TikTokನಿಂದ ಫೇಮಸ್: ಕರ್ನಾಟಕ ಮೂಲದ ಖ್ಯಾತ ನಟಿಯಿಂದ ದುಬಾರಿ ಬೆಲೆಯ ಮಹೀಂದ್ರಾ SUV ಖರೀದಿ!

ಡಬ್ ಸ್ಮ್ಯಾಶ್ ಹಾಗೂ ಟಿಕ್‌ಟಾಕ್ ವಿಡಿಯೋಗಳ ಮೂಲಕ ನಟಿ ಮಿರ್ನಾಲಿನಿ ರವಿ (Mirnalini Ravi) ಮುನ್ನೆಲೆಗೆ ಬಂದರು. ಬೆಂಗಳೂರಿನಲ್ಲಿ ಜನಿಸಿದ ಅವರು, ಬಿಇ ಪದವೀಧರೆ ಕೂಡ ಆಗಿದ್ದಾರೆ. ಶಿಕ್ಷಣ ಪೂರ್ಣಗೊಳಿಸಿದ ಮೇಲೆ ಸಾಫ್ಟವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಟಿಕ್‌ಟಾಕ್ ನೋಡಿದ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ್, ಕಾಲಿವುಡ್ ಸಿನಿಮಾ 'ಸೂಪರ್ ಡಿಲಕ್ಸ್'ನಲ್ಲಿ ಆಕ್ಟ್ ಮಾಡಲು ಆಫರ್ ನೀಡಿದರು. ಆ ಬಳಿಕ, ಮಿರ್ನಾಲಿನಿರ ಅದೃಷ್ಟವೇ ಬದಲಾಗಿ ಹೋಯಿತು. ತಮಿಳು ಮಾತ್ರವಲ್ಲದೆ, ತೆಲುಗು ಚಿತ್ರ ಗಳಲ್ಲಿಯೂ ನಟಿಸುವ ಅವಕಾಶ ಲಭ್ಯವಾಯಿತು.

ಸದ್ಯ ನಟಿ ಮಿರ್ನಾಲಿನಿ ರವಿ ಹೊಚ್ಚ ಹೊಸ ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ (Mahindra BE 6 Batman Edition) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲೂ ಪೋಸ್ಟ್ ಮಾಡಿದ್ದು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Actor Mirnalini Ravi Buy Mahindra BE 6 Batman Edition Details

ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ ವಿಶೇಷತೆಗಳೇನು:

ಈ ಎಲೆಕ್ಟ್ರಿಕ್ ಎಸ್‌ಯುವಿಯು ದುಬಾರಿ ಬೆಲೆಯನ್ನು ಹೊಂದಿದೆ. ರೂ.27.79 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇದರ 999 ಯುನಿಟ್‌ಗಳನ್ನು ಮಾತ್ರ ಕಂಪನಿಯು ತಯಾರಿಸಿದೆ. ವಿಶೇಷವಾಗಿ 'ಬ್ಯಾಟ್‌ಮ್ಯಾನ್ ಎಡಿಷನ್' ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದ್ದು, ಅದು ನೋಡುಗರ ಕಣ್ಣು ಕುಕ್ಕುವಂತಿದೆ.

ಮಹೀಂದ್ರಾ ಮತ್ತು ಕಾಮಿಕ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ವಾರ್ನರ್ ಬ್ರದರ್ಸ್ ನಡುವೆ ಒಪ್ಪಂದವಾಗಿದೆ. ಹೀಗಾಗಿ, ಹೊಸ ಕಾರಿನ ಹೊರಭಾಗದಲ್ಲಿ ಬ್ಯಾಟ್‌ಮ್ಯಾನ್ ಸಿನಿಮಾ & ಕಾಮಿಕ್ಸ್‌ಗಳಲ್ಲಿ ಕಾಣಲಾಗುವ ಅಂಶಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಕಸ್ಟಮ್ ಸ್ಯಾಟಿನ್ ಬ್ಲ್ಯಾಕ್ ಬಾಡಿ ಕಲರ್, ಫ್ರಂಟ್ ಡೋರ್‌ನಲ್ಲಿ ಕಸ್ಟಮ್ ಬ್ಯಾಟ್‌ಮ್ಯಾನ್ ಡೆಕಲ್‌ಗಳು ಹಾಗೂ ಟೈಲ್‌ಗೇಟ್‌ನಲ್ಲಿ ಡಾರ್ಕ್ ನೈಟ್ ಬ್ಯಾಡ್ಜ್‌ನ್ನು ತನ್ನದಾಗಿಸಿಕೊಂಡಿದೆ.

ಇದರೊಂದಿಗೆ ಸ್ಟ್ಯಾಂಡರ್ಡ್ ಬಿಇ 6' ಕಾರಿನಂತೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಫಂಕಿ-ಸ್ಪಾಯ್ಲರ್, ಟೈಲ್ ಲ್ಯಾಂಪ್‌ಗಳು ಹಾಗೂ 20 ಇಂಚಿನ ವೀಲ್‌ಗಳನ್ನು ಒಳಗೊಂಡಿದೆ. 4,371 ಮಿ.ಮೀ ಉದ್ದ, 1,907 ಮಿ.ಮೀ ಅಗಲ ಹಾಗೂ 1,627 ಮಿ.ಮೀ ಎತ್ತರವಿದೆ. 207 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,775 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ನೂತನ 'ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್' ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 79 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 682 ರೇಂಜ್ (ಮೈಲೇಜ್) ನೀಡುತ್ತದೆ. ಈ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟಾರ್, 285 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 380 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಹೊಸ 'ಬ್ಯಾಟ್‌ಮ್ಯಾನ್ ಎಡಿಷನ್' ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. ಆಲ್-ಬ್ಲ್ಯಾಕ್ ಪೇಂಟ್ ಸ್ಕೀಮ್‌ನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ & ಇನ್ಸ್ಟ್ರುಮೆಂಟೇಶನ್ ಸ್ಕ್ರೀನ್‌ಗಳು ಕಸ್ಟಮ್ ಬ್ಯಾಟ್‌ಮ್ಯಾನ್ ಅನಿಮೇಷನ್‌ನ್ನು ಒಳಗೊಂಡಿವೆ. ಟೂ-ಸ್ಪೋಕ್ ಸ್ಟೀರಿಂಗ್ ವೀಲ್, ವೆಂಟಿಲೇಟೆಡ್ ಸೀಟ್‌ಗಳು ಹಾಗೂ ಹರ್ಮನ್ ಮ್ಯೂಸಿಕ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 455 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ - ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 - ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

More from DriveSpark

Article Published On: Friday, November 7, 2025, 17:26 [IST]
English summary
Actor mirnalini ravi buy mahindra be 6 batman edition details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+