Tata: ಶೋರೂಂ ತಲುಪಿದ ಟಾಟಾದ ಹೊಸ ಕಾರು.. ಬೆಲೆ ಎಷ್ಟು, ಯಾವೆಲ್ಲ ಫೀಚರ್‌ಗಳಿವೆ?

ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ಕಂಪನಿಯ ಕಾರುಗಳು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇತ್ತೀಚೆಗೆ 'ಟಾಟಾ' ಹ್ಯುಂಡೈ ಐ20 ಎನ್ ಲೈನ್ ಕಾರಿಗೆ ಪ್ರಬಲ ಸ್ಪರ್ಧೆಯೊಡ್ಡಲು ಆಲ್ಟ್ರೊಜ್ ರೇಸರ್ (Altroz Racer) ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ್ನು ಆದ್ದೂರಿಯಾಗಿ ಬಿಡುಗಡೆ ಮಾಡಿತ್ತು. ಈ ನೂತನ ಕಾರು ಆರ್1, ಆರ್2 ಮತ್ತು ಆರ್3 ಎಂಬ ಮೂರು ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಸಿಗುತ್ತದೆ.

ಸದ್ಯ ದೇಶಾದ್ಯಂತ ಟಾಟಾ ಆಲ್ಟ್ರೊಜ್ ರೇಸರ್ ಕಾರಿನ ಎಂಟ್ರಿ ಲೆವೆಲ್ ವೇರಿಯೆಂಟ್ (ಆರಂಭಿಕ ಶ್ರೇಣಿ ಆವೃತ್ತಿ) 'ಆರ್1' ಡೀಲರ್‌ಶಿಪ್‌ಗಳನ್ನು ತಲುಪಲು ಶುರುವಾಗಿದೆ. ಈ ಹ್ಯಾಚ್‌ಬ್ಯಾಕ್‌ ರೂ.9.49 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದ್ದು, ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು.

Tata Altroz Racer Car Base Variant R1 Reaches Dealerships Price And Features Details

ಹೊಸ ಆಲ್ಟ್ರೊಜ್ ರೇಸರ್ ಆರ್1 ಮಾದರಿ (ಮಾಡೆಲ್), ಬೆಲೆಗೆ ತಕ್ಕಂತೆ ಸಾಕಷ್ಟು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪುಶ್ ಸ್ಟಾರ್ಟ್/ ಸ್ಟಾಪ್ ಬಟನ್, 8-ಸ್ಪೀಕರ್‌, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, 6 ಏರ್‌ಬ್ಯಾಗ್‌, ಮುಂಭಾಗ (ಫ್ರಂಟ್) ಫಾಗ್ ಲ್ಯಾಂಪ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು ಹಾಗೂ ಲೆಥೆರೆಟ್ ಸೀಟ್‌ಗಳನ್ನು ಒಳಗೊಂಡಿದೆ.

ಈ ಕಾರು ಎಂಟ್ರಿ ಲೆವೆಲ್ ವೇರಿಯೆಂಟ್ ಆಗಿರುವುದರಿಂದ ಟಾಪ್ ಎಂಡ್ ವೇರಿಯೆಂಟ್ (ಗರಿಷ್ಠ ಶ್ರೇಣಿ ಆವೃತ್ತಿ) ರೀತಿಯಲ್ಲಿ ಕೆಲವು ವೈಶಿಷ್ಟ್ಯ (ಫೀಚರ್)ಗಳನ್ನು ಸಹ ಪಡೆದುಕೊಂಡಿಲ್ಲ. ಇದು ದೊಡ್ಡದಾದ ದೊಡ್ಡ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಎಲೆಕ್ಟ್ರಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ಏರ್ ಪ್ಯೂರಿಫೈಯರ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿಲ್ಲ.

Tata Altroz Racer Car Base Variant R1 Reaches Dealerships Price And Features Details

ಟಾಟಾ ಆಲ್ಟ್ರೊಜ್ ರೇಸರ್ ಹ್ಯಾಚ್‌ಬ್ಯಾಕ್‌ನ ಎಲ್ಲ ರೂಪಾಂತರಗಳು 1.2-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 118 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 170 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತವೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿದ್ದು, ಕೇವಲ 11.3 ಸೆಕೆಂಡಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಪಡೆಯಲಿವೆ.

ದೇಶೀಯವಾಗಿ ಖರೀದಿಗೆ ಲಭ್ಯವಿರುವ ಸಾಮಾನ್ಯ ಟಾಟಾ ಆಲ್ಟ್ರೊಜ್ (Tata Altroz) ಕಾರು, ರೂ.6.65 ಲಕ್ಷದಿಂದ ರೂ.11.35 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್, ಡಿಸೇಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದ್ದು, 19.33 ರಿಂದ 26.20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿಯೂ 5 ಜನರು ಓಡಾಟವನ್ನು ನಡೆಸಬಹುದು.

Tata Altroz Racer Car Base Variant R1 Reaches Dealerships Price And Features Details

ಈ ಕಾರು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್, ಸಿಂಗಲ್-ಪೇನ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌, 360-ಡಿಗ್ರಿ ಕ್ಯಾಮೆರಾ, ಆಟೋ ಪಾರ್ಕ್ ಲಾಕ್ ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 22, 2024, 9:57 [IST]
English summary
Tata altroz racer car base variant r1 reaches dealerships price and features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+