MG Windsor EV Review: ಎಂಜಿ ವಿಂಡ್ಸರ್ ಇವಿ ವಿಮರ್ಶೆ.. ಹೇಗಿದೆ.. ಇಷ್ಟು ಕಡಿಮೆ ಬೆಲೆಯೇ.. ಹೊಸ ಅಲೆ ಎಬ್ಬಿಸುತ್ತಾ?

ಬ್ರಿಟನ್ ಮೂಲದ ಎಂಜಿ ಮೋಟಾರ್ (MG Motor) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. 2017ರಲ್ಲಿ ಕಂಪನಿಯ ಮಾತೃಸಂಸ್ಥೆ ಚೀನಾ ಒಡೆತನದ ಎಸ್ಎಐಸಿ ಮೋಟೊಕಾರ್ಪ್ (SAIC Motor Corp), ಗುಜರಾತ್‌ನಲ್ಲಿರುವ ಜನರಲ್ ಮೋಟಾರ್ಸ್ ಹಾಲೋಲ್ ಉತ್ಪಾದನಾ ಘಟಕವನ್ನು ಸ್ಥಾಧಿನಪಡಿಸಿಕೊಂಡಿತ್ತು. ಎರಡು ವರ್ಷಗಳ ನಂತರ ಎಂಜಿ ಮೋಟಾರ್, 'ಹೆಕ್ಟರ್' ಎಸ್‌ಯುವಿ ಬಿಡುಗಡೆಯೊಂದಿಗೆ ಅಧಿಕೃತವಾಗಿ ದೇಶೀಯ ಕಾರು ಮಾರುಕಟ್ಟೆಯನ್ನು ಪ್ರವೇಶಿಸಿತು. ಆ ಬಳಿಕ, ಝಡ್ಎಸ್ ಇವಿ (ಎಲೆಕ್ಟ್ರಿಕ್ ಎಸ್‌ಯುವಿ) ಇಂಧನ ಚಾಲಿತ ಗ್ಲೋಸ್ಟರ್ ಮತ್ತು ಆಸ್ಟರ್ ಎಸ್‌ಯುವಿಗಳನ್ನು ಮಾರಾಟಕ್ಕೆ ತಂದಿತ್ತು. ಜೊತೆಗೆ ಪುಟ್ಟದಾದ ಕಾಮೆಟ್ ಇವಿಯನ್ನು ಪರಿಚಯಿಸಿತ್ತು.

ಸದ್ಯ, ಭಾರತದ ಪ್ರಮುಖ ವಾಣಿಜೋದ್ಯಮ ಸಂಸ್ಥೆ ಜೆ‌ಎಸ್‌ಡಬ್ಲ್ಯೂ (JSW) ಮತ್ತು ಎಂಜಿ ಮೋಟಾರ್ ಕಂಪನಿಗಳು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಇವೆರೆಡು ಕಂಪನಿಗಳ ಪಾಲುದಾರಿಕೆಯ ಭಾಗವಾಗಿ ವಿಂಡ್ಸರ್ ಇವಿ (Windsor EV) ಬಿಡುಗಡೆಗೊಂಡಿದ್ದು, ರೂ. 9.99 ಲಕ್ಷ (ಎಕ್ಸ್ ಶೋರೂಂ) ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ನಮಗೆ ಈ ಕಾರಿನ ಟೆಸ್ಟ್ ಡ್ರೈವ್ (ಪ್ರಾಯೋಗಿಕ ಚಾಲನೆ) ಮಾಡಲು ಅವಕಾಶ ದೊರೆಯಿತು. ಬನ್ನಿ.. ಹೇಗಿದೆ ಎಂಬುದನ್ನು ತಿಳಿಯೋಣ.

MG Windsor EV Review Specs Driving Impressions Design Features Details

ಹೊರಭಾಗದ ವಿನ್ಯಾಸ: ಹೊಚ್ಚ ಹೊಸ ಎಂಜಿ ವಿಂಡ್ಸರ್ ಇವಿ (MG Windsor EV) ಹೊರಭಾಗದಲ್ಲಿ ಅತ್ಯಾಧುನಿಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ನೋಡುವುದಕ್ಕೆ ದೊಡ್ಡ ಗಾತ್ರದಲ್ಲಿರುವ ಕಾಮೆಟ್ ಇವಿಯಂತೆ ಕಾಣುತ್ತದೆ. ಆದಾಗ್ಯೂ ಈ ಕಾರಿನಲ್ಲಿ 5-ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ನಡೆಸಬಹುದು.

ನೂತನ ಎಂಜಿ ವಿಂಡ್ಸರ್ ಇವಿ ಮುಂಭಾಗದಲ್ಲಿ (ಫ್ರಂಟ್) ನೋಡುಗರನ್ನು ಸೆಳೆಯುವಂತಹ ವಿನ್ಯಾಸ ಪಡೆದಿದ್ದು, ಎಲ್ಇಡಿ ಲೈಟ್‌ಬಾರ್‌ಗೆ ಹೋಲಿಕೆಯಾಗುವ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ಬಂಪರ್‌ ಕೆಳಭಾಗದಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗನ್ನು ಅಳವಡಿಕೆ ಮಾಡಲಾಗಿದೆ. ಅದಕ್ಕೆ ಅಂಟಿಕೊಂಡಂತೆ ಇರುವ ಬ್ಲ್ಯಾಕ್ (ಕಪ್ಪು) ಬಣ್ಣದ ಪ್ಲಾಸ್ಟಿಕ್‌ನ ಸ್ಟ್ರಿಪ್‌ನಲ್ಲಿ 'ಮೋರಿಸ್ ಗ್ಯಾರೇಜ್' ಎಂಬ ನೇಮ್‌ಪ್ಲೇಟ್‌ ಹೊಂದಿದ್ದು, ಆಕರ್ಷಕವಾಗಿರುವ 'ಎಂಜಿ' ಲೋಗೋ ಕೂಡ ಇದೆ.

MG Windsor EV Review Specs Driving Impressions Design Features Details

ಈ ಕಾರಿನ ಸೈಡ್ ಪ್ರೊಫೈಲ್ (ಬದಿಗಳ) ವಿನ್ಯಾಸ ಬೃಹದಾಕಾರದ ಎಂಪಿವಿಗೆ ಸಾಮ್ಯತೆ ಹೊಂದಿರುವಂತೆ ಭಾಸವಾಗುತ್ತದೆ. ವಿಶಾಲವಾದ ವಿಂಡ್‌ಸ್ಕ್ರೀನ್ ಹಾಗೂ ಗ್ಲಾಸ್ ರೂಫ್‌ನ್ನು ಪಡೆದಿದೆ. ಬ್ಲ್ಯಾಕ್ (ಕಪ್ಪು) ಬಣ್ಣದ ಪಿಲ್ಲರ್‌ಗಳು, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ಚಾರ್ಜಿಂಗ್ ಪೋರ್ಟ್, 18-ಇಂಚಿನ ಅಲಾಯ್ ವೀಲ್‌ಗಳು ಮತ್ತು 215/55 ಆರ್18 ಟೈಯರ್‌ಗಳನ್ನು ಹೊಂದಿದೆ.

ನೂತನ ಎಂಜಿ ವಿಂಡ್ಸರ್ ಇವಿ ಹಿಂಭಾಗವು (ರೇರ್) ಸಹ ಉತ್ತಮವಾದ ವಿನ್ಯಾಸ ಹೊಂದಿದೆ. ರೂಫ್-ಮೌಂಟೆಡ್ ಸ್ಪಾಯ್ಲರ್, ಕೊಂಚ ದೊಡ್ಡದಾಗಿರುವ ವಿಂಡ್‌ಸ್ಕ್ರೀನ್‌ನ್ನು ಪಡೆದಿದೆ. 'ವಿಂಡ್ಸರ್ ಇವಿ' ಬ್ಯಾಡ್ಜಿಂಗ್ ಹಾಗೂ ಎಲ್-ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಟೈಲ್‌ಲೈಟ್‌ಗಳನ್ನು ಒಳಗೊಂಡಿದೆ. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯತವಾಗುವಂತೆ 604 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

MG Windsor EV Review Specs Driving Impressions Design Features Details

ಒಳಭಾಗದ ವಿನ್ಯಾಸ ಹಾಗೂ ವೈಶಿಷ್ಟ್ಯಗಳು: ಹೊಸ ಎಂಜಿ ವಿಂಡ್ಸರ್ ಇವಿ (MG Windsor EV) ಒಳಭಾಗದಲ್ಲಿಯೂ ಅತ್ಯುತ್ತಮವಾದ ವಿನ್ಯಾಸ ಹೊಂದಿದೆ. ಇದು ಐಷಾರಾಮಿ ಕಾರುಗಳಿಗೆ ಸವಾಲೆಸೆಯುವ ರೀತಿಯಲ್ಲಿದ್ದು, ಕ್ಯಾಬಿನ್ ಸಾಫ್ಟ್ ಟಚ್ ಪ್ಲಾಸ್ಟಿಕ್‌ಗಳನ್ನು ಹೊಂದಿದೆ. ಡ್ಯಾಶ್ ಬೋರ್ಡ್, ಸ್ಟೀರಿಂಗ್ ವೀಲ್, ಆರ್ಮ್‌ರೆಸ್ಟ್ ಮತ್ತು ಏರ್-ಕಾನ್ ವೆಂಟ್‌ಗಳು ಹೆಚ್ಚು ಪ್ರಯಾಣಿಕ ಸ್ನೇಹಿಯಾಗಿದ್ದು, ವುಡ್ ಫಿನಿಷ್ ಕೆಲಸವನ್ನು ಮೆಚ್ಚಲೇಬೇಕು.

ಈ ಕಾರು, ಚಾಲಕನಿಗೆ ಮಾಹಿತಿ ಒದಗಿಸುವ ಸಲುವಾಗಿ 8.8-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇಯನ್ನು ಹೊಂದಿದೆ. ಪ್ರಯಾಣಿಕರ ಮನರಂಜನೆಗಾಗಿ ಆಂಡ್ರಾಯ್ಡ್ ಆಟೋ & ಆಪಲ್ ಕಾರ್‌ಪ್ಲೇಯನ್ನು ಬೆಂಬಲಿಸಬಲ್ಲ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನ್ನು ಪಡೆದಿದೆ. ಜೊತೆಗೆ ಇನ್ಫಿನಿಟಿ 9-ಸ್ಪೀಕರ್ ಆಡಿಯೊ ಸಿಸ್ಟಮ್‌ನ್ನು ಒಳಗೊಂಡಿದೆ.

MG Windsor EV Review Specs Driving Impressions Design Features Details

ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಬಹಳಷ್ಟು ಅತ್ಯಾಧುನಿಕವಾಗಿದೆ. 80ಕ್ಕೂ ಅಧಿಕ ಕನೆಕ್ಟೆಡ್ ಕಾರ್ ಫೀಚರ್‌ಗಳನ್ನು ಹೊಂದಿದೆ. ಜಿಯೋ ಚಾಲಿತ ಎಂಜಿ ಆಪ್ ಸ್ಟೋರ್ ಪಡೆದಿದೆ. ಇದು ಗೇಮ್ಸ್, ಮ್ಯೂಸಿಕ್ ಸ್ಟ್ರೀಮಿಂಗ್, ಓಟಿಟಿ ಮೂವೀಸ್, ಮಲ್ಟಿ ಲ್ಯಾಂಗ್ವೇಜ್ ವಾಯ್ಸ್ ರೆಕಗ್ನಿಷನ್ (ಇಂಗ್ಲಿಷ್, ಗುಜರಾತಿ, ಹಿಂದಿ, ಮರಾಠಿ, ತಮಿಳು, ತೆಲುಗು) ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳನ್ನು ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ.

ಎಂಜಿ ವಿಂಡ್ಸರ್ ಇವಿಯಲ್ಲಿ ಪ್ರಯಾಣಿಕರೂ ಆರಾಮದಾಯಕವಾಗಿ ಸಂಚರಿಸಬಹುದು. ಇದಕ್ಕಾಗಿ ಮುಂಭಾಗ (ಫ್ರಂಟ್) ವೆಂಟಿಲೇಟೆಡ್ ಸೀಟ್‌ಗಳನ್ನು ಹೊಂದಿದೆ. ಡ್ರೈವರ್ ಸೀಟ್ 6-ವೇ ಪವರ್ ಅಡ್ಜಸ್ಟ್ಮೆಂಟ್ ಅನ್ನು ಒಳಗೊಂಡಿದೆ. ವಿಶೇಷವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿರುವ ಆರ್ಮ್‌ರೆಸ್ಟ್‌ಗಳೆರಡರಲ್ಲೂ ಕಪ್‌ಹೋಲ್ಡರ್‌ಗಳಿವೆ. ಇದರೊಟ್ಟಿಗೆ ಲೆಥೆರೆಟ್ ಅಪ್ಹೋಲ್‌ಸ್ಟರಿ, ವೈರ್‌ಲೆಸ್ ಫೋನ್ ಚಾರ್ಜರ್, ಮಲ್ಟಿ ಚಾರ್ಜಿಂಗ್ ಪೋರ್ಟ್‌ಗಳು, ಆಂಬಿಯೆಂಟ್ ಲೈಟಿಂಗ್ ಸೆಟಪ್ ಮತ್ತು ರೇರ್ ಎಸಿ ವೆಂಟ್‌ನಂತಹ ಗಲವುವೈಶಿಷ್ಟ್ಯಗಳನ್ನು ಒಳಗೊಂಡಿದೆ.

MG Windsor EV Review Specs Driving Impressions Design Features Details

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. 6-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಲ್ಇಡಿ ಕಾರ್ನರ್ & ರೇರ್ ಫಾಗ್ ಲೈಟ್‌ಗಳು, ಆಲ್ ವೀಲ್‌ ಡಿಸ್ಕ್ ಬ್ರೇಕ್‌ಗಳು ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಸುತ್ತಳತೆ & ಕಾರ್ಯಕ್ಷಮತೆ: ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರು 4,295 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,652 ಎಂಎಂ ಎತ್ತರವಿದೆ. 2,700 ಎಂಎಂ ವೀಲ್‌ಬೇಸ್‌ನ್ನು (ಚಕ್ರಗಳ ನಡುವಿನ ಅಂತರ) ಹೊಂದಿದೆ. ಜೊತೆಗೆ 186 ಎಂಎಂ ಗ್ರೌಂಡ್ ಕ್ಲಿಯರೆನ್ಸ್ (ನೆಲದ ಎತ್ತರ) ಇದೆ.

MG Windsor EV Review Specs Driving Impressions Design Features Details

ನೂತನ ಎಂಜಿ ವಿಂಡ್ಸರ್ ಇವಿಯಲ್ಲಿ ಪಿಎಂಎಸ್ಎಂ ಮೋಟಾರ್ ಉಪಯೋಗ ಮಾಡಲಾಗಿದೆ. ಇದು 134 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 200 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಉತ್ಪಾದಿಸುತ್ತದೆ. 38 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ ಒಟ್ಟಾರೆ 331 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಆದಾಗ್ಯೂ ವಿವಿಧ ರಸ್ತೆಗಳಿಗೆ ಅನುಗುಣವಾಗಿ ಸುಮಾರು 250 ಕಿಲೋಮೀಟರ್‌ವರೆಗೆ ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ.

ಈ ವಿಂಡ್ಸರ್‌ ಕಾರಿನ ಬ್ಯಾಟರಿಯು 45 ಕೆಡಬ್ಲ್ಯೂ ಫಾಸ್ಟ್ ಡಿಸಿ ಚಾರ್ಜಿಂಗ್ ಬಳಕೆಯಲ್ಲಿ 0-80% ಚಾರ್ಜ್ ಆಗಲು ಕೇವಲ 55 ನಿಮಿಷ ತೆಗೆದುಕೊಳ್ಳುತ್ತದೆ. ಹಾಗೆಯೇ 3.3 ಕೆಡಬ್ಲ್ಯೂ ಮತ್ತು 7.4 ಕೆಡಬ್ಲ್ಯೂ ಎಸಿ ಚಾರ್ಜರ್‌ ಆಯ್ಕೆಯನ್ನು ಹೊಂದಿದೆ. ವಿಂಡ್ಸರ್‌ನ ಬ್ಯಾಟರಿ ಜೀವಮಾನದ (ಲೈಫ್‌ಟೈಮ್) ವಾರಂಟಿ ಪಡೆದಿದ್ದು, ಇದು ಬಾಡಿಗೆ ಆಧಾರದಲ್ಲಿ ಲಭ್ಯವಿದೆ. ವಾಹನ ಮಾಲೀಕರು ಕಿಲೋಮೀಟರ್‌ಗೆ ರೂ.3.5 ಶುಲ್ಕವನ್ನು ಪಾವತಿಸಬೇಕು.

MG Windsor EV Review Specs Driving Impressions Design Features Details

ಚಾಲನಾ ಅನುಭವ: ನಮಗೆ ಚಾಲನೆ ಮಾಡುವಾಗ ಎಂಜಿ ವಿಂಡ್ಸರ್ ಇವಿ ಆರಾಮದಾಯಕವಾದ ಪ್ರಯಾಣವನ್ನು ಒದಗಿಸಿತು. ಈ ಕಾರು ಇಕೋ, ನಾರ್ಮಲ್ & ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್‌ ಆಯ್ಕೆಯನ್ನು ಹೊಂದಿದೆ. ಸ್ಪೋರ್ಟ್‌ ಮೋಡ್‌ನಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸಲಿದ್ದು, ಲೀಲಾಜಾಲವಾಗಿ ಈ ಕಾರನ್ನು ರಸ್ತೆಯ ಮೇಲೆ ಓಡಿಸಬಹುದು. ನಗರ ಪ್ರದೇಶದ ಸಂಚಾರ ದಟ್ಟಣೆಯಿರುವ ರಸ್ತೆಗೆ ಇಕೋ ಮೋಡ್ ಸಹಕಾರಿಯಾಗಿದ್ದು, ನಾರ್ಮಲ್ ಮೋಡ್ ಕೂಡ ಉತ್ತಮವಾಗಿದೆ.

ವಿಂಡ್ಸರ್ ಇವಿಯ ಮುಂಭಾಗ (ಫ್ರಂಟ್) ಮ್ಯಾಕ್‌ಫರ್ಸನ್ ಸ್ಟ್ರಟ್ ಹಾಗೂ ಹಿಂಭಾಗ (ರೇರ್) ಟಾರ್ಶನ್ ಬೀಮ್ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಇದು ಉಬ್ಬು - ತಗ್ಗು, ಹಳ್ಳ - ದಿಣ್ಣೆಯಿಂದ ಕೂಡಿದ ರಸ್ತೆಯಲ್ಲಿಯೂ ಕಾರನ್ನು ಸುಲಭವಾಗಿ ಚಲಿಸುವಂತೆ ಮಾಡುತ್ತದೆ. ಡಿಸ್ಕ್ ಬ್ರೇಕ್‌ಗಳು ಸಹ ಅತ್ಯುತ್ತಮವಾಗಿ ಕೆಲಸ ಮಾಡುತ್ತೇವೆ.

ಕೊನೆ ಮಾತು: ಹೊಚ್ಚ ಹೊಸ ಎಂಜಿ ವಿಂಡ್ಸರ್ ಇವಿ (MG Windsor EV) ಹೆಚ್ಚು ಅತ್ಯಾಧುನಿಕವಾಗಿರುವ ಕಾರಾಗಿದೆ. ನೀವು ದಿನನಿತ್ಯದ ಪ್ರಯಾಣಕ್ಕೆ ಪರಿಸರ ಸ್ನೇಹಿಯಾಗಿರುವ ವಿದ್ಯುತ್ (ಎಲೆಕ್ಟ್ರಿಕ್) ಚಾಲಿತ ಕಾರನ್ನು ಹುಡುಕುತ್ತಿದ್ದರೆ, 'ವಿಂಡ್ಸರ್' ಉತ್ತಮವಾದ ಆಯ್ಕೆಯಾಗಲಿದೆ. ಕೈಗೆಟುಕುವ ಬೆಲೆಯಲ್ಲಿ ದೊರೆಯುವುದರೊಂದಿಗೆ ಆಕರ್ಷಕವಾದ ವೈಶಿಷ್ಟ್ಯಗಳನ್ನು ಪಡೆದಿದೆ. ಮುಂಬರುವ ದಿನಗಳಲ್ಲಿ ದೇಶೀಯ ಗ್ರಾಹಕರಿಂದ ಈ ಕಾರಿಗೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುವಂತೆ ಎಂಬುದನ್ನು ಕಾದುನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, September 23, 2024, 11:00 [IST]
English summary
Mg windsor ev review specs driving impressions design features details
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+