ತರಕಾರಿ ಮಾರುವ ಅಜ್ಜನಿಗೆ ಟಿವಿಎಸ್ ಎಕ್ಸ್ಎಲ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಎಂಎಲ್ಎ.. ತೆಂಗಿನ ಕಾಯಿ ಒಡೆದು ಪೂಜೆ!
ತೆಲಂಗಾಣದ ಸಿರ್ಸಿಲ್ಲಾ ಜಿಲ್ಲೆಯ ವೇಮುಲವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಆದಿ ಶ್ರೀನಿವಾಸ್ (Aadi Srinivas) ಅವರು, ತಮ್ಮ ಬೆಂಬಲಿಗ ಕಡೂರು ಬಾಲಯ್ಯ ಅವರಿಗೆ ನೂತನ ಟಿವಿಎಸ್ ಎಕ್ಸ್ಎಲ್ 100 (TVS XL 100) ಮೊಪೆಡ್‌ನ್ನು ಉಡೊಗೊರೆಯಾಗಿ ನೀಡಿದ್ದಾರೆ. ಸದ್ಯ, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರಿಂದಲೂ ಶಾಸಕರ ಕಾರ್ಯಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತರಕಾರಿ ಮಾರಾಟಗಾರನಾಗಿರುವ ಬಾಲಯ್ಯ, ತಮ್ಮ ಗಾಡಿಯಲ್ಲಿ ಮೈಕ್ ಕಟ್ಟಿಕೊಂಡು ಆದಿ ಶ್ರೀನಿವಾಸ್ ಪರ ಪ್ರಚಾರ ಮಾಡಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಬಾಲಯ್ಯ ಮನೆಗೆ ಶಾಸಕರು ಸಹ ಭೇಟಿ ನೀಡಿದ್ದರು. ಆಗ ಅವರ ಬದುಕಿನ ಬಂಡಿ ಎಳೆಯುವ ಗಾಡಿ ಕೆಟ್ಟು ಹೋಗಿರುವುದು ಗಮನಿಸಿದ್ದರು. ಜೊತೆಗೆ ಹೊಸ ವಾಹನ ಕೊಡಿಸುವುದಾಗಿ ಹೇಳಿದ್ದರು.

ಈಚೆಗೆ ಶಾಸಕ ಆದಿ ಶ್ರೀನಿವಾಸ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಬಾಲಯ್ಯ ಅವರಿಗೆ ಹೊಚ್ಚ ಹೊಸ 'ಟಿವಿಎಸ್ ಎಕ್ಸ್ಎಲ್100 ಮೊಪೆಡ್‌ನ್ನು ಗಿಫ್ಟ್ ಕೊಟ್ಟಿದ್ದಾರೆ. ಸ್ವತಃ ಶಾಸಕರೇ ತೆಂಗಿನ ಕಾಯಿ ಒಡೆದು ನೂತನ ಗಾಡಿಗೆ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ, ಕೀ ಹಸ್ತಾಂತರ ಮಾಡಿದ್ದು, ಬಾಲಯ್ಯರೊಂದಿಗೆ ಒಂದು ಸುತ್ತು ರೌಂಡ್ ಕೂಡ ಹೋಗಿ ಬಂದಿದ್ದಾರೆ.
ಟಿವಿಎಸ್ ಎಕ್ಸ್ಎಲ್ 100 ವಿಶೇಷತೆಗಳೇನು:
ಈ ಮೊಪೆಡ್ ಕನಿಷ್ಠ ರೂ.43,400 ಹಾಗೂ ಗರಿಷ್ಠ ರೂ.58,400 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆವಿ ಡ್ಯೂಟಿ, ಹೆವಿಡ್ಯೂಟಿ ಐ - ಟಚ್‌ಸ್ಟಾರ್ಟ್, ಹೆವಿಡ್ಯೂಟಿ ಐ - ಟಚ್‌ಸ್ಟಾರ್ಟ್ ವಿನ್ ಎಡಿಷನ್, ಕಂಫರ್ಟ್ ಐ - ಟಚ್‌ಸ್ಟಾರ್ಟ್ ಹಾಗೂ ಹೆಚ್‌ಡಿ ಅಲಾಯ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಇದು ತುಂಬಾ ಸರಳವಾದ ವಿನ್ಯಾಸವನ್ನು ಪಡೆದಿದೆ. ಅತ್ಯುತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್‌ಲೈಟ್ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಗ್ರೇ, ಬ್ಲೂ, ರೆಡ್, ಗ್ರೀನ್, ಲಸ್ಟರ್ ಗೋಲ್ಡ್, ಮಿಂಟ್ ಬ್ಲೂ, ಬ್ಲ್ಯಾಕ್, ಮಿನರಲ್ ಪರ್ಪಲ್ ಹಾಗೂ ಡಿಲೈಟ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ನೂತನ 'ಎಕ್ಸ್ಎಲ್ 100' ಕೊಂಚ ಮಟ್ಟಿಗೆ ಚಿಕ್ಕ ಗಾತ್ರದಲ್ಲಿದೆ. ಆದರೂ 1,895 ಮಿ.ಮೀ ಉದ್ದ, 670 ಮಿ.ಮೀ ಅಗಲ ಮತ್ತು 1,077 ಮಿ.ಮೀ ಎತ್ತರವಿದೆ. 145 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,228 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. ಬರೋಬ್ಬರಿ 88 ಕೆಜಿ ತೂಕವಿದೆ.
ಈ ಮೊಪೆಡ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 99.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್, ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 6000 ಆರ್‌ಪಿಎಂನಲ್ಲಿ 4.3 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 3500 ಆರ್‌ಪಿಎಂನಲ್ಲಿ 6.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 55 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ.
ಇದು ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಲೆಂಟ್ ಸ್ಟಾರ್ಟರ್, ಬಲ್ಬ್ ಇಂಡಿಕೇಟರ್‌ಗಳು ಹಾಗೂ ಮೊಬೈಲ್ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 4 - ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ತನ್ನದಾಗಿಸಿಕೊಂಡಿದೆ. 58 ಕೆಎಂಪಿಹೆಚ್ ಸ್ಪೀಡ್‌ನ್ನು ಪಡೆದಿದೆ. 12 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಹೊಸ 'ಟಿವಿಎಸ್ ಎಕ್ಸ್ಎಲ್ 100' ಮೊಪೆಡ್ ಸುರಕ್ಷತೆಗೂ ಹೆಸರುವಾಗಿಯಾಗಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಟ್ವಿನ್ - ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಇದರೊಂದಿಗೆ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.


Click it and Unblock the Notifications








