Mahindra: ಅಭಿಮಾನಿಗಳ ಒತ್ತಡಕ್ಕೆ ಮಣಿದ ಮಹೀಂದ್ರಾ: ಮಾರ್ಚ್ 10ಕ್ಕೆ ಹೊಸ SUV

ಅಂತರಾಷ್ಟ್ರೀಯ ಗುಣಮಟ್ಟದ ಎಲೆಕ್ಟ್ರಿಕ್ ಕಾರುಗಳನ್ನು ನೀಡುವಲ್ಲಿ ಯಶಸ್ವಿಯಾಗಿರುವ ಭಾರತದ ಜನಪ್ರಿಯ ಕಾರು ತಯಾರಕ ಕಂಪನಿ ಮಹೀಂದ್ರಾ, ಕೊನೆಗೂ ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸಲು ಸಜ್ಜಾಗಿದೆ. ತನ್ನ BE 6 ಎಲೆಕ್ಟ್ರಿಕ್ ಎಸ್‌ಯುವಿ ಯಶಸ್ವಿಯಾಗಿ ಮಾರಾಟ ಕಾಣುತ್ತಿರುವುದು ಎಲ್ಲರಿಗೂ ತಿಳಿದಿದೆ, ಈ ಹಿಂದೆ ಇದರ ಸ್ಪೆಷಲ್ ಎಡಿಷನ್ ಆಗಿ BE 6 ಬ್ಯಾಟ್‌ಮ್ಯಾನ್ ಎಡಿಷನ್ ಬಿಡುಗಡೆ ಮಾಡಲಾಗಿತ್ತು. ಈ ಕಾರನ್ನು ಜನ ಮುಗಿಬಿದ್ದು ಖರೀದಿಸಿದ್ದರು. ಆದರೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ನಿರ್ಮಿಸಲಾಗಿದ್ದರಿಂದ ಈಗ ಅಭಿಮಾನಿಗಳು ಪಟ್ಟು ಹಿಡಿದು ಮತ್ತೆ ಮಾರಾಟ ಮಾಡಲು ಒತ್ತಾಯಿಸಿದ್ದಾರೆ.

ಅಭಿಮಾನಿಗಳ ಒತ್ತಡಕ್ಕೆ ಮಣಿದ ಮಹೀಂದ್ರಾ ತನ್ನ BE 6 ಬ್ಯಾಟ್‌ಮ್ಯಾನ್ ಎಡಿಷನ್ ಅನ್ನು ಮತ್ತೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮಹೀಂದ್ರಾ ಸೀಮಿತ ಅವಧಿಗೆ BE 6 ಬ್ಯಾಟ್‌ಮ್ಯಾನ್ ಎಡಿಷನ್ ಬುಕಿಂಗ್‌ಗಳನ್ನು ಮತ್ತೆ ಪ್ರಾರಂಭಿಸುತ್ತಿದೆ. ಬುಕಿಂಗ್‌ಗಳು ಮಾರ್ಚ್ 10, 2026 ರಂದು ಬೆಳಿಗ್ಗೆ 11:00 ಗಂಟೆಗೆ (ಒಂದು ದಿನ ಮಾತ್ರ) ಪ್ರಾರಂಭವಾಗುತ್ತವೆ. ಹಾಗೆಯೇ ಡೆಲಿವರಿಗಳು ಏಪ್ರಿಲ್ 10, 2026 ರಂದು ಪ್ರಾರಂಭವಾಗಲಿವೆ ಎಂದು ಮಹೀಂದ್ರಾ ತಿಳಿಸಿದೆ.

