ಮಾರುತಿ ಸುಜುಕಿ : 3,000 ಉದ್ಯೋಗಿಗಳ ನೇಮಕ

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾರುತಿ ಸುಜುಕಿ ಕಂಪನಿ ಮಾನವ ಸಂಪನ್ಮೂಲ ವಿಭಾಗ ಮುಖ್ಯಸ್ಥ ಎಸ್ ವೈ ಸಿದ್ದಿಕಿ, ಮಾರುತಿ ಸುಜಕಿ ಕಂಪನಿಯು ಮುಂದಿನ ವರ್ಷಗಳಲ್ಲಿ 2 ಬಿಲಿಯನ್ ಹಣವನ್ನು ಹೂಡಲಿದ್ದು, 3,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. ಗ್ರಾಹಕರ ಅನುಕೂಲಕ್ಕಾಗಿ ನಿಗದಿತ ಸಮಯಕ್ಕೆ ಕಾರುಗಳನ್ನು ಒದಗಿಸುವ ಸಲುವಾಗಿ ಬೆಂಗಳೂರು, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಲದಲ್ಲಿ ಸ್ಟಾಕ್ ಯಾರ್ಡ್ ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.


Click it and Unblock the Notifications








