ಟಾಟಾ ಝಿಕಾ ಮೀಡಿಯಾ ಡ್ರೈವ್; ಏನೆಲ್ಲ ನಿರೀಕ್ಷೆ ಮಾಡಬಹುದು?

By Nagaraja

ಸಮುದ್ರ ತೀರ ಪ್ರದೇಶ ಗೋವಾದಲ್ಲಿ ಎರಡು ದಿನಗಳ ಪರ್ಯಂತ ಮೀಡಿಯಾ ಡ್ರೈವ್ ಜಾರಿಯಲ್ಲಿದ್ದು, ನೂತನ ಟಾಟಾ ಝಿಕಾ ಆಗಮನವಾಗಲು ಕ್ಷಣಗಣನೆ ಆರಂಭವಾಗಿದೆ. ಅಷ್ಟಕ್ಕೂ ಹೊಸ ಟಾಟಾ ಝಿಕಾ ಹ್ಯಾಚ್ ಬ್ಯಾಕ್ ಕಾರಿನಲ್ಲಿ ಏನೆಲ್ಲ ವಿಶಿಷ್ಟಗಳಿರಲಿದೆ ಎಂಬುದು ಬಹಳ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Also Read: "ನಮಸ್ತೆ ಇಂಡಿಯಾ" ಭಾರತೀಯರಿಗೆ ಮೆಸ್ಸಿ ವಿಷ್ ಮುಂದಕ್ಕೆ ಓದಿ

ಟಾಟಾ ಝಿಕಾ ಮಾಧ್ಯಮ ಚಾಲನಾ ಪರೀಕ್ಷೆಯಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ವಿಸೃತವಾದ ಚಾಲನಾ ವರದಿಯನ್ನು ಬಹುಬೇಗನೇ ಪ್ರಕಟಿಸಲಿದ್ದೇವೆ. ಇದಕ್ಕಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ. ಪ್ರಸ್ತುತ ಲೇಖನದಲ್ಲಿ ಹೊಸ ಟಾಟಾ ಕಾರಿನಲ್ಲಿ ಏನೆಲ್ಲ ನಿರೀಕ್ಷೆ ಮಾಡಬಹುದು ಎಂಬುದನ್ನು ವಿವರಿಸುವ ಪ್ರಯತ್ನ ಮಾಡಲಾಗುವುದು.

ವಿನ್ಯಾಸ

ವಿನ್ಯಾಸ

ಈಗಿರುವ ಟಾಟಾ ಮಾದರಿಗಿಂತಲೂ ವಿಭಿನ್ನವಾದ ಹೊಸ ವಿನ್ಯಾಸ ನೀತಿಯನ್ನು ಟಾಟಾ ಝಿಕಾ ಕಾರಿನಲ್ಲಿ ಅನುಸರಿಸಲಾಗಿದೆ. ಇದು ಗ್ರಾಹಕರಿಗೆ ತಾಜಾತನದ ಅನುಭವ ನೀಡಲಿದೆ. ದಿಟ್ಟವಾದ ಫ್ರಂಟ್ ಗ್ರಿಲ್, ಆಕರ್ಷಕ್ ಹೆಡ್ ಲೈಟ್ ವಿನ್ಯಾಸ, ಬದಿಯಲ್ಲಿ ಸ್ವಭಾವ ರೇಖೆ, ಕಪ್ಪುವ ವರ್ಣದ ಬಿ ಪಿಲ್ಲರ್, ರಿಯರ್ ಸ್ಪಾಯ್ಲರ್ ಹಾಗ ರಿಯರ್ ಬಂಪರ್ ಸೇರಿದಂತೆ ಒಟ್ಟಾರೆ ವಿನ್ಯಾಸವು ಪ್ರಭಾವಿ ಎನಿಸಿಕೊಂಡಿದೆ.

ಎಂಜಿನ್ ಮತ್ತು ಗೇರ್ ಬಾಕ್ಸ್

ಎಂಜಿನ್ ಮತ್ತು ಗೇರ್ ಬಾಕ್ಸ್

ನೂತನ ಟಾಟಾ ಝಿಕಾ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರ 1199 ಸಿಸಿ ಪೆಟ್ರೋಲ್ ಎಂಜಿನ್ 114 ಎನ್‌ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿ ಉತ್ಪಾದಿಸಲಿದೆ. ಅದೇ ರೀತಿ 1047 ಸಿಸಿ ಡೀಸೆಲ್ ಎಂಜಿನ್ 69 ಅಶ್ವಶಕ್ತಿ ಉತ್ಪಾದಿಸಲಿದೆ. ಇವೆರಡು 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.

ಮೈಲೇಜ್

ಮೈಲೇಜ್

ಇಂಧನ ಕ್ಷಮತೆಯ ಬಗ್ಗೆ ಸಂಸ್ಥೆಯಿಂದ ಮಾಹಿತಿಗಳೇನು ಬಂದಿಲ್ಲ. ಹಾಗಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 20 ಹಾಗೂ 25 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಅನುಕೂಲ

ಅನುಕೂಲ

ಟಾಟಾದ ಜನಪ್ರಿಯ ಬೋಲ್ಟ್ ಕೆಳಗಡೆ ಗುರುತಿಸಿಕೊಳ್ಳಲಿರುವ ಟಾಟಾ ಝಿಕಾ ಒಂದೇ ಸಮಯದಲ್ಲಿ ಎಂಟ್ರಿ ಲೆವೆಲ್ ಗ್ರಾಹಕರನ್ನು ಆಕರ್ಷಿಸಲಿದೆ. ಕ್ಯಾಬಿನ್‌ನೊಳಗೆ ಬಾಟಲಿ, ಕಪ್ ಹೋಲ್ಡರ್ ಸೇರಿದಂತೆ ಒಟ್ಟಾರೆ 22 ಸ್ಟೋರೆಜ್ ಜಾಗವು ಸಿಗಲಿದೆ.

ಮನರಂಜನೆ

ಮನರಂಜನೆ

ಬೋಲ್ಟ್ ಕಾರಿನಲ್ಲಿರುವುದಕ್ಕೆ ಸಮಾನವಾದ ಹರ್ಮಾನ್ ಸಿಸ್ಟಂ, ನೇವಿಗೇಷನ್, ಸ್ಮಾರ್ಟ್ ಫೋನ್ ಸಂಪರ್ಕ, ಬ್ಲೂಟೂತ್ ಮುಂತಾದ ವ್ಯವಸ್ಥೆಗಳು ಇದರಲ್ಲಿರಲಿದೆ.

ಸುಲಭ ನಿರ್ವಹಣೆ

ಸುಲಭ ನಿರ್ವಹಣೆ

ಇದರಲ್ಲಿ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಪವರ್ ವಿಂಡೋ, ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬಹು ಕ್ರಿಯಾತ್ಮಕ ಪರದೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಮುಂತಾದ ವ್ಯವಸ್ಥೆಗಳಿರಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಹರ್ಮಾನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ 8 ಸ್ಪೀಕರ್,
  • ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್,
  • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್ ಸೈಡ್ ರಿಯರ್ ವ್ಯೂ ಮಿರರ್,
  • ಕೂಲ್ಡ್ ಗ್ಲೋವ್ ಬಾಕ್ಸ್,
  • ಮಡಚಬಹುದಾದ ಕೀ ಮತ್ತು ರೂಫ್ ಆಂಟೆನಾ,
  • ಆಯಾಮ

    ಆಯಾಮ

    • 3746 ಎಂಎಂ ಉದ್ದ,
    • 1647 ಎಂಎಂ ಅಗಲ,
    • 1535 ಎಂಎಂ ಎತ್ತರ,
    • 2400 ಎಂಎಂ ಚಕ್ರಾಂತರ,
    • 170 ಎಂಎಂ ಗ್ರೌಂಡ್ ಕ್ಲಿಯರನ್ಸ್,
    • 242 ಲೀಟರ್ ಢಿಕ್ಕಿ ಜಾಗ
    • ಸುರಕ್ಷತೆ

      ಸುರಕ್ಷತೆ

      ಅಂತೆಯೇ ಭಾರತದ ಭವಿಷ್ಯದ ಢಿಕ್ಕಿ ಮಾನದಂಡಗಳನ್ನು ಪಾಲಿಸಲಿರುವ ಟಾಟಾ ಝಿಕಾ ಏರ್ ಬ್ಯಾಗ್ ಸೇರಿದಂತೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಷನ್ (ಇಬಿಡಿ) ಮತ್ತು ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ವ್ಯವಸ್ಥೆಯನ್ನು ಪಡೆಯುವ ನಿರೀಕ್ಷೆಯಲ್ಲಿದೆ.

      ಅಂದಾಜು ಬೆಲೆ

      ಅಂದಾಜು ಬೆಲೆ

      ಅಂತಿಮವಾಗಿ ಟಾಟಾ ಝಿಕಾ ಹ್ಯಾಚ್ ಬ್ಯಾಕ್ ಕಾರು 3.75 ಲಕ್ಷ ರು.ಗಳಿಂದ 4 ಲಕ್ಷ ರು.ಗಳೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಅಂತೆಯೇ ಟಾಪ್ ಎಂಟ್ 5.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

      ಪ್ರತಿಸ್ಪರ್ಧಿಗಳು

      ಪ್ರತಿಸ್ಪರ್ಧಿಗಳು

      ಎಂಟ್ರಿ ಲೆವೆಲ್ ವಿಭಾಗದಲ್ಲಿ ಆಲ್ಟೊ, ಕ್ವಿಡ್ ನಿಂದ ಆರಂಭವಾಗಿ ಷೆವರ್ಲೆ ಬೀಟ್, ಹ್ಯುಂಡೈ ಗ್ರಾಂಡ್ ಐ10 ಹಾಗೂ ಮಾರುತಿ ಸೆಲೆರಿಯೊ ವರೆಗಿನ ಕಾರುಗಳ ರೇಸ್ ನಲ್ಲಿ ಭಾಗಿಯಾಗಲಿದೆ.

      ಟಾಟಾ ಝಿಕಾ ಮೀಡಿಯಾ ಡ್ರೈವ್; ಏನೆಲ್ಲ ನಿರೀಕ್ಷೆ ಮಾಡಬಹುದು?

      ಕ್ವಿಡ್, ಆಲ್ಟೊ ಸವಾಲನ್ನು ಎದುರಿಸಲು ನೂತನ ಟಾಟಾ ಝಿಕಾ ರೆಡಿ

More from DriveSpark

Article Published On: Friday, December 4, 2015, 9:39 [IST]
English summary
Tata Zica Review: What To Expect?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+