ಟಾಟಾ ಜಾಗತಿಕ ಮಾರಾಟದಲ್ಲಿ ಶೇ.53 ಹೆಚ್ಚಳ

Tata Motors Global Sales Climb 53% In April
ಮುಂಬೈ, ಮೇ.14: ವಾಣಿಜ್ಯ ಮತ್ತು ಪ್ರಯಾಣಿಕರ ವಾಹನಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ದೇಶದ ಅತೀ ದೊಡ್ಡ ವಾಹನ ತಯಾರಿಕಾ ಕಂಪೆನಿ ಟಾಟಾದ ಜಾಗತಿಕ ವಾಹನ ಮಾರಾಟದಲ್ಲಿ ಶೇ.53 ಹೆಚ್ಚಳ ದಾಖಲಾಗಿದ್ದು ಕಂಪೆನಿ ಏಪ್ರಿಲ್ ನಲ್ಲಿ 77,732 ವಾಹನಗಳನ್ನು ಮಾರಾಟ ಮಾಡಿದೆ.

ತನ್ನ ಐಷಾರಾಮಿ ವಾಹನ ಜಾಗ್ವಾರ್ ಲ್ಯಾಂಡ್ ರೋವರ್ ನ ಮಾರಾಟದಲ್ಲಿ ಏಪ್ರಿಲ್ ನಲ್ಲಿ ಶೇ.61 ಏರಿಕೆ ದಾಖಲಾಗಿದೆ. ಏಪ್ರಿಲ್ ನಲ್ಲಿ 17,909 ಜಾಗ್ವಾರ್ ವಾಹನಗಳು ಮಾರಾಟವಾಗಿವೆ. ಜಾಗ್ವಾರ್ ಬ್ರಾಂಡ್ ನ ಸೇಡಾನ್ ಗಳ ಮಾರಾಟ ಯಥಾಸ್ಥಿತಿಯಲ್ಲೇ ಇದ್ದು 3,559 ಸೇಡಾನ್ ಗಳನ್ನು ಮಾರಾಟ ಮಾಡಲಾಗಿದೆ. ಲ್ಯಾಂಡ್ ರೋವರ್ ಗಳ ಮಾರಾಟದಲ್ಲಿ ಶೇ 89 ಏರಿಕೆ ದಾಖಲಾಗಿದ್ದು ಕಂಪೆನಿ 14,350 ವಾಹನಗಳು ಮಾರಾಟವಾಗಿವೆ.

2010 ರ ಏಪ್ರಿಲ್ ನಲ್ಲಿ ಪ್ರಯಾಣಿಕರ ವಾಹನ ಮಾರಾಟದಲ್ಲಿ ಶೇ.66 ಏರಿಕೆ ದಾಖಲಾಗಿದ್ದು ಕಂಪೆನಿ ಒಟ್ಟು 43,262ವಾಹನಗಳನ್ನು ಮಾರಾಟ ಮಾಡಿದೆ. ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.40 ಏರಿಕೆ ದಾಖಲಾಗಿದ್ದು 34,470 ವಾಹನಗಳು ಮಾರಾಟವಾಗಿದೆ. ಟಾಟಾ ಸಮೂಹ ಜಾಗತಿಕ ಮಾರುಕಟ್ಟೆಯಲ್ಲಿ ಟಾಟಾ, ಟಾಟಾ ದೇವೂ, ಹಿಸ್ಪಾನೋ ಕರ್ರೊಸಿರ ವಾಣಿಜ್ಯ ವಾಹನಗಳು, ಪ್ರಯಾಣಿಕರ ವಾಹನಗಳು, ಜಾಗ್ವರ್ ಮತ್ತು ಲ್ಯಾಂಡ್ ರೋವರ್ ಐಷಾರಾಮಿ ವಾಹನಗಳನ್ನು ಮಾರಾಟ ಮಾಡುತ್ತಿದೆ.

Article Published On: Friday, May 14, 2010, 17:42 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+