ಭಾರತದ ಮೊದಲ ಸಿಎನ್‌ಜಿ ಆಟೋಮ್ಯಾಟಿಕ್ ಕಾರು ತಂದ ಟಾಟಾ: ಟಿಗೋರ್‌ iCNG AMT ರಿವ್ಯೂ!

ಟಾಟಾ ಮೋಟಾರ್ಸ್‌ ಭಾರತದ ಹೆಮ್ಮೆಯ ವಾಹನ ನಿರ್ಮಾಣ ಕಂಪನಿ ಎಂದು ಕರೆಯಲು ಕಾರಣವೇನು ಎಂದು ಕೇಳಿದರೆ, ಹೇಳಲು ಸಾಕಷ್ಟು ಕಾರಣವಿದೆ. ಇಂದಿಗೆ ಭಾರತೀಯ ಆಟೋಮೊಬೈಲ್‌ ರಂಗ ಇಲ್ಲಿಯವರೆಗೆ ಬೆಳೆದಿದೆ ಎಂದರೆ ಅದರಲ್ಲಿ ಟಾಟಾ ಮೋಟಾರ್ಸ್‌ ನದ್ದೇ ಬಹುಪಾಲು. ಮಾರುತಿ ಸುಜುಕಿಯಂತೆ ಟಾಟಾ ಮೋಟಾರ್ಸ್‌ ಗ್ರಾಹಕರ ನಾಡಿಮಿಡಿತವನ್ನು ಸೂಕ್ಷ್ಮವಾಗಿ ಅವಲೋಕಿಸಿದೆ.

ಇದೀಗ ಭಾರತೀಯ ಮಾರುಕಟ್ಟೆಗೆ ಟಾಟಾ, ತನ್ನ ಮೊದಲ ಟಿಗೋರ್‌ ವಾಹನದ ಸಿಎನ್‌ಜಿ ಆಟೋಮ್ಯಾಟಿಕ್‌ ಮಾಡೆಲ್‌ ಅನ್ನು ಬಿಡುಗಡೆಗೊಳಿಸಿದ್ದು, ಇಂದಿನ ಈ ಲೇಖನದಲ್ಲಿ ಟಾಟಾ ಟಿಗೋರ್ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಈಗಾಗಲೇ ನಾವು ಟಾಟಾ ಟಿಗೋರ್‌ iCNG ಆಟೋಮ್ಯಾಟಿಕ್‌ ವಾಹನವನ್ನು ಓಡಿಸಿದ್ದು, ಇದರ ಸಂಪೂರ್ಣ ರಿವ್ಯೂವ್‌ ಅನ್ನು ನಿಮ್ಮ ಮುಂದೆ ಇಡಲಿದ್ದು, ವಿವರವಾದ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

TATA Tigor iCNG Automatic Full Review, Indias First CNG AMT Car

ಡಿಸೈನ್‌: ಹೊಸ ಟಾಟಾ ಟಿಗೋರ್‌ iCNG ವಾಹನದ ವಿನ್ಯಾಸವನ್ನು ನೊಡುವುದಾದರೆ, ಕಳೆದ ಬಾರಿಯ ಟಿಗೋರ್‌ನ ಅದೇ ವಿನ್ಯಾಸವನ್ನು ಇದಕ್ಕೂ ನೀಡಿದ್ದಾರೆ. ಅದೇ ಎಲ್‌ಇಡಿ ಡಿಆರ್‌ಎಲ್‌ ಮತ್ತು ಇದರ ಜೊತೆಗೆ ಹಳೇಯ ಟಿಗೋರ್‌ನಲ್ಲಿದ್ದ ಅದೇ ಹೆಡ್‌ಲೈಟ್‌ಗಳನ್ನು ಸಹ ನೀಡಿದ್ದಾರೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ. ಇದರ ಜೊತೆಗೆ ಕಾರಿನ ಮುಂಭಾಗದಲ್ಲಿ ಕ್ರೋಮ್‌ ಮತ್ತು ಪಿಯಾನೋ ಬ್ಲಾಕ್ ಫಿನಿಶ್ ಸಿಕ್ಕಿರುವುದರಿಂದ ಈ ಕಾರಿನ ನೋಟ ಮತ್ತಷ್ಟು ಪ್ರೀಮಿಯಂ ಆಗಿದೆ.

ಈ ಕಾರಿನ ಸೈಡ್‌ ಆ್ಯಂಗಲ್‌ ಅನ್ನು ನೋಡಿದಾಗ ನಮಗೆ ಕಾಣುವುದು ಇದರ 14 ಇಂಚ್‌ನ ಅಲಾಯ್‌ ವ್ಹೀಲ್‌ಗಳು. ಡ್ಯುಯಲ್‌ ಟೋನ್ ಫಿನಿಶಿಂಗ್‌ನಲ್ಲಿ ಬಂದಿರುವ ಅಲಾಯ್‌ ವ್ಹೀಲ್‌ಗಳು ಆಕರ್ಷಕವಾಗಿ ಕಾಣುತ್ತದೆ. ಈ ಕಾರಿನ ಹಿಂಭಾಗದಲ್ಲಿಯೂ ಕೆಲವು ಕ್ರೋಮ್ ಬಣ್ಣದ ವಿನ್ಯಾಸಗಳನ್ನು ಕಾಣಬಹುದಾಗಿದ್ದು ಹಿಂಭಾಗದಿಂದ ಈ ಕಾರಿನ ನೋಟವನ್ನು ಹೆಚ್ಚಿಸುತ್ತದೆ. ಹಿಂಭಾಗದಲ್ಲಿ ಸ್ಪಾಯಿಲರ್ ಜೊತೆಗೆ ಎಲ್‌ಇಡಿ ಸ್ಟಾಪ್‌ಲೈಟ್‌ ಅನ್ನು ಈ ಸ್ಪಾಯಿಲರ್‌ಗೆ ಸೇರಿಸಲಾಗಿದೆ.

TATA Tigor iCNG Automatic Full Review, Indias First CNG AMT Car

ಇನ್ನಷ್ಟು ಈ ಕಾರಿನ ಹಿಂಭಾಗವನ್ನು ಗಮನಿಸಿದಾಗ ಮತ್ತೆ ತಿಳಿದು ಬರುವ ವಿಷಯವೆಂದರೆ ಟೇಲ್‌ಗೇಟ್‌ನಲ್ಲಿ iCNG ಬ್ಯಾಡ್ಜಿಂಗ್‌ ಅನ್ನು ಸಹ ಕಾಣಬಹುದಾಗಿದೆ. ಹಿಂಭಾಗದಲ್ಲಿ ಒಂದು ಉತ್ತಮ ಕ್ವಾಲಿಟಿಯ ರಿವರ್ಸ್‌ ಪಾರ್ಕಿಂಗ್‌ ಕ್ಯಾಮೆರಾ ಸಹ ಲಭ್ಯವಿದ್ದು, ಇದರಲ್ಲಿ ಆಕ್ಟಿವ್‌ ಗೈಡ್‌ಸೈನ್‌ಗಳು ಸಹ ಸಿಗುತ್ತದೆ. ಇಕ್ಕಟ್ಟಾಗಿರುವ ಸ್ಥಳಗಳಲ್ಲಿ ಕಾರನ್ನು ಪಾರ್ಕ್‌ ಮಾಡಲು ಇದು ಸಹಾಯ ಮಾಡುತ್ತದೆ.

ಇಂಟೀರಿಯರ್‌: ಈ ಕಾರಿನ ಒಳಭಾಗದಲ್ಲಿ ನೋಡುವುದಾದರೆ ನಮಗೆ ಮೊದಲು ಕಾಣಿಸುವ ಮುಖ್ಯವಾದ ವಿಷಯ ಎಂದರೆ ಈ ಕಾರಿನ ಒಳಭಾಗದಲ್ಲಿನ 7 ಇಂಚ್‌ನ ಟಚ್‌ಸ್ಕ್ರೀನ್‌ ಇನ್ಸ್ಟ್ರುಮೆಂಟ್ ಕ್ಲಸ್ಟರ್‌. ಕಳೆದ ಬಾರಿಯ ಟಿಗೋರ್‌ನಲ್ಲೂ ಇದೇ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದ್ದುದನ್ನು ನಾವು ಈ ಕ್ಷಣದಲ್ಲಿ ಮೆಲುಕು ಹಾಕಬಹುದಾಗಿದೆ. ಇನ್ನುಳಿದ ಹಲವು ವಿಷಯಗಳು ಸಹ ಕಳೆದ ಬಾರಿಯ ಟಿಗೋರ್‌ನಲ್ಲಿರುವುದನ್ನು ನಾವು ಕಾಣಬಹುದಾಗಿದೆ.

TATA Tigor iCNG Automatic Full Review, Indias First CNG AMT Car

ಈ ಕಾರಿನ ಬೂಟ್‌ಸ್ಪೇಸ್‌ ಬಗ್ಗೆ ನೊಡುವುದಾದರೆ, ಈ ಕಾರಿನಲ್ಲಿ ಡ್ಯುಯಲ್‌ ಟ್ಯಾಂಕ್‌ ಸಿಎನ್‌ಜಿ ಇದ್ದರೂ ಸಹ, ಅದನ್ನು ತುಂಬಾ ಬುದ್ದಿವಂತಿಕೆಯಿಂದ ಜೊಡಿಸಿದ್ದಾರೆ. ಹಾಗಾಗಿಯೇ ಈ ಕಾರಿನಲ್ಲಿ ನಮಗೆ ಲಗೇಜ್‌ಗಳನ್ನಿಡಲು ಉತ್ತಮ ಸ್ಥಳಾವಕಾಶ ಸಹ ಸಿಗುತ್ತಿದ್ದು, ಪ್ರಯಾಣದ ವೇಳೆ ಲಗೇಜ್‌ಗಳನ್ನು ಇದರಲ್ಲಿ ಯಾವುದೇ ತೊಂದರೆ ಇಲ್ಲದೆ ಇಡಬಹುದು.

ನಾವು ಈ ಮೇಲೆ ತಿಳಿಸಿದಂತೆ ಒಳಭಾಗ ಬಹುತೇಕ ಕಳೆದ ಬಾರಿಯ ಟಿಗೋರ್‌ನಂತೆ ಕಂಡರೂ ಅಲ್ಲಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದಾಗಿದೆ. ಸೆಗ್ಮೆಂಟ್‌ನ ಮೊದಲ iCNG ಆಟೋಮ್ಯಾಟಿಕ್‌ (TATA Tigor iCNG Automatic) ಕಾರು ಇದಾಗಿದ್ದು, ಇದಕ್ಕೆ ಸಂಭಂಧಿಸಿದ AMT ಗೇರ್‌ ಲಿವರ್‌ ಅನ್ನು ನೀಡಲಾಗಿದೆ. ಕಾರಿನ ಒಳಭಾಗದಲ್ಲಿರುವ ಎಸಿ ವೆಂಡ್ಸ್‌ಗಳಿಗೆ ಬಾಡಿ ಕಲರ್‌ನ ಟಚ್ ಅನ್ನು ನೀಡಲಾಗಿದ್ದು, ನೋಡುಗರನ್ನು ಸೆಳೆಯುತ್ತದೆ.

TATA Tigor iCNG Automatic Full Review, Indias First CNG AMT Car

ಎಂಜಿನ್‌: ಟಾಟಾ ಟಿಗೋರ್‌ iCNG ವಾಹನವು ಭಾರತದ ಮೊದಲ ಸಿಎನ್‌ಜಿ ಚಾಲಿತ ಆಟೋಮ್ಯಾಟಿಕ್‌ ಕಾರಾಗಿದೆ. ಈ ಕಾರಿನ ಎಂಜಿನ್‌ ಬಗ್ಗೆ ಹೇಳುವುದಾದರೆ ಈ ಕಾರಿನಲ್ಲಿ, 1.2-litre ರೆವಟ್ರೋನ್‌ ಪೆಟ್ರೋಲ್‌ ಎಂಜಿನ್‌ ಸಿಗುತ್ತಿದ್ದು, ಈ ಎಂಜಿನ್‌ ಸಹಾಯದಿಂದ ಹೊಸ ಟಾಟಾ ಟಿಗೋರ್‌ iCNG AMT, ಸಿಎನ್‌ಜಿ ಮೋಡ್‌ನಲ್ಲಿ ಸುಮಾರು 73.4PS ಪವರ್‌ ಮತ್ತು ಪೆಟ್ರೋಲ್‌ ಮೋಡ್‌ನಲ್ಲಿ 86PS ಪವರ್‌ ಅನ್ನು ಉತ್ಪಾದಿಸುತ್ತದೆ.

ಇಷ್ಟು ಮಾತ್ರವಲ್ಲದೇ ಟಾಟಾ ಟಿಗೋರ್‌, ಈ ಎಂಜಿನ್‌ ನಿಂದ ಸುಮಾರು 95 NM ಪೀಕ್‌ ಟಾರ್ಕನ್ನು ಸಹ ಹೊರ ಹಾಕುತ್ತಿದ್ದು, ಕಾರಿಗೆ ಅಗತ್ಯಕ್ಕೆ ಬೇಕಾದ ಪರ್ಫಾಮೆನ್ಸ್‌ ನೀಡಲು ಇದು ಸಹಾಯ ಮಾಡುತ್ತದೆ. ಇದರ ಜೊತೆಗಿನ ಮತ್ತೊಂದು ಪ್ರಮುಖವಾದ ವಿಷಯ ಏನೆಂದರೆ, ಇದೀಗ ಈ ಕಾರು 5-speed AMT ಗೇರ್‌ ಬಾಕ್ಸ್‌ನಲ್ಲಿ ಬರುತ್ತಿದ್ದು, ನಿಮ್ಮ ಪ್ರಯಾಣದ ಅನುಭವವನ್ನು ಮತ್ತಷ್ಟು ಸುಗಮವಾಗಿಸುತ್ತದೆ.

TATA Tigor iCNG Automatic Full Review, Indias First CNG AMT Car

ಚಾಲನೆಯ ಅನುಭವ: ಮೊದಲಿಗೆ ಈ ಕಾರಿನಲ್ಲಿ ಬಂಧಿರುವ ಭಾರತದ ಮೊತ್ತ ಮೊದಲ ಸಿಎನ್‌ಜಿ AMT ಗೇರ್‌ ಬಾಕ್ಸ್‌ ಬಗ್ಗೆ ಮಾತಾನಾಡೋಣ. ತನ್ನ ಕೆಲಸವನ್ನು ಈ ಗೇರ್‌ ಬಾಕ್ಸ್‌ ಸಮರ್ಪಕವಾಗಿ ನಿಭಾಯಿಸುತ್ತಿದ್ದು, ಕಾರಿಗೆ ಗರಿಷ್ಟ ಮೈಲೇಜ್‌ ಅನ್ನು ತಂದು ಕೊಡುತ್ತಿದೆ. ನೀವೇನಾದರೂ ಈ ಕಾರನ್ನು ಓಡಿಸುವಾಗ ಗರಿಷ್ಟ ಮೈಲೇಜ್‌ ಅನ್ನು ಪಡೆಯಲು ಪ್ರಯತ್ನಿಸುವುದಾದರೆ ಅದಕ್ಕೆ ಈ ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್‌ ಸಾಕಷ್ಟು ಸಹಾಯ ಮಾಡುತ್ತದೆ.

ಈ ಕಾರಿನಲ್ಲಿರುವ ಮತ್ತೊಂದು ಗಮನಿಸಬೇಕಾದಂತಹ ವಿಷಯವೇನು ಎಂದರೆ ಈ ಕಾರಿನಲ್ಲಿ ಗೇರ್‌ ಅನ್ನು ಆಟೋಮ್ಯಾಟಿಕ್‌ ಮೋಡ್‌ನಲ್ಲಿ ಅಪ್‌ಶಿಫ್ಟ್‌ ಮಾಡುವಾಗ ತೀರಾ ನಿಧಾನವಾದ ರೆಸ್ಪಾನ್ಸ್‌ ನಮಗೆ ಕಾರಿನಿಂದ ಸಿಗುತ್ತದೆ. ಅಪ್‌ಶಿಫ್ಟ್‌ ಮಾಡುವಾಗ ತೀರಾ ಲ್ಯಾಗ್‌ ಎಂಬ ಫೀಲ್‌ ಆಗುವುದಂತೂ ಖಂಡಿತ. ಆದರೆ ಒಮ್ಮೆ ನೀವು ಈ ಕಾರನ್ನು ಮ್ಯಾನುವಲ್‌ ಮೋಡ್‌ಗೆ ಹಾಕಿದರೆ ಎಂಜಿನ್‌ ಹೆಚ್ಚು ವೇಗವಾಗಿ ಸ್ಪಂದಿಸುವುದನ್ನು ಕಾಣಬಹುದಾಗಿದೆ.

TATA Tigor iCNG Automatic Full Review, Indias First CNG AMT Car

ಕಾರಿನ ಸಸ್ಪೆನ್ಷನ್‌ ಸೆಟಪ್‌ನಲ್ಲಿ ಟಾಟಾ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ರೆಗ್ಯುಲರ್‌ ಪೆಟ್ರೋಲ್‌ ಟಿಯಾಗೋದಲ್ಲಿ ಬರುವ ಅದೇ ಸಸ್ಪೆನ್ಷನ್‌ ಅನ್ನು ನಾವು ಇದರಲ್ಲಿಯೂ ಕಾಣಬಹುದಾಗಿದೆ. ಆದರೆ ಸಿಎನ್‌ಜಿ ಟ್ಯಾಂಕ್‌ನ ಭಾರವನ್ನು ತಡೆದುಕೊಳ್ಳುವುದಕ್ಕಾಗಿ ಹೊಸ ಟಾಟಾ ಟಿಗೋರ್‌ iCNG AMT ಸಸ್ಪೆನ್ಷನ್‌ ಅನ್ನು ಮಾರ್ಪಾಡು ಗೊಳಿಸಲಾಗಿದೆ.

ಇನ್ನು ಹೊಸ ಟಾಟಾ ಟಿಗೋರ್‌ iCNG AMT ನಿಮಗೆ ಐದು ಬಣ್ಣಗಳು ಮತ್ತು ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಸಮಯ ಬಹಳ ಕಡಿಮೆ ಇದ್ದುದರಿಂದ ಈ ಕಾರಿನ ಮೈಲೇಜ್‌ಅನ್ನು ಪರೀಕ್ಷೆ ಮಾಡಲು ಸಾಧ್ಯವಾಗಲಿಲ್ಲ. ನೀವೇನಾದರೂ ಈ ಕಾರಿಗೆ ಫುಲ್‌ಟ್ಯಾಂಕ್‌ ಸಿಎನ್‌ಜಿಯನ್ನು ತುಂಬಿಸಿದರೆ ಇದು ಸುಮಾರು 700 ಕಿಮೀ ವರೆಗೆ ಆರಾಮವಾಗಿ ಚಲಿಸುತ್ತದೆ.

TATA Tigor iCNG Automatic Full Review, Indias First CNG AMT Car

ಕೊನೆಯ ಮಾತು: ಈ ಕಾರಿನ ಬಗ್ಗೆ ಕೊನೆಯದಾಗಿ ಹೇಳುವುದಾದರೆ, ೪-ಸ್ಟಾರ್‌ ಸೇಪ್ಟಿ ರೇಟಿಂಗ್‌ ಇರುವ ಒಂದು ಉತ್ತಮವಾದ ಫ್ಯಾಮಿಲಿ ಕಾರ್‌ ಇದಾಗಿದೆ. ಇದರಲ್ಲಿ ಎಬಿಸ್‌, ಇಬಿಡಿ, ಏರ್ ಬ್ಯಾಗ್‌ಗಳು ಸೇರಿದಂತೆ ಇನ್ನೂ ಹಲವಾರು ಸೇಫ್ಟೀ ಫೀಚರ್ಗಳಿವೆ. ಸುಮಾರು 10 ಲಕ್ಷ ರೂ ಆಸುಪಾಸಿನ ಬೆಲೆಯಲ್ಲಿ ಹೊಸ ಟಾಟಾ ಟಿಗೋರ್‌ iCNG AMT ಒಂದು ಉತ್ತಮ ಆಯ್ಕೆಯಾಗಿರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, February 21, 2024, 16:00 [IST]
English summary
Tata tigor icng automatic full review indias first cng amt car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+