ಅಂಕಲ್ ಸ್ಯಾಮ್ ಗೂ ನ್ಯಾನೋ ಕಾರು ಹುಚ್ಚು

By Super

Tata Nano to make its debut in US on Jan 14
ಚಿಕಾಗೋ, ಜ. 7: ವಿಶ್ವದ ಅತಿ ಕಡಿಮೆ ಬೆಲೆಯ ಜನಸಾಮಾನ್ಯರ ಕಾರು ಎಂದು ಹೆಸರಾಗಿರುವ ಟಾಟಾ ನ್ಯಾನೋ ಕಾರುಗಳು, ಸದ್ಯದಲ್ಲೇ ಅಮೆರಿಕದ ರಸ್ತೆಗಿಳಿಯಲಿವೆ. ಡೆಟ್ರಾಯಿಟ್ ನಲ್ಲಿ ಜ.14ರಂದು ನಡೆಯುವ ಆಟೋ ಷೋ ನಲ್ಲಿ ನ್ಯಾನೋ ಕಾರು ಅನಾವರಣಗೊಳ್ಳಲಿದೆ.

ಕಳೆದ ಕೆಲ ತಿಂಗಳಿಂದ ಭಾರತದ ಗ್ರಾಹಕರಲ್ಲಿ ಟಾಟಾ ನ್ಯಾನೋ ಬಗ್ಗೆ ಅಪಸ್ವರ ಮೂಡಿದ್ದರೂ, ಜಾಗತಿಕ ಮಾರುಕಟ್ಟೆ ಪ್ರವೇಶಕ್ಕೆ ಯಾವುದೇ ಅಡ್ಡಿ ಆತಂಕಗಳು ಕಂಡು ಬಂದಿಲ್ಲ. ಜಾಗತಿಕ ಮಟ್ಟದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಣ್ಣ ಕಾರುಗಳೊಡನೆ ಸ್ಪರ್ಧೆಗಿಳಿಯಲು ನ್ಯಾನೋ ಸಜ್ಜಾಗಿದೆ ಎನ್ನುತ್ತಾರೆ ಟಾಟಾ ಕಂಪೆನಿಯ ಸಿಒಒ ವಾರೆನ್ ಹ್ಯಾರೀಸ್.

ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಆಟೋ ಎಕ್ಸ್ ಪೊ 2010 ಆಟೋ ಮೊಬೈಲ್ ಪ್ರದರ್ಶನ ಮೇಳದಲ್ಲಿ ಟಾಟಾ ಕಂಪೆನಿ ಮುಖ್ಯಸ್ಥ ರತನ್ ಟಾಟಾ ಅವರು ಮುಂಬರುವ 3 ವರ್ಷಗಳಲ್ಲಿ ನ್ಯಾನೋ ಅಮೆರಿಕದ ಮಾರುಕಟ್ಟೆಯನ್ನು ಆವರಿಸಲಿದೆ ಎಂದಿದ್ದರು. ಈ ಯೋಜನೆಯನ್ನು ಕಾರ್ಯಗತಗೊಳಿಸುವ ಪ್ರಥಮ ಹಂತವಾಗಿ ಡೆಟ್ರಾಯಿಟ್ ಆಟೋ ಷೋ ನಲ್ಲಿ ನ್ಯಾನೋ ಕಾರುಗಳು ಪ್ರದರ್ಶನಗೊಳ್ಳಲಿವೆ.

More from DriveSpark

Article Published On: Thursday, January 7, 2010, 12:58 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+