ಕಾರು ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ವಿರೋಧ

ಸ್ವಿಫ್ಟ್, ಎ ಸ್ಟಾರ್, ಸ್ಯಾಂಟ್ರೋ, ಐ10, ಎಸೆಂಟ್, ಸ್ಪಾರ್ಕ್, ಕೊರೋಲಾ ಕಾರುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಕನಿಷ್ಠ 3 ಸಾವಿರ ರು.ಯಿಂದ 50 ಸಾವಿರ ರು.ವರೆಗೆ ಬೆಲೆ ಏರಿಕೆ ಕಂಡುಬಂದಿದೆ. ಈಗ ಸರ್ಕಾರ ಈ ಕಾರು ತಯಾರಕರ ವಿರುದ್ಧ ಕಿಡಿ ಕಾರುತ್ತಿದೆ. ಬೆಲೆ ಏರಿಸಿದ್ದಕ್ಕೆ ಸೂಕ್ತ ಸಮರ್ಥನೆ ನೀಡಬೇಕೆಂದು ಕಾರು ತಯಾರಿಕಾ ಸಂಸ್ಥೆಯನ್ನು ಕೇಳಿಕೊಂಡಿದೆ. ಉತ್ತೇಜಕ ಕ್ರಮಗಳನ್ನು ತೆಗೆದುಕೊಂಡಿದ್ದರೂ ಬೆಲೆ ಏರಿಸಿದ್ದೇಕೆಂದು ಪ್ರಶ್ನಿಸಿದೆ
ಆದರೆ, ಕಾರು ತಯಾರಕರ ವಾದವೇ ಬೇರೆಯಾಗಿದೆ. ಕಾರುಗಳಿಗೆ ಬೇಡಿಕೆ ಇಲ್ಲದ ದಿನಗಳಲ್ಲಿ ಕಾರು ತಯಾರಕರು ಭಾರೀ ನಷ್ಟ ಅನುಭವಸಿದ್ದಾರೆ. ಅದನ್ನು ಸರಿದೂಗಿಸಲು ಅಲ್ಪ ಭಾರವನ್ನು ಖರೀದಿದಾರರ ಮೇಲೆ ಹೇರಲಾಗುತ್ತಿದೆ. ಇದರಲ್ಲಿ ತಪ್ಪೇನೂ ಇಲ್ಲ ಎಂದು ಕಾರು ತಯಾರಕರು ವಾದಿಸುತ್ತಿದ್ದಾರೆ.
ಕಾರು ತಯಾರಕರ ವಾದಕ್ಕೆ ಸೊಪ್ಪು ಹಾಕದ ಕೇಂದ್ರ ಸರ್ಕಾರ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಬೇಕೆಂದು ಆಗ್ರಹಿಸಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರೂ ನಷ್ಟ ಅನುಭವಿಸಿದ್ದಾರೆ, ಆದರೆ ಬೆಲೆ ಏರಿಕೆ ಮಾಡಿಲ್ಲವೆಂಬುದು ಸರ್ಕಾರದ ಸ್ಪಷ್ಟ ನುಡಿ.


Click it and Unblock the Notifications