mahindra-be-6-batman-edition-bookings-price-fetaures-details

ಬ್ಯಾಟ್‌ಮ್ಯಾನ್ ಎಡಿಷನ್ ವಿಶೇಷತೆಗಳು

ಇಂಟೀರಿಯರ್ ವಿನ್ಯಾಸ ಅಂಶಗಳು: ಡ್ರೈವರ್ ಕಾಕ್‌ಪಿಟ್ ಸುತ್ತಲೂ ಬ್ರಷ್ ಮಾಡಿದ ಗೋಲ್ಡ್ ಲೆದರ್ ಇನ್ಸಟ್ರೂಮೆಂಟ್ ಪ್ಯಾನಲ್, ಡ್ಯಾಶ್‌ಬೋರ್ಡ್‌ನಲ್ಲಿ ಆಲ್ಕೆಮಿ ಗೋಲ್ಡ್ ಬ್ಯಾಟ್‌ಮ್ಯಾನ್ ಪ್ಲೇಕ್, ಗೋಲ್ಡ್ ಸೆಪಿಯಾ ಅಕ್ಸೆಂಟ್ ಸ್ಟಿಚ್ ಹಾಗೂ ಸ್ಟೀರಿಂಗ್ ವೀಲ್, ಇನ್-ಟಚ್ ಕಂಟ್ರೋಲರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಕಸ್ಟಮ್ ಆಲ್ಕೆಮಿ ಗೋಲ್ಡ್ ಕೀ ಫೋಬ್ ನೀಡಲಾಗಿದೆ.

ಪ್ರಮುಖ ಬಾಹ್ಯ ವಿನ್ಯಾಸ ಅಂಶಗಳು: ಕಸ್ಟಮ್ ಸ್ಯಾಟಿನ್ ಬ್ಲಾಕ್ ಕಲರ್, ಮುಂಭಾಗದ ಬಾಗಿಲುಗಳಲ್ಲಿ ಕಸ್ಟಮ್ ಬ್ಯಾಟ್‌ಮ್ಯಾನ್ ಡೆಕಲ್, R20 ಅಲಾಯ್ ವೀಲ್‌ಗಳು, ಸ್ಯಾಟಿನ್ ಬ್ಲಾಕ್ ಬಾಡಿ, ದಿ ಡಾರ್ಕ್ ನೈಟ್ ಟ್ರೈಲಜಿ ಬ್ಯಾಟ್ ಎಂಬ್ಲಮ್ ಅನ್ನು ಹೊಂದಿರುವ ಇನ್ಫಿನಿಟಿ ರೂಫ್ ಹಾಗೂ ಪ್ರೊಜೆಕ್ಷನ್‌ನೊಂದಿಗೆ ಕಾರ್ಪೆಟ್ ಲ್ಯಾಂಪ್‌ಗಳು, ಪ್ರೀಮಿಯಂ ಆಲ್ಕೆಮಿ ಗೋಲ್ಡ್ - ಪೇಂಟೆಡ್ ಸಸ್ಪೆನ್ಷನ್ ಮತ್ತು ಬ್ರೇಕ್ ಕ್ಯಾಲಿಪರ್‌ಗಳನ್ನು ಕಾರಿನಲ್ಲಿ ಒದಗಿಸಲಾಗಿದೆ.

mahindra-be-6-batman-edition-bookings-price-fetaures-details

ಇದು ವಿಶ್ವದ ಮೊದಲ ಬ್ಯಾಟ್‌ಮ್ಯಾನ್ - ಥೀಮ್ SUV ಆಗಿದ್ದು, ಇದು ತನ್ನ ಮೊದಲ ಬಿಡುಗಡೆಯ ನಂತರ ಅಭಿಮಾನಿಗಳು ಮತ್ತು ಗ್ರಾಹಕರಿಂದ ಅಸಾಧಾರಣ ಬೇಡಿಕೆಯನ್ನು ಪಡೆದಿರುವ ಕಾರಾಗಿ ಜನಪ್ರಿಯತೆ ಪಡೆದಿದೆ. ಈ ಹಿಂದೆ ವಾರ್ನರ್ ಬ್ರದರ್ಸ್ ಡಿಸ್ಕವರಿ ಗ್ಲೋಬಲ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಸಹಯೋಗದೊಂದಿಗೆ ಡಿಸೈನ್ ಮಾಡಲಾದ BE 6 ಬ್ಯಾಟ್‌ಮ್ಯಾನ್ ಎಡಿಷನ್ ಬಿಡುಗಡೆಯಾದಾಗ ಕೇವಲ 135 ಸೆಕೆಂಡುಗಳಲ್ಲಿ 999 ಯುನಿಟ್‌ ಕಾರುಗಳು ಮಾರಾಟವಾಗಿದ್ದವು.

