ಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ

ಎಂದಿನಂತೆ ಟಾಟಾ ಕಂಪನಿ ಅರ್ಜಿಯನ್ನು ಕಾರು ಬುಕ್ ಮಾಡುವವರಿಗೆ ಪುಗಸಟ್ಟೆಯಾಗಿ ನೀಡುತ್ತಿಲ್ಲ. ಅದಕ್ಕಾಗಿ 300 ರು. ನೀಡಬೇಕು. ಕಾರು ಸಾಲ ನೀಡಲಿಕ್ಕಾಗಿ ಟಾಟಾ ಕಂಪನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಆ ಅರ್ಜಿಗಳನ್ನು ಎರಡರಲ್ಲಿ ಒಂದು ಬ್ಯಾಂಕಿಗೆ ಕಳಿಸಿಕೊಡಲಾಗುತ್ತದೆ. ಒಂದು ವೇಳೆ ಅರ್ಜಿ ತಿರಸ್ಕೃತವಾದರೆ 300 ರು. ವಾಪಸ್.
ಮಾರ್ಚ್ 23ರಂದು ನ್ಯಾನೋ ಮುಂಬೈನಲ್ಲಿ ಬಿಡುಗಡೆಯಾಗುತ್ತಲಿದ್ದು, ತಿಂಗಳ ಕೊನೆಯಿಂದ ಬುಕಿಂಗ್ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕಾರು ಕೊಳ್ಳಲು ನೂಕುನುಗ್ಗಲು ಆಗುವ ಸಾಧ್ಯತೆಯಿರುವುದರಿಂದ ಟಾಟಾ ಮೋಟರ್ಸ್ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆಗೆ ಇನ್ನೆರಡು ಬ್ಯಾಂಕುಗಳು ಒಪ್ಪಂದ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿವೆ.
ಒಟ್ಟಿನಲ್ಲಿ ಯುಗಾದಿಗೆ ಟಾಟಾ ಕಂಪನಿಗೆ ಆರ್ಥಿಕ ಸಂಕಷ್ಟದಲ್ಲಿಯೂ ಭರ್ಜರಿ ಫಸಲಾಗುವ ಸಾಧ್ಯತೆಯಿದೆ. ಜೊತೆಗೆ ಸಾಲ ನೀಡುವ ಬ್ಯಾಂಕುಗಳಿಗೂ ಭರ್ತಿ ಕೆಲಸ. ಇಷ್ಟೆಲ್ಲ ಸಿದ್ಧತೆ ನಡೆಸಿಕೊಂಡಿದ್ದರೂ ಬಡ್ಡಿ ಪ್ರಮಾಣವನ್ನು ಮಾತ್ರ ಇಳಿಸಲು ಟಾಟಾ ಮೋಟರ್ಸ್ ಕಂಪನಿ ಚಿಂತನೆ ನಡೆಸುತ್ತಿಲ್ಲ.


Click it and Unblock the Notifications








