ಮಾರಾಟದಲ್ಲಿ ಬಿಎಮ್‌ಡಬ್ಲ್ಯೂ ಮುಂದೆ ಬೆಂಝ್ ಹಿಂದೆ

ಅಷ್ಟೇ ಅಲ್ಲ ಕಳೆದ ಹಣಕಾಸು ವರ್ಷಕ್ಕಿಂತ 2008 ಮತ್ತು 2009ರಲ್ಲಿ ಶೇ. 100ರಷ್ಟು ಮಾರಾಟ ಹೆಚ್ಚಿಸಿಕೊಂಡಿದೆ. ಕಳೆದ ಹಣಕಾಸು ವರ್ಷದಲ್ಲಿ 5 ಮತ್ತು 7 ಸರಣಿಯ ಬಿಎಮ್‌ಡಬ್ಲ್ಯೂ ಕಾರುಗಳು 493 ಮಾರಾಟವಾಗಿದ್ದರೆ ಈ ವರ್ಷ 994 ಮಾರಾಟವಾಗಿವೆ.
ಬಿಎಮ್‌ಡಬ್ಲ್ಯೂ ಮಾರಾಟದಲ್ಲಿ ಭಾರತ ಪ್ರಮುಖ ಭೂಮಿಕೆವಹಿಸುತ್ತಲೇ ಬಂದಿದೆ. ಕಳೆದ ತಿಂಗಳು ಡೀಸೆಲ್ ಇಂಜಿನ್ ಹೊಂದಿರುವ ಎಕ್ಸ್5 ಮತ್ತು ಎಕ್ಸ್6 ಎರಡು ಹೊಸ ಮಾಡೆಲ್‌ಗಳನ್ನು ಬಿಎಮ್‌ಡಬ್ಲ್ಯೂ ಬಿಡುಗಡೆ ಮಾಡಿದೆ. 2008ರಲ್ಲಿ 2094 ಕಾರುಗಳನ್ನು ಬಿಎಮ್‌ಡಬ್ಲ್ಯೂ ಮಾರಾಟ ಮಾಡಿದ್ದು, ಭಾರತದಲ್ಲಿ ಇದು ಎಲ್ಲ ದಾಖಲೆಗಳನ್ನು ಹಿಂದೆ ಹಾಕಿದೆ.
2009ರಲ್ಲಿ ಮರ್ಸಿಡಿಸ್ ಬೆಂಝ್ ಕೇವಲ 90 ಕಾರುಗಳನ್ನು ಮಾತ್ರ ಮಾರಾಟ ಮಾಡಲು ಶಕ್ಯವಾಗಿದ್ದರೆ, ಬಿಎಮ್‌ಡಬ್ಲ್ಯೂ 270 ಕಾರುಗಳನ್ನು ಮಾರಾಟ ಮಾಡಿ ತನ್ನ ಸಾರ್ವಭೌಮತ್ವವನ್ನು ಸಾಬೀತುಪಡಿಸಿದೆ. ಬಿಎಮ್‌ಡಬ್ಲ್ಯೂ ಹೊಸಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡುತ್ತಿದ್ದರೆ, ತಾಂತ್ರಿಕ ಕಾರಣದಿಂದಾಗಿ ಬೆಂಝ್ ಎಕಾನಾಮಿಕ್ ಕ್ಲಾಸ್ ಕಾರಿನ ಬಿಡುಗಡೆಯನ್ನು ಮುಂದುಹಾಕಬೇಕಾಗಿ ಬಂದಿದೆ.
ಮಾರುಕಟ್ಟೆ ಎಷ್ಟೇ ಡೋಲಾಯಮಾನವಾಗಿದ್ದರೂ ಭಾರತದಲ್ಲಿ ಪ್ರಸ್ತುತ ವರ್ಷ 9500 ಐಷಾರಾಮಿ ಕಾರುಗಳು ಮಾರಾಟವಾಗುತ್ತವೆಂದು ನಿರೀಕ್ಷಿಸಲಾಗಿದೆ. ಕಳೆದ ವರ್ಷ ಕೇವಲ 7500 ಐಷಾರಾಮಿ ಕಾರುಗಳು ಮಾತ್ರ ಬಿಕರಿಯಾಗಿದ್ದವು.


Click it and Unblock the Notifications