ಈಗಾಗಲೇ ಬ್ಯಾಟ್‌ಮ್ಯಾನ್ ಎಡಿಷನ್ ಕಾರನ್ನು ಹೊಂದಿರುವ ಮಾಲೀಕರು ಯಾರಿಗೆ ಕಾರನ್ನು ಡೆಲಿವರಿ ಕೊಡಲು ಸೂಚಿವರೋ ಅವರಿಗೆ ಮೊದಲ ಆದ್ಯತೆಯ ಮೇರೆಗೆ ಬುಕಿಂಗ್‌ಗಳನ್ನು ಪರಿಗಣಿಸಿ ಡೆಲಿವರಿ ನೀಡಲಾಗುವುದು. BE 6 ಬ್ಯಾಟ್‌ಮ್ಯಾನ್ ಎಡಿಷನ್ ಕಾರನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದಾಗ ಯಾರು ಖರೀದಿಸಿದ್ದರೋ, ಅವರು ಈ ಬುಕಿಂಗ್ ಪ್ರಕ್ರಿಯೆಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ.

mahindra-be-6-batman-edition-bookings-price-fetaures-details

ಈ ಬಾರಿಯು ಸೀಮಿತ ಸಂಖ್ಯೆಯಲ್ಲಿ ಮಾತ್ರ ಈ ಕಾರುಗಳನ್ನು ಉತ್ಪಾದಿಸಲಾಗುವುದು. ಆಸಕ್ತ ಗ್ರಾಹಕರು ಈಗಾಗಲೇ ಖರೀದಿಸಿದ ಮಾಲೀಕರನ್ನು ಸಂಪರ್ಕಿಸುವ ಜೊತೆಗೆ ಬುಕಿಂಗ್ ತೆರೆದ ಕೂಡಲೇ ಬುಕಿಂಗ್ ಮಾಡಿಕೊಳ್ಳುವುದು ಉತ್ತಮ. BE 6 ಬ್ಯಾಟ್‌ಮ್ಯಾನ್ ಎಡಿಷನ್ BE 6 ರ ಟಾಪ್-ಎಂಡ್ ಪ್ಯಾಕ್ ತ್ರೀ 79 kWh ವೇರಿಯೆಂಟ್ ಆಗಿದೆ ಎಂದು ಮಹೀಂದ್ರಾ ತಿಳಿಸಿದೆ.

ಅತ್ಯಂತ ಆಕರ್ಷಕ ಹಾಗೂ ಸ್ಪೋರ್ಟಿ ಡಿಸೈನ್‌ನಿಂದ ಪ್ರೇರಿತವಾದ BE 6 ಬ್ಯಾಟ್‌ಮ್ಯಾನ್ ಎಡಿಷನ್ ಕಾರು ಪರ್ಫಾಮೆನ್ಸ್, ಡಿಸೈನ್ ಮತ್ತು ವಿನ್ಯಾಸ ಅಂಶಗಳನ್ನು DC ಯ ಬ್ಯಾಟ್‌ಮ್ಯಾನ್‌ನ ನಿಸ್ಸಂದಿಗ್ಧ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ಹೊಚ್ಚ ಹೊಸ ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ ಎಲೆಕ್ಟ್ರಿಕ್ ಎಸ್‌ಯುವಿ (Mahindra BE 6 Batman Edition), ರೂ.28.49 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

More from DriveSpark

Article Published On: Saturday, March 7, 2026, 12:45 [IST]
English summary
Mahindra be 6 batman edition bookings price fetaures details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+