2012 ಟೊಯೊಟಾ ಪ್ರಯಾಸ್: ಹೈಬ್ರಿಡ್ ಹವ್ಯಾಸಿಗಳಿಗೆ ಸಿಹಿಸುದ್ದಿ

Posted By:
<ul id="pagination-digg"><li class="next"><a href="/car-reviews/toyota-prius-2012-review-specifica-aid0134.html">Next »</a></li></ul>
Toyota Prius 2012 Review
ಟೊಯೊಟಾ ಪ್ರಯಾಸ್ 2012- ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಅನಾವರಣಗೊಂಡ ಕಾರಿದು. ಪರಿಷ್ಕೃತ ನೂತನ ಸೆಡಾನ್ ಪ್ರಯಾಸ್ ಹಳೆಯ ಆವೃತ್ತಿಗಿಂತ ಹೆಚ್ಚು ಆಕರ್ಷಕವಾಗಿದೆ. ಇಂಟಲಿಜೆಂಟ್ ಹೈಬ್ರಿಡ್ ತಂತ್ರಜ್ಞಾನ, ಅತ್ಯುತ್ತಮ ಇಂಧನ ದಕ್ಷತೆ, ಹೈಬ್ರಿಡ್ ಸಿಸ್ಟಮ್ ಸೇರಿದಂತೆ ಹಲವು ವಿಷಯಗಳಲ್ಲಿ ಪ್ರಯಾಸ್ ಫರ್ಮಾಮೆನ್ಸ್ ಜಾಸ್ತಿಯಾಗಿದೆ.

ಹಳೆಯ ಪ್ರಯಾಸ್ ಕಾರಿನ ಸೌಂದರ್ಯ, ಆರಾಮದಾಯಕತೆ, ಏರೋ ಡೈನಾಮಿಕ್ಸ್ ಮತ್ತು ಎಂಜಿನ್ ತಂತ್ರಜ್ಞಾನವನ್ನು ಟೊಯೊಟಾ ಅಪ್ ಗ್ರೇಡ್ ಮಾಡಿ ನೂತನ ಆವೃತ್ತಿ ಹೊರತಂದಿದೆ. ಇದರ ಹೈಬ್ರಿಡ್ ತಂತ್ರಜ್ಞಾನವು ಆರಾಮದಾಯಕತೆ ಮತ್ತು ಅತ್ಯಧಿಕ ಕ್ಷಮತೆಯ ಸವಾರಿಗೆ ಸೂಕ್ತವಾಗಿದೆ. ನೂತನ ಪ್ರಯಾಸ್ ಕಾರು ಆಡಿ ಎ4 ಮತ್ತು ಬಿಎಂಡಬ್ಲ್ಯು 3 ಸೀರಿಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಎಂಜಿನ್, ವಿಶೇಷತೆ ಮತ್ತು ಕಾರ್ಯಕ್ಷಮತೆ: ನೂತನ ಪ್ರಯಾಸ್ ಕಾರು 1.8 ಲೀಟರ್ 2ಝಡ್ಆರ್ ಎಫ್ಎಕ್ಸ್ಇ ಇನ್ ಲೈನ್ ಟ್ವಿನ್, 16 ಕವಾಟದ ವಿವಿಟಿ-ಐ ಎಂಜಿನ್ ಹೊಂದಿದೆ. ಇದು 5,200 ಆರ್ಪಿಎಂಗೆ 73 ಕಿ.ವ್ಯಾಟ್ ಗರಿಷ್ಠ ಶಕ್ತಿ ನೀಡುತ್ತದೆ. ಇದರ ಟಾರ್ಕ್ ಪವರ್ 142 ಎನ್ಎಂ. ಈ ಕಾರಿನಲ್ಲಿ 650 ವೋಲ್ಟೆಜ್ ಎಲೆಕ್ಟ್ರಿಕ್ ಮೋಟರ್ ಇದ್ದು ಗರಿಷ್ಟ 60 ಕಿಲೋ ವ್ಯಾಟ್ ಪವರ್ ಮತ್ತು ಅನನ್ಯ 207 ಎನ್ ಎಮ ಟಾರ್ಕ್ ಪವರ್ ನೀಡುತ್ತದೆ.

ಟೊಯೊಟಾ ಪ್ರಯಾಸ್ ಹೊರವಿನ್ಯಾಸ ಆಕರ್ಷಕವಾಗಿದೆ. ಏರೋ ಡೈನಾಮಿಕ್ಸ್ ವಿನ್ಯಾಸ, ಡೈಮಂಡ್ ಕಟ್ ವಿನ್ಯಾಸದ ಹೆಡ್ ಲ್ಯಾಂಪ್ ಕ್ಲಸ್ಟರ್ ಇತ್ಯಾದಿಗಳು ಆಕರ್ಷಕವಾಗಿದೆ. ಕಾರಿನ ಮುಂಭಾಗದಲ್ಲಿರುವ ಗ್ರಿಲ್ ಮತ್ತು ಆಕರ್ಷಕ ಫಾಗ್ ಲ್ಯಾಂಪ್ ಕೂಡ ಇಷ್ಟವಾಗುತ್ತದೆ. ಇದರೊಂದಿಗೆ ಸೋಲರ್ ಪ್ಯಾನೆಲ್ ಮೂನ್ ರೂಫ್ ಕಾರಿನ ಸೌಂದರ್ಯ ಹೆಚ್ಚಿಸಿದೆ.

ನೂತನ ಪ್ರಯಾಸ್ ಕಾರಿನಲ್ಲಿ ಕೇವಲ 10.7 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳಬಹುದಾಗಿದೆ. ಈ ಕಾರಿನಲ್ಲಿ ಇನ್ನೇನು ವಿಶೇಷ ಇರಲಿದೆ? ಮುಂದಿನ ಪುಟ ನೋಡಿರಿ.

<ul id="pagination-digg"><li class="next"><a href="/car-reviews/toyota-prius-2012-review-specifica-aid0134.html">Next »</a></li></ul>
English summary
Toyota Prius 2012 Review. New Prius Engine, Specifications and Performance. Exteriors, Interiors, Comfort, Saftey Features, Mileage and Price Review.
Story first published: Monday, January 23, 2012, 15:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark