಟಿ (CVT) ಗೇರ್‌ಬಾಕ್ಸ್ ಆಯ್ಕೆಯೊಂದಿರುವ ರೂಪಾಂತರಕ್ಕೆ ಹೋಲಿಸಿದರೆ, ಸ್ವಲ್ಪ ಭಿನ್ನವಾದ ಶಿಫ್ಟರ್ ಹೊಂದಿದ್ದು, ಹೊಸ ಲಿವರ್, ಅದರ ಶೈನಿ ಕ್ರೋಮ್ ಸೆಂಟರ್ ನಲ್ಲಿ ವಿಭಿನ್ನ ಮೋಡ್‌ಗಳನ್ನು ಪಡೆದಿದೆ.
ಹೊಸ ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ರೂಪಾಂತರದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆಶ್ಚರ್ಯ ಸಂಗತಿಯೊಂದು ಇಲ್ಲಿದೆ. ಇದು, 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಜೊತೆಯಲ್ಲಿ ಎಎಂಟಿ ಗೇರ್‌ಬಾಕ್ಸ್ ಹೊಂದಿರುವ ಏಕೈಕ ಆವೃತ್ತಿಯಾಗಿದೆ. ಟರ್ಬೋಚಾರ್ಜ್ಡ್ ಎಂಜಿನ್ ನಿಸ್ಸಾನ್ ಮ್ಯಾಗ್ನೈಟ್ ಆವೃತ್ತಿಯು ಇನ್ನೂ ಸಿವಿಟಿ (CVT) ಗೇರ್‌ಬಾಕ್ಸ್ ಆಯ್ಕೆಯನ್ನು ಹಾಗೆಯೇ ಉಳಿಸಿಕೊಂಡಿದೆ.

ಹೊಸ ಗೇರ್‌ಬಾಕ್ಸ್ ಹೊಂದಿರುವ ಈ ಕಾರಿನ 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್, 71 bhp ಗರಿಷ್ಠ ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಫ್ರಂಟ್ ವೀಲ್ ಗಳಿಗೆ ಪವರ್ ವರ್ಗಾಯಿಸುತ್ತದೆ. ಈ ಮೂಲಕ ಇದರ ಎಂಜಿನ್ ಹೆಚ್ಚು ಶಕ್ತಿಯುತವಾಗಿದೆ ಎಂದು ಹೇಳಬಹುದು.
ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಎಸ್‌ಯುವಿ ಹೊಂದಿರುವ ಗೇರ್‌ಬಾಕ್ಸ್ ಅತ್ಯಂತ ವಿಶ್ವಾಸಾರ್ಹವಾಗಿದೆ ಎಂಬುದು ನಮಗೆ ಈ ಡ್ರೈವ್ ನಲ್ಲಿ ಗೊತ್ತಾಯಿತು. ಟ್ರಾಫಿಕ್‌ನಲ್ಲಿ ಕಾರನ್ನು ನಿಲ್ಲಿಸಿ, ಮತ್ತೆ ಚಾಲು ಮಾಡುವಾಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತು. ನಿಮಗೆ ಈ ಎಸ್‌ಯುವಿ ಉತ್ತಮ ಆಯ್ಕೆಯಾಗಬಹುದು. ಮ್ಯಾಗ್ನೈಟ್ ಇಝಡ್-ಶಿಫ್ಟ್ ರೂಪಾಂತರದ ಮ್ಯಾನುವಲ್ ಮೋಡ್‌ನಲ್ಲಿ ಅಪ್‌ಶಿಫ್ಟ್ ಹೆಚ್ಚು ಮಂದಗತಿಯಲ್ಲಿ (laggy) ಇದೆ.

ಈ ಕಾರಿನ ನಾರ್ಮಲ್ ಮೋಡ್‌ನಲ್ಲಿ ಡೌನ್‌ಶಿಫ್ಟಿಂಗ್ ಗೇರ್‌ಬಾಕ್ಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಪೆಡಲ್‌ಗಳು ಕೂಡ ಅತ್ಯುತ್ತಮವಾಗಿವೆ. ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಎಸ್‌ಯುವಿಯ ಎನ್‌ವಿಹೆಚ್ (ಶಬ್ದ) ಕಡಿಮೆಗೊಳಿಸಲು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದೆ. ಆದರೆ, ಡ್ರೈವ್ ಮಾಡುವಾಗ ಕ್ಯಾಬಿನ್‌ನೊಳಗೆ ಶಬ್ದ ಕಡಿಮೆಯಾಗಿರುವ ಬಗ್ಗೆ ಅಷ್ಟು ವ್ಯತ್ಯಾಸವನ್ನು ಗಮನಿಸಲಾಗಲಿಲ್ಲ.
ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಡ್ರೈವಿಂಗ್ ಇಂಪ್ರೆಷನ್: ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ರಸ್ತೆಯಲ್ಲಿ ಚಾಲನೆ ಮಾಡುವಾಗ ಅತ್ಯುತ್ತಮ ಅನುಭವ ನೀಡಿತು. ನಗರ ಪ್ರದೇಶಕ್ಕೆ ಈ ಕಾರು, ಬಹುತೇಕ ಹೇಳಿ ಮಾಡಿಸಿದ ರೀತಿಯಲ್ಲಿದ್ದು, ಸ್ಟೀರಿಂಗ್ ವೀಲ್ ಚಾಲಕ ಸ್ನೇಹಿಯಾಗಿದ್ದು, ಹೆದ್ದಾರಿಯಲ್ಲಿ ಯಾವುದೇ ರೀತಿಯಲ್ಲಿ ಗಡಿಬಿಡಿಯಿಲ್ಲದೆ ಲೇನ್‌ಗಳನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಈ ಕಾರು ವೇಗದಲ್ಲಿ ಇದ್ದಾಗ ಸ್ಟೀರಿಂಗ್ ವೀಲ್ ಹೆಚ್ಚು ಭಾರವಾಗಿರುವಂತೆ ಭಾಸವಾಗುತ್ತದೆ.

ಹಿಂದಿನ ಮಾದರಿಯಂತೆಯೇ ಈ ಮ್ಯಾಗ್ನೈಟ್ ರೂಪಾಂತರದಲ್ಲಿಯೂ ಸಸ್ಪೆನ್ಷನ್ ಸೆಟಪ್ ಉತ್ತಮವಾಗಿದೆ. ಕಾರು ಹೆಚ್ಚಿನ ವೇಗದಲ್ಲಿ ಇದ್ದಾಗ, ಉಬ್ಬು - ತಗ್ಗು, ಹಳ್ಳ - ದಿಣ್ಣೆಯಿಂದ ಕೂಡಿದ ರಸ್ತೆಯಲ್ಲಿ ಸುಲಭವಾಗಿ ಚಲಾಯಿಸುತ್ತದೆ. ತಿರುವುಗಳಲ್ಲಿಯೂ ಉತ್ತಮವಾಗಿ ಡ್ರೈವ್ ಮಾಡಬಹುದು. ಬಾಡಿ ರೋಲ್ ಸಮಸ್ಯೆಯೂ ಅಷ್ಟಾಗಿ ಕಾಡುವುದಿಲ್ಲ. ಬ್ರೇಕ್ ಕೂಡ ಅತ್ಯುತ್ತಮವಾಗಿವೆ. ಇವೆಲ್ಲ ಕಾರಣಗಳಿಂದ ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಉತ್ತಮವಾಗಿದೆ.
ಇಝಡ್-ಶಿಫ್ಟ್ ರೂಪಾಂತರ, ಇತರೆ ನಿಸ್ಸಾನ್ ಮ್ಯಾಗ್ನೈಟ್ ರೂಪಾಂತರಗಳಿಗೆ ಹೋಲಿಕೆಯಾಗುವ ವಿನ್ಯಾಸವನ್ನು ಹೊಂದಿದೆ. ಪ್ರಮುಖವಾಗಿ ಆಕರ್ಷಕ ಎಲ್ಇಡಿ ಹೆಡ್‌ಲೈಟ್, ಎಲ್ - ಆಕಾರದ ಡಿಆರ್‌ಎಲ್, ಅತ್ಯಾಧುನಿಕ ಗ್ರಿಲ್, ಎಲ್ಇಡಿ ಫಾಗ್ ಲೈಟ್, ನೂತನ ಅಲಾಯ್ ವೀಲ್ಸ್ ಹೊಂದಿದೆ. ಈ ಮೂಲಕ ಈಗಿನ ಯುವ ಗಾಹಕರನ್ನು ಸೆಳೆಯುವ ಡಿಸೈನ್ ಅನ್ನು ಈ ಕಾರು ಒಳಗೊಂಡಿದೆ.

ಹೊಸ ಶಿಫ್ಟ್ ಲಿವರ್ ಹೊರತುಪಡಿಸಿ, ಈ ಕಾರಿನ ಕ್ಯಾಬಿನ್ ಒಳಭಾಗ ಅಷ್ಟಾಗಿ ಯಾವುದೇ ಬದಲಾವಣೆಗಳನ್ನೂ ಪಡೆದಿಲ್ಲ. ಆಸನಗಳು ಮೆತ್ತಗಿದ್ದು, ಎಲ್ಲ ತರಹದ ಎತ್ತರವನ್ನು ಹೊಂದುರುವವರೂ ಕೂಡ ಹಿಂಭಾದಿಯ ಆಸನದಲ್ಲಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಇದರೊಟ್ಟಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಮ್ಯಾಗ್ನೈಟ್ ಮೊದಲ ಬಾರಿಗೆ (2020) ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ನಲ್ಲಿ ಆಟೋಮೆಟಿಕ್ ಗೇರ್‌ಬಾಕ್ಸ್‌ನ ಕೊರತೆಯಿತ್ತು. ಇಝಡ್-ಶಿಫ್ಟ್ ರೂಪಾಂತರ ಲಾಂಚ್ ನಿಂದ ಅದು ನೀಗಿದೆ. ಮುಂಬರುವ ದಿನಗಳಲ್ಲಿ ದಸರಾ ಹಬ್ಬ ಬರುವುದರಿಂದ ಈ ಕಾರಿಗೆ ಹೆಚ್ಚಿನ ಬೇಡಿಕೆ ಬರಬಹುದು. ಇದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








