ಯೂರೋ ಮಾರುಕಟ್ಟೆಯಲ್ಲಿ ರೇವಾ ಕಾರುಗಳು

Reva new car
ವಿಭಿನ್ನ ಬಗೆಯ ಕಾರುಗಳ ಉತ್ಪಾದನೆಯೇ ನಮ್ಮ ಗುರಿ ಎನ್ನುವ ರೇವಾ ಕಾರು ಮಾಲೀಕರು ಇತ್ತೀಚೆಗೆ ಯುರೋಪ್ ಮಾರುಕಟ್ಟೆಗೆಂದೇ ರೂಪಿಸಿದ ಎರಡು ಹೊಸ ಎಲೆಕ್ಟ್ರಾನಿಕ್ ಕಾರುಗಳ ಮಾದರಿಯನ್ನು ಪರಿಚಯಿಸಿದರು. 2010 ರಲ್ಲಿ ಯುರೋಪ್ ಮಾರುಕಟ್ಟೆಯಲ್ಲಿ ಭಾರತೀಯ ಕಂಪೆನಿ ನಿರ್ಮಿತ ಎಲೆಕ್ಟ್ರಾನಿಕ್ ಕಾರುಗಳ ಬೇಡಿಕೆ ಹೆಚ್ಚಲಿದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ರೇವಾ ಕಂಪೆನಿ ಸಹಜನಕ ಚೇತನ್ ಮೈನಿ.

ಬೆಂಗಳೂರಿನ ಬೊಮ್ಮಸಂದ್ರ ಬಳಿಯ ಮೈನಿ ಕಾರು ಉತ್ಪಾದನಾ ಘಟಕದಿಂದ ಈಗಾಗಲೇ ರೇವಾ ಎಲೆಕ್ಟ್ರಿಕ್ ಕಾರು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹೆಸರು ಮಾಡಿದೆ. ಈಗ ಜರ್ಮನ್ನಿನ ಫ್ರಾಂಕ್ ಫರ್ಟ್ ನಲ್ಲಿ ನಡೆದ ಆಟೋ ಉತ್ಪಾದನಾಗಳ ಪ್ರದರ್ಶನ ಮೇಳದಲ್ಲಿ ರೇವಾ ಕಂಪೆನಿ ತನ್ನ ಇತ್ತೀಚಿನ ಉತ್ಪನ್ನಗಳಾದ NXG city car ಹಾಗೂ NXR ಮಾದರಿಗಳು ಪ್ರದರ್ಶನಗೊಂಡವು. ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವ NXR city car ಬೆಲೆ ಸುಮಾರು 10 ಸಾವಿರ ಯುರೋಗಳು (ಸುಮಾರು 7 ಲಕ್ಷ ರು). ಇದು ನಗರ ಕೇಂದ್ರಿಕೃತ ಮಾದರಿಯ ಕಾರು. ಎರಡು ಸೀಟುವುಳ್ಳ ಈ ಮಿನಿಕಾರು 2011ರ ವೇಳೆಗೆ ರಸ್ತೆಗಿಳಿಯುವ ಸಾಧ್ಯತೆಯಿದೆ.

ಜನ ಈಗ ಹೆಚ್ಚೆಚ್ಚು ಪರಿಸರಸ್ನೇಹಿ ಕಾರುಗಳಿಗೆ ಮೊರೆ ಹೋಗುತ್ತಿದ್ದಾರೆ. ತೈಲ ಬೆಲೆ ಏರಿಕೆ, ಕಚ್ಚಾ ತೈಲದ ಕೊರತೆಯ ಜನರನ್ನು ಕಾಡುವುದು ಸಾಮಾನ್ಯವಾಗಿದೆ. ಜನರ ಅಗತ್ಯಕ್ಕೆ ತಕ್ಕಂತೆ ಕಾರುಗಳನ್ನು ವಿನ್ಯಾಸಗೊಳಿಸುವ ಹೊಣೆ ನಮ್ಮದಾಗಿದೆ. 30 ಕೋಟಿ ವೆಚ್ಚದ ಬೆಂಗಳೂರಿನ ನಿರ್ಮಾಣ ಘಟಕದಿಂದ ವರ್ಷಕ್ಕೆ ಸುಮಾರು 30 ಸಾವಿರಕ್ಕೂ ಅಧಿಕ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿದೆ. ಯುರೋ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರಲು ಒಂದೆರಡು ವರ್ಷವಾದರೂ ಬೇಕು. 2015 ರ ವೇಳೆಗೆ ಸುಮಾರು 5 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಯುರೋ ಮಾರುಕಟ್ಟೆಯಲ್ಲಿ ಬಿಡಲು ಯೋಜನೆ ರೂಪಿಸಲಾಗಿದೆ. ಪರಿಸರಸ್ನೇಹಿ ಕಾರುಗಳಿಗೆ ಅಲ್ಲಿನ ಸರ್ಕಾರಗಳು ಬೆಂಬಲ ಸೂಚಿಸಿವೆ ಎಂದು ಚೇತನ್ ಮೈನಿ ಹೇಳುತ್ತಾರೆ.

ಬೆಂಗಳೂರು ಮೂಲದ ಮೈನಿ ರೇವಾ ಕಂಪೆನಿ 2001 ರಿಂದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ. ಸುಮಾರು 3ಲಕ್ಷಕ್ಕೂ ಅಧಿಕ ಕಾರುಗಳನ್ನು 24 ದೇಶಗಳಿಗೆ ಪರಿಚಯಿಸಿದೆ. ಲಿಥಿಯಂ-ಅಯಾನ್(lithium-ion ) ಬ್ಯಾಟರಿ ಚಾಲಿತ NXR ಮಾದರಿಯಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದು. ಸುಮಾರು 15,000 ಯುರೋಗಳಾಗುವ(ಸುಮಾರು 10 ಲಕ್ಷರು) ಸಾಧ್ಯತೆಯಿದೆ. 104 ಕಿ.ಮೀ/ಗಂಟೆ ವೇಗದಲ್ಲಿ ಚಾಲಿಸುವ ಸಾಮಾರ್ಥ್ಯ ಹೊಂದಿರುವ ಈ ಕಾರು ಒಮ್ಮೆ ಚಾರ್ಚ್ ಮಾಡಿದರೆ ಏಕಕಾಲಕ್ಕೆ 160 ಕಿ.ಮೀ ದೂರ ಕ್ರಮಿಸಬಹುದಾಗಿದೆ. ಮಾರುಕಟ್ಟೆ ವಿಸ್ತೀರ್ಣದಲ್ಲಿ ತೊಡಗಿರುವ ರೇವಾ ಕಾರು ಭಾರತಕ್ಕಿಂತ ಯುರೋ ಸ್ನೇಹಿ ಆಗುವ ಲಕ್ಷಣಗಳು ಕಂಡುಬಂದಿದೆ.

More from DriveSpark

Article Published On: Thursday, September 17, 2009, 14:28 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+