Tata Nexon Review: ನವೀಕರಿಸಿದ ಟಾಟಾ ನೆಕ್ಸಾನ್ ವಿಮರ್ಶೆ.. ಜಬರ್ದಸ್ತ್ ಲುಕ್, ಹೊಸ ಅವತಾರ

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯೆಂದು ಟಾಟಾ (Tata) ಜನಮನ್ನಣೆ ಗಳಿಸಿದೆ. ಅದರ ಕಾರುಗಳು ಆಕರ್ಷಕ ವೈಶಿಷ್ಟ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿರುವುದರಿಂದ ಹೆಚ್ಚಿನ ಜನರಿಗೆ ಇಷ್ಟವಾಗುತ್ತದೆ. ಅದರಲ್ಲೂ ಕಂಪನಿಯು 2017ರಲ್ಲಿ ದೇಶೀಯ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಗೆ ಪರಿಚಯಿಸಿದ ನೆಕ್ಸಾನ್ (Nexon) ಭಾರೀ ಖ್ಯಾತಿಗಳಿಸಿದೆ.

ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಎಸ್‌ಯುವಿ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಕಂಪನಿಯು ಗ್ರಾಹಕರಿಂದ ಬಂದ ಬೇಡಿಕೆಯನ್ನು ಮನಗಂಡು ಇಂಧನ ಚಾಲಿತ ನೆಕ್ಸಾನ್ ಎಸ್‌ಯುವಿಯನ್ನು ಎಲೆಕ್ಟ್ರಿಕ್ ಅವತಾರದಲ್ಲಿಯೂ ಲಾಂಚ್ ಮಾಡಿತ್ತು. ಇತ್ತೀಚೆಗೆ, ಟಾಟಾ ಕಂಪನಿಯು (2023) ನವೀಕರಿಸಿದ ನೆಕ್ಸಾನ್ ಮಾದರಿಯನ್ನು ಪರಿಚಯಿಸಿದ್ದು, ನಮ್ಮ ತಂಡಕ್ಕೆ ಈ ಕಾರಿನ ಟೆಸ್ಟ್ ನಡೆಸಲು ರಾಜಸ್ಥಾನದ ಜೈಪುರದಲ್ಲಿ ಅವಕಾಶ ದೊರೆಯಿತು. ಬನ್ನಿ ಹೇಗಿದೆ ಎಂಬುದನ್ನು ತಿಳಿಯೋಣ.

 Tata Nexon Review: ನವೀಕರಿಸಿದ ಟಾಟಾ ನೆಕ್ಸಾನ್ ವಿಮರ್ಶೆ.. ಜಬರ್ದಸ್ತ್ ಲುಕ್, ಹೊಸ ಅವತಾರ

ಟಾಟಾ ನೆಕ್ಸಾನ್ ಎಸ್‌ಯುವಿ ವಿನ್ಯಾಸ, ವೈಶಿಷ್ಟ್ಯ: ಮೊದಲಿಗೆ ಈ ಕಾರಿನ ಹೊರ ಭಾಗದ ಡಿಸೈನ್ ಬಗ್ಗೆ ಕೂಲಂಕಷವಾಗಿ ಮಾತನಾಡೋಣ. ನೆಕ್ಸಾನ್ ಎಸ್‌ಯುವಿ, ರಸ್ತೆಯಲ್ಲಿ ಹೋಗುವಾಗ, ಒಂದು ಕ್ಷಣ ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯುವಂತಹ ನೋಟವನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಸಾಕಷ್ಟು ಬದಲಾವಣೆಗಳನ್ನು ಪಡೆದಿದೆ. ನೆಕ್ಸಾನ್‌ನ ಹೊರಭಾಗದ ವಿನ್ಯಾಸವೂ ಬಹುತೇಕ ಕಂಪನಿಯ ಕರ್ವ್ವ್ (Curvv) ಕಾನ್ಸೆಪ್ಟ್ ಕಾರಿಗೆ ಹೋಲಿಕೆಯಾಗುತ್ತದೆ.

ನವೀಕರಿಸಿದ ನೆಕ್ಸಾನ್ ಎಸ್‌ಯುವಿ, ಅತ್ಯಾಕರ್ಷಕ ಹೆಡ್‌ಲ್ಯಾಂಪ್ಸ್ ಹೊಂದಿದ್ದು, ಟರ್ನ್ ಸಿಗ್ನಲ್‌ಗಳಾಗಿ ಎಲ್‌ಇಡಿ ಡಿಆರ್‌ಎಲ್‌ಗಳು ಕಾರ್ಯನಿರ್ವಹಿಸುತ್ತವೆ. ಮುಂಭಾಗ, ಬಂಪರ್‌ನ ಕೆಳಭಾಗದಲ್ಲಿ ನೂತನವಾಗಿರುವ ದೊಡ್ಡದಾದ ಗ್ರಿಲ್‌ಯಿದೆ. ಬಂಪರ್‌ನ ಎರಡು ಬದಿಯಲ್ಲಿರುವ ಸಿ - ಆಕಾರದ ಸ್ಥಳದಲ್ಲಿ ಹೆಡ್‌ಲ್ಯಾಂಪ್ಸ್ ಇದ್ದು, ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಕೂಡ ಕಾಣಬಹುದು.

 Tata Nexon Review: ನವೀಕರಿಸಿದ ಟಾಟಾ ನೆಕ್ಸಾನ್ ವಿಮರ್ಶೆ.. ಜಬರ್ದಸ್ತ್ ಲುಕ್, ಹೊಸ ಅವತಾರ

ಹೊಸ (2023) ನೆಕ್ಸಾನ್, ಅಕ್ಕಪಕ್ಕದ ಭಾಗಗಳು (sides) ಅಷ್ಟಾಗಿ ಯಾವುದೇ ಬದಲಾವಣೆ ಪಡೆದಿಲ್ಲ. ಏರೋ ಇನ್ಸೆರ್ಟ್ಸ್ ಜೊತೆಯಲ್ಲಿ ಹೊಸದಾದ 16 ಇಂಚಿನ ಅಲಾಯ್ ವೀಲ್ಸ್ ಅನ್ನು ಹೊಂದಿದೆ. ಇದರೊಟ್ಟಿಗೆ, ನೂತನ ಕಾರಿನ ಟಾಪ್ ಎಂಡ್ ಮಾದರಿಗಳು ಬಿಳಿ (white) ಅಥವಾ ಕಪ್ಪು (black) ಬಣ್ಣದಲ್ಲಿ ಮೇಲ್ಚಾವಣಿ (roof) ಆಯ್ಕೆಯನ್ನು ಪಡೆದಿರುತ್ತವೆ. ನಿಮಿಷ್ಟದ ಬಣ್ಣವನ್ನು ನೀವೇ ಆರಿಸಿಕೊಳ್ಳಬಹುದು.

ನವೀಕರಿಸಿದ ಟಾಟಾ ನೆಕ್ಸಾನ್ ಎಸ್‌ಯುವಿ ಹಿಂಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಗಮನಿಸಬಹುದು. ಹಳೆಯ ನೆಕ್ಸಾನ್ ಮಾದರಿಗೆ ಹೋಲಿಸಿದರೆ, ಬಹಳಷ್ಟು ಅತ್ಯಾಧುನಿಕವಾಗಿದೆ. ವೈ - ಆಕಾರದ ಎಲ್ಇಡಿ ಟೈಲ್‌ಲೈಟ್ಸ್, ಕಾರಿನ ಹಿಂಭಾಗವನ್ನು ಆವರಿಸಿಕೊಂಡಿರುವ ಲೈಟ್‌ಬಾರ್‌ಗೆ ಕನೆಕ್ಟ್ ಆಗಿದ್ದು, ಇದು ಬೇರೆಯದ್ದೇ ಲುಕ್ ನೀಡುತ್ತದೆ. ಈ ಮೂಲಕ ನೋಡುಗರನ್ನು ತನ್ನತ್ತ ಸೆಳೆಯುತ್ತದೆ.

 Tata Nexon Review: ನವೀಕರಿಸಿದ ಟಾಟಾ ನೆಕ್ಸಾನ್ ವಿಮರ್ಶೆ.. ಜಬರ್ದಸ್ತ್ ಲುಕ್, ಹೊಸ ಅವತಾರ

ಈ ನೆಕ್ಸಾನ್ ಕಾರು, 6 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಫಿಯರ್‌ಲೆಸ್ ಪರ್ಪಲ್, ಕ್ರಿಯೇಟಿವ್ ಓಷನ್, ಪ್ರಿಸ್ಟಿನ್ ವೈಟ್, ಪ್ಯೂರ್ ಗ್ರೇ, ಡೇಟೋನಾ ಗ್ರೇ ಮತ್ತು ಫ್ಲೇಮ್ ರೆಡ್. ಮುಖ್ಯವಾಗಿ, ಫ್ಲೇಮ್ ರೆಡ್ ಮತ್ತು ಡೇಟೋನಾ ಗ್ರೇ ಬಣ್ಣಗಳನ್ನು ಹೊಂದಿರುವ ಕಾರು, ವೈಟ್ ಅಥವಾ ಬ್ಲ್ಯಾಕ್ ಬಣ್ಣದ ರೂಫ್ ಆಯ್ಕೆಯಲ್ಲಿ ಸಿಗುತ್ತದೆ.

ಪ್ರಿಸ್ಟಿನ್ ವೈಟ್ ಹಾಗೂ ಫಿಯರ್‌ಲೆಸ್ ಪರ್ಪಲ್ ಬಣ್ಣವನ್ನು ಪಡೆದಿರುವ ಕಾರು, ಬ್ಲ್ಯಾಕ್ ಬಣ್ಣದ ರೂಫ್ ಆಯ್ಕೆಯಲ್ಲಿ ಮಾತ್ರ ದೊರೆಯುತ್ತದೆ ಎಂಬುದನ್ನು ಗಮನಿಸಬೇಕಾದ ಅಂಶವಾಗಿದೆ. ಸೀದಾ ಕ್ಯಾಬಿನ್ ಒಳಭಾಗಕ್ಕೆ ಹೋಗೋಣ. ಇಲ್ಲಿನ ವಿನ್ಯಾಸದಲ್ಲಿ ಅನೇಕ ಬದಲಾವಣೆಗಳನ್ನು ಪಡೆದಿದೆ. ಡ್ಯಾಶ್ ಬೋರ್ಡ್ ಥ್ರೀ ಲೇಯರ್ಡ್, ಥ್ರೀ ಟೋನ್ ಸೆಟಪ್ ಹೊಂದಿದೆ.

 Tata Nexon Review: ನವೀಕರಿಸಿದ ಟಾಟಾ ನೆಕ್ಸಾನ್ ವಿಮರ್ಶೆ.. ಜಬರ್ದಸ್ತ್ ಲುಕ್, ಹೊಸ ಅವತಾರ

ನಾವು ಡ್ರೈವ್ ಮಾಡಿದ ಟಾಪ್ ಎಂಡ್ ಮಾದರಿಯ ಹೊರಭಾಗದ ಬಣ್ಣಕ್ಕೆ ಮಿಡಲ್ ಸೆಕ್ಷನ್ ನ ಸ್ಪೋರ್ಟಿಂಗ್ ಲೆಥೆರೆಟ್ ಹೊಂದಾಣಿಕೆಯಾಗುತ್ತಿತ್ತು. ಡ್ಯಾಶ್‌ ಬೋರ್ಡ್ ಮೇಲೆ ಹೊಚ್ಚ ಹೊಸ 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಿದೆ. ಇದು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯನ್ನು ಸಪೋರ್ಟ್ ಮಾಡುತ್ತದೆ. ಇನ್ಫೋಟೈನ್‌ಮೆಂಟ್ ಪರದೆಯನ್ನು 8 ಸ್ಪೀಕರ್ JBL ಆಡಿಯೊ ಸಿಸ್ಟಮ್‌ನೊಂದಿಗೆ ಜೋಡಿಲಾಗಿದೆ.

ಸೆಂಟರ್ ಕನ್ಸೋಲ್‌ ಕೆಳಭಾಗದಲ್ಲಿ ಆಟೋಮೆಟಿಕ್ ಏರ್ ಕಂಡೀಷನ್ ಸಿಸ್ಟಮ್ ಅನ್ನು ಕಂಟ್ರೋಲ್ ಮಾಡುವುದಕ್ಕೆ ಟಚ್ ಸೆನ್ಸಿಟಿವ್ ಕೆಪ್ಯಾಸಿಟಿವ್ ನೀಡಲಾಗಿದೆ. ಇದು, ಬೂಟ್ ಓಪನ್ ಮಾಡುವುದು. 360-ಡಿಗ್ರಿ ಕ್ಯಾಮೆರಾ ನಿಯಂತ್ರಣ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತದೆ. ಡ್ಯಾಶ್‌ನಲ್ಲಿರುವ ಮತ್ತೊಂದು ಪ್ರಮುಖ ಹೈಲೈಟ್ ಹೊಸದಾದ 10.25-ಇಂಚಿನ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದು, ದೊಡ್ಡ ಗ್ರಾತ್ರದಲ್ಲಿ ರೂಟ್ ಮ್ಯಾಪ್ ತೋರಿಸಿ, ಚಾಲಕನಿಗೆ ನ್ಯಾವಿಗೇಷನ್ ವಿವರವನ್ನು ಒದಗಿಸುತ್ತದೆ.

 Tata Nexon Review: ನವೀಕರಿಸಿದ ಟಾಟಾ ನೆಕ್ಸಾನ್ ವಿಮರ್ಶೆ.. ಜಬರ್ದಸ್ತ್ ಲುಕ್, ಹೊಸ ಅವತಾರ

ಈಗ, ನೂತನವಾಗಿರುವ 2-ಸ್ಪೋಕ್ ಸ್ಟೀರಿಂಗ್ ವೀಲ್ ಬಗ್ಗೆ ತಿಳಿಯೋಣ. ಈ ರೀತಿಯ ಸ್ಟೀರಿಂಗ್ ವೀಲ್ ಅನ್ನು ಟಾಟಾ ಕಂಪನಿ, ಈಗಾಗಲೇ ತನ್ನ ಕಾನ್ಸೆಪ್ಟ್ ಕಾರುಗಳಲ್ಲಿ ತೋರಿಸಿದೆ. ಇದು, ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟೇಶನ್ ಸ್ಕ್ರೀನ್‌ಗಳಿಗಾಗಿ ಟಚ್ ಮತ್ತು ಸ್ಕ್ರಾಲ್ ಕಂಟ್ರೋಲ್‌ ಹೊಂದಿದೆ. ಜೊತೆಯಲ್ಲಿ ಆಕರ್ಷಕ ಟಾಟಾ ಲೋಗೋವನ್ನು ಪಡೆದಿದೆ.

ಇಷ್ಟೇ ಅಲ್ಲದೆ, ಟಾಟಾ ನೆಕ್ಸಾನ್ ಮತ್ತಷ್ಟು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರಿಂದ ಒಳಭಾಗ ಮತ್ತಷ್ಟು ಅತ್ಯಾಧುನಿಕವಾಗಿ ಕಾಣುತ್ತದೆ. ಫ್ರಂಟ್ ವೆಂಟಿಲೇಟೆಡ್ ಸೀಟ್, ಕೋಲ್ಡ್ ಗ್ಲೋವ್ ಬಾಕ್ಸ್ (ಕೈಗವಸು ಪಟ್ಟಿಗೆ), ಹೊಸ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ಗಾಗಿ ಫ್ಯಾನ್ಸಿ ಶಿಫ್ಟರ್, ಹಿಂಭಾಗ ಎಸಿ ವೆಂಟ್ಸ್, ಸೆಕೆಂಡ್ ಜನರೇಷನ್ ಐಆರ್‌ಎ ಕನೆಕ್ಟ್ದ್ ಕಾರ್ ಟೆಕ್, ವಾಯ್ಸ್ ಕಂಟ್ರೋಲ್ ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 382-ಲೀಟರ್ ಬೂಟ್ ಸ್ಪೇಸ್ ಪಡೆದಿದೆ.

 Tata Nexon Review: ನವೀಕರಿಸಿದ ಟಾಟಾ ನೆಕ್ಸಾನ್ ವಿಮರ್ಶೆ.. ಜಬರ್ದಸ್ತ್ ಲುಕ್, ಹೊಸ ಅವತಾರ

ಈ ಮೂಲಕ ಹೊಸ ಟಾಟಾ ನೆಕ್ಸಾನ್ ಕ್ಯಾಬಿನ್ ಒಳಭಾಗವು ಸಾಕಷ್ಟು ಆಕರ್ಷಕವಾಗಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ISOFIX ಚೈಲ್ಡ್ ಸೀಟ್ ಆಂಕರಿಂಗ್ ಪಾಯಿಂಟ್ಸ್, ಪಾರ್ಕಿಂಗ್ ಸೆನ್ಸರ್ಸ್, ಎಮರ್ಜೆನ್ಸಿ ಹಾಗೂ ಬ್ರೇಕ್ ಡೌನ್ ಕಾಲ್ ಅಸ್ಸಿಸ್ಟನ್ಸ್ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.

ಟಾಟಾ ನೆಕ್ಸಾನ್ ಎಸ್‌ಯುವಿ ಎಂಜಿನ್ ಕಾರ್ಯಕ್ಷಮತೆ, ಸುತ್ತಳೆತೆ: ಹಳೆಯ ನೆಕ್ಸಾನ್ ಕಾರಿಗೆ ಹೋಲಿಸಿದರೆ, ನವೀಕರಿಸಿದ ನೆಕ್ಸಾನ್ ಗಾತ್ರದಲ್ಲಿ ಅಷ್ಟಾಗಿ ಬದಲಾವಣೆಗಳನ್ನು ಹೊಂದಿಲ್ಲ. ಇದು, 3,995 ಎಂಎಂ ಉದ್ದ, 1,804 ಎಂಎಂ ಅಗಲ ಮತ್ತು 1,620 ಎಂಎಂ ಎತ್ತರವನ್ನು ಹೊಂದಿದ್ದು, 2,498 ಎಂಎಂ ಉದ್ದದ ವೀಲ್‌ಬೇಸ್ ಪಡೆದಿದೆ.

 Tata Nexon Review: ನವೀಕರಿಸಿದ ಟಾಟಾ ನೆಕ್ಸಾನ್ ವಿಮರ್ಶೆ.. ಜಬರ್ದಸ್ತ್ ಲುಕ್, ಹೊಸ ಅವತಾರ

ಹೊಸ ಟಾಟಾ ನೆಕ್ಸಾನ್ (2023) ಎಸ್‌ಯುವಿ, ಹಿಂದಿನ ಮಾದರಿಗಿಂತ 2 ಎಂಎಂ ಉದ್ದವಾಗಿದ್ದು, 4 ಎಂಎಂ ಎತ್ತರವಾಗಿದೆ. ಆದರೆ ವೀಲ್‌ಬೇಸ್ ಯಾವುದೇ ರೀತಿಯಲ್ಲಿ ಬದಲಾಗಿಲ್ಲ. ಜೊತೆಗೆ 208 ಎಂಎಂ ಅಳತೆಯ ಗ್ರೌಂಡ್ ಕ್ಲಿಯರೆನ್ಸ್ ಒಳಗೊಂಡಿದೆ. ನಾವೀಗ ಹೊಸ ನೆಕ್ಸಾನ್ ಎಸ್‌ಯುವಿ ಪಡೆದಿರುವ ಶಕ್ತಿಯುತ ಎಂಜಿನ್ ಬಗ್ಗೆ ಮಾತನಾಡೋಣ.

ನೆಕ್ಸಾನ್ ಎರಡು ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. 1.2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 118.2 bhp ಗರಿಷ್ಠ ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಅಥವಾ 6 ಸ್ವೀಡ್ ಮ್ಯಾನುವಲ್, 6 ಸ್ವೀಡ್ ಅಥವಾ 7 ಸ್ವೀಡ್ ಡುಯಲ್ ಕ್ಲಚ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

 Tata Nexon Review: ನವೀಕರಿಸಿದ ಟಾಟಾ ನೆಕ್ಸಾನ್ ವಿಮರ್ಶೆ.. ಜಬರ್ದಸ್ತ್ ಲುಕ್, ಹೊಸ ಅವತಾರ

1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿರುವ ಕಾರು, 113.3 bhp ಪವರ್ ಮತ್ತು 260 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಒಳಗೊಂಡಿದೆ. 6 ಸ್ವೀಡ್ ಮ್ಯಾನುವಲ್ ಅಥವಾ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ. ಈ ಮೂಲಕ ಅತ್ಯಂತ ಪವರ್ ಫುಲ್ ಆಗಿದೆ.

ಡ್ರೈವಿಂಗ್ ಇಂಪ್ರೆಷನ್: ಜೈಪುರದ ರಸ್ತೆಯಲ್ಲಿ ನಮ್ಮ ತಂಡಕ್ಕೆ ಡ್ರೈವ್ ಮಾಡಲು 7 ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಹೊಂದಿರುವ ನೆಕ್ಸಾನ್‌ ಪೆಟ್ರೋಲ್ ಆವೃತ್ತಿ ಸಿಕ್ಕಿತು. ಇದು, 1.2-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಪಡೆದಿದ್ದ ಹಿನ್ನೆಲೆ, ಅದ್ಬುತವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈ ಕಾರಿನಲ್ಲಿ ನಗರದ ಪ್ರದೇಶ ರಸ್ತೆ ಸೇರಿದಂತೆ ಯಾವುದೇ ಹೆದ್ದಾರಿಯಲ್ಲಿ ಪ್ರಯಾಣಿಕರು ಆರಾಮದಾಯವಾಗಿ ಓಡಾಡಬಹುದು.

 Tata Nexon Review: ನವೀಕರಿಸಿದ ಟಾಟಾ ನೆಕ್ಸಾನ್ ವಿಮರ್ಶೆ.. ಜಬರ್ದಸ್ತ್ ಲುಕ್, ಹೊಸ ಅವತಾರ

ಹೊಸ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮೆಟಿಕ್ ಗೇರ್‌ಬಾಕ್ಸ್ ಉತ್ತಮವಾಗಿದೆ. ಆದರೆ, ಗೇರ್‌ ಬದಲಾಯಿಸುವ ಕೊಂಚ ನಿಧಾನ ಎಂಬಂತೆ ಭಾಸವಾಗುತ್ತದೆ. ಅದು ಬಿಟ್ಟರೆ, ಇದಕ್ಕೆ ಸರಿಸಾಟಿಯೇ ಇಲ್ಲ. ಹೊಸ ಸ್ಟೀರಿಂಗ್ ವೀಲ್ ಹಿಂದಿನ ಪ್ಯಾಡಲ್ ಶಿಫ್ಟರ್‌ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ದೇಶದಲ್ಲಿನ ಕೆಲವೆಡೆ ರಸ್ತೆಗಳು ಗುಂಡಿ ಹಾಗೂ ತಗ್ಗು-ದಿಣ್ಣೆಗಳಿಂದ ಕೂಡಿದ್ದು, ಅಲ್ಲಿಯೂ ಸುಲಭವಾಗಿ ಚಲಿಸಲು ಸಾಧ್ಯವಾಗುವಂತೆ ಸಸ್ಪೆನ್ಶನ್ ಸೆಟಪ್ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತದೆ.

ತಿರುವುಗಳಲ್ಲಿಯೂ ಈ ಕಾರನ್ನು ಉತ್ತಮವಾಗಿ ಓಡಿಸಬಹುದು. ಬ್ರೇಕ್ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ನೀವು ಕಾರನ್ನು ಎಷ್ಟೇ ವೇಗದಲ್ಲಿ ಓಡಿಸಿದರೂ ಕ್ಯಾಬಿನ್ ಒಳಭಾಗದಲ್ಲಿ ಯಾವುದೇ ರೀತಿಯಲ್ಲಿ ಶಬ್ದವಾಗುವುದಿಲ್ಲ. ಆದರೆ, 4,000rpm ಪವರ್ ಉತ್ಪಾದನೆ ಶುರುವಾದಾಗ ಸ್ವಲ್ಪ ಸೌಂಡ್ ಆಗುವುದನ್ನು ನಾವು ಕಂಡುಕೊಂಡಿದ್ದೇವೆ. ಮೈಲೇಜ್ ಕುರಿತ ಅಂಕಿ ಅಂಶದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಟಾಟಾದಿಂದ ಹೊಚ್ಚ ಹೊಸ ನವೀಕರಿಸಿದ ನೆಕ್ಸಾನ್ ಒಳ್ಳೆಯ ಕೊಡುಗೆಯಾಗಿದೆ. ಈಗಾಗಲೇ, ನೆಕ್ಸಾನ್ ಎಸ್‌ಯುವಿ ದೊಡ್ಡಮಟ್ಟದ ಬೇಡಿಕೆ ಹೊಂದಿದ್ದು, ನೂತನ ಕಾರಿನಿಂದ ಅದು ಮತ್ತಷ್ಟು ಹೆಚ್ಚಾಗಬಹುದು. ಹಬ್ಬದ ಋತುವಿನಲ್ಲಿ ಹಲವು ಗ್ರಾಹಕರು, ಈ ಕಾರನ್ನು ಇಷ್ಟಪಟ್ಟು ಖರೀದಿಸುವ ಸಾಧ್ಯತೆಯಿರುವುದರಿಂದ ಕಂಪನಿಗೆ ಅಧಿಕ ಲಾಭ ತಂದುಕೊಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Wednesday, September 6, 2023, 16:00 [IST]
English summary
Tata nexon facelift review specs image features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+