ಟಾಟಾಗೂ ಬಂತು ಕೋಡು; ಬರುತ್ತಿದೆ ವಿದ್ಯುತ್ ಚಾಲಿತ ನ್ಯಾನೋ

By Nagaraja

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಕೆಲವು ವರ್ಷಗಳ ಹಿಂದೆ ವಿಶ್ವದ ಅತ್ಯಂತ ಅಗ್ಗವಾದ ನ್ಯಾನೋ ಕಾರನ್ನು ಬಿಡುಗಡೆಗೊಳಿಸಿತ್ತು. ತದಾ ಬಳಿಕ ವರ್ಷಗಳಿಂದ ಅನೇಕ ಏಳು-ಬೀಳುಗಳನ್ನು ಕಂಡಿರುವ ನ್ಯಾನೋದ ಹಲವಾರು ಆವೃತ್ತಿಗಳು ಬಂದು ಹೋಗಿವೆ. ಈ ಸಾಲಿನಲ್ಲಿ ಹೊಸತಾದ ಜೆನ್ ಎಕ್ಸ್ ನ್ಯಾನೋ ಎಎಂಟಿ ಮಾದರಿಯು ಪರಿಣಾಮಕಾರಿ ಎನಿಸಿಕೊಂಡಿದೆ.

ಇಡೀ ಜಗತ್ತೇ ಇಂಧನ ಬದಲಿ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಹುಡುಕುತ್ತಿರುವ ಈ ಸಂದರ್ಭದಲ್ಲಿ ಟಾಟಾ ಸಂಸ್ಥೆಯು ವಿದ್ಯುತ್ ಚಾಲಿತ ನ್ಯಾನೋ ಕಾನ್ಸೆಪ್ಟ್ ನೊಂದಿಗೆ ಮುಂದೆ ಬಂದಿದೆ.

ಟಾಟಾಗೂ ಬಂತು ಕೋಡು; ಬರುತ್ತಿದೆ ವಿದ್ಯುತ್ ಚಾಲಿತ ನ್ಯಾನೋ

ನಿಮ್ಮ ಮಾಹಿತಿಗಾಗಿ, 2010 ಜಿನೆವಾ ಮೋಟಾರು ಶೋದಲ್ಲಿ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ಮೊದಲ ಬಾರಿಗೆ ಅನವರಣಗೊಳಿಸಲಾಗಿತ್ತು. ಈಗ ನಾಲ್ಕು ವರ್ಷಗಳ ದೀರ್ಘ ಅವಧಿಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕರ ಮುಂದೆ ಕಂಡುಬಂದಿದೆ.

ಟಾಟಾಗೂ ಬಂತು ಕೋಡು; ಬರುತ್ತಿದೆ ವಿದ್ಯುತ್ ಚಾಲಿತ ನ್ಯಾನೋ

ವಿದ್ಯುತ್ ಚಾಲಿತ ನ್ಯಾನೋ ಕಾರಿನ ಟೆಸ್ಟಿಂಗ್ ವೇಳೆ ವಾಹನ ಪ್ರೇಮಿಗಳ ಸೆರೆ ಸಿಕ್ಕಿದೆ. ಸ್ಟ್ಯಾಂಡರ್ಡ್ ನ್ಯಾನೋ ಹಾಗೂ ಎಲೆಕ್ಟ್ರಿಕ್ ನ್ಯಾನೋ ಕಾರಿನ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.

ಟಾಟಾಗೂ ಬಂತು ಕೋಡು; ಬರುತ್ತಿದೆ ವಿದ್ಯುತ್ ಚಾಲಿತ ನ್ಯಾನೋ

ಹಿಂಬದಿಯಲ್ಲಿ ಬ್ಯಾಟರಿ ಚಾರ್ಜ್ ಮಾಡಿಸುವ ಸಾಕೆಟ್ ಮತ್ತು ಕಡಿಮೆ ಎತ್ತರದ ಸಸ್ಪೆನ್ಷನ್ ವ್ಯವಸ್ಥೆಗಳು ಕಂಡುಬಂದಿರುವುದು ಎಲೆಕ್ಟ್ರಿಕ್ ನ್ಯಾನೋ ಎಂಬುದನ್ನು ಖಚಿತಪಡಿಸುತ್ತದೆ.

ಟಾಟಾಗೂ ಬಂತು ಕೋಡು; ಬರುತ್ತಿದೆ ವಿದ್ಯುತ್ ಚಾಲಿತ ನ್ಯಾನೋ

ನ್ಯಾನೋ ಎಲೆಕ್ಟ್ರಿಕ್ ಕಾರು ಬಂದ್ದಲ್ಲಿ ಕೇಂದ್ರ ಸರಕಾರದ ಮಹತ್ತರ ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ 2020 ಯೋಜನೆಯ ಲಾಭವನ್ನು ಪಡೆಯಲಿದೆ.

ಟಾಟಾಗೂ ಬಂತು ಕೋಡು; ಬರುತ್ತಿದೆ ವಿದ್ಯುತ್ ಚಾಲಿತ ನ್ಯಾನೋ

ನ್ಯಾನೋ ಎಲೆಕ್ಟಿಕ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಸದ್ಯಕ್ಕೆ ಲಭ್ಯವಿಲ್ಲ. ಅಲ್ಲದೆ ಸಂಸ್ಥೆಯಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ.

More from DriveSpark

Article Published On: Wednesday, June 15, 2016, 17:34 [IST]
English summary
Spy Pics: Electric Tata Nano Spotted
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+