ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಟಾಟಾ ಮೋಟಾರ್ಸ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ತನ್ನದೆ ಆದ ವಿಶೇಷ ಬೇಡಿಕೆ ಹೊಂದಿರುವುದಲ್ಲದೇ ಭಾರತೀಯ ಗ್ರಾಹಕರೊಂದಿಗೆ ಭಾವನಾತ್ಮಕ ನಂಟು ಹೊಂದಿದೆ ಎಂದ್ರೆ ತಪ್ಪಾಗುದಿಲ್ಲ. ಇದಕ್ಕೆ ಕಾರಣ ವಾಹನ ಉತ್ಪನ್ನಗಳಲ್ಲಿ ಕಾಲಕ್ಕೆ ತಕ್ಕಂತೆ ಹೊಸತನಗಳನ್ನು ಹುಟ್ಟುಹಾಕುವ ಟಾಟಾ ಈ ಬಾರಿ ಹ್ಯಾರಿಯರ್ ಎನ್ನುವ ಕಾರಿನ ಮೂಲಕ ಕಾರು ಖರೀದಿದಾರರಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನಕ್ಕೆ ಕೈಹಾಕಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಟಾಟಾ ಸಂಸ್ಥೆಯು ಈ ತನ್ನ ಕಾರು ಉತ್ಪನ್ನಗಳ ಸರಣಿಯಲ್ಲಿ ಮಹತ್ವದ ಬದಲಾವಣೆ ತರುವುದಾಗಿ ಹೇಳಿಕೊಂಡಿತ್ತಲ್ಲದೇ ಅದಕ್ಕೆ ತಕ್ಕಂತೆ ಕಳೆದ ಫೆಬ್ರುವರಿನಲ್ಲಿ ನಡೆದ 2018ರ ಆಟೋ ಎಕ್ಸ್‌ಪೋದಲ್ಲಿ ಹ್ಯಾರಿಯರ್ ಕಾರನ್ನು ಪ್ರದರ್ಶನ ಮಾಡಿತ್ತು. ಇದು ಮಧ್ಯಮ ಗಾತ್ರದ ಕಾರು ಉತ್ಪಾದನಾ ಸಂಸ್ಥೆಗಳಿಗೆ ಅಷ್ಟೇ ಅಲ್ಲದೇ ಐಷಾರಾಮಿ ಕಾರು ಉತ್ಪಾದಕರಲ್ಲೂ ಕುತೂಹಲ ಹುಟ್ಟುಹಾಕುವ ಮೂಲಕ ಮಧ್ಯಮ ವರ್ಗ ಗ್ರಾಹಕರಿಗೆ ಕೈಗೆಟುಕುವ ಬೆಲೆಗಳಲ್ಲಿ ಅತ್ಯುತ್ತಮ ಕಾರುಗಳನ್ನು ಒದಗಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಆಟೋ ಎಕ್ಸ್‌ಪೋದಲ್ಲಿ ಹ್ಯಾರಿಯರ್ ಕಾರುಗಳನ್ನು ಪ್ರದರ್ಶನ ನಂತರ ಹಲವಾರು ಬಾರಿ ದೇಶದ ಪ್ರಮುಖ ನಗರಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಂಸ್ಥೆಯು ಇದೀಗ ಅಂತಿಮ ಹಂತದ ಪರೀಕ್ಷಾರ್ಥ ಕಾರ್ಯಗಳನ್ನು ಪೂರ್ಣಗೊಳಿಸಿದ್ದು, ಮುಂಬರುವ 2019ರ ಜನವರಿ ಆರಂಭದಲ್ಲಿ ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿಕೊಂಡಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಈ ಹಿನ್ನೆಲೆಯಲ್ಲಿ ಹೊಸ ಕಾರಿನ ತಾಂತ್ರಿಕ ಅಂಶಗಳ ಪರ್ಫಾಮೆನ್ಸ್ ಕುರಿತು ಡ್ರೈವ್ ಟೆಸ್ಟ್ ನಡೆಸಲು ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿದ್ದ ಟಾಟಾ ಮೋಟಾರ್ಸ್ ಸಂಸ್ಥೆಯು, ರಾಜಸ್ತಾನದ ಜೋಧಪುರ್‌ನಲ್ಲಿ ಬೃಹತ್ ಟೆಸ್ಟ್ ಡ್ರೈವ್ ಕಾರ್ಯಗಾರ ಹಮ್ಮಿಕೊಂಡಿತ್ತು. ಈ ವೇಳೆ ಡ್ರೈವ್‌ಸ್ಪಾರ್ಕ್ ತಂಡವು ಭಾಗಿಯಾಗುವು ಮೂಲಕ ಹೊಸ ಕಾರಿನ ಕುರಿತಾಗಿ ವಿವಿಧ ಹಂತಗಳಲ್ಲಿ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿತು.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಡಿಸೈನ್ ಮತ್ತು ಸ್ಟೈಲಿಂಗ್

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಹಾಗೆಯೇ ಕಾರಿನ ಹಿಂಬದಿಯ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಡಿಸ್ಕವರಿ ಸ್ಪೋರ್ಟ್‌ನಂತೆಯೇ ಹೊಲಿಕೆ ಪಡೆದುಕೊಳ್ಳುವ 'H A R R I E R' ಲೊಗೊ ಅಚ್ಚು, ರಿಯರ್ ಬಂಪರ್, ಸ್ಪಾಯ್ಲರ್‌ನೊಂದಿಗೆ ಶಾರ್ಕ್ ಫಿನ್ ಆ್ಯಂಟೆನಾ ಡಿಸೈನ್ ಆಕರ್ಷಕವಾಗಿವೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಇನ್ನು ಟಾಟಾ ಹ್ಯಾರಿಯರ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳನ್ನು ನಿಗದಿ ಮಾಡಲಾಗಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 138-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಸದ್ಯ ಹೊಸ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಜೊತೆಗೆ ಮುಂಬರುವ ದಿನಗಳಲ್ಲಿ ಹ್ಯುಂಡೈ‍‍ನಿಂದ ಎರವಲು ಪಡೆಯಲಾದ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಸಹ ಆಯ್ಕೆ ರೂಪದಲ್ಲಿರಲಿವೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ವೆರಿಯೆಂಟ್‌ಗಳು ಮತ್ತು ತಾಂತ್ರಿಕ ಸೌಲಭ್ಯಗಳು

ಹ್ಯಾರಿಯರ್ ಎಕ್ಸ್‌ಇ

ಆರಂಭಿಕ ಆವೃತ್ತಿಯಾಗಿರುವ ಹ್ಯಾರಿಯಲ್ ಎಕ್ಸ್‌ಇ ಕಾರುಗಳಲ್ಲಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್, 17-ಇಂಚಿನ ಫೈವ್ ಸ್ಪೋಕ್ ವ್ಹೀಲ್ಸ್, ಎಲ್ಇಡಿ ಟೈಲ್ ಲೈಟ್ಸ್, ಪವರ್ ಅಡ್ಜೆಸ್ಟೆಬಲ್ ಒಆರ್‍‍ವಿಎಂಗಳು, ಮ್ಯಾನುವಲ್ ಎಸಿ, ರಿಯರ್ ಎಸಿ ವೆಂಟ್ಸ್, ಪವರ್ ವಿಂಡೋಸ್, 4 ಇಂಚಿನ ಮಲ್ಟಿ ಇನ್ಫಾರ್ಮೆಷನ್ ಡಿಸ್ಪ್ಲೇ ಒದಗಿಸಲಾಗಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್‍ನೊಂದಿಗೆ ಇಬಿಡಿ ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್, ಸೀಟ್ ಬೆಲ್ಟ್ ರಿಮೈಂಡರ್ ಅನ್ನು ನೀಡಲಾಗಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಹ್ಯಾರಿಯರ್ ಎಕ್ಸ್ಎಂ

ಎರಡನೇ ಮಾದರಿಯ ಎಕ್ಸ್ಎಂ ಆವೃತ್ತಿಯಲ್ಲಿ ಫ್ರಂಟ್ ಫಾಗ್ ಲ್ಯಾಂಪ್ಸ್, ಫಾಲೋ-ಮೀ-ಹೋಂ ಹೆಡ್‍ಲ್ಯಾಂಪ್ಸ್, ರಿಯರ್ ವೈಪರ್ಸ್, ಬೂಟ್ ಲ್ಯಾಂಪ್ಸ್, ರಿಯರ್ ಪಾರ್ಸಲ್ ಸೆಲ್ಫ್, 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 4 ಸ್ಪೀಕರ್ಸ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ರಿಮೋಟ್ ಸೆಂಟ್ರಲ್ ಲಾಕಿಂಗ್ ಜೊತೆಗೆ ಇಕೊ, ಸಿಟಿ ಮತ್ತು ಸ್ಪೋರ್ಟ್ ಎಂಬ ಮಲ್ಟಿ ಡ್ರೈವಿಂಗ್ ಮೋಡ್‍ಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಕ್ಸ್ಎಂ ಆವೃತ್ತಿಗಿಂತಲೂ ತುಸು ಹೆಚ್ಚಿನ ವೈಶಿಷ್ಟ್ಯತೆಗಳಿದ್ದು, ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್‍ನೊಂದಿಗೆ ಇಬಿಡಿ ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್, ಸೀಟ್ ಬೆಲ್ಟ್ ರಿಮೈಂಡರ್ ಅನ್ನು ನೀಡಲಾಗಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಹ್ಯಾರಿಯರ್ ಎಕ್ಸ್‌ಟಿ

