ಗುಜುರಿಗೂ ಬೇಡವಾಗಿರುವ ಮಾರ್ಕೊಪೋಲೊ ಬಸ್ಸುಗಳನ್ನು ಎಲೆಕ್ಟ್ರಿಕ್ ಮಾಡ್ತೀವಿ ಎಂದ ಬಿಎಂಟಿಸಿ

ತಾಂತ್ರಿಕ ದೋಷದ ಕಾರಣದಿಂದಾಗಿ ಕರ್ನಾಟಕ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವುಂಟು ಮಾಡಿರುವ ಟಾಟಾ ಸಂಸ್ಥೆಯ ಮಾರ್ಕೊಪೋಲೊ ಬಸ್‌ಗೆ ಹೊಸ ರೂಪ ನೀಡಲು ಬಿಎಂಟಿಸಿ ಮುಂದಾಗಿದೆ.

By Girish

ತಾಂತ್ರಿಕ ದೋಷದ ಕಾರಣದಿಂದಾಗಿ ಕರ್ನಾಟಕ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವುಂಟು ಮಾಡಿರುವ ಟಾಟಾ ಸಂಸ್ಥೆಯ ಮಾರ್ಕೊಪೋಲೊ ಬಸ್‌ಗೆ ಹೊಸ ರೂಪ ನೀಡಲು ಬಿಎಂಟಿಸಿ ಮುಂದಾಗಿದೆ.

ಗುಜುರಿಗೂ ಬೇಡವಾಗಿರುವ ಬಸ್ಸುಗಳನ್ನು ಎಲೆಕ್ಟ್ರಿಕ್ ಮಾಡ್ತೀವಿ ಎಂದ ಬಿಎಂಟಿಸಿ

ಹೌದು, ಕಳೆದ ಸಾಕಷ್ಟು ತಿಂಗಳಿನಿಂದ ಬಿಎಂಟಿಸಿ ಡಿಪೋಗಳಲ್ಲಿ ಹಾಳಾದ ಸ್ಥಿತಿಯಲ್ಲಿ ನಿಂತಿರುವ 98 ಮಾರ್ಕೊಪೋಲೊ ಬಸ್‌ಗಳಿಗೆ ಎಲೆಕ್ಟ್ರಿಕ್ ಸ್ಪರ್ಶ ನೀಡುವ ಕಾರ್ಯಕ್ಕೆ ಬಿಎಂಟಿಸಿ ಸಂಸ್ಥೆ ಅಸ್ತು ಎಂದಿದೆ. ಗುಜರಿಗೂ ಬೇಡವಾಗಿದ್ದ ಬಸ್‌ಗಳು ತಾಂತ್ರಿಕ ಬದಲಾವಣೆಯೊಂದಿಗೆ ಮತ್ತೆ ರಸ್ತೆಗಿಳಿಯಲಿವೆ ಎನ್ನಲಾಗಿದೆ.

ಗುಜುರಿಗೂ ಬೇಡವಾಗಿರುವ ಬಸ್ಸುಗಳನ್ನು ಎಲೆಕ್ಟ್ರಿಕ್ ಮಾಡ್ತೀವಿ ಎಂದ ಬಿಎಂಟಿಸಿ

ಬಿಎಂಟಿಸಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕು ಎಂಬ ಆಶಯದೊಂದಿಗೆ ದುಬಾರಿ ಮಾರ್ಕೊಪೋಲೊ ಬಸ್​ಗಳನ್ನು ರಸ್ತೆಗಿಳಿಸಿತ್ತು. ಆದರೆ ಈ ಬಸ್​ನ ಇಂಜಿನ್​ನಲ್ಲಿ ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ಗುಜುರಿಗೂ ಬೇಡವಾಗಿರುವ ಬಸ್ಸುಗಳನ್ನು ಎಲೆಕ್ಟ್ರಿಕ್ ಮಾಡ್ತೀವಿ ಎಂದ ಬಿಎಂಟಿಸಿ

ಬಿಎಂಟಿಸಿಗೆ 30 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟು ಮಾಡಿದ ಹಿನ್ನೆಲೆಯಲ್ಲಿ ಟಾಟಾ ಬಸ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಹೀಗಾಗಿ 9 ಲಕ್ಷ ಕಿ.ಮಿ ಸಂಚರಿಸದಿದ್ದರೂ 2015ರ ಅಂತ್ಯದಲ್ಲಿ ಗುಜರಿಗೆ ಹಾಕಲು ಸರ್ಕಾರ ಸೂಚಿಸಿತ್ತು.

ಗುಜುರಿಗೂ ಬೇಡವಾಗಿರುವ ಬಸ್ಸುಗಳನ್ನು ಎಲೆಕ್ಟ್ರಿಕ್ ಮಾಡ್ತೀವಿ ಎಂದ ಬಿಎಂಟಿಸಿ

ಆ ನಂತರ ಈ ಬಸ್​ಗಳನ್ನು ಮಾರಾಟ ಮಾಡಲೂ ಪ್ರಯತ್ನಿಸಲಾಗಿತ್ತು. ಅದೂ ಫಲ ನೀಡದ ಕಾರಣ ಏನೂ ಉಪಯೋಗಕ್ಕೆ ಬಾರದೆ ಮೂಲೆ ಸೇರಿರುವ ಮಾರ್ಕೊಪೋಲೊ ಬಸ್​ಗಳನ್ನೇ ಎಲೆಕ್ಟ್ರಿಕ್​ ಬಸ್​ಗಳಾಗಿ ಪರಿವರ್ತಿಸಲು ಮುಂದಾಗಿದೆ. ಇದು ಸಾಧ್ಯವಾಗದಿದ್ದರೆ ಈ ಬಸ್‌ಗಳನ್ನು ಟಾಟಾ ಕಂಪನಿಗೇ ವಾಪಸ್ ನೀಡಲು ಚಿಂತನೆ ನಡೆಸಿದೆ.

ಗುಜುರಿಗೂ ಬೇಡವಾಗಿರುವ ಬಸ್ಸುಗಳನ್ನು ಎಲೆಕ್ಟ್ರಿಕ್ ಮಾಡ್ತೀವಿ ಎಂದ ಬಿಎಂಟಿಸಿ

ಭಾರತ ಸರ್ಕಾರದ ಫಾಸ್ಟರ್ ಅಡಾಪ್ಷನ್ ಆ್ಯಂಡ್ ಮಾನ್ಯುಫಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ ಫೇಮ್ ಯೋಜನೆಯಡಿ 100ಕ್ಕೂ ಅಧಿಕ ಎಲೆಕ್ಟ್ರಿಕ್ ಬಸ್ ಗುತ್ತಿಗೆ ಆಧಾರದಲ್ಲಿ ಪಡೆಯಲು ಬಿಎಂಟಿಸಿ ನಿರ್ಧರಿಸಿದೆ.

ಗುಜುರಿಗೂ ಬೇಡವಾಗಿರುವ ಬಸ್ಸುಗಳನ್ನು ಎಲೆಕ್ಟ್ರಿಕ್ ಮಾಡ್ತೀವಿ ಎಂದ ಬಿಎಂಟಿಸಿ

2016-17ನೇ ಸಾಲಿನಲ್ಲಿ 260 ಕೋಟಿ ರೂ. ನಷ್ಟದಲ್ಲಿರುವ ಬಿಎಂಟಿಸಿ ಈಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿರುವುದು ಏಕೆ? ಎಂಬ ಪ್ರೆಶ್ನೆ ಕಾಡುವುದು ಸತ್ಯ.

Most Read Articles

Kannada
English summary
BMTC to introduce Electric marcopolo buses.
Story first published: Wednesday, December 20, 2017, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X