ಜಾಗ್ವಾರ್‌ನ ಹೊಸ ಹೈಪರ್-ಇವಿ ಕಾರು: 720 ಕಿಮೀ ಮೈಲೇಜ್, ಬೆಲೆ ಎಷ್ಟು ಗೊತ್ತಾ?

ಜಾಗ್ವಾರ್ ಸಂಸ್ಥೆಯ ಹೊಸ ಟೈಪ್ 01 (Type 01) ಹೈಪರ್-ಇವಿ ಕಾರು 2026ರ ಅಕ್ಟೋಬರ್ 7 ರಂದು ಅನಾವರಣಗೊಂಡಿದೆ. ಟ್ರೈ-ಮೋಟಾರ್ ಹೊಂದಿರುವ ಈ ಫೋರ್-ಡೋರ್ GT ಕಾರು ಭರ್ಜರಿ 1,030 PS ಪವರ್ ನೀಡುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ WLTP ಮೈಲೇಜ್ ಸೈಕಲ್ ಪ್ರಕಾರ ಬರೋಬ್ಬರಿ 720 ಕಿಮೀ ಚಲಿಸುವ ಈ ಕಾರು, ಕೇವಲ 3.2 ಸೆಕೆಂಡುಗಳಲ್ಲಿ 0ಯಿಂದ 100 ಕಿಮೀ ವೇಗ ಪಡೆದುಕೊಳ್ಳುತ್ತದೆ. 850-ವೋಲ್ಟ್ ಆರ್ಕಿಟೆಕ್ಚರ್ ಹಾಗೂ 118 kWh ಬ್ಯಾಟರಿ ಸಾಮರ್ಥ್ಯದ ಈ ಎಲೆಕ್ಟ್ರಿಕ್ ಕಾರಿಗೆ 2027ರ ಆರಂಭದಲ್ಲೇ ಬುಕಿಂಗ್ ಶುರುವಾಗಲಿದ್ದು, ಅದೇ ವರ್ಷದ ದ್ವಿತೀಯಾರ್ಧದಲ್ಲಿ ಗ್ರಾಹಕರ ಕೈಸೇರಲಿದೆ.

ಅತ್ಯುತ್ತಮ ಏರೋಡೈನಾಮಿಕ್ಸ್ ಮತ್ತು ಸೂಪರ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಈ ಕಾರಿನ ದೊಡ್ಡ ಪ್ಲಸ್ ಪಾಯಿಂಟ್. ಕಾರಿನ ಡ್ರ್ಯಾಗ್ ಕೋಎಫಿಶಿಯೆಂಟ್ 0.23 ಇದ್ದು, ಆಕ್ಟಿವ್ ವೇನ್ಸ್ ಹಾಗೂ ತ್ರೀ-ಸ್ಟೇಜ್ ಸ್ಪಾಯ್ಲರ್ ನೀಡಲಾಗಿದೆ. 350 kW DC ಫಾಸ್ಟ್ ಚಾರ್ಜರ್ ಮೂಲಕ ಕೇವಲ 13 ನಿಮಿಷ ಚಾರ್ಜ್ ಮಾಡಿದರೆ 321 ಕಿಮೀ ಪ್ರಯಾಣಿಸಬಹುದು. 10ರಿಂದ 80 ಶೇಕಡಾ ಚಾರ್ಜ್ ಆಗಲು ಕೇವಲ 22 ನಿಮಿಷ ಬೇಕಾಗುವುದರಿಂದ, ಭಾರತೀಯ ಹೈವೇಗಳಲ್ಲಿ ಸುದೀರ್ಘ ಡ್ರೈವಿಂಗ್ ಮಾಡುವವರಿಗೆ ಇದು ಹೇಳಿಮಾಡಿಸಿದ ಎಲೆಕ್ಟ್ರಿಕ್ ಕಾರಾಗಿದೆ.

