ಏಪ್ರಿಲ್ 25ರ ವರೆಗೆ ಮಾತ್ರ ನ್ಯಾನೋ ಬುಕ್ಕಿಂಗ್

ಏಪ್ರಿಲ್ 9 ರಿಂದ ಏಪ್ರಿಲ್ 25ರ ವರೆಗೆ ಮಾತ್ರ ಬುಕ್ಕಿಂಗ್ ಸೌಲಭ್ಯವಿದೆ. ಮೂರು ಮಾಡೆಲ್ ಗಳನ್ನು ಹೊಂದಿರುವ ನ್ಯಾನೋ ಕಾರ್ ನ ಬುಕ್ಕಿಂಗ್ ಚಾರ್ಜ್ 2,850 ರಿಂದ 4,110 ರುಪಾಯಿಗಳು ಎಂದು ಟಾಟಾ ಕಂಪನಿಯ ಮೂಲಗಳು ತಿಳಿಸಿವೆ. ದೇಶದ ಒಂದು ಸಾವಿರ ನಗರಗಳಲ್ಲಿ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಸುಮಾರು 30 ಸಾವಿರ ಅರ್ಜಿಗಳು ಮಾರಾಟವಾಗಿವೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಎದುರುಗಡೆ ಇರುವ ಟಾಟಾ ಕಂಪನಿ ಶೋರೂಂನಲ್ಲಿ ನೂರಾರು ಜನ ಅರ್ಜಿಗಾಗಿ ಸಾಲು ಹಚ್ಚಿರುವ ದೃಶ್ಯ ಕಂಡು ಬಂದಿತು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications








