ರಾಪಿಡ್ vs ವೆಂಟೊ: ಯಾವುದು ಬೆಸ್ಟ್ ಕಾರು?

ಫೋಕ್ಸ್ ವ್ಯಾಗನ್ ವೆಂಟೊ ಕೂಡ 1.6 ಲೀಟರಿನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ವೆಂಟೊ ಪೆಟ್ರೋಲ್ ಎಂಜಿನ್ ರಾಪಿಡ್ ಕಾರಿನಂತೆ 105 ಪಿಎಸ್ ಮತ್ತು ಗರಿಷ್ಠ 153 ಟಾರ್ಕ್ ಪವರ್ ನೀಡುತ್ತದೆ. ಕಾರ್ಯಕ್ಷಮತೆಯಲ್ಲಿ ರಾಪಿಡ್ ಮತ್ತು ವೆಂಟೊ ನಡುವೆ ಯಾವುದೇ ಭಿನ್ನತೆಯಿಲ್ಲ.
ಫೀಚರುಗಳು: ವೆಂಟೊ ಮತ್ತು ರಾಪಿಡ್ ಕಾರುಗಳು ಒಂದೇ ರೀತಿಯ ಫೀಚರುಗಳನ್ನು ಹೊಂದಿದೆ. ರಾಪಿಡ್ ಕಾರಿನಲ್ಲಿ ಪವರ್ ವಿಂಡೋಸ್, ಪವರ್ ಸ್ಟೇರಿಂಗ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಇಬಿಡಿ, ಡ್ಯೂಯಲ್ ಏರ್ ಬ್ಯಾಗ್, ಕೀಲೆಸ್ ಎಂಟ್ರಿ, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟಿಯರಿಂಗ್ ವೀಲ್, ಹಿಂಭಾಗದಲ್ಲಿ ಡಿಫಾಗರ್, ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಎಂಜಿನ್ ಇಮೊಬಿಲೈಝರ್, ಮುಂಭಾಗದಲ್ಲಿ ಆರ್ಮ್ ರೆಸ್ಟ್ ಮುಂತಾದ ಫೀಚರುಗಳಿವೆ.
ಫೋಕ್ಸ್ ವ್ಯಾಗನ್ ವೆಂಟೊ ಕಾರಿನಲ್ಲಿ ಏರ್ ಕಂಡಿಷನರ್, ಪವರ್ ಸ್ಟಿಯರಿಂಗ್, ಪವರ್ ವಿಂಡೋಸ್, ಅಲಾಯ್ ವೀಲ್ಹ್, ಸೆಂಟ್ರಲ್ ಲಾಕಿಂಗ್, ರಿಮೋಟ್ ಟ್ರಂಕ್ ಓಪನರ್, ರಿಮೋಟ್ ಫ್ಯೂಯಲ್ ಎಲ್ ಐಡಿ ಓಪನರ್, ಪವರ್ ಡೋರ್ ಲಾಕ್, ಫ್ರಂಟ್ ಕಪ್ ಹೋಲ್ಡರ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್ ಲ್ಯಾಂಪ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಿಯರ್ ವ್ಯೂಮಿರರ್ ಮುಂತಾದ ಫೀಚರುಗಳಿವೆ.
ದರ ಮತ್ತು ಮೈಲೇಜ್ ನೋಡದೇ ಯಾವುದು ಬೆಸ್ಟ್ ಎನ್ನಲು ಕಷ್ಟ. ದರ ಮತ್ತು ಮೈಲೇಜ್ ಮಾಹಿತಿ ಮುಂದಿನ ಪುಟದಲ್ಲಿದೆ.


Click it and Unblock the Notifications








