ನ್ಯಾನೋ ಹಾದಿಯನ್ನೇ ತುಳಿಯಲಿರುವ ಸ್ಕೋಡಾ
ಟಾಟಾ ಕಂಪನಿಯ ನ್ಯಾನೋ ಬಿಡುಗಡೆಯಿಂದ ಉತ್ತೇಜಿತವಾಗಿರುವ ಸ್ಕೋಡಾ ಕಾರು ತಯಾರಕ ಕಂಪನಿ ಕೂಡ 2011ರಲ್ಲಿ ಪುಟಾಣಿ ಕಾರನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಆದರೆ, ಈ ಕಾರು ನ್ಯಾನೋದಂತೆ 1 ಲಕ್ಷ ಚಿಲ್ಲರೆ ರು. ಬಾಳದೆ ನಾಲ್ಕು ಲಕ್ಷ ರು. ಬಾಳಲಿದೆ.
ಸ್ಕೋಡಾ ಈ ಸಣ್ಣ ಕಾರನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಿಸಲು ಇಚ್ಛಿಸಿದೆ. ಇಲ್ಲಿವರೆಗೆ ಕಾರಿನ ಎಲ್ಲಿ ಬಿಡಿಭಾಗಗಳನ್ನು ಯುರೋಪಿನಿಂದ ತಂದು ಭಾರತದಲ್ಲಿ ಕಾರು ನಿರ್ಮಾಣ ಮಾಡುತ್ತಿತ್ತು. ಮಹಾರಾಷ್ಟ್ರದ ಔರಂಗಾಬಾದ್ ಬಳಿ ಕಾರು ತಯಾರಿಕಾ ಘಟಕವನ್ನು ಸ್ಥಾಪಿಸಲು ಸ್ಕೋಡಾ ನಿರ್ಧರಿಸಿದೆ. ಯಾವುದೇ ಗುಣಮಟ್ಟದಲ್ಲಿ ರಾಜಿಯಾಗದೆ ದೇಶೀ ಬಿಡಿಭಾಗಗಳನ್ನು ಬಳಸಿ ಕಾರು ನಿರ್ಮಿಸುವುದರಿಂದ ದುಡ್ಡಿಗೆ ತಕ್ಕ ಕಾರುಗಳನ್ನು ನಿರ್ಮಿಸುವುದು ಸಾಧ್ಯ ಎಂದು ಸ್ಕೋಡಾ ಹೇಳಿದೆ.
ಸ್ಕೋಡಾ ಮಾತ್ರವಲ್ಲ ವೋಕ್ಸ್ ವ್ಯಾಗನ್ ಕಂಪನಿ ಕೂಡ ನ್ಯಾನೋದ ಹಾದಿಯನ್ನೇ ತುಳಿಯಲಿದೆ. ಈ ಕಂಪನಿಯ ಸಣ್ಣ ಕಾರು ಸ್ಕೋಡಾದ ಕಾರಿಗಿಂತ ದುಬಾರಿಯಾಗಿದ್ದು ಅಂದಾಜು 6 ಲಕ್ಷ ರು. ಬೆಲೆಯದ್ದಾಗಲಿದೆ. ನ್ಯಾನೋ ಕಾರು ತಯಾರಿಕೆಯಿಂದ ಟಾಟಾ ಕಂಪನಿ ಎಲ್ಲ ಕಾರು ತಯಾರಿಕಾ ಕಂಪನಿಗಳಿಗೆ ಕಡಿಮೆ ಬೆಲೆಯ ಕಾರನ್ನು ಕೊಡಲು ಸಾಧ್ಯ ಎಂಬುದನ್ನು ರುಜುವಾತುಪಡಿಸಿದೆ ಎಂದು ಸ್ಕೋಡಾ ಒಪ್ಪಿಕೊಂಡಿದೆ. ನ್ಯಾನೋ ಕಾರು ತಯಾರಿಸುವ ಮುಖಾಂತರ ಇಡೀ ಜಗತ್ತಿಗೆ ಭಾರತದ ಆಟೋಮೊಬೈಲ್ ಇಂಜಿನಿಯರಿಂಗ್ ಸಾಮರ್ಥ್ಯವನ್ನು ಜಾಹೀರಾತು ಟಾಟಾ ಕಂಪನಿ ಮಾಡಿದೆ ಎಂದು ಸ್ಕೋಡಾ ಹೇಳಿದೆ.


Click it and Unblock the Notifications








