ಸಿಯಾಝ್ ಗೆ ನ್ಯಾನೋ ಹಿಂದಿನಿಂದ ಢಿಕ್ಕಿ; ಯಾವುದು ಬಲಿಷ್ಠ?

Written By:

ಅಪಘಾತ ಪ್ರಕರಣಗಳು ಯಾವತ್ತೂ ಕಹಿ ಅನುಭವವನ್ನು ನೀಡುತ್ತದೆ. ಆದರೆ ವಾಹನ ಪ್ರೇಮಿಗಳ ಪಾಲಿಗೆ ಹೆಚ್ಚು ಸ್ವಾರಸ್ಯವನ್ನುಂಟು ಮಾಡಿರುವ ಅಪಘಾತ ಪ್ರಕರಣವೊಂದರಲ್ಲಿ ಮಾರುತಿ ಸುಜುಕಿ ಸಿಯಾಝ್ ಕಾರಿಗೆ ಹಿಂಬದಿಯಿಂದ ಟಾಟಾ ನ್ಯಾನೋ ಕಾರೊಂದು ಢಿಕ್ಕಿ ಹೊಡೆದಿದೆ.

ಕಾರುಗಳು ಪರಸ್ಪರ ಢಿಕ್ಕಿ ಹೊಡೆಯುವುದು ದೊಡ್ಡ ವಿಚಾರವೇನಲ್ಲ ಬಿಡಿ. ಆದರೆ ಕೊನೆಗೆ ಯಾರು ಬಲಿಷ್ಠ ಎಂಬ ಪ್ರಶ್ನೆಗೆ ಉತ್ತರವು ನಿಮ್ಮಲ್ಲಿ ಕುತೂಹಲವನ್ನುಂಟು ಮಾಡಿದೆ.

To Follow DriveSpark On Facebook, Click The Like Button
ಸಿಯಾಝ್ ಗೆ ನ್ಯಾನೋ ಹಿಂದಿನಿಂದ ಢಿಕ್ಕಿ; ಯಾವುದು ಬಲಿಷ್ಠ?

ಗೋವಾದಲ್ಲಿ ನಡೆದ ಅಪಘಾತ ಪ್ರಕರಣವು ಎಲ್ಲರಲ್ಲೂ ಒಂದೆರಡು ಬಾರಿ ಯೋಚಿಸುವಂತೆ ಮಾಡಿದೆ. ಇಲ್ಲಿ ಕಾರಿನ ನಿರ್ಮಾಣ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನೈಜ ಬಣ್ಣ ಬಯಲಾಗಿದೆ.

ಸಿಯಾಝ್ ಗೆ ನ್ಯಾನೋ ಹಿಂದಿನಿಂದ ಢಿಕ್ಕಿ; ಯಾವುದು ಬಲಿಷ್ಠ?

ಟಾಟಾ ನ್ಯಾನೋ ಬೆಲೆಗಿಂತಲೂ ನಾಲ್ಕು ಪಟ್ಟು ಹೆಚ್ಚಾಗಿರುವ ಮಾರುತಿ ಸುಜುಕಿ ಸಿಯಾಝ್ ಕಾರಿನ ಹಿಂಬದಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಸಿಯಾಝ್ ಗೆ ನ್ಯಾನೋ ಹಿಂದಿನಿಂದ ಢಿಕ್ಕಿ; ಯಾವುದು ಬಲಿಷ್ಠ?

ಇನ್ನೊಂದೆಡೆ ಅಂದಾಜು ಎರಡು ಲಕ್ಷ ರುಪಾಯಿಗಳ ಬೆಲೆ ಪರಿಧಿಯಲ್ಲಿ ಮಾರುಕಟ್ಟೆಗೆ ತಲುಪುತ್ತಿರುವ ಟಾಟಾ ನ್ಯಾನೋ ಮುಂಭಾಗದಲ್ಲಿ ಹೆಚ್ಚು ಹಾನಿಯಾಗಿಲ್ಲ.

ಸಿಯಾಝ್ ಗೆ ನ್ಯಾನೋ ಹಿಂದಿನಿಂದ ಢಿಕ್ಕಿ; ಯಾವುದು ಬಲಿಷ್ಠ?

ಮಾರುತಿ ಸುಜುಕಿ ಚಾಲಕ ಸಡನ್ ಬ್ರೇಕ್ ಅದುಮಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ನ್ಯಾನೋ ಚಾಲಕ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದಾರೆ.

ಸಿಯಾಝ್ ಗೆ ನ್ಯಾನೋ ಹಿಂದಿನಿಂದ ಢಿಕ್ಕಿ; ಯಾವುದು ಬಲಿಷ್ಠ?

ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ನ್ಯಾನೋಗಿಂತಲೂ ಸಿಯಾಝ್ ಕಾರಿಗೆ ಹೆಚ್ಚಿನ ಹಾನಿಯಾಗಿರುವುದು ವಾಹನ ವಲಯದಲ್ಲಿ ಹೆಚ್ಚಿನ ಚರ್ಚೆಗೀಡು ಮಾಡಿದೆ.

English summary
Tata Nano Rear Ends A Maruti Ciaz And The Result — Quite Surprising
Story first published: Saturday, September 3, 2016, 17:07 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark