ನಿರಾಶೆ ಕಾರ್ಮೋಡದಲ್ಲೂ ಮಿಂಚಲಿರುವ ಕಾರುಗಳು

New car models to hit indian roads soon
ಆರ್ಥಿಕ ಬಿಕ್ಕಟ್ಟಿನ ಹೊಡೆತ ಭಾರತದಲ್ಲಿ ಕಾರುಗಳ ಮಾರಾಟದ ವೇಗಕ್ಕೆ ಬ್ರೇಕ್ ಹಾಕಿದೆ. ಆದರೂ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಾರುಗಳ ಮಾರಾಟ ನಿರಾಶಾದಾಯಕವಾಗೇನೂ ಇಲ್ಲ. ಅನ್ಯ ದೇಶಗಳಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿದ್ದರೆ, ಭಾರತದಲ್ಲಿ ವಿಶ್ವಾಸದ ಮಟ್ಟ ಇನ್ನೂ ಕುಸಿದಿಲ್ಲ. ವರ್ಷಾದಾರಂಭದಲ್ಲಿ ಕಾರು ತಯಾರಕರು ಝೈಲೋ, ಲಿನಿಯಾ ಮೊದಲಾದ ಅತ್ಯಾಕರ್ಷಕ ಕಾರಿನ ಮಾಡೆಲ್ ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಜನ ಅವುಗಳತ್ತ ಸಹಜವಾಗಿಯೇ ಸೆಳೆಯಲು ಸಫಲವಾಗಿವೆ. ಇನ್ನೂ ಅನೇಕ ಮಾದರಿಯ ಕಾರುಗಳು ಬಿಕ್ಕಟ್ಟಿನ ನಡುವೆಯೂ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸಲು ಸಿದ್ಧವಾಗಿವೆ. ಅವುಗಳತ್ತ ಒಂದು ನೋಟ ಹರಿಸೋಣ.

ಟಾಟಾ ನ್ಯಾನೋ

ಟಾಟಾ ನ್ಯಾನೋ ಈ ಶತಮಾನದ ಭಾರೀ ನಿರೀಕ್ಷೆಯ ವಾಹನ. ತಯಾರಿಕಾ ಘಟಕಕ್ಕೆ ಸಂಬಂಧಿಸಿದ ವಿವಾದ ಮತ್ತು ಸ್ಥಳ ಬದಲಾವಣೆಯಿಂದಾಗಿ ಬಿಡುಗಡೆಯ ದಿನಾಂಕ ಮುಂದೂಡಲಾಗಿದ್ದರೂ, ಅದರ ಬಗೆಗಿನ ನಿರೀಕ್ಷೆ ಇನ್ನೂ ಹಾಗೇ ಇದೆ. ಗುಜರಾತ್ ನ ಘಟದಿಂದ ಉತ್ಪಾದನೆ ಪ್ರಾರಂಭವಾಗುವವರೆಗೂ ಇತರ ಘಟಕದಿಂದ ಕಡಿಮೆ ಪ್ರಮಾಣದ ನ್ಯಾನೋ ಕಾರುಗಳನ್ನು ಟಾಟಾ ಬಿಡುಗಡೆ ಮಾಡಲಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿಯೂ ಒಂದು ಲಕ್ಷದ ಕಾರು ಜನರ ಲಕ್ಷ್ಯವನ್ನು ತನ್ನತ್ತ ಸೆಳೆಯಲು ಶಕ್ತವಾಗಿದೆ.

ಮಾರುತಿ ರಿಜ್

'ಸ್ಲಾಷ್' ಎಂದೇ ಜನಪ್ರಿಯವಾಗಿರುವ ಈ ಪುಟಾಣಿ ಕಾರು ಜಪಾನಿ ತಯಾರಕರ ಸಣ್ಣ ಕಾರುಗಳಿಗೆ ಹೊಸ ಸೇರ್ಪಡೆ. ಮಾರುತಿಯ ಎ-ಸ್ಟಾರ್ ಮತ್ತು ಸ್ವಿಫ್ಟ್ ನಡುವಿನ ರಿಜ್, ಕೆಬಿ ಫ್ಯಾಮಿಲಿ ಇಂಜಿನ್ ಹೊಂದಿದೆ. ಹ್ಯೂಂಡೈನ ಐ10 ಮತ್ತು ಐ20ಗೆ ಉತ್ತರವಾಗಿ ಎ-ಸ್ಟಾರ್ ಮತ್ತು ರಿಜ್ ಸ್ಪರ್ಧೆ ನೀಡಲಿವೆಯೆ? ಕಾಲವೇ ಉತ್ತರಿಸಲಿದೆ.

ಹೊಂಡಾ ಜಾಜ್

ಹೊಂಡಾದ ಸಿವಿಕ್ ಮತ್ತು ಸಿಟಿ ಕಾರುಗಳ ಬಗೆಗಿನ ಭಾರತೀಯರ ಒಲವಿನ ಬಗ್ಗೆ ಎರಡು ಮಾತಿಲ್ಲ. ಆದರೆ ಪ್ರತಿಯೊಬ್ಬರೂ 8ರಿಂದ 10 ಲಕ್ಷ ಸುರಿಯಲು ಸಾಧ್ಯವಿಲ್ಲವಲ್ಲ? ಭಾರತ ಸಣ್ಣ ಕಾರುಗಳಿಗೆ ಹೇಳಿ ಮಾಡಿಸಿದ ದೇಶವೆಂದು ಅರಿತಿರುವ ಹೊಂಡಾ ಅಂತಾರಾಷ್ಟ್ರೀಯವಾಗಿ ಬೀಗುತ್ತಿರುವ ಜಾಜ್ ಕಾರನ್ನು ಭಾರತಕ್ಕೆ ತರಲಿದೆ. ಸರಕು ತುಂಬಲು ಅವಕಾಶವಿರುವ ಜಾಜ್ ಕಾರು ಸ್ಕೋಡಾ ಫೇಬಿಯಾ ಮತ್ತು ಇತ್ತೀಚೆಗೆ ಬಿಡುಗಡೆಯಾಗಿರುವ ಐ20ಕ್ಕೆ ಟಕ್ಕರ್ ನೀಡಲಿದೆ.

ಚೆವ್ರೊಲೆಟ್ ಕ್ರೂಜ್

ಆಪ್ಟ್ರಾ ಸ್ಥಳವನ್ನು ಆಕ್ರಮಿಸಿಕೊಂಡಿರುವ ಜಾಗತಿಕ ಅಪೀಲ್ ಇರುವ ಕ್ರೂಜ್ ಕಾರನ್ನು ಕೋರಿಯಾದಲ್ಲಿ ಜಿಎಮ್ ಡೇವೂ ನಿರ್ಮಿಸಿದೆ ಮತ್ತು ಇದರ ಇಂಜಿನಿಯರಿಂಗ್ ಕಾರ್ಯವನ್ನು ಜರ್ಮನಿಯ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಮಾಡಲಾಗಿದೆ. 2009ರ ಮಧ್ಯದಲ್ಲಿ ಈ ಕಾರನ್ನು ಭಾರತಕ್ಕೆ ಜಿಎಮ್ ಇಂಡಿಯಾ ತರಲಿದೆ. ಇದರ ಬೆಲೆ 9ರಿಂದ 12 ಲಕ್ಷ ರು.ವರೆಗೆ ಆಗಲಿದೆ.

ಸ್ಕೋಡಾ ಸುಪರ್ಬ್

ನೆನಪಿನಲ್ಲಿಡಿ, ಆರ್ಥಿಕ ಸಂಕಷ್ಟದ ಬಿಸಿ ತಟ್ಟದಿರುವವರು ಮಾತ್ರ ಈ ಐಷಾರಾಮಿ ಕಾರನ್ನು ಕೊಳ್ಳಲು ಬಂಡವಾಳ ಸುರಿಯಬೇಕು. ಸುಪರ್ಬ್ ಕಾರು ಗುಣಮಟ್ಟದಲ್ಲಿ ಸ್ಕೋಡಾ ಕಾರನ್ನು ಹೋಲಿದರೂ ಯಾವುದೇ ಕಾರಿನ ಮುಂದುವರಿದ ಮಾಡೆಲ್ ಆಗದೆ ಪರಿಪೂರ್ಣ ಕಾರಾಗಿ ಹೊರಹೊಮ್ಮಿದೆ. 20 ಲಕ್ಷ ರು. ಬಾಳುವ ಸುಪರ್ಬ್ ಇನ್ನೆರಡು ತಿಂಗಳಲ್ಲಿ ನುಣುಪಾದ ರಸ್ತೆಗಳ ಮೇಲೆ ಟೈರನ್ನು ಊರಲಿದೆ.

ಮೇಲೆ ತಿಳಿಸಿದ ನಮೂನೆಗಳೊಂದಿಗೆ ಇನ್ನೂ ಕೆಲ ಹೊಸ ಮಾಡೆಲ್ ಗಳ ತಯಾರಿಕೆಯಲ್ಲಿ ಕಾರು ಉತ್ಪಾದಕರು ತೊಡಗಿದ್ದಾರೆ. ಡೀಸೆಲ್ ಬೆಲೆ ಇಳಿದಿರುವುದರಿಂದ ಹ್ಯುಂಡೈ ಐ10, ಟೊಯೋಟಾ ಕರೋಲಾ ಅಲ್ಟಿಸ್ ಮುಂತಾದ ಕಾರುಗಳು ಡೀಸೆಲ್ ಇಂಜಿನನ್ನು ಅಳವಡಿಸಿಕೊಳ್ಳಲಿವೆ. ಕೊಳ್ಳಲು ಕಾರುಗಳೇನೋ ಬೇಕಾದಷ್ಟಿವೆ, ಆದರೆ ನಿಮ್ಮ ಖರ್ಚು ವೆಚ್ಚ, ಪರ್ಸು, ಕೊನೆಗೆ ಹೆಂಡತಿಯನ್ನೊಮ್ಮೆ ಕೇಳಿ ನೋಡಿ ಅತ್ಯುತ್ತಮವಾದ ಕಾರನ್ನು ಖರೀದಿಸಿ.

More from DriveSpark

Article Published On: Tuesday, February 17, 2009, 12:10 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+