ಟೊಯೊಟಾ ಪ್ರಯಾಸ್: ದರ, ಮೈಲೇಜ್ ಹೇಳಿ ಪ್ಲೀಸ್

ಆರಾಮದಾಯಕತೆ: ನೂತನ ಕಾರು ಅತ್ಯುತ್ತಮ ಸ್ಥಳಾವಕಾಶ ಹೊಂದಿದೆ. ಹಿಂಭಾಗದ ಲಗೇಜ್ ಸ್ಥಳಾವಕಾಶ ಮೂರು ಗಾಲ್ಫ್ ಬ್ಯಾಗ್ ಇಡಬಹುದಷ್ಟು ವಿಶಾಲವಾಗಿದೆ. ಮುಂಭಾಗದ ಪ್ರಯಾಣಿಕ ಸೀಟು ಹೆಚ್ಚು ಕಂಫರ್ಟ್ ಆಗಿದೆ. ಸೆಂಟ್ರಲ್ ಕನ್ಸೊಲ್ ಕಡಿಮೆ ಸ್ಥಳಾವಕಾಶ ಬಳಸಿಕೊಂಡಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಕಪ್ ಹೋಲ್ಡರ್ ಇದೆ. ಸ್ಮಾರ್ಟ್ ಎಂಟ್ರಿ ಮತ್ತು ಸ್ಟಾರ್ಟ್ ಸಿಸ್ಟಮ್, ಆಡಿಯೋ ಸಿಸ್ಟಮ್, ಯುಎಸ್ ಬಿ/ಮಿನಿ ಜಾಕ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲಕ್, ಕ್ಲೀನ್ ಏರ್ ಫಿಲ್ಟರ್, ಕ್ಯಾಮರಾ, ಸೀಟು ಹೊಂದಾಣಿಕೆ ಫೀಚರುಗಳು, ಹೊರಭಾಗದ ಸೈಡ್ ಮಿರ್್ ನಲ್ಲಿ ಟರ್ನ್ ಇಂಡಿಕೇಟರ್ ಸೇರಿದಂತೆ ಹಲವು ಫೀಚರುಗಳಿವೆ.
ಟೊಯೊಟಾ ಪ್ರಯಾಸ್ ಕಾರು ಸಾಕಷ್ಟು ಸುರಕ್ಷತೆಯ ಫೀಚರುಗಳನ್ನು ಹೊಂದಿದೆ. ಅಂದರೆ ಇಬಿಡಿ ಮತ್ತು ಎಬಿಎಸ್, ಎಲೆಕ್ಟ್ರಾನಿಕ್ ಪವರ್ ಸ್ಟಿಯರಿಂಗ್, ವಿಸಿಎಸ್( ವಾಹನ ದೃಢತೆ ನಿಯಂತ್ರಣ ವ್ಯವಸ್ಥೆ), ಎಸ್ಆರ್ ಎಸ್ ಏರ್ ಬ್ಯಾಗ್, ಆಕ್ಟಿವ್ ಹೆಡ್ ರೆಸ್ಟ್, ಕ್ರಾಷ್ ಸೇಫ್ಟಿ ಬಾಡಿ ಇತ್ಯಾದಿ ಸುರಕ್ಷತೆಯ ಫೀಚರುಗಳಿವೆ. ನೂತನ ಪ್ರಯಾಸ್ ಪ್ರಸಕ್ತ ವರ್ಷದ ಅತ್ಯುತ್ತಮ ಮೈಲೇಜ್ ಕಾರಾಗುವ ನಿರೀಕ್ಷೆಯಿದೆ. ಸದ್ಯ ನೂತನ ಪ್ರಯಾಸ್ ಮೈಲೇಜ್ ಮಾಹಿತಿ ಹೊರಬಿದ್ದಿಲ್ಲ. ಈ ಕಾರಿನ ದರ ಸುಮಾರು 27 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.


Click it and Unblock the Notifications