ಈ ವೇರಿಯೆಂಟ್‍ನಲ್ಲಿ ಆಟೋಮ್ಯಾಟಿಕ್ ಹೆಡ್‍ಲ್ಯಾಂಪ್ಸ್, ಡ್ಯುಯಲ್ ಫಂಕ್ಷನ್ ಎಲ್ಇಡಿ ಡಿಆರ್‍ಎಲ್, 17 ಇಂಚಿನ ಅಲಾಯ್ ವ್ಹೀಲ್ಸ್, ರಿಯರ್ ಡೀಫಾಗರ್, ಪುಶ್-ಬಟನ್ ಸ್ಟಾರ್ಟ್, 8 ವಿಧಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ಸ್, ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಅಡ್ಜೆಸ್ಟೆಬಲ್ ಒಆರ್‍‍ವಿಎಂಗಳು ಮತ್ತು ರಿವರ್ಸ್ ಕ್ಯಾಮೆರಾ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಇದರಲ್ಲೂ ಕೂಡಾ ಸುರಕ್ಷತೆಗಾಗಿ ವಿವಿಧ ಮಾದರಿಯ ಸುಧಾರಿತ ಮಾದರಿಗಳನ್ನು ಒದಗಿಸವಾಗಿದ್ದು, ಮೊದಲ ಎರಡು ವೆರಿಯೆಂಟ್‌ಗಳಾದ ಎಕ್ಸ್‌ಎಂ ಮತ್ತು ಎಕ್ಸ್ಇ ಆವೃತ್ತಿಗಿಂತಲೂ ತುಸು ಪ್ರೀಮಿಯಂ ಸೌಲಭ್ಯಗಳು ಎಕ್ಸ್‌ಟಿ ಆವೃತ್ತಿಯಲ್ಲಿ ಜೋಡಣೆ ಮಾಡಲಾಗಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಹ್ಯಾರಿಯರ್ ಎಕ್ಸ್‌ಜೆಡ್

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಇದರಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಆಸನ ಸೌಲಭ್ಯ ಮತ್ತು ಬೂಟ್ ಸ್ಪೆಸ್ ಸಾಮರ್ಥ್ಯ

ಹ್ಯಾರಿಯರ್ ಕಾರುಗಳ ಒಳಾಂಗಣ ವಿಸ್ತಿರ್ಣವು ಪ್ರಮುಖ ಆಕರ್ಷಣೆಯಾಗಿದ್ದು, ಚಾಲಕ ಸೇರಿ ಒಟ್ಟು 5 ಜನ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದ್ದು, ಹಿಂಬದಿ ಸೀಟಿನಲ್ಲಿ ಆರ್ಮ್ ರೆಸ್ಟ್ ಸೌಲಭ್ಯವು ದೂರದ ಪ್ರಯಾಣಕ್ಕೆ ಅನುಕೂಲಕರ ಎನ್ನಿಸಲಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಅಂತೆಯೇ ಬೂಟ್ ಸ್ಪೆಸ್ ಸೌಲಭ್ಯವು ಸಾಕಷ್ಟು ಅನುಕೂಲಕವಾಗಿದ್ದು, 425-ಲೀಟರ್ ಸಾಮರ್ಥ್ಯದ ಲಗೇಜ್ ಇಟ್ಟುಕೊಳ್ಳಬಹುದಾಗಿದೆ. ಒಂದು ವೇಳೆ ಲಗೇಜ್ ಹೆಚ್ಚು ಇದ್ದಲ್ಲಿ ಹಿಂಬದಿ ಸೀಟುಗಳನ್ನು ಮಡಿಕೆ ಮಾಡಿ 810-ಲೀಟರ್ ನಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದಾಗಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಕಾರಿನ ಎಂಜಿನ್ ವೈಶಿಷ್ಟ್ಯತೆಯ ಕ್ವಿಕ್ ಲುಕ್ ಪಟ್ಟಿ!

ಎಂಜಿನ್ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್
ಇಂಧನ ಮಾದರಿ ಡೀಸೆಲ್
ಸಿಲಿಂಡರ್ ಸಂಖ್ಯೆ ಇನ್ ಲೈನ್ 4
ಪವರ್(ಬಿಎಚ್‌ಪಿ) 138ಬಿಎಚ್‌ಪಿ
ಟಾರ್ಕ್(ಎನ್ಎಂ) 350 ಎನ್ಎಂ
ಟ್ರಾನ್‌ಮಿಷನ್ 6-ಸ್ಪೀಡ್ ಮ್ಯಾನುವಲ್
ಟೈರ್ಸ್ (ಎಂಎಂ) 235/65 ಆರ್17
ಕಾರಿನ ತೂಕ 1675 ಕೆಜಿ
ಇಂಧನ ಟ್ಯಾಂಕ್ ಸಾಮರ್ಥ್ಯ 50 ಲೀಟರ್
ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಹ್ಯಾರಿಯರ್ ಕಾರಿನ ಉದ್ದಳತೆ

ಉದ್ದಳತೆ ಅಳತೆ(ಮಿಲಿ ಮೀಟರ್‌ಗಳಲ್ಲಿ)
ಉದ್ದ 4598
ಅಗಲ 1894
ಎತ್ತರ 1706
ವೀಲ್‌ಬೆಸ್ ಆಕಾರ 2741
ಗ್ರೌಂಡ್ ಕ್ಲಿಯೆರೆನ್ಸ್ 205

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಹ್ಯಾರಿಯರ್ ಕಾರಿನ ಪ್ರತಿಸ್ಪರ್ಧಿಗಳು

ಎಂಜಿನ್ ವೈಶಿಷ್ಟ್ಯತೆ ಟಾಟಾ ಹ್ಯಾರಿಯರ್ ಹ್ಯುಂಡೈ ಕ್ರೆಟಾ ಜೀಪ್ ಕಂಪಾಸ್
ಎಂಜಿನ್ 2.0-ಲೀಟರ್ ಡಿಸೇಲ್ 1.6-ಲೀಟರ್ ಡಿಸೇಲ್ 2.0-ಲೀಟರ್ ಡಿಸೇಲ್
ಪವರ್(ಬಿಎಚ್‌ಪಿ) 138 128 170

ಟಾರ್ಕ್(ಎನ್ಎಂ) 350 260 350
ಟ್ರಾನ್‌ಮಿಷನ್ 6-ಸ್ಪೀಡ್ ಮ್ಯಾನುವಲ್ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋ 6-ಸ್ಪೀಡ್ ಮ್ಯಾನುವಲ್
ಡ್ರೈವ್‌ಟ್ರೈನ್ ಟೆಕ್ನಾಲಜಿ 2-ಡಬ್ಲ್ಯುಡಿ 2-ಡಬ್ಲ್ಯುಡಿ 4-ಡಬ್ಲ್ಯುಡಿ

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಕಾರಿನ ಬೆಲೆಗಳು(ಆನ್ ರೋಡ್ ಪ್ರಕಾರ)

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ವಿಶೇಷ ಡಿಸೈನ್ ಹೊತ್ತು ಬಂದಿರುವ ಹ್ಯಾರಿಯರ್ ಕಾರಿನ ಬೆಲೆಯನ್ನು ಆನ್ ರೋಡ್ ಪ್ರಕಾದ ಆರಂಭಿಕವಾಗಿ ರೂ. 16 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 21 ಲಕ್ಷಕ್ಕೆ ಬಿಡುಗಡೆಗೊಳಿಸುವುದಾಗಿ ಟಾಟಾ ಸಂಸ್ಥೆಯೇ ಹೇಳಿಕೊಂಡಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಬುಕ್ಕಿಂಗ್ ಆರಂಭ

ಟಾಟಾ ಈಗಾಗಲೇ ಹೊಸ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ಕೂಡಾ ನೀಡಿದ್ದು, ರೂ.30 ಸಾವಿರ ಮುಂಗಡ ಪಾವತಿಸಿ ಹೊಸ ಕಾರು ಖರೀದಿಗಾಗಿ ಬುಕ್ ಮಾಡಬಹುದಾಗಿದೆ.

ಬಿಡುಗಡೆಗೆ ಸಜ್ಜಾಗಿರುವ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನಾ ವಿಮರ್ಶೆ..!

ಒಟ್ಟಿನಲ್ಲಿ ಪ್ರೀಮಿಯಂ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಟಾಟಾ ಹ್ಯಾರಿಯರ್ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, 2019ರ ಜನವರಿ ಮೊದಲ ವಾರದಲ್ಲೇ ಬಿಡುಗಡೆಗೊಳ್ಳಲಿರುವ ಹೊ ಕಾರು ಜೀಪ್ ಕಂಪಾಸ್, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಸಾಕಷ್ಟು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Tata Harrier Review And Test Drive Report. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X