Jaguar Type 01 Hyper-EV Unveiled: 720km Range, India Launch Details, Price & Specs for 2027

ಜಾಗ್ವಾರ್ ಟೈಪ್ 01 ಭಾರತದಲ್ಲಿ ಲಾಂಚ್: ಇಲ್ಲಿದೆ ಬೆಲೆ ವಿವರ

ಜಾಗತಿಕವಾಗಿ 2027ರ ದ್ವಿತೀಯಾರ್ಧದಲ್ಲಿ ಕಾರಿನ ಡೆಲಿವರಿ ಆರಂಭವಾಗಲಿದ್ದು, ಅದೇ ವೇಳೆಗೆ ಭಾರತದಲ್ಲೂ ಇದು ಪಾದಾರ್ಪಣೆ ಮಾಡಲಿದೆ. ಅದಾಗಲೇ ಡೀಲರ್ ಹಂತದಲ್ಲಿ ಕಾರಿನ ಬುಕಿಂಗ್‌ಗಳು ಶುರುವಾಗಿವೆ. ಯುಕೆ (UK) ಮೂಲದ ಘಟಕದಲ್ಲಿ ತಯಾರಾಗುವ ಈ ಕಾರನ್ನು ಸಿಬಿಯು (CBU) ಮಾರ್ಗವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಜಾಗತಿಕ ಬೆಲೆ £120,000 ಗೆ ಅನುಗುಣವಾಗಿ, ಭಾರತದಲ್ಲಿ ಇದರ ಅಂದಾಜು ಎಕ್ಸ್-ಶೋರೂಮ್ ಬೆಲೆ ₹2.0 ದಿಂದ ₹2.5 ಕೋಟಿ ವ್ಯಾಪ್ತಿಯಲ್ಲಿರುವ ಸಾಧ್ಯತೆಯಿದೆ.

ಭಾರತದಲ್ಲಿ ಹೆಚ್ಚು ಮೈಲೇಜ್ ನೀಡುವ ಇವಿ ಕಾರುಗಳು vs ಜಾಗ್ವಾರ್ ಟೈಪ್ 01

ಮಾರುಕಟ್ಟೆಯಲ್ಲಿ ಸ್ಪರ್ಧೆ ಹೇಗಿದೆ ಗೊತ್ತಾ? ಕಾಗದದ ಮೇಲಿನ ಲೆಕ್ಕಾಚಾರದಂತೆ, ಜಾಗ್ವಾರ್ ಟೈಪ್ 01 ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಲವು ಲಕ್ಸುರಿ ಇವಿಗಳನ್ನು ಹಿಂದಿಕ್ಕುತ್ತದೆ. ಆದರೆ, ಮರ್ಸಿಡಿಸ್-ಬೆಂಜ್‌ನ ಹೊಸ CLA ಎಲೆಕ್ಟ್ರಿಕ್ ಕಾರು ಮಾತ್ರ ಮೈಲೇಜ್‌ನಲ್ಲಿ ಮುಂಚೂಣಿಯಲ್ಲಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಮುಖ ಕಾರುಗಳಿಗೆ ಜಾಗ್ವಾರ್ ಕಾರನ್ನು ಹೋಲಿಸಿ ನೋಡಲು WLTP ಹಾಗೂ ಕಂಪನಿ ನೀಡಿರುವ ಅಧಿಕೃತ ಅಂಕಿ-ಅಂಶಗಳನ್ನು ನೀಡಲಾಗಿದೆ:

ಮಾಡೆಲ್ ಅಂದಾಜು ಮೈಲೇಜ್ (ಸೈಕಲ್)
ಮರ್ಸಿಡಿಸ್-ಬೆಂಜ್ CLA ಎಲೆಕ್ಟ್ರಿಕ್ 250+ 792 ಕಿಮೀ (WLTP)
ಜಾಗ್ವಾರ್ ಟೈಪ್ 01 720 ಕಿಮೀ (WLTP)
ಟೆಸ್ಲಾ ಮಾಡೆಲ್ Y L 681 ಕಿಮೀ (WLTP)
ಮರ್ಸಿಡಿಸ್-ಬೆಂಜ್ EQS 580 4MATIC 677 ಕಿಮೀ (WLTP)

ಭಾರತಕ್ಕೆ ಬರಲಿರುವ ಜಾಗ್ವಾರ್ ಟೈಪ್ 01 ಕಾರಿನ ವೈಶಿಷ್ಟ್ಯಗಳೇನು?

ಭಾರತಕ್ಕೆ ಬರುವ ಮಾಡೆಲ್‌ನ ತಾಂತ್ರಿಕ ವೈಶಿಷ್ಟ್ಯಗಳು ಜಾಗತಿಕ ಆವೃತ್ತಿಯಂತೆಯೇ ಇರಲಿವೆ. ಅತ್ಯಂತ ಕಠಿಣ ಹವಾಮಾನದಲ್ಲೂ ಕಾರಿನ ಪರ್ಫಾರ್ಮೆನ್ಸ್ ಕುಗ್ಗದಂತೆ ನೋಡಿಕೊಳ್ಳಲು ಬ್ಯಾಟರಿ, ಡ್ರೈವ್ ಯುನಿಟ್ ಮತ್ತು ಕ್ಯಾಬಿನ್ ನಡುವೆ ತಾಪಮಾನ ನಿಯಂತ್ರಿಸುವ 'ಥರ್ಮ್‌ಅಸಿಸ್ಟ್' (ThermAssist) ಹಾಗೂ 'ಹೈಪರ್‌ವೈಸರ್' (Hypervisor) ಟೆಕ್ನಾಲಜಿ ಇದರಲ್ಲಿರಲಿದೆ. ಇದರೊಂದಿಗೆ ಭಾರತೀಯ ರಸ್ತೆ ನಿಯಮಗಳ ಅನುಮತಿಗೆ ಒಳಪಟ್ಟು, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್-ಕೀಪ್ ಹೊಂದಿರುವ ಜಾಗ್ವಾರ್‌ನ ಇನ್‌ಕಂಟ್ರೋಲ್ (InControl) ಸೂಟ್‌ನಿಂದ ಲೆವೆಲ್-2 ಡ್ರೈವರ್ ಅಸಿಸ್ಟೆಂಟ್ ಫೀಚರ್‌ಗಳನ್ನು ನಿರೀಕ್ಷಿಸಬಹುದು.

"ಅದ್ಭುತ ಡಿಸೈನ್‌ನಿಂದ ಹಿಡಿದು ಅದ್ಭುತ ಡ್ರೈವಿಂಗ್ ಅನುಭವದವರೆಗೆ, ಟೈಪ್ 01 ಕಾರು ಹೊಸ ಯುಗದಲ್ಲಿ ಜಾಗ್ವಾರ್ ಬ್ರ್ಯಾಂಡ್‌ನ ನೈಜ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುತ್ತದೆ. ಜಾಗ್ವಾರ್ ಕಾರುಗಳು ಸದಾ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿರಬೇಕು, ಸಂಸ್ಥೆ ಮತ್ತೆ ತನ್ನ ನೈಜ ಶೈಲಿಗೆ ಮರಳುತ್ತಿದೆ. 21ನೇ ಶತಮಾನಕ್ಕೆ ತಕ್ಕಂತೆ ಜಾಗ್ವಾರ್ ಬ್ರ್ಯಾಂಡ್‌ ಅನ್ನು ಮರುರೂಪಿಸುವ ನಮ್ಮ ಈ ಪಯಣದಲ್ಲಿ, ವಿನ್ಯಾಸ ಮತ್ತು ಎಂಜಿನಿಯರಿಂಗ್ ಎರಡರಲ್ಲೂ ಯಾವುದೇ ರಾಜಿ ಮಾಡಿಕೊಳ್ಳದೆ ನಿರ್ಮಿಸಿರುವ ಅಡಿಪಾಯವೇ ಈ ಟೈಪ್ 01."

ಜೆಎಲ್‌ಆರ್ ಇಂಡಿಯಾ (JLR India) ಪಾಲಿಗೆ ಟೈಪ್ 01 ಅತ್ಯಂತ ಪ್ರಮುಖ ಹಾಗೂ ಹೆಮ್ಮೆಯ ಫ್ಲ್ಯಾಗ್‌ಶಿಪ್ ಇವಿ ಮಾಡೆಲ್ ಆಗಲಿದೆ. ಮೈಲೇಜ್ ಆತಂಕಕ್ಕೆ ಸೂಕ್ತ ಪರಿಹಾರ ನೀಡುವ ಈ ಕಾರು, ಪೋರ್ಷೆ ಟೇಕಾನ್, ಆಡಿ ಇ-ಟ್ರಾನ್ ಜಿಟಿ ಮತ್ತು ಫೆರಾರಿ ಲೂಸ್ ಕಾರುಗಳ ಗ್ರಾಹಕರನ್ನು ಸೆಳೆಯಲಿದೆ. ಅಷ್ಟೇ ಅಲ್ಲದೆ, 2027ರ ವೇಳೆಗೆ ಬಿಡುಗಡೆಯಾಗಲಿರುವ ಜೆಎಲ್‌ಆರ್‌ನ ಇತರ ಎಲೆಕ್ಟ್ರಿಕ್ ಕಾರುಗಳಿಗೂ ಇದು ಹೊಸ ಹಾದಿ ತೆರೆದಿಡಲಿದೆ.

Article Published On: Thursday, October 8, 2026, 19:55 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+