ರಾಪಿಡ್ vs ವೆಂಟೊ: ದರ ಮತ್ತು ಮೈಲೇಜ್ ಫೈಟ್
ಮೈಲೇಜ್: ಇಂಧನ ದಕ್ಷತೆಯ ವಿಷಯದಲ್ಲಿ ಸ್ಕೋಡಾ ರಾಪಿಡ್ ಕಾರು ಹೆಚ್ಚು ಇಷ್ಟವಾಗುತ್ತದೆ. ರಾಪಿಡ್ ಪೆಟ್ರೋಲ್ ಆವೃತ್ತಿ ಪ್ರತಿಲೀಟರ್ ಇಂಧನಕ್ಕೆ ಸುಮಾರು 15.4 ಕಿ.ಮೀ. ಮತ್ತು ಡೀಸೆಲ್ ಆವೃತ್ತಿ 20.5 ಕಿ.ಮೀ. ಮೈಲೇಜ್ ನೀಡುತ್ತದೆ.
ವೆಂಟೊ ಮೈಲೇಜ್ ರಾಪಿಡ್ ಗಿಂತ ಕಡಿಮೆಯಿದೆ. ವೆಂಟೊ ಪೆಟ್ರೋಲ್ ಆವೃತ್ತಿ ಪ್ರತಿಲೀಟರ್ ಗೆ ಸಿಟಿ ರಸ್ತೆಯಲ್ಲಿ 11ರಿಂದ 12 ಕಿ.ಮೀ. ಮತ್ತು ಹೆದ್ದಾರಿಯಲ್ಲಿ ಸುಮಾರು 15.16 ಕಿ.ಮೀ. ಮೈಲೇಜ್ ನೀಡುತ್ತದೆ. ಡೀಸೆಲ್ ಆವೃತ್ತಿ ಸಿಟಿ ರಸ್ತೆಯಲ್ಲಿ 15-16 ಕಿ.ಮೀ. ಮತ್ತು ಹೆದ್ದಾರಿ ಸವಾರಿಯಲ್ಲಿ 19-20 ಕಿ.ಮೀ. ಮೈಲೇಜ್ ನೀಡುತ್ತದೆ.
ದರ: ಸ್ಕೋಡಾ ರಾಪಿಡ್ ಮತ್ತು ವೆಂಟೊ ದರದಲ್ಲಿ ಕೊಂಚ ವ್ಯತ್ಯಾಸವಿದೆ. ರಾಪಿಡ್ ದರ ಸುಮಾರು 7ರಿಂದ 9.5 ಲಕ್ಷ ರು. ಆಸುಪಾಸಿನಲ್ಲಿದೆ. ವೆಂಟೊ ದರ 8ರಿಂದ 10.5 ಲಕ್ಷ ರು. ಆಸುಪಾಸಿನಲ್ಲಿದೆ. ರಾಪಿಡ್ ಎಂಟ್ರಿ ಲೆವೆಲ್ ಕಾರು ಕಡಿಮೆಗೆ ದೊರಕುತ್ತದೆ. ಆದರೆ ಹೈಎಂಡ್ ಆವೃತ್ತಿಗಳಲ್ಲಿ ರಾಪಿಡ್ ಮತ್ತು ವೆಂಟೊ ನಡುವೆ ಮಹತ್ವದ ವ್ಯತ್ಯಾಸವಿಲ್ಲ. ಆದರೂ ವೆಂಟೊ ಕೊಂಚ ದುಬಾರಿ ಎನಿಸಿದರೂ ಎನಿಸಬಹುದು.
ಸ್ಕೋಡಾ ರಾಪಿಡ್ ಸಂಪೂರ್ಣ ವಿಮರ್ಶೆ ಓದಿ


Click it and Unblock the Notifications









