ಭಾರತದಲ್ಲಿ ಬೆಂಝ್ ಕಾರು ತಯಾರಿಕಾ ಘಟಕ

ಕೇವಲ ಒಂದೇ ವರ್ಷದಲ್ಲಿ ಕಾರು ತಯಾರಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ತಯಾರಿಕೆ ಘಟಕ ಕಲ್ಪಿಸಿಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ರೆಡಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಘಟಕವನ್ನು ರೂಪಿಸಲು ಬೆಂಗಳೂರು ಮೂಲದ ಕಂಪನಿಯ ನೆರವು ಪಡೆಯಲಾಗಿದೆ.
ಆರಂಭದಲ್ಲಿ ಮರ್ಸಿಡಿಸ್ ಬೆಂಝ್ ಕಾರು ತಯಾರಿಕಾ ಕಂಪನಿ 5 ಸಾವಿರ ಕಾರುಗಳನ್ನು ಮತ್ತು 1200 ವಾಣಿಜ್ಯ ವಾಹನಗಳನ್ನು ಮಾತ್ರ ತಯಾರಿಸುವುದಾಗಿ ಹೇಳಿದೆ. ವಿಶ್ವದಾದ್ಯಂತ ಬೆಂಝ್ ಕಾರು ತಯಾರಿಕೆಯಲ್ಲಿ ಬಳಸಲಾಗುತ್ತಿರುವ ಉತ್ಕೃಷ್ಟ ತಂತ್ರಜ್ಞಾನವನ್ನು ಚಕನ್ ಕಾರು ಘಟಕದಲ್ಲಿಯೂ ಬಳಸಲಾಗುವುದು ಎಂದು ಕಂಪನಿ ತಿಳಿಸಿದೆ.
ಭಾರತದಲ್ಲಿ ಬೆಂಝ್ ಕಾರು ತಯಾರಿಕೆ ಘಟಕ ಪ್ರಾರಂಭಿಸಬೇಕೆಂಬ ಕಂಪನಿಯ ಕನಸು ಚಕನ್ ಕಾರು ತಯಾರಿಕಾ ಘಟಕದ ಸ್ಥಾಪನೆಯಿಂದ ನನಸಾದಂತಾಗಿದೆ.


Click it and Unblock the Notifications








