ಹೆತ್ತವರಿಗೆ ಕಣ್ಣಲ್ಲಿ ನೀರು ತರಿಸಿದ ಹೆಣ್ಣುಮಕ್ಕಳು: ಕೊಟ್ಟ ಅಚ್ಚರಿಗೆ ತಂದೆಯ ಹೃದಯ ಭಾರ!
ಇಬ್ಬರು ಹೆಣ್ಣುಮಕ್ಕಳು ತಮ್ಮ ಹೆತ್ತವರಿಗೆ ಹೊಚ್ಚ ಹೊಸ ಹ್ಯುಂಡೈ ಕಾರನ್ನು ಉಡುಗೊರೆಯಾಗಿ ನೀಡಿ ಅಚ್ಚರಿಗೊಳಿಸಿದ್ದಾರೆ. ಈ ಹೃದಯಸ್ಪರ್ಶಿ ಕ್ಷಣವನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಪೋಷಕರ ಕಣ್ಣುಗಳಿಗೆ ಬಟ್ಟೆ ಕಟ್ಟಿ ಕಾರು ನಿಲ್ಲಿಸಿರುವ ಜಾಗಕ್ಕೆ ಕರೆತಂದು ಕಾರನ್ನು ಬಹಿರಂಗಪಡಿಸುವ ವಿಡಿಯೋ ಸದ್ಯ ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕುಟುಂಬದ ಸಂತೋಷದ ಪ್ರತಿಕ್ರಿಯೆಗಳ ಸಂಪೂರ್ಣ ಭಾವನಾತ್ಮಕ ಕ್ಷಣವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಹೊಚ್ಚ ಹೊಸ ಕಾರು ಬಹಿರಂಗಗೊಂಡಾಗ ಕುಟುಂಬ ಸದಸ್ಯರಿಂದ ನಗು, ಚಪ್ಪಾಳೆ ಮತ್ತು ತಂದೆ ತಾಯಿ ಭಾವನಾತ್ಮಕವಾಗುವುದನ್ನು ನೋಡಬಹುದು.
ವೀಡಿಯೊವನ್ನು ಹಂಚಿಕೊಂಡ 'ವರ್ಷಾ' ಅವರು ಉಡುಗೊರೆಯ ಹಿಂದಿನ ಭಾವನಾತ್ಮಕ ಅರ್ಥವನ್ನು ವಿವರಿಸಿದ್ದಾರೆ. ನಮ್ಮ ಪೋಷಕರು "ನಿಮಗೆ ಸಾಧ್ಯವಿಲ್ಲ" ಎಂದು ನಮಗೆ ಎಂದೂ ಹೇಳಿಲ್ಲ, ನಮಗೆ "ಹಾರಲು ಹೋಗಿ" ಎಂದು ಮಾತ್ರ ಹೇಳಿದ್ದರು. ಈ ಕಾರು ನಮ್ಮ ಪೋಷಕರು ನಮಗೆ ನೀಡಿರುವ ಜೀವಮಾನದ ಸುರಕ್ಷತೆ, ಬೆಂಬಲ ಮತ್ತು ನಂಬಿಕೆಗೆ ಕೇವಲ ಒಂದು ಸಣ್ಣ ಧನ್ಯವಾದದ ಉಡುಗೊರೆ ಎಂದು ವಿವರಿಸಿದ್ದಾರೆ.

ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಹೆಣ್ಣುಮಕ್ಕಳು ತಮ್ಮ ಹೆತ್ತವರಿಗೆ ಉಡುಗೊರೆ ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಮಾಡಿದೆ. ಇಂತಹ ಅಮೂಲ್ಯ ಮತ್ತು ಅರ್ಥಪೂರ್ಣ ಹೆಣ್ಣುಮಕ್ಕಳನ್ನು ಪಡೆದ ಪೋಷಕರು ಅದೃಷ್ಟವಂತರು. ತಾಯಿಯ ಕಣ್ಣುಗಳು ಎಲ್ಲವನ್ನೂ ಹೇಳುತ್ತವೆ. ಅವರಲ್ಲಿ ಪ್ರೀತಿ ಮತ್ತು ಕೃತಜ್ಞತೆ ಎಂದೆದೂ ಹೀಗೆ ಇರಲಿ ಎಂದು ಸೋಷಯಲ್ ಮೀಡಿಯಾ ಬಳಕೆದಾರರು ಶುಭ ಹಾರೈಸಿದ್ದಾರೆ.
ದುಬಾರಿ ಹ್ಯುಂಡೈ ಕ್ರೆಟಾ ಗಿಫ್ಟ್
ವಿಡಿಯೋದಲ್ಲಿ ಉಡುಗೊರೆಯಾಗಿ ನೀಡಿರುವ ಹ್ಯುಂಡೈ ಕ್ರೆಟಾ ಯಾವ ವೇರಿಯೆಂಟ್ ಎಂಬುದರ ಬಗ್ಗೆ ಯಾವುದೇ ವಿವರಗಳಿಲ್ಲ. ಆದರೆ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ ಬೇಸ್ ವೇರಿಯೆಂಟ್ ಬೆಲೆಯು 10.79 ಲಕ್ಷ ರೂ. (ಎಕ್ಸ್ ಶೊರೂಂ) ಇದ್ದರೇ ಟಾಪ್ ವೇರಿಯೆಂಟ್ ಬೆಲೆಯು 20.20 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಇದರಲ್ಲಿ 5 ಮಂದಿ ಪ್ರಯಾಣಿಸಬಹುದು, ಹೆಚ್ಚಿನ ಲಗೇಜ್ ಸಾಗಿಸಲು 433 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

ಹೊಸ ಹುಂಡೈ ಕ್ರೆಟಾ ಎಸ್‍ಯುವಿ ಒಳಭಾಗದ ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್ ಸೇರಿದಂತೆ ಸೌಕರ್ಯ ಮತ್ತು ಅನುಕೂಲಕ್ಕಾಗಿ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಲಾಗಿದೆ. 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪರಿಷ್ಕೃತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್, ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 8 - ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್ ಹೊಂದಿದೆ.
ಹ್ಯುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳು, 360 - ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಂಗಳೊಂದಿಗೆ (ADAS) ಡ್ಯುಯಲ್ - ಜೋನ್ AC ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿಯಂತಹ ಆಧುನಿಕ ಫೀಚರ್ಸ್ ಒಳಗೊಂಡಿದೆ.
ಹ್ಯುಂಡೈ ಕ್ರೆಟಾ ಪೆಟ್ರೋಲ್, ಟರ್ಬೊ - ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಸಿಗುತ್ತದೆ. 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀ. ಟರ್ಬೊ ಪೆಟ್ರೋಲ್ ಹಾಗೂ 1.5-ಲೀ. ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಸಿಗುತ್ತದೆ. ಹಾಗೆಯೇ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು 42KWh ಮತ್ತು 51.4kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.
ಹುಂಡೈ ಕ್ರೆಟಾ 2025 ರಲ್ಲಿ 2 ಲಕ್ಷ ಯುನಿಟ್ ಕಾರುಗಳ ಅತ್ಯಧಿಕ ವಾರ್ಷಿಕ ಮಾರಾಟವನ್ನು ಸಹ ದಾಖಲಿಸಿದೆ. ಮಧ್ಯಮ ಗಾತ್ರದ SUV ವಿಭಾಗದಲ್ಲಿ ಒಂದು ದಶಕವನ್ನು ಆಳಿರುವ ಈ ಕಾರು ಬಿಡುಗಡೆಯಾಗಿ 10 ವರ್ಷಗಳನ್ನು ಪೂರ್ಣಗೊಳಿಸಿದೆ. ಇಂದಿಗೂ ಈ ಕಾರಿಗೆ ಬೇಡಿಕೆ ಕಡಿಮೆಯಾಗಿಲ್ಲ. ಒಟ್ಟಾರೆ ಮಧ್ಯಮ ವರ್ಗದವರ ಫೇವರೆಟ್ ಎಸ್‌ಯುವಿಯಾಗಿ ಮಾರುಕಟ್ಟೆಯಲ್ಲಿ ಮುಂದುವರಿಯುತ್ತಿದೆ.


Click it and Unblock the Notifications








