ಭಾರತ್ ಸ್ಟೇಜ್ 4 ಗುಣಮಟ್ಟ ಅಳವಡಿಕೆ ಕಡ್ಡಾಯ

Bharat stage 4 norms for emission control
ದೇಶವನ್ನು ವಾಯುಮಾಲಿನ್ಯರಹಿತ ಮಾಡುವ ನಿಟ್ಟಿನಲ್ಲಿ ತೈಲ ಕಂಪನಿಗಳಿಗೆ ಮತ್ತು ಆಟೋಮೊಬೈಲ್ ನಿರ್ಮಾಣ ಕಂಪನಿಗಳಿಗೆ ಭಾರತ್ ಸ್ಟೇಜ್ 4 ಗುಣಮಟ್ಟ ಅಳವಡಿಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಸುತ್ತೋಲೆ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 11 ನಗರಗಳಿಗೆ ಅನ್ವಯವಾಗುತ್ತದೆ. ನಗರಗಳನ್ನು ವಾಯುಮಾಲಿನ್ಯ ಮುಕ್ತ ಮಾಡಿ ಹಸಿರು ಕಂಗೊಳಿಸಬೇಕೆಂಬುದೇ ಈ ಗುಣಮಟ್ಟ ಪಾಲಿಸುವಿಕೆಯ ಹಿಂದಿನ ಉದ್ದೇಶ.

ದಶಕಗಳ ಹಿಂದೆ ಪ್ರಾರಂಭಿಸಲಾಗಿದ್ದ ಭಾರತ್ ಸ್ಟೇಜ್ 1 ವಾಯುಮಾಲಿನ್ಯ ಪರೀಕ್ಷೆಯಿಂದ 4ರವರೆಗೆ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೊಸ ನಿಯಮಾವಳಿಗಳು ಯುರೋಪ್ ನಲ್ಲಿ ಪಾಲಿಸಲಾಗುತ್ತಿರುವ ವಾಯುಮಾಲಿನ್ಯ ಗುಣಮಟ್ಟಕ್ಕೆ ಹತ್ತಿರವಾಗಿದೆ. ಭಾರತ್ ಸ್ಟೇಜ್ 4 ಗುಣಮಟ್ಟಕ್ಕೆ ತಕ್ಕಂತೆ ತಮ್ಮ ಉತ್ಪನ್ನಗಳಿಗೆ ಅಗತ್ಯ ಬದಲಾವಣೆಗಳನ್ನು ತರಲು ಆಟೋಮೊಬೈಲ್ ಕಂಪನಿಗಳಿಗೆ ಏಪ್ರಿಲ್ 2010ರ ಗಡುವು ಕೇಂದ್ರ ಸರ್ಕಾರ ನೀಡಿದೆ. ಆರ್ಎ ಮಾಶೇಲ್ಕರ್ ಸಮಿತಿ ಮಾಡಿರುವ ಶಿಫಾರಸಿನ ಆಧಾರದ ಮೇಲೆ ಭಾರತ್ ಸ್ಟೇಜ್ 4 ಗುಣಮಟ್ಟವನ್ನು ನಿಗದಿ ಮಾಡಲಾಗಿದೆ.

ಭಾರತ ಸ್ಟೇಜ್ 4 ಗುಣಮಟ್ಟ ಅಳವಡಿಸಲು ಹೆಚ್ಚಿನ ಆಟೋಮೊಬೈಲ್ ಕಂಪನಿಗಳು ಸಿದ್ಧವಾಗಿವೆ. ಆದರೆ, ಹಿಂದೂಸ್ತಾನ್ ಮೋಟಾರ್ಸ್‌ನ ಅಂಬಾಸಿಡರ್‌ನಂಥ ದುಬಾರಿ ಕಾರಿಗೆ ಹೊಸ ನಿಯಮಾವಳಿಗಳು ಭಾರಿಯಾಗಿ ಪರಿಣಮಿಸಿವೆ. ಮಾರುತಿ ಅಲ್ಟೋ ಮತ್ತು 800 ಕಾರುಗಳಿಗೆ ಭಾರತ್ ಸ್ಟೇಜ್ 4 ಗುಣಮಟ್ಟ ಅಳವಡಿಸುವುದು ಸ್ವಲ್ಪ ದುಬಾರಿಯಾಗಲಿದೆ ಎಂದು ಮಾರುತಿ ಕಂಪನಿ ಹೇಳಿದೆ. ಉಳಿದ ಮಾಡೆಲ್ ಗಳ ಇಂಜಿನ್ ಮತ್ತು ಹಬೆ ಹೊರಹಾಕುವ ವ್ಯವಸ್ಥೆಯಲ್ಲಿ ಅಲ್ಪ ಬದಲಾವಣೆ ಮಾಡಲಾಗುವುದು ಎಂದು ಹೇಳಿದೆ.

ಆದರೆ, ಇಡೀ ದೇಶ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ್ ಸ್ಟೇಜ್ 4 ಗುಣಮಟ್ಟ ಅಳವಡಿಕೆ ಕಡ್ಡಾಯ ಮಾಡಿರುವುದು ಅನೇಕ ಆಟೋಮೊಬೈಲ್ ಕಂಪನಿಗಳಿಗೆ ಬಿಸಿ ಮುಟ್ಟಿಸಿದಂತಾಗಿದೆ. ನೂತನ ಗುಣಮಟ್ಟ ಅಳವಡಿಕೆಗಾಗಿ ಆಟೋಮೊಬೈಲ್ ಕಂಪನಿಗಳು ಒಟ್ಟಾಗಿ 25 ಸಾವಿರ ಕೋಟಿ ರು. ವ್ಯಯಿಸಬೇಕಾಗಬಹುದೆಂಬ ಅಂದಾಜಿದೆ. ಈ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೆ ಬಂದಲ್ಲಿ ಈ 11 ನಗರಗಳಲ್ಲಿನ ನಾಗರಿಕರು ವಾಯುಮಾಲಿನ್ಯದಿಂದ ಮುಕ್ತರಾಗುವುದರಲ್ಲಿ ಸಂದೇಹವಿಲ್ಲ. ಇದಕ್ಕಾಗಿ ಕಾರು ಕೊಳ್ಳುವವರು ಅಲ್ಪ ಬೆಲೆ ತೆತ್ತಬೇಕಾಗಿ ಬಂದರೂ ಆಶ್ಚರ್ಯವಿಲ್ಲ.

More from DriveSpark

Article Published On: Saturday, February 21, 2009, 16:32 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+