ಎಲ್ಲರ ಕಣ್ಣು ಬಿತ್ತು: ಒಂದೇ ದಿನ ಎರಡು ಹೊಸ ಕಾರುಗಳ ಡೆಲಿವರಿ ಪಡೆದ ಆಭರಣ ವ್ಯಾಪಾರಿ
ಖ್ಯಾತ ಉದ್ಯಮಿ ಮತ್ತು ಆಭರಣ ವ್ಯಾಪಾರಿಯಾಗಿರುವ 'ವರ್ಗೀಸ್ ಜೋಸ್ ಅಲುಕ್ಕಾಸ್', ಕೇರಳದಲ್ಲಿ ಎಂಜಿ ಸೆಲೆಕ್ಟ್ (MG SELECT) ಮೂಲಕ ಮಾರಾಟ ಮಾಡಲಾಗುವ ಎರಡು ಐಷಾರಾಮಿ ಕಾರುಗಳನ್ನು ಖರೀದಿಸಿರುವ ಮೊದಲ ಗ್ರಾಹಕರಾಗಿ ಸುದ್ದಿಯಾಗಿದ್ದಾರೆ. ಎಂಜಿ ಸೆಲೆಕ್ಟ್ ಕೋಸ್ಟಲ್ ಕೊಚ್ಚಿಯಿಂದ ಒದಗಿಸಲ್ಪಟ್ಟ ಎರಡೂ ಕಾರುಗಳ ಡೆಲಿವರಿಯು ಕೇರಳದಲ್ಲಿ ಬ್ರ್ಯಾಂಡ್‌ಗೆ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಅಷ್ಟಕ್ಕೂ ಈ ಐಷಾರಾಮಿ ಕಾರುಗಳು ಯಾವುವು, ಅವುಗಳ ವಿಶೆಷತೆಗಳೇನು, ಹೇಗಿವೆ, ಬೆಲೆಯೆಷ್ಟು ಎಂಬುದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.
ವರ್ಗೀಸ್ ಜೋಸ್ ಅಲುಕ್ಕಾಸ್ ಎಂದು ಕರೆಯಲ್ಪಡುವ ವರ್ಗೀಸ್ ಅಲುಕ್ಕಾಸ್, ಭಾರತೀಯ ಆಭರಣ ಉದ್ಯಮದಲ್ಲಿ ಪ್ರಮುಖರಾಗಿದ್ದಾರೆ. ಭಾರತ ಮತ್ತು ಇತರ 10 ದೇಶಗಳಲ್ಲಿ ಸುಮಾರು 151 ಜ್ಯುವೆಲರಿ ಶೋರೂಮ್‌ಗಳನ್ನು ಹೊಂದಿರುವ ಜಾಯ್ ಅಲುಕ್ಕಾಸ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಸದ್ಯ ಅಲುಕ್ಕಾಸ್ ಅವರು MG ಸೈಬರ್‌ಸ್ಟರ್ ಮತ್ತು MG M9 ಕಾರುಗಳನ್ನು ಹೊಂದಿರುವ ಕೇರಳ ರಾಜ್ಯದ ಮೊದಲ ಗ್ರಾಹಕರಾಗಿದ್ದಾರೆ.

MG ಸೈಬರ್‌ಸ್ಟರ್ ವಿಶೇಷತೆಗಳು:
ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೆಡಾನ್ (MG Cyberster Electric Sedan), ರೂ. 74.99 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಬ್ಲಾಂಕ್ಡ್ ಆಫ್ ಗ್ರಿಲ್, ಬಟರ್‌ಫ್ಲೈ ಡೋರ್‌ಗಳು, ವಿಡ್ತ್ ಡಿಫ್ಯೂಸರ್, ಎಲ್‌ಇಡಿ ಲೈಟ್ ಬಾರ್, ಟರ್ನ್ ಇಂಡಿಕೇಟರ್ಸ್, ಕನ್ವರ್ಟಿಬಲ್ ಸಾಫ್ಟ್-ಟಾಪ್ ಹಾಗೂ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ.
ಇದು ಐಷಾರಾಮಿ ಸ್ಪೋರ್ಟ್ ಎಲೆಕ್ಟ್ರಿಕ್ ಕಾರು ಆಗಿರುವುದರಿಂದ ಕೇವಲ 2 ಸೀಟ್‌ಗಳನ್ನು ಹೊಂದಿದೆ. ಜೊತೆಗೆ 4,535 ಎಂಎಂ ಉದ್ದ, 1,913 ಎಂಎಂ ಅಗಲ ಹಾಗೂ 1,329 ಎಂಎಂ ಎತ್ತರವಿದೆ. ಫ್ಲೇರ್ ರೆಡ್, ನ್ಯೂಕ್ಲಿಯರ್ ಯೆಲ್ಲೋ, ಆಂಡಿಸ್ ಗ್ರೇ ಹಾಗೂ ಮಾಡ್ರನ್ ಬೀಜ್ ಎಂಬ 4 ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 77 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಸಿಂಗಲ್ ಚಾರ್ಜ್‌ನಲ್ಲಿ 580 ಕಿ.ಮೀ ರೇಂಜ್ ನೀಡುತ್ತದೆ.

ಸೈಬರ್‌ಸ್ಟರ್‌ನ ಇಂಟೀರಿಯರ್‌ನಲ್ಲಿ 3-ಸ್ಕ್ರೀನ್ ಸೆಟಪ್‌ನ್ನು ಹೊಂದಿದೆ. ಒಂದು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೆ, 7-ಇಂಚಿನ ಆಕ್ಸಿಲರಿ ಸ್ಕ್ರೀನ್ ಹಾಗೂ 7-ಇಂಚಿನ ವರ್ಟಿಕಲ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಹೊಂದಿದೆ. ಹಾಗೆಯೇ ಡುಯಲ್ - ಝೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 8 ಸ್ಪೀಕರ್ ಆಡಿಯೊ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್ ಹಾಗೂ ವೈರ್‌ಲೆಸ್ ಚಾರ್ಜಿಂಗ್‌ನಂತಹ ಫೀಚರ್ಸ್ ಒಳಗೊಂಡಿದೆ.
MG M9 ವಿಶೇಷತೆಗಳು:
MG M9 ಪ್ರೆಸಿಡೆನ್ಶಿಯಲ್ ಲಿಮೋಸಿನ್, MG M9 ಶ್ರೇಣಿಯಲ್ಲಿನ ಟಾಪ್ ಮಾಡೆಲ್ ಆಗಿದ್ದು, ಬೆಂಗಳೂರಿನಲ್ಲಿ M9 ಟಾಪ್ ಮಾಡೆಲ್‌ನ ಆನ್-ರೋಡ್ ಬೆಲೆ ರೂ. 83.04 ಲಕ್ಷವಿದೆ. ಇದು 7 ಆಸನಗಳನ್ನು ಹೊಂದಿರುವ ದೈತ್ಯ ಐಷಾರಾಮಿ ಎಲೆಕ್ಟ್ರಿಕ್ ಕಾರಾಗಿದೆ. ಇದರೊಳಗೆ ನೀಡಲಾದ ಕ್ಯಾಪ್ಟನ್ ಸೀಟ್‌ಗಳು, 16-ವೇ ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್, ಎಂಟು ಮಸಾಜ್ ಮೋಡ್‌ಗಳು, ಹೀಟ್ ಮತ್ತು ವೆಂಟಿಲೇಷನ್ ನೀಡುತ್ತವೆ. ಇದು ವಿಹಾರ ನೌಕೆ-ಶೈಲಿಯ ಡ್ಯುಯಲ್ ಸನ್‌ರೂಫ್ ಹೊಂದಿದೆ.

ಹಿಂಭಾಗದ ಸಾಲಿನಲ್ಲಿ ಪ್ರತಿ ಸೀಟ್ 5.2-ಇಂಚಿರುವ ಟಚ್ ಕಂಟ್ರೋಲ್ ಪ್ಯಾನಲ್, ಕಪ್ ಹೋಲ್ಡರ್‌ಗಳು, ಯುಎಸ್‌ಬಿ ಟೈಪ್-ಎ & ಟೈಪ್-ಸಿ ಚಾರ್ಜಿಂಗ್ ಆಯ್ಕೆಯನ್ನು ಪಡೆದಿದೆ. ಡುಯಲ್ - ಝೋನ್ ಕ್ಲೇಮೇಟ್ ಕಂಟ್ರೋಲ್, ಸನ್‌ರೂಫ್, ಪ್ರೀಮಿಯಂ ಜೆಬಿಎಲ್ ಸೌಂಡ್ ಸಿಸ್ಟಮ್ ಮತ್ತು 64 ಕಲರ್ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸುರಕ್ಷತೆಯನ್ನು ಮೂಲಾಧಾರವಾಗಿ ವಿನ್ಯಾಸಗೊಳಿಸಲಾದ MG M9 ಅಲ್ಟ್ರಾ- ಹೈ -ಸ್ಟ್ರೆಂತ್ ಸ್ಟೀಲ್‌ನೊಂದಿಗೆ ನಿರ್ಮಾಣಗೊಂಡಿದೆ. 7 ಏರ್‌ಬ್ಯಾಗ್‌ಗಳು, ಲೆವೆಲ್ 2 ADAS, ಜೊತೆಗೆ 5 - ಸ್ಟಾರ್ EURO NCAP ಮತ್ತು ANCAP ಸುರಕ್ಷತಾ ರೇಟಿಂಗ್‌ಗಳನ್ನು ಪಡೆದುಕೊಂಡಿದೆ. ಇದು ಈಗ 14 ಪ್ರಮುಖ ನಗರಗಳಾದ್ಯಂತ 15 ಎಂಜಿ ಸೆಲೆಕ್ಟ್ ಅನುಭವ ಕೇಂದ್ರಗಳಲ್ಲಿ ಬುಕಿಂಗ್‌ಗಳಿಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.


Click it and Unblock the Notifications








