ಚಿಕ್ಕ ಕಾರುಗಳ ಮಾರುಕಟ್ಟೆಗೆ ಜಿಗಿದ ಟಯೋಟಾ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂಪನಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್, ಕಳೆದ ಕೆಲ ವರ್ಷಗಳ ಹಿಂದೆ ಟೊಯೋಟಾ ಮೋಟಾರ್ಸ್ ವತಿಯಂದ ಕಡಿಮೆ ದರದ ಚಿಕ್ಕ ಕಾರನ್ನು ಬಿಡುಗಡೆ ಮಾಡುವ ಆಶ್ವಾಸನೆ ನೀಡಿತ್ತು. ಈ ಭರವಸೆ ಈಡೇರಿಸುವ ದಿನ ಸಮೀಪದಲ್ಲಿದೆ. ಮುಂದಿನ ವರ್ಷ ಕಡಿಮೆ ದರದ, ಚಿಕ್ಕ ಕಾರನ್ನು ಮಾರುಕಟ್ಟೆ ಬಿಡುಗಡೆ ಮಾಡುವುದಾಗಿ ಹೇಳಿದರು.
ಇದಕ್ಕಾಗಿ ಕಂಪನಿಯು ಸುಮಾರು 3,200 ಕೋಟಿ ರುಪಾಯಿಗಳನ್ನು ತೆಗೆದಿರಿಸಿದೆ. ಶೇ. 50 ಕಂಪನಿಯ ಷೇರು ಮತ್ತು ಉಳಿದ ಶೇ. 50 ಷೇರನ್ನು ಸಾರ್ವಜನಿಕರಿಂದ ಕಲೆಹಾಕಲಾಗುವುದು. ಭಾರತೀಯರಿಗೆ ಬೇಡಿಕೆಗೆ ತಕ್ಕಂತೆ ಕಾರ್ಯನಿರ್ವಹಿಸಲಾಗುವುದು ಸಿಂಗ್ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications








