ರು.6 ಕೋಟಿ ಬೆಲೆ ಬೆಂಜ್ ಕಾರ್ ಬಿಡುಗಡೆ

ಈ ವಿಲಾಸಿ ಕಾರು ಕ್ಷಿಪಣಿ ಮತ್ತು ಗುಂಡು ನಿರೋಧಕವಾಗಿದ್ದು, ಉದ್ದಿಮೆ ಸಂಸ್ಥೆಗಳ ದಿಗ್ಗಜರು, ಸರಕಾರದ ಉನ್ನತ ಅಧಿಕಾರಿಗಳು, ಖ್ಯಾತನಾಮರ ಬಳಕೆಗಾಗಿಯೇ ತಯಾರಿಸಲಾಗಿದೆ. ಸಂಪೂರ್ಣ ಶಸ್ತ್ರಸಜ್ಜಿತ ಮತ್ತು ರಕ್ಷಣಾ ಕೋಟೆಯಂತೆ ಕಾರ್ಯನಿರ್ವಹಿಸುವ ವಾಹನಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಈ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ಉದ್ದೇಶ ಮರ್ಸಿಡಿಸ್ ಬೆಂಜ್ ಗೆ ಇದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿ ಸುಹಾಸ್ ಕಡ್ಲಸ್ಕರ್ ಹೇಳಿದ್ದಾರೆ.
ದೇಶದ್ಯಾಂತ ಇರುವ ಸಂಸ್ಥೆಯ ಡೀಲರ್ ಶಿಪ್ ಗಳಲ್ಲಿ ಈ ಕಾರ್ ಗೆ ಮಾರಾಟ ನಂತರದ ಸೇವೆ ಲಭ್ಯ ಇದೆ. ಜರ್ಮನಿಯ ತಯಾರಿಕಾ ಘಟಕದಲ್ಲಿಯೇ ಇದನ್ನು ನಿರ್ಮಿಸಿ ಭಾರತಕ್ಕೆ ತರಲಾಗುವುದು ಎಂದು ಅವರು ಹೇಳಿದರು.


Click it and Unblock the Notifications








