ಭಾರತಕ್ಕೆ ಮೊದಲ ಬಾರಿ ಎಂಟ್ರಿ: ಅಪರೂಪದ VW ಗಾಲ್ಫ್ GTI ಹ್ಯಾಚ್‌ಬ್ಯಾಕ್ ರಿವ್ಯೂ

"GTI" ಅಕ್ಷರಗಳು ಆಟೋಮೋಟಿವ್ ಪ್ರಪಂಚದಲ್ಲಿ ವಿಶೇಷ ಅರ್ಥವನ್ನು ಹೊಂದಿವೆ. ಈ ಬ್ಯಾಡ್ಜ್‌ಗೆ ಹೆಚ್ಚು ಹೆಸರುವಾಸಿಯಾದ ಹ್ಯಾಚ್‌ಬ್ಯಾಕ್ ವೋಕ್ಸ್‌ವ್ಯಾಗನ್ ಗಾಲ್ಫ್ ಆಗಿದೆ, ಇದು ವಿಶ್ವಾದ್ಯಂತ ಕಾರು ಉತ್ಸಾಹಿಗಳಿಗೆ ಅತ್ಯಂತ ಜನಪ್ರಿಯ ಕಾರಾಗಿದೆ. 2007 ರಲ್ಲಿ ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದಾಗಿನಿಂದ, 'ಗಾಲ್ಫ್' ಹ್ಯಾಚ್‌ಬ್ಯಾಕ್‌ ಅನ್ನು ಭಾರತಕ್ಕೆ ತಂದಿಲ್ಲ. ಏಕೆಂದರೆ ಇದು ಭಾರತದಲ್ಲಿ ದುಬಾರಿ ಹ್ಯಾಚ್‌ಬ್ಯಾಕ್ ಹಾಗೂ ಹೆಚ್ಚು ಬೆಲೆಬಾಳುವ ಕಾರು ಎಂದು ಪರಿಗಣಿಸಲಾಗಿತ್ತು. ಹಾಗಾಗಿ ಇದರ ಸಣ್ಣ ಆವೃತ್ತಿಯಾದ ಪೋಲೊ GTI ಅನ್ನು 2016 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು.

ಆರಂಭದಲ್ಲಿ ಗ್ರಾಹಕರಿಂದ ಸರಿಯಾದ ಉತ್ಸಾಹವಿಲ್ಲದ ಕಾರಣ ಈ ಕಾರನ್ನು ಸ್ಥಗಿಸಗೊಳಿಸಲಾಯಿತು. ಇದೀಗ ಸುಮಾರು ಒಂದು ದಶಕದ ನಂತರ, ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳಿಗೆ ಗ್ರಾಹಕರು ಹಣ ಪಾವತಿಸಲು ಸಿದ್ದರಿದ್ದಾರೆ. ಹಾಗಾಗೆ ಫೋಕ್ಸ್‌ವ್ಯಾಗನ್ ಅಂತಿಮವಾಗಿ ಭಾರತಕ್ಕೆ ಅದರ ಮೂಲ ಹಾಟ್ ಹ್ಯಾಚ್‌ಬ್ಯಾಕ್ ಗಾಲ್ಫ್ GTI ಅನ್ನು ತಂದಿದೆ. ಈ ಕಾರನ್ನು ರಿವ್ಯೂ ಮಾಡಲು ನಮಗೆ ಅವಕಾಶ ಸಿಕ್ಕಿದ್ದು, ಈ ಪವರ್‌ಫುಲ್‌ ರಾಕೆಟ್‌ ಬಗ್ಗೆ ವಿವರಿಸಿದ್ದೇವೆ.

volkswagen-golf-gti-review-design-features-engine-details

ವೋಕ್ಸ್‌ವ್ಯಾಗನ್ ಗಾಲ್ಫ್ GTI ರಿವ್ಯೂ: ಗಾಲ್ಫ್ GTI ಮೂಲಭೂತವಾಗಿ, MK 8.5 ಗಾಲ್ಫ್ (ಫೇಸ್‌ಲಿಫ್ಟೆಡ್ ಜೆನ್ 8) ಮೇಲೆ ಗೋ-ಫಾಸ್ಟರ್ ಬಾಡಿ ಕಿಟ್ ಅನ್ನು ಹೊದಿಸಲಾಗಿದೆ. ಮುಂಭಾಗದಲ್ಲಿ, GTI ಬ್ಯಾಡ್ಜ್ ಮತ್ತು LED DRL ಗಳನ್ನು ಹೊಂದಿರುವ ಸಣ್ಣ ಮೇಲ್ಭಾಗದ ಗ್ರಿಲ್ ಮೂಲಕ ಮಧ್ಯದಲ್ಲಿ ಪ್ರಕಾಶಿತ VW ಬ್ಯಾಡ್ಜ್‌ಗೆ ಸಂಪರ್ಕಗೊಂಡಿರುವ ನಯವಾದ ಮ್ಯಾಟ್ರಿಕ್ಸ್ LED ಹೆಡ್‌ಲೈಟ್‌ಗಳನ್ನು ನೀವು ಕಾಣಬಹುದು.

ಗಾಲ್ಫ್ GTI ಯ ಮುಂಭಾಗದ ತುದಿಯಲ್ಲಿ ಕೆಳಗೆ ನೋಡಿದಾಗ, ನೀವು ದೊಡ್ಡ ಏರ್ ಡ್ಯಾಮ್ ಕಾಣಬಹುದು, ಎರಡೂ ಬದಿಗಳಲ್ಲಿ X-ಆಕಾರದ LED ಫಾಗ್ ಲೈಟ್‌ಗಳಿಂದ ಸುತ್ತುವರೆದಿದ್ದು, ಅದರ ಸುತ್ತಲೂ ದೊಡ್ಡ L-ಆಕಾರದ ವಿಂಗ್‌ಲೆಟ್‌ಗಳು ಇವೆ. ಬದಿಗಳಲ್ಲಿ ORVM ಗಳ ಕೆಳಗೆ ಇರಿಸಲಾಗಿರುವ ಮುಂಭಾಗದ ಬಾಗಿಲುಗಳಲ್ಲಿ ಕೆಂಪು GTI ಬ್ಯಾಡ್ಜ್‌ಗಳಿವೆ.

volkswagen-golf-gti-review-design-features-engine-details

ಇಂಡಿಯಾ-ಸ್ಪೆಕ್ ಗಾಲ್ಫ್ GTI 18-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಅದರ ಹಿಂದೆ ನೀವು ಕೆಂಪು-ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳನ್ನು ಕಾಣಬಹುದು. ಫೋಕ್ಸ್‌ವ್ಯಾಗನ್ ಗಾಲ್ಫ್ GTI ಯ ಹಿಂಭಾಗದಲ್ಲಿ ನೀವು ಶಾರ್ಕ್ ಫಿನ್ ಆಂಟೆನಾ, ರೂಫ್-ಮೌಂಟೆಡ್ ಸ್ಪಾಯ್ಲರ್, ಸ್ಮೋಕ್ಡ್ LED ಟೈಲ್‌ಲೈಟ್‌ಗಳು ಮತ್ತು VW ಲೋಗೋ ಅಡಿಯಲ್ಲಿ GTI ನೇಮ್‌ಪ್ಲೇಟ್ ಅನ್ನು ಗಮನಿಸಬಹುದ.

ಹಿಂಭಾಗದ ಬಂಪರ್‌ನ ಕೆಳಗೆ ನೋಡಿದಾಗ, ಡಿಫ್ಯೂಸರ್ ಅನ್ನು ಕಾಣಬಹುದು ಅದರ ಅಂಚುಗಳಿಂದ ಎರಡು ಎಕ್ಸಾಸ್ಟ್ ಟಿಪ್‌ಗಳು ಹೊರಬಂದಿವೆ. ಸ್ಟೀರಿಂಗ್ ವೀಲ್ ಮತ್ತು ಐಕಾನಿಕ್ GTI ಟಾರ್ಟನ್ ಮಾದರಿಯಲ್ಲಿರುವ ಸೀಟುಗಳ ಮೇಲೆ ಕೆಂಪು ಹೊಲಿಗೆ (ರೆಡ್ ಸ್ಟಿಚಿಂಗ್) ಇದೆ. ಸ್ಟೀರಿಂಗ್ ವೀಲ್‌ನ ಕೆಳಗಿನ ಸ್ಪೋಕ್‌ನಲ್ಲಿ ಹೆಚ್ಚಿನ ಕೆಂಪು ಹೈಲೈಟ್‌ಗಳನ್ನು ಕಾಣಬಹುದು, ಇದು ಕೆಂಪು GTI ಬ್ಯಾಡ್ಜ್, ಡ್ಯಾಶ್‌ಬೋರ್ಡ್ ಮತ್ತು ಬಾಗಿಲುಗಳನ್ನು ಸಹ ಹೊಂದಿದೆ.

volkswagen-golf-gti-review-design-features-engine-details

ಗಾಲ್ಫ್ GTI ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್ ಡಿಸ್ಪ್ಲೇ ಸೆಟಪ್ ಹೊಂದಿದೆ, ಇದು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 12.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಅನ್ನು ಹೊಂದಿದೆ. ಇದು VW ನೀಡುವ ಇತ್ತೀಚಿನ MIB4 ಸಾಫ್ಟ್‌ವೇರ್‌ನೊಂದಿಗೆ ತುಂಬಿದೆ. ಡ್ರೈವರ್ ಡಿಸ್ಪ್ಲೇ ಮತ್ತು ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಸ್ಟೀರಿಂಗ್ ವೀಲ್‌ನಲ್ಲಿರುವ ಬಟನ್‌ಗಳನ್ನು ಬಳಸಿಕೊಂಡು ನಿಯಂತ್ರಿಸಬಹುದು.

ಗಾಲ್ಫ್ GTI ನ ವಿಶಾಲವಾದ ಕ್ಯಾಬಿನ್‌ನ ಇತರ ಮುಖ್ಯಾಂಶಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, ಪನೋರಮಿಕ್ ಸನ್‌ರೂಫ್ ಮತ್ತು ನೀವು ಎಲ್ಲೇ ಕುಳಿತರೂ ಸಾಕಷ್ಟು ಸ್ಥಳಾವಕಾಶ ಸೇರಿವೆ. ನಿಮ್ಮ ಮೊಬೈಲ್‌ಗಳಿಗೆ 45 ವ್ಯಾಟ್‌ಗಳವರೆಗೆ ಪವರ್ ತಲುಪಿಸುವ ನಾಲ್ಕು USB ಟೈಪ್ C ಪೋರ್ಟ್‌ಗಳು ಸಹ ಇವೆ.

volkswagen-golf-gti-review-design-features-engine-details

ಮುಂಭಾಗದ ಬಕೆಟ್ ಸೀಟುಗಳು, ವಿಶೇಷವಾಗಿ ಚಾಲಕನ ಯುನಿಟ್ ಹಿತಕರವಾಗಿದ್ದು, ನಿಮ್ಮನ್ನು ನಿಮ್ಮ ಸ್ಥಳದಲ್ಲಿ ಇರಿಸಿಕೊಳ್ಳಲು ಸಾಕಷ್ಟು ಬೆಂಬಲವನ್ನು ನೀಡುತ್ತದೆ. ಹಿಂಭಾಗದ ಬೆಂಚ್ ಸಾಕಷ್ಟು ಹೆಡ್ ಸ್ಪೇಸ್ ಅನ್ನು ನೀಡುತ್ತದೆ. ಲೆಗ್ ರೂಮ್ ಲಾಂಗ್ ಡ್ರೈವ್‌ಗೆ ಸಾಕಷ್ಟು ವಿಶಾಲವಾಗಿದೆ. ಗಾಲ್ಫ್ GTI ನ ಬೂಟ್ ನಾಲ್ಕು ಜನರ ಕುಟುಂಬಕ್ಕೆ ನಗರದಿಂದ ಹೊರಗೆ ವಾರಾಂತ್ಯದ ಔಟಿಂಗ್ ಹೋಗಲು 374 ಲೀಟರ್ ಲಗೇಜ್ ತುಂಬಲು ಸ್ಥಳಾವಕಾಶ ನೀಡುತ್ತದೆ.

ಗಾಲ್ಫ್ GTI ಲೇನ್ ಅಸಿಸ್ಟ್, ಟ್ರಾಫಿಕ್ ಜಾಮ್ ಅಸಿಸ್ಟ್, ಎಮರ್ಜೆನ್ಸಿ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಎಮರ್ಜೆನ್ಸಿ ಬ್ರೇಕಿಂಗ್ ಫ್ರಂಟ್ ಅಸಿಸ್ಟ್ ಮತ್ತು ಇನ್ನೂ ಹೆಚ್ಚಿನ ADAS ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಸಾಮಾನ್ಯ ಏರ್‌ಬ್ಯಾಗ್‌ಗಳ ಶ್ರೇಣಿ, EBD ಜೊತೆಗೆ ABS, ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಹೊಂದಿದೆ.

volkswagen-golf-gti-review-design-features-engine-details

ಎಂಜಿನ್ ವಿಷಯಕ್ಕೆ ಬಂದರೆ Mk 8.5 VW ಗಾಲ್ಫ್ GTI ಕಂಪನಿಯ EA888 EVO4 2.0-ಲೀಟರ್, 4 ಸಿಲಿಂಡರ್, ಡೈರೆಕ್ಟ್-ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್‌ ಹೊಂದಿದೆ. ಈ ಎಂಜಿನ್ 261bh ಪವರ್ ಮತ್ತು 370Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಇದನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. ಇದು 5.9 ಸೆಕೆಂಡುಗಳಲ್ಲಿ 100km ವೇಗ ಹಾಗೂ 250km ಗರಿಷ್ಠ ವೇಗವನ್ನು ತಲುಪಬಲ್ಲದು.

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಮುಂಭಾಗದ ಆಕ್ಸಲ್‌ನಲ್ಲಿ ಸೀಮಿತ ಸ್ಲಿಪ್ ಡಿಫರೆನ್ಸ್ ಅನ್ನು ಹೊಂದಿದ್ದು, ಇದು ಪವರ್ ಅನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಸಾಮಾನ್ಯ ಗಾಲ್ಫ್‌ಗೆ ಹೋಲಿಸಿದರೆ ಸಸ್ಪೆನ್ಷನ್ ಸೆಟಪ್ ಅನ್ನು ಬಲಪಡಿಸಲಾಗಿದೆ. ಇದು 225/40/R18 ಲೋ-ಪ್ರೊಫೈಲ್ ಟೈರ್‌ಗಳನ್ನು ಹೊಂದಿದ್ದು, 18-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ.

volkswagen-golf-gti-review-design-features-engine-details

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ 4,289 ಮಿ.ಮೀ ಉದ್ದ, 1,789 ಮಿ.ಮೀ ಅಗಲ (ಕನ್ನಡಿಗಳನ್ನು ಹೊರತುಪಡಿಸಿ) ಮತ್ತು 1,456 ಮಿ.ಮೀ ಎತ್ತರವನ್ನು ಹೊಂದಿದೆ. ವೀಲ್‌ಬೇಸ್ 2,627 ಮಿ.ಮೀ ಉದ್ದ ಮತ್ತು ಟರ್ನಿಂಗ್ ಸರ್ಕಲ್ 12 ಮೀಟರ್ ಇದೆ. ಗಾಲ್ಫ್ ಜಿಟಿಐ 134 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ನಾವು ಈ ಕಾರನ್ನು ನ್ಯಾಟ್ರಾಕ್ಸ್‌ನಲ್ಲಿ ಓಡಿಸಿದ್ದೇವೆ, ಇದರ ಪರ್ಫಾಮೆನ್ಸ್ ನೋಡಿ ಗಾಲ್ಫ್ ಜಿಟಿಐ ಹಾಟ್ ಹ್ಯಾಚ್‌ಬ್ಯಾಕ್ ಉತ್ಸಾಹಿಗಳ ಪ್ರಿಯತಮೆಯಾಗುವುದು ಪಕ್ಕಾ ಎಂಬುದನ್ನು ನಮಗೆ ತೋರಿಸಿದೆ. GTI ಹೇಳಿಕೊಳ್ಳುವ ಸ್ಪ್ರಿಂಟ್ ಸಮಯಕ್ಕೆ ತಕ್ಕಂತೆ ತನ್ನನ್ನು ನೊರೂಪಿಸಿಕೊಂಡಿದೆ. ಇದನ್ನು ನಾವು ನ್ಯಾಟ್ರಾಕ್ಸ್‌ನಂತಹ ನಿಯಂತ್ರಿತ ರಸ್ತೆಯಲ್ಲಿ ಓಡಿಸ ತುಂಬಾ ಖುಷಿಪಟ್ಟಿದ್ದೇವೆ.

volkswagen-golf-gti-review-design-features-engine-details

EA888 ಗೇರ್‌ಗಳನ್ನು ಸುಲಭವಾಗಿ ಮೇಲಕ್ಕೆ ಮತ್ತು ಕೆಳಕ್ಕೆ ಬದಲಾಯಿಸುವ DSG ಗೇರ್‌ಬಾಕ್ಸ್‌ ಓಡಿಸಲು ಬಲು ಮಜಾ ನೀಡುತ್ತದೆ. ನೀವು ಸಾರ್ವಜನಿಕ ರಸ್ತೆಗಳಲ್ಲಿ ಓಡಿಸುವಾಗ ಜಾಗರೂಕರಾಗಿರಬೇಕು, ಏಕೆಂದರೆ ಈ ಹಾಟ್ ಹ್ಯಾಚ್‌ಬ್ಯಾಕ್ ಮೂರು-ಅಂಕಿಯ ವೇಗವನ್ನು ತುಂಬಾ ಸುಲಭವಾಗಿ ತಲುಪುತ್ತದೆ. ನೀವು ಹೆದ್ದಾರಿ ವೇಗದಲ್ಲಿ ಪ್ರಯಾಣಿಸುತ್ತಿದ್ದರೆ ಇತರ ವಾಹನಗಳನ್ನು ಹಿಂದಿಕ್ಕಲು ಸುಲಭವಾಗಿಸುತ್ತದೆ. ನಿಮ್ಮ ದಾರಿಯಲ್ಲಿ ಯಾರೇ ಸಿಕ್ಕರೂ ಅದನ್ನು ದಾಟಿ ನೀವು ಘರ್ಜಿಸಲು ಅನುವು ಮಾಡಿಕೊಡುತ್ತದೆ.

ಗಟ್ಟಿಯಾದ ಸಸ್ಪೆನ್ಷನ್ ಸೆಟಪ್ ನಿಮಗೆ ಸುಲಭವಾಗಿ ತಿರುಗಲು ಮತ್ತು ತಿರುವುಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಕ್ಕೆ ಮುಂಭಾಗದ ಆಕ್ಸಲ್‌ಗೆ ಬೋಲ್ಟ್ ಮಾಡಲಾದ ಸೀಮಿತ-ಸ್ಲಿಪ್ ಡಿಫರೆನ್ಷಿಯಲ್ ಸಹಾಯ ಮಾಡುತ್ತದೆ. ಇದು GTI ತನ್ನ ಪವರ್‌ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ, ಗಟ್ಟಿಯಾದ ಸಸ್ಪೆನ್ಷನ್ ಸೆಟಪ್ ಹೊರತಾಗಿಯೂ, ಕರ್ಬ್‌ಗಳ ಮೇಲೆ ಸವಾರಿ ಸಾಕಷ್ಟು ಆರಾಮದಾಯಕವಾಗಿತ್ತು.

volkswagen-golf-gti-review-design-features-engine-details

ಆಲ್-ವೀಲ್ ಡಿಸ್ಕ್ ಸೆಟಪ್ ಗಾಲ್ಫ್ GTI ಅನ್ನು ಡಬಲ್-ಕ್ವಿಕ್ ಸಮಯದಲ್ಲಿ ನಿಲ್ಲಿಸುತ್ತದೆ. ಬ್ರೇಕ್‌ಗಳು ತೀಕ್ಷ್ಣವಾಗಿದ್ದು, ಪೆಡಲ್ ಕಾರ್ಯನಿರ್ವಹಿಸಲು ಸಾಕಷ್ಟು ಸುಲಭವಾಗಿದೆ. ಫೋಕ್ಸ್‌ವ್ಯಾಗನ್ ಗಾಲ್ಫ್ GTI ಎಂಬುದು ಉತ್ಸಾಹಿಗಳಿಗೆ ವಾರಾಂತ್ಯ ದಿನದಲ್ಲಿ ಇದರ ಪರ್ಫಾಮೆನ್ಸ್ ಸಾಮರ್ಥ್ಯವನ್ನು ಹೊರತೆಗೆಯುವ ಹ್ಯಾಚ್‌ಬ್ಯಾಕ್ ಆಗಿದೆ. ಮನಸ್ಸಿಗೆ ನೆಮ್ಮದಿ ನೀಡುವ ಪವರ್‌ಫುಲ್‌ ರಾಕೆಟ್ ಆಗಿದೆ.

ಗಾಲ್ಫ್ GTI ಪ್ರಾಯೋಗಿಕ ಮತ್ತು ಪರ್ಫಾಮೆನ್ಸ್ GTI ಬ್ಯಾಡ್ಜ್‌ಗೆ ಯಾವುದೇ ಕೆಟ್ಟ ಹೆಸರು ತರುವ ಅಥವಾ ಅದರ ಹೈಪ್‌ಗೆ ದಕ್ಕೆ ತರದೆ ಮುನ್ನುಗ್ಗುವ ಹ್ಯಾಚ್‌ಬ್ಯಾಕ್ ಆಗಿದೆ. ಗಾಲ್ಫ್ GTI ಪಡೆಯುವಲ್ಲಿ ಯಶಸ್ವಿಯಾದ 150 ಅದೃಷ್ಟಶಾಲಿಗಳಿಗೆ ಅದನ್ನು ಬುಕ್‌ ಮಾಡಿದ ಬಳಿಕ ಖಂಡಿತವಾಗಿಯೂ ಕಾಯಲು ಯೋಗ್ಯವಾಗಿದೆ.

More from DriveSpark

Article Published On: Monday, May 26, 2025, 11:00 [IST]
English summary
Volkswagen golf gti review design features engine details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+