ಹೊಸ ಟಾಟಾ ಆಲ್ಟ್ರೋಜ್ ರೇಸರ್ ರಿವ್ಯೂ: ಅದ್ಬುತ ಪರ್ಫಾಮೆನ್ಸ, ಸನ್‌ರೂಫ್, 6 ಏರ್‌ಬ್ಯಾಗ್‌ಗಳು
2018 ರಲ್ಲಿ, ಟಾಟಾ ಮೋಟಾರ್ಸ್ ಟಿಯಾಗೊ ಮತ್ತು ಟಿಗೊರ್‌ನ JTP ಆವೃತ್ತಿಗಳನ್ನು ಬಹಿರಂಗಪಡಿಸಿದಾಗ ತನ್ನ ಕಾರುಗಳ ರೇಸರ್ ಆವೃತ್ತಿಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ಸುಳಿವನ್ನು ನೀಡಿತ್ತು. ಆದರೆ ಎರಡು ವರ್ಷಗಳ ನಂತರ ಕೊರೋನಾದಿಂದಾಗಿ ಈ JTP ರೇಸರ್ ಆವೃತ್ತಿಗಳನ್ನು ಪರಿಚಯಿಸಲು ಹೆಣಗಾಡಬೇಕಾಯಿತು. ಕೊನೆಗೂ ಎಲ್ಲಾ ಅಡೆತಡೆಗಳ ನಡುವೆ 2023 ರಲ್ಲಿ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಟಾಟಾ ಕಾರುಗಳ ಗೋ-ಫಾಸ್ಟರ್ ಆವೃತ್ತಿಗಳು ಮತ್ತೆ ಮುನ್ನಲೆಗೆ ಬಂದು, ಆಲ್ಟ್ರೋಜ್ ರೇಸರ್ ಅನ್ನು ಮೊದಲ ಬಾರಿಗೆ ಜಗತ್ತಿಗೆ ಬಹಿರಂಗಪಡಿಸಲಾಯಿತು.
ಕೊನೆಗೂ ಹೊಸ ಟಾಟಾ ಆಲ್ಟ್ರೋಜ್ ರೇಸರ್ ರಸ್ತೆಗಿಳಿದಿದೆ. ಭಾರತದ ಮೊದಲ F1 ಡ್ರೈವರ್ ನರೇನ್ ಕಾರ್ತಿಕೇಯನ್ ಅವರ ಸಹಾಯದಿಂದ ಅಭಿವೃದ್ಧಿಪಡಿಸಲಾದ ಟಾಟಾ ಆಲ್ಟ್ರೋಜ್ ರೇಸರ್' ಪ್ರೀಮಿಯಂ ಹ್ಯಾಚ್‌ಬ್ಯಾಕ್ ಹಾಗೂ ಪರ್ಫಾಮೆನ್ಸ್ ಆವೃತ್ತಿಯಾಗಿದೆ. ಈ ಹೊಸ ಹ್ಯಾಚ್‌ಬ್ಯಾಕ್ ನಿಜವಾಗಿಯೂ ಎಷ್ಟು ಪರ್ಫಾಮೆನ್ಸ್ ಪ್ರೇರಿತ ಕಾರೆಂಬುದನ್ನು ತಿಳಿಯಲು ಕೊಯಮತ್ತೂರಿನ ಹೊಸ CoASTT ರೇಸ್ ಟ್ರ್ಯಾಕ್‌ನಲ್ಲಿ ನಾವು ಟಾಟಾ ಆಲ್ಟ್ರೋಜ್ ರೇಸರ್‌ನ ಓಡಿಸಿ ನೋಡಿದ್ದೇವೆ.

Tata Altroz ರೇಸರ್ ರಿವ್ಯೂ: 'ಟಾಟಾ ಆಲ್ಟ್ರೊಜ್ ರೇಸರ್' ನೋಡಲು ಥೇಟ್ ಸ್ಟ್ಯಾಂಡರ್ಡ್ ಆಲ್ಟ್ರೊಜ್ ಅನ್ನು ಹೋಲುತ್ತದೆ. ಆದರೆ ಮೇಲಿನ ವಿಭಾಗದಲ್ಲಿ ಬ್ಲಾಕ್ ಮತ್ತು ಕೆಳಗಿನ ವಿಭಾಗದಲ್ಲಿ ಡ್ಯುಯಲ್-ಟೋನ್ ನೋಟವನ್ನು ಅಳವಡಿಸಿಕೊಳ್ಳುವ ಜೊತೆಗೆ ಅಟಾಮಿಕ್ ಆರೆಂಜ್, ಪ್ಯೂರ್ ಗ್ರೇ ಮತ್ತು ಅವೆನ್ಯೂ ವೈಟ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಹೊರಹೊಮ್ಮಿದೆ.
ಹೊಸ ಟಾಟಾ ಆಲ್ಟ್ರೋಜ್ ರೇಸರ್‌ನ ಎಲ್ಲಾ ಬಣ್ಣ ಆಯ್ಕೆಗಳು ಅವಳಿ ಬಿಳಿ ಪಟ್ಟಿಗಳನ್ನು ಹೊಂದಿದ್ದು, ಈ ಪಟ್ಟಿಗಳು ಬಾನೆಟ್ ಮತ್ತು ಹ್ಯಾಚ್‌ಬ್ಯಾಕ್‌ನ ರೂಫ್ ಮೇಲೆ ಚಲಿಸುತ್ತವೆ. ಇತರ ಬಾಹ್ಯ ವಿನ್ಯಾಸದ ಮುಖ್ಯಾಂಶಗಳಲ್ಲಿ ಬ್ಲಾಕ್ ಗ್ರಿಲ್, ORVM ಗಳು, ಪಿಲ್ಲರ್‌ಗಳು ಮತ್ತು ಅಲಾಯ್ ವೀಲ್‌ಗಳು (16 ಇಂಚುಗಳು) ಸೇರಿವೆ.

ಹೊಸ ಹ್ಯಾಚ್‌ಬ್ಯಾಕ್ "ರೇಸರ್" ಬ್ಯಾಡ್ಜ್‌ಗಳನ್ನು ಮುಂಭಾಗದ ವೀಲ್ ಆರ್ಚ್‌ಗಳ ಮೇಲಿ ನೀಡಲಾಗಿದೆ. ಸನ್‌ರೂಫ್, ಬೂಟ್ ಲಿಡ್‌ನಲ್ಲಿ ಐ-ಟರ್ಬೊ+ ಬ್ಯಾಡ್ಜಿಂಗ್, ಹಿಂಭಾಗದ ಸ್ಪಾಯ್ಲರ್ ಮತ್ತು ಡ್ಯುಯಲ್-ಟಿಪ್ ಎಕ್ಸಾಸ್ಟ್ ಸೆಟಪ್ ಅನ್ನು ಒಳಗೊಂಡಿದೆ. ಒಟ್ಟಾರೆ ಕಾರಿಗೆ ಹೊರಾಂಗಣದಲ್ಲಿ ಸ್ಪೋರ್ಟಿ ಲುಕ್ ನೀಡುವ ಮೂಲಕ ಆಕರ್ಷಣೆಯನ್ನು ಹೆಚ್ಚಿಸಿದೆ.
Altroz ರೇಸರ್ ಕ್ಯಾಬಿನ್‌ನ ಒಳಗೆ ಸಾಮಾನ್ಯ ಹ್ಯಾಚ್‌ಬ್ಯಾಕ್‌ಗೆ ಹೋಲಿಸಿದರೆ ಬದಲಾವಣೆಗಳು ಬಹಳ ಸ್ಪಷ್ಟವಾಗಿ ಕಾಣುತ್ತವೆ. ರೇಸರ್ ಸಂಪೂರ್ಣ ಬ್ಲಾಕ್ ಇಂಟೀರಿಯರ್ ಹೊಂದಿದೆ, ಏರ್‌ವೆಂಟ್‌ಗಳ ಸುತ್ತಲೂ ಆರೆಂಜ್ ಹೈಲೈಟ್‌ಗಳಿಂದ ಡಿಸೈನ್ ಮಾಡಲಾಗಿದೆ. ಜೊತೆಗೆ ಆರೆಂಜ್ ಮತ್ತು ವೈಟ್ ಸ್ಟ್ರೈಪಿಂಗ್ ಮತ್ತು ಸೀಟ್‌ಗಳ ಮೇಲೆ ಕಾಂಟ್ರಾಸ್ಟ್ ಸ್ಟಿಚಿಂಗ್ ಸ್ಪೋರ್ಟಿ ಲುಕ್ ನೀಡಿವೆ.

ಸೀಟ್‌ಗಳ ಕುರಿತು ಹೇಳುವುದಾದರೆ, ರೇಸರ್ ಲೋಗೋವನ್ನು ಹೆಡ್‌ರೆಸ್ಟ್‌ಗಳ ಮೇಲೆ ಕೆತ್ತಲಾಗಿದೆ. ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳನ್ನು ನೀಡಲಾಗಿದೆ. ಹಾಗೆಯೇ ಸ್ಟೀರಿಂಗ್ ವೀಲ್ ಹಿಂದೆ ದೊಡ್ಡ ಬದಲಾವಣೆಯನ್ನು ಕಾಣಬಹುದಾಗಿದೆ. ಸಾಮಾನ್ಯ ಆಲ್ಟ್ರೊಜ್‌ನ ಸೆಮಿ-ಡಿಜಿಟಲ್ ಸೆಟಪ್‌ನಂತಲ್ಲದೇ 7-ಇಂಚಿನ ಸಂಪೂರ್ಣ ಡಿಜಿಟಲ್ ಡಿಸ್‌ಪ್ಲೇಗೆ ನೀಡಲಾಗಿದೆ. ಇದು ನಿಮಗೆ ಅಗತ್ಯವಿರುವ ಎಲ್ಲಾ ಡೇಟಾವನ್ನು ನಿಮ್ಮ ಮುಂದೆ ಇಡುತ್ತದೆ.
Altroz ರೇಸರ್‌ನಲ್ಲಿನ ಇತರ ವೈಶಿಷ್ಟ್ಯಗಳ ಅಪ್‌ಗ್ರೇಡ್‌ಗಳೆಂದರೆ ಆಂಬಿಯೆಂಟ್ ಲೈಟಿಂಗ್, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್, ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಗಾಳಿಯನ್ನು ಮಾಲಿನ್ಯದಿಂದ ಮುಕ್ತವಾಗಿಡುವ ಏರ್ ಪ್ಯೂರಿಫೈಯರ್ ಸಿಸ್ಟಮ್ ಮತ್ತು ವಾಯಿಸ್ ಕಮಾಂಡ್‌ಗಳ ಮೂಲಕ ಸನ್‌ರೂಫ್ ಅನ್ನು ಮುಚ್ಚಿ ತೆರೆಯಬಹುದು.

ಸುರಕ್ಷತೆಯ ಕುರಿತು ಹೇಳುವುದಾದ್ರೆ, Altroz ರೇಸರ್ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ಎಲ್ಲಾ ಸುರಕ್ಷತಾ ಗೇರ್‌ಗಳೊಂದಿಗೆ ತುರ್ತು ಅಥವಾ ಸ್ಥಗಿತದ ಸಂದರ್ಭದಲ್ಲಿ ಇ - ಕಾಲ್/ಬಿ - ಕಾಲ್ ಸಿಸ್ಟಮ್ ಜೊತೆಗೆ ಪ್ಯಾಕ್ ಮಾಡಲ್ಪಟ್ಟಿದೆ.
ಮೆಕ್ಯಾನಿಕಲ್ ಅಪ್‌ಗ್ರೇಡ್‌ಗಳು: ಮೆಕ್ಯಾನಿಕಲ್ ಅಪ್‌ಗ್ರೇಡ್‌ಗಳ ಬಗ್ಗೆ ಹೇಳುವುದಾದ್ರೆ, ಆಲ್ಟ್ರೊಜ್ ರೇಸರ್ ನಲ್ಲಿನ ಪ್ರಮುಖ ಬದಲಾವಣೆಗಳನ್ನು ಮೊದಲ ನೋಟದಲ್ಲಿಯೇ ಹೇಳಲಾಗುವುದಿಲ್ಲ. ಬಾನೆಟ್ ಅಡಿಯಲ್ಲಿ ನೆಕ್ಸಾನ್ ನಿಂದ ಎರವಲು ಪಡೆದ 1.2 - ಲೀಟರ್ ಟರ್ಬೋಚಾರ್ಜ್ಡ್ 3 - ಸಿಲಿಂಡರ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

Altroz ರೇಸರ್ ಎಂಜಿನ್ 5,500rpm ನಲ್ಲಿ 118.3bhp ಪವರ್ ಮತ್ತು 1,750 ಮತ್ತು 4,000rpm ನಡುವೆ 170Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು ಟಾಟಾ ಆಲ್ಟ್ರೊಜ್ ರೇಸರ್‌ನ ಮುಂಭಾಗದ ವೀಲ್‌ಗಳಿಗೆ ಪವರ್ ಕಳುಹಿಸುತ್ತದೆ. 11.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುತ್ತದೆ.
Altroz ರೇಸರ್‌ನಲ್ಲಿನ ಕ್ಲಚ್ ಹೊಸ ಹೈಡ್ರಾಲಿಕ್ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ, ಇದು ಗೇರ್‌ಶಿಫ್ಟ್ ಸಮಯದಲ್ಲಿ ನಿಯಂತ್ರಣ ಮತ್ತು ನಿಖರತೆಯನ್ನು ಹೆಚ್ಚಿಸುವಾಗ ಪ್ರಯತ್ನವನ್ನು ಕಡಿಮೆ ಮಾಡುತ್ತದೆ ಎಂದು ಟಾಟಾ ಹೇಳಿದೆ. ಸಸ್ಪೆನ್ಷನ್ ಸೆಟಪ್ ಮತ್ತು ಸ್ಟೀರಿಂಗ್ ಅನ್ನು ಸಹ ಟ್ವೀಕ್ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಡ್ರೈವಿಂಗ್ ಇಂಪ್ರೆಷನ್ಸ್: ಭಾರತದ ಮೊಟ್ಟಮೊದಲ F1 ಡ್ರೈವರ್‌ನ ಸಹಾಯದಿಂದ ಆಲ್ಟ್ರೋಜ್ ಅನ್ನು ರೇಸರ್ ರೂಪಕ್ಕೆ ಅಪ್‌ಗ್ರೇಡ್ ಮಾಡಿದಾಗ ಹೇಗಿದೆ ಎಂಬುದನ್ನು ತಿಳಿಯಲು ಕೊಯಮತ್ತೂರಿನ CoASTT ರೇಸ್ ಟ್ರ್ಯಾಕ್‌ನಲ್ಲಿ ನಾವು ಓಡಿಸಿ ನಮ್ಮ ಅಭಿಪ್ರಯಾಗಳನ್ನು ಇಲ್ಲಿ ಹೇಳುತ್ತಿದ್ದೇವೆ. ನೀವು ನೇರವಾಗಿ ಚಲಿಸಲು ಮೋಜಿನ ಕಾರ್ ಮತ್ತು ಮೂಲೆಗಳಲ್ಲಿ ನಿಭಾಯಿಸಲು ಅಥವಾ ಅವುಗಳ ಸುತ್ತಲೂ ಸ್ಲೈಡ್ ಮಾಡಲು ಬೆಸ್ಟ್ ಕಾರ್ ಆಗಿದೆ.
ಆಲ್ಟ್ರೊಜ್ ರೇಸರ್ಒಮ್ಮೆ 2,500rpm ಮಾರ್ಕ್ ಅನ್ನು ತಲುಪಿದಾಗ, ಎಂಜಿನ್ ತನ್ನ ಎಲ್ಲಾ ಟಾಪ್ ಪರ್ಫಾಮೆನ್ಸ್ ಅನುಭವಿಸಲು ಅನುವು ಮಾಡಿಕೊಡುತ್ತದೆ. ಬಳಿಕ ನೀವು 5,500rpm ಮಾರ್ಕ್ ಅನ್ನು ಹೊಡೆಯುವವರೆಗೆ ಮುಂದುವರಿಯುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿರುವುದರಿಂದ, ತುಂಬಾ ಸುಲಭ ಮತ್ತು ಗೇರ್‌ಗಳ ಮೂಲಕ ರಿಯಲ್ ಪರ್ಫಾಮೆನ್ಸ್ ಅನ್ನು ಅನಿಭವಿಸಬಹುದು.

ಹೈಡ್ರಾಲಿಕ್ ಚಾಲಿತ ಕ್ಲಚ್ ಸಾಮಾನ್ಯ ಆಲ್ಟ್ರೊಜ್‌ಗೆ ಹೋಲಿಸಿದರೆ ಕಾರ್ಯನಿರ್ವಹಿಸಲು ಸ್ವಲ್ಪ ಹಗುರವಾಗಿರುತ್ತದೆ. ಇದು ಬಳಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಆದರೆ ಒಮ್ಮೆ ನೀವು ವೇಗವನ್ನು ಪಡೆದರೆ ಅದನ್ನು ಬಳಸಲು ತುಂಬಾ ಇಷ್ಟ ಪಡುತ್ತೀರ. Altroz ರೇಸರ್‌ನಲ್ಲಿನ ಸಸ್ಪೆನ್ಶನ್ ಸೆಟಪ್ ಸಾಮಾನ್ಯ ಕಾರ್‌ಗಿಂತ ಸ್ವಲ್ಪ ಗಟ್ಟಿಯಾಗಿರುತ್ತದೆ.
ನಿಖರವಾದ ಮತ್ತು ತೀಕ್ಷ್ಣವಾದ ಸ್ಟೀರಿಂಗ್ ಸೆಟಪ್‌ನೊಂದಿಗೆ ಸಂಯೋಜಿಸಲ್ಪಟ್ಟಿರುವುದರಿಂದ (ಇದು ಹೆಚ್ಚಿನ ವೇಗದಲ್ಲಿ ಚೆನ್ನಾಗಿ ತೂಗುತ್ತದೆ) ನಮಗೆ Altroz ರೇಸರ್‌ನೊಂದಿಗೆ ಬೆಸ್ಟ್ ಪರ್ಫಾಮೆನ್ಸ್ ಅನ್ನು ಹೊರತೆಗೆಯಲು ಅವಕಾಶ ಮಾಡಿಕೊಟ್ಟಿತು. ಆದಾಗ್ಯೂ, ಸಸ್ಪೆನ್ಷನ್ ಸೆಟಪ್ ಹೇಳಿಕೊಳ್ಳುವಷ್ಟು ಗಟ್ಟಿಯಾಗಿಲ್ಲ ಎಂದು ಹೇಳಬಹುದು. ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